Day: January 19, 2021

#ಕವಿತೆ

ಬಸುರಾದೆನ ತಾಯಿ ಬಸುರಾದೆನ

0

ಬಸುರಾದೆನ ತಾಯಿ ಬಸುರಾದೆನ ನನ್ನ ಪತಿಯಾರು ಗತಿಯಾರು ತಿಳಿದಾದೆನ ||ಪಲ್ಲ|| ವಾರೀಗಿ ಗೆಳತೇರು ಗಾರೀಗಿ ನೆರತೇರು ಬೋಳ್ಯಾರು ಹುಳು ಹುಳು ನೋಡ್ಯಾರೆ ಗಂಡನ್ನ ಹೆಸರೇಳ ಗಣಪತಿ ತಾಯಾಗ ಗಮ್ಮಂತ ಗುಳುಗುಳು ನಗತಾರೆ ||೧|| ಏನಂತ ಹೇಳಲೆ ಯಾರಂತ ತೋರಲೆ ಎಲ್ಲೆಂತ ಕೈಮಾಡಿ ಕರಿಯಲೆ ಆದದ್ದು ಗೊತ್ತಿಲ್ಲ ಹೋದದ್ದು ಗೊತ್ತಿಲ್ಲ ಮಿಂಡೇರು ನಗಚಾಟಿ ಮಾಡ್ತಾರೆ ||೨|| ನಿಮಗಂಡ […]

#ಹನಿ ಕಥೆ

ನಂಗೂ ನಾಟಕ ಮಾಡಲು ಬರುತ್ತೆ..

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ತಾಯಿ ಮತ್ತು ಅವಳ ಪುಟ್ಟ ಮಗ ಇಬ್ಬರೂ ನಾಟಕಗಳನ್ನು ನೋಡಲು ಹೋಗುತಿದ್ದರು. ಅದರಲ್ಲಿ ಮಗುವಿನ ತಂದೆ ವಿವಿಧ ಪಾತ್ರ ಗಳನ್ನು ಮಾಡುತ್ತಿದ್ದ. ಇದ್ದನ್ನು ಗಮನಿಸಿದ ಪುಟ್ಟ ಮಗ ಅಮ್ಮನ ಕೇಳಿದ- “ಏಕೆ ಅಪ್ಪ ಬೇರೆ ಬೇರೆ ಮದುವೆ ಆಗ್ತಾರೆ? ಮತ್ತೆ ಮುದುಕಪ್ಪನಂತೆ ಆಗ್ತಾರೆ, ಮತ್ತೆ ಕಳ್ಳನಂತೆ ಆಗ್ತಾರೆ? ಮತ್ತೆ ಕೊಲೆ ಮಾಡ್ತಾರೆ? ಅಮ್ಮ! ನಂಗೆ ಮಾತ್ರ […]

#ಹನಿಗವನ

ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೩

0

ಕ್ಷಣ ಕಾಡಿ ಬಾಡಿಹೋಗುವ ಹಸಿವು ಮಿಥ್ಯ. ಈ ಮಿಧ್ಯದ ಗರ್ಭದಿಂದ ಹಸಿವಿಗಾಗಿಯೇ ಅರಳುವ ರೊಟ್ಟಿ ಸತ್ಯ. ಹಸಿವಿನ ಅಗಣಿತ ಅಸಹ್ಯ ಚಹರೆಗಳ ಕಂಡು ಒಳಗೇ ಹೇಸುತ್ತದೆ ರೊಟ್ಟಿ. ಹೊರಗೆ ಆಡಲೇ ಬೇಕಾದ ಆಪ್ತತೆಯ ನಾಟಕ. *****