ಏನೇನೂ ಬೇಡವೆಂದು
ತಪಸ್ಸು ಮಾಡಲು ಊರಾಚೆಗೆ ಹೋದ
ಸನ್ಯಾಸಿಗೆ ಇಲಿಗಳ ಕಾಟ
ತಪ್ಪಿಸಲು ಬೆಕ್ಕು ತಂದ
ಬೆಕ್ಕಿಗೆ ಹಾಲೆಂದು ಹಸು ತಂದ
ಹಾಲು ಕರೆಯಲು ಹೆಣ್ಣು ತಂದ
ಮತ್ತಿನ್ನೇನು
ಸನ್ಯಾಸಿ ಸಂಸಾರಿಯಾದ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)