ಆರದಿರು ದೀಪವೇ
ನಿನ್ನ ಬೆಳದಿಂಗಳ ಕಿರಣವೆ
ಎನ್ನ ಮನೆಯ ಬೆಳಕು ||

ನಲುಗದಿರು ರೂಪವೇ
ನಿನ್ನ ಸೌಮ್ಯದಾ ಲಿಂಗವೇ
ಎನ್ನ ಮನೆಯ ಮೂರ್ತಿಯು ||

ಬೀಸದಿರು ಮಾಯಾಜಾಲವೇ
ನಿನ್ನ ಕರುಣೆಯಿಂದಲೆ ನಮ್ಮ
ಅಂತರಂಗದ ಹೊಳಪು ||

ಬಾರದಿರು ಕಷ್ಟವೇ
ಎನ್ನ ಮನೆಯಂಗಳವು
ಎಂದಿನಂತೆ ಇರಲಿ ಜೀವನ ಸುಖವು ||

ಹೆದರದಿರು ಮನವೆ
ಅ ಸೃಷ್ಟಿಕರ್ತ ಕಾಯುತಿರಲು
ಎನ್ನ ಕುಲನೆಲವೆಲ್ಲ ಪಾವನವು ||
*****