ಕ್ಷಣ ಕಾಡಿ ಬಾಡಿಹೋಗುವ
ಹಸಿವು ಮಿಥ್ಯ.
ಈ ಮಿಧ್ಯದ ಗರ್ಭದಿಂದ
ಹಸಿವಿಗಾಗಿಯೇ
ಅರಳುವ ರೊಟ್ಟಿ ಸತ್ಯ.
ಹಸಿವಿನ ಅಗಣಿತ ಅಸಹ್ಯ
ಚಹರೆಗಳ ಕಂಡು
ಒಳಗೇ ಹೇಸುತ್ತದೆ ರೊಟ್ಟಿ.
ಹೊರಗೆ ಆಡಲೇ ಬೇಕಾದ
ಆಪ್ತತೆಯ ನಾಟಕ.
*****