‘ಇದು ಎಂತಹದು ಹನಿ ಕತೆ?’ ಎಂದು ಹೂವಿನ ಮೇಲಿನ ಹನಿಯನ್ನು ಕೇಳಿದ. ಅದು ರಸ ರೂಪ ಗಂಧ ವಿರುವ ನವಿರಾದ ಕತೆ’ ಎಂದಿತು.
ಮತ್ತೆ ಸಾಗರದ ಹತ್ತಿರ ಬಂದು ‘ಹನಿ ಕತೆ ಎಂದರೇನು?’ ಎಂದ. ಸಾಗರದ ಆಳದಲ್ಲಿರುವ ಸ್ವಾತಿ ಮುತ್ತಿನ ಹನಿಯ ಕತೆ’ ಎಂದಿತು.
ಮತ್ತೆ ದೊಡ್ಡ ಬೆಟ್ಟದ ಎದುರಿಗೆ ಬಂದು ಅದೇ ಪ್ರಶ್ನೆ ಕೇಳಿದ. ‘ದೊಡ್ಡ ಬೆಟ್ಟದ ರಹಸ್ಯದ ಸೊಬಗನ್ನು ಅದರ ಮೇಲೆ ಮಿಣುಕುವ ಪುಟ್ಟ ನಕ್ಷತ್ರ ಹೇಳುವಕತೆ’ ಎಂದಿತು.
ಹನಿ ಕತೆ ಯಂತಹ ಅಣುವನ್ನು ಕೆದಕಬಾರದಾಗಿತ್ತೆಂದು ಮೌನದಲ್ಲಿ ಎಲ್ಲ ಮನವರಿಕೆ ಮಾಡಿಕೊಂಡ.
*****