ಪ್ರೀತಿಯೆಂದರೇನು ಎಂದು

ಪ್ರೀತಿಯೆಂದರೇನು ಎಂದು
ಅರಿಯುವ ಮುನ್ನವೇ
ಸೋತು ಶರಣಾದೆನು|
ನಿನ್ನ ಪ್ರೀತಿಗೆ ಪರವಶನಾಗಿ
ನಿನ್ನ ನಭದಲಿ ತೇಲಿ
ನನ್ನೇ ನಾನು ಮರೆತೆನು ||

ನಿನ್ನ ಪ್ರೀತಿಯ ಸ್ಪರ್ಶದಲಿ
ನಾನು ಸಂತುಷ್ಟನಾದೆನು|
ನಿನ್ನ ಪ್ರೀತಿಯ ಆಲಾಪನೆಯಲಿ
ಮಿಂದು ನಾನು ಪುನೀತನಾದೆನು|
ಇಂತ ಪ್ರೇಮ ಸುಖವ ನಾನು
ಅರಿತ ಕ್ಷಣವೆ ಪುಳಕಿತನಾದೆನು||

ಪ್ರೇಮಕ್ಕಿಂತ ಶಕ್ತಿ‌ಇದೆ ಎಂದು
ಇಂದೇ ನಾನು ತಿಳಿದೆನು|
ಈ ಪ್ರೇಮ ಪರ್ವದಲಿ
ಸೆಳೆತಂದ ಪ್ರಕೃತಿಗೆ ಶರಣು ಎನ್ನುವೆನು|
ಇಂಥ ಪ್ರೀತಿಯ ಸೃಷ್ಟಿಸಿದ
ಆ ದೇವರಿಗೊಂದು ಧನ್ಯವಾದ
ಅರ್ಪಿಸಿ ಕೃತಾರ್ಥನಾಗುವೆನು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನಸು-ನನಸು
Next post ಉದ್ದೇಶ

ಸಣ್ಣ ಕತೆ

 • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

  ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

 • ಬಾಗಿಲು ತೆರೆದಿತ್ತು

  ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

 • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

  ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

 • ಅಪರೂಪದ ಬಾಂಧವ್ಯ

  ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

 • ಸ್ವಯಂಪ್ರಕಾಶ

  ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…