ಧ್ಯಾನ

ಧ್ಯಾನದಲಿ ಪರಮಾತ್ಮನ ಕಾಣು
ಕಾಯಕದಲಿ ಶುದ್ಧತೆಯ ಕಾಣು
ಮಾತಿನಲ್ಲಿ ಸತ್ಯತೆ ಪಾಲಿಸು
ಜೀವನದಲಿ ಮಹತ್ವ ಸಾಧಿಸು

ಪೂಜೆಯೆಂಬುದಕ್ಕೆಂದು ಸಮಯವಿಲ್ಲ
ಸರ್ವಕಾಲಕ್ಕೂ ಜಪಿಸುವುದು ತಪ್ಪಲ್ಲ
ಯಾವುದೇ ಕಾಯಕದಲ್ಲೂ ದೇವನ ಸ್ಮರಿಸು
ಆ ಕಾರ್ಯ ದೈವಮಯವಾಗಿ ನಿರ್ಮಿಸು

ಶ್ವಾಸದ ಒಂದೊಂದು ಉಸಿರಲ್ಲೂ
ಉಚ್ಚರಿಸಬೇಕು ನಾಮ ಎಲ್ಲೆಲ್ಲೂ
ನಾವು ನರಕದತ್ತ ಸರಿವುದೇ ಪತನ
ಸ್ವರ್ಗದತ್ತ ವಾಲುವುದೆ ಜತನ

ನೀನು ಎಷ್ಟು ಜನರೊಂದಿಗೆ ಇದ್ದರೇನು!
ಯಾರು ನಿನ್ನ ಭಾರ ಹೊದಿಯುವರೇನು
ನಿನ್ನ ಕರ್ಮವೆಲ್ಲ ನಿನ್ನ ಬೆನ್ನ ಹಿಂದೆ
ನಿನ್ನ ಪುಣ್ಯವೆಲ್ಲ ಕಾಪಾಡುವದೊಂದೆ

ಎಷ್ಟೊತ್ತಿನವರೆಗೆ ಈ ನಿನ್ನ ಸಂತೆ
ಮರೆತೆ ಬಿಡುವುದೇ ಪರಮಾತ್ಮನಿಗೆ
ಹೌದು ಜಗವೆಲ್ಲ ಮೋಸಗೊಳಿಸಬಹುದೇನೊ
ಮರೆಯದಿರು ಮಾಣಿಕ್ಯ ವಿಠಲನಿಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿ ಬಯಸಿ ಜೀವವೇ
Next post ಪ್ರಗತಿ ಅಥವಾ ದಾಸ್ಯವಿಮೋಚನೆ – ೧೧ನೆಯ ಖಂಡ – ಆಸ್ಥೆ-ಕಾಳಜಿ

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…