ಅವನಿಗೆ ರಾತ್ರಿ ಪೂರ ಕನಸುಗಳು ಬೀಳುತಿದ್ದವು. ಕನಸಿನ ವನಗಳಲ್ಲಿ ಸಂಚರಿಸಿ ಕೈ ಬುಟ್ಟಿ ತುಂಬ ರಂಗು ರಂಗಿನ ಹೂಗಳನ್ನು ಆಯುತ್ತಿದ್ದ. ಆಕಾಶವನ್ನು ಕಾಡಿ ಬೇಡಿ ಬುಟ್ಟಿ ತುಂಬ ನಕ್ಷತ್ರ ಶೇಖರಿಸಿದ್ದ. ಕನಸಿನ ದೋಣಿಯಲ್ಲಿ ನದಿಯನ್ನು ದಾಟಿ ‘ಪ್ರಿಯೆ! ಬೇಗ ಬರುವೆ’ ಎಂದ. ಹಸು ಗೂಸನ್ನು ಎದೆಗವಚಿಕೊಂಡು ಕಣ್ಣೀರು ಸುರಿಸುತ್ತಾ ‘ನೀ ಕನಸಿನಲ್ಲಿ ಪ್ರೀತಿಸಿ ಕನಸಿನಲ್ಲಿ ಉಳಿದೆ. ಅವನು ನನಸಾಗಿ ಬಂದು ನನ್ನ ಕೆಡಸಿ ನನ್ನ ಕೈ ತುಂಬಿ ಹೋದ’, ಎಂದು ಬಿಕ್ಕಿ ಬಿಕ್ಕಿ ಅತ್ತಳು. ಅವನು ಕನಸಿನಿಂದ ಏಳಲೇ ಇಲ್ಲ.
*****