ನೀನಿರುವೆ ಎಲ್ಲೋ| ಸುಂದರ ಶಿಲ್ಪಕಲೆಯ ಗುಡಿಯಲೋ ಈ ವನರಾಶಿ ಪ್ರಕೃತಿಯ ಮಡಿಲಲೋ| ಶ್ರೀಮಂತರ ಸುಪ್ಪತ್ತಿಗೆಯಲೋ ಬಟ್ಟೆ ಪೀತಾಂಬರವಿರದ ಹರಕು ಬಟ್ಟೆಯನುಟ್ಟ ಮುರುಕು ಮನೆಯ ತಿರುಕನಲೋ|| ಜಗಜಗಿಸುವ ವಜ್ರಖಚಿತ ಮುತ್ತುರತ್ನ ಮುಕುಟ ಧರಿಸಿದವನಾಗಿಯೋ ಮಣಿ...

‘ಇದು ಎಂತಹದು ಹನಿ ಕತೆ?’ ಎಂದು ಹೂವಿನ ಮೇಲಿನ ಹನಿಯನ್ನು ಕೇಳಿದ. ಅದು ರಸ ರೂಪ ಗಂಧ ವಿರುವ ನವಿರಾದ ಕತೆ’ ಎಂದಿತು. ಮತ್ತೆ ಸಾಗರದ ಹತ್ತಿರ ಬಂದು ‘ಹನಿ ಕತೆ ಎಂದರೇನು?’ ಎಂದ. ಸಾಗರದ ಆಳದಲ್ಲಿರುವ ಸ್ವಾತಿ ಮುತ್ತಿನ ಹನಿಯ ಕತೆ’ ಎಂದಿತು. ಮತ್ತೆ ...

ಬಡವನ ಹೆಂಡತಿ ಒಡೆದ ಮಡಕೆಯ ಬಾಳು ಸೋರಿ ಹೋಗುವ ಸುಖ ಹೆಂಗೆ ತೆಡೆದಾಳೊ ತಾಯಿ ಹೆಂಗೆ ಪಡೆದಾಳೊ? ಒಡೆಯನ ಒಡಲಿಗೆ ಜೀತಗಾರನು ಗಂಡ ಸಂಜೀಕೆ ಬಂದಾನು ಹೊತ್ತು ತಂದಾನು ಗೊಟಕೆನ್ನುವ ಮಕ್ಕಳಿಗೆ ಗುಟುಕು ಕೊಟ್ಟಾನು. ಬಯಕೆ ಬಾಗಿಲ ಬಳಿ ತವಕದ ತವರು ಸೀರೆ ತ...

ವಿಚಾರ ಸಾಹಿತ್ಯಕ್ಕೆ ತನ್ನದೇ ಆದ ಅನನ್ಯತೆ ಇದೆ. ಆದ್ದರಿಂದಲೇ ಇದರ ಹರವು ದೊಡ್ಡದು. ಇಲ್ಲಿ ವಿಷಯದ ನೇರ ಮತ್ತು ಸುಲಭ ಸಂವಹನ ಸಾಧ್ಯ. ಹೆಚ್ಚು ಹೆಚ್ಚು ಯಾಂತ್ರೀಕೃತಗೊಳ್ಳುತ್ತಿರುವ ಹಾಗೂ ಸಮಯವೇ ದುರ್ಲಭವಾಗುತ್ತಿರುವ ಇವತ್ತಿನ ದಿನಗಳಲ್ಲಿ ‘ವಕ್ರ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....