ಪ್ರಗತಿ ಅಥವಾ ದಾಸ್ಯವಿಮೋಚನೆ – ೧೧ನೆಯ ಖಂಡ – ಆಸ್ಥೆ-ಕಾಳಜಿ

ಪ್ರಗತಿ ಅಥವಾ ದಾಸ್ಯವಿಮೋಚನೆ – ೧೧ನೆಯ ಖಂಡ – ಆಸ್ಥೆ-ಕಾಳಜಿ

“ಹೆಚ್ಚು ಕೆಲಸಮಾಡುವವನಿಗಿಂತ ಕಾಳಜಿಪೂರ್‍ವಕ ಕೆಲಸ ಮಾಡುವವನು ನನಗೆ ಅತ್ಯಂತ ಪ್ರಿಯೆನಾಗುವನು” ಎಂದು ಓರ್ವ ಬ್ರಿಟಿಶ ಮಂತ್ರಿವರ್‍ಯನು ಅಂದಿದ್ದಾನೆ. ಆಚಾರ್ಯರು ಕುದುರೆಯ ಹಿಂದೆಬಿದ್ದದ್ದನ್ನೆಲ್ಲ ತಕ್ಕೊಂಡುಬಾ ಎಂದು ಹೇಳಿದ ಮಾತ್ರದಿಂದ ಬುದ್ಧಿಗೇಡಿ ಭಗವಂತನು ಕುದುರೆಯ ಲದ್ದಿಯನ್ನು ಕೂಡ ಹಸಿಬೆಯಲ್ಲಿ ತುಂಬಿತಂದಂತೆ, ಕಾರ್‍ಯಗಳ ಮಹತ್ವವನ್ನು ತಿಳಿಯದೆ ಕೆಲಸ ಮಾಡುವವರು ಬಹಳ. ಕಾರ್‍ಯದ ಮಹತ್ವ ತಿಳಿಯುವದಕ್ಕೆ ಮನಸ್ಸಿನಲ್ಲಿ ಆಸ್ಥೆ-ಕಾಳಜಿ ವಹಿಸಬೇಕಾಗುವದು. ಆಸ್ಥೆಯು ಬೆಳೆ ಬೆಳೆದಂತೆ ಪ್ರಯತ್ನಗಳು ಎಂದೂ ನಿರರ್‍ಥಕವಾಗುವದಿಲ್ಲ.

ಹಿಂದಕ್ಕೆ ಆಗಿ ಹೋದ ಮಂತ್ರಿವರ್‍ಯ ಯೋಗಂಧರಾಯಣ, ಅಮಾತ್ಯರಾಕ್ಷಸ ಮೊದಲಾದವರು ಅತ್ಯಂತ ಆಸ್ಥೆಯಿಂದ ಕೆಲಸಮಾಡುತ್ತಿದ್ದದರಿಂದಲೇ ಅವರು ಸುಪ್ರಸಿದ್ಧ ಪ್ರಧಾನರಾಗಿದ್ದರು. ಮೈಸೂರ ಮಾಜಿ ದಿವಾಣರಾದ ಸರ ಶೇಷಾದ್ರಿ ಅಯ್ಯನವರು ಒಳ್ಳೇ ಆಸ್ಥೆಯಿಂದ ಕಾರ್ಯಭಾರವನ್ನು ಸಾಗಿಸಿದ್ದರಿಂದಲೇ ಅಂಥ ಕಠಿಣ ಪ್ರಸಂಗದಲ್ಲಿ ಕೂಡಾ ಮೈಸೂರ ರಾಜ್ಯವು ಪ್ರಗತಿಯನ್ನು ಹೊಂದಿತು. ನಮ್ಮ ವಿಷಯಕ್ಕೇ ನಮ್ಮಲ್ಲಿ ಆಸ್ಥೆಯಿಲ್ಲದಿರಲು ಮಂದಿಯ ಬಗ್ಗೆ ನಾವು ಆಸ್ಥೆ ಪಡುವ ಬಗೆಯಾದರೂ ಹೇಗೆ?

“ತನ್ನಂತೆ ಪರರಬಗೆದೊಡೆ ಕೈಲಾಸಬಿನ್ನಣವಳ್ಳ್ಳು” ಎಂಬ ಸರ್ವಜ್ಞ ಕವಿಯ ಉಕ್ತಿಯು ಮನನೀಯವಾಗಿದೆ. ಖರೇ ಆಸ್ಥೆಯಿಂದಾಗಲಿ, ತೋರಿಕೆಯ ಡಂಭಾಚಾರದ ಆಸ್ಥೆಯಿಂದಾಗಲಿ ನಾವು ನಮ್ಮ ಕೆಲಸಗಳನು ಹೇಗಾದರೂ ಸಾಗಿಸಿಕೊಳ್ಳುತ್ತಿರುವೆವು. ಆದರೆ ಪರರ ಕೆಲಸದಲ್ಲಿ ನಮ್ಮ ಆ ಡಂಭಾಚಾರದ ಆಸ್ಥೆಯನ್ನು ಕೂಡ ಉಪಯೋಗಿಸ ಹೋಗದೆ, “ಹತ್ತಿದಲ್ಲಿ ಹತ್ತಿತು ಹಾರಿದಲ್ಲಿ ಹಾರಿತು” ಎನ್ನುವಂತೆ ದುರ್ಲಕ್ಷ್ಯಮಾಡುವೆವು. ಇದರಿಂದ ಕಾರ್ಯಕೆಟ್ಟು ಹಾನಿಯೊಗುವ ಮಾನಕ್ಕಿಂತ, ನಮ್ಮ ವೃತ್ತಿಯು ಕೆಟ್ಟು ಪ್ರಗತಿಹೀನವಾಗುವ ಮಾನವು ಹೆಚ್ಚಾಗುವದು. ಆದ್ದರಿಂದ ಪ್ರಗತಿಪರನು ಪ್ರಗತಿಹೊಂದುವದಕ್ಕಾಗಿ ಮಾಡಬೇಕಾದ ಕೆಲಸವನ್ನು ಒಳ್ಳೇ ಆಸ್ಥೆಯಿಂದ ಮಾಡಿ ಪ್ರಗತಿಹೊಂದಬೇಕು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧ್ಯಾನ
Next post ಆರದಿರು ದೀಪವೇ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…