ಅಳಿವಿನ ಅಂಚಿನಲ್ಲಿ ರಾಷ್ಟ್ರ ಪ್ರಾಣಿ

ಅಳಿವಿನ ಅಂಚಿನಲ್ಲಿ ರಾಷ್ಟ್ರ ಪ್ರಾಣಿ

ಚಾಣಾಕ್ಷತನದ ಪ್ರಾಣಿ ಹುಲಿ. ಧೈರ್ಯ ಮತ್ತು ಸಾಹಸಕ್ಕೆ ಇನ್ನೊಂದು ಹೆಸರು. ಅಂಥ ಪ್ರಾಣಿಯ ಸಂತತಿಯು ಇಂದು ಅಪಾಯದಲ್ಲಿದೆ. ಈ ಶತಮಾನದ ಆರಂಭದಲ್ಲಿ ಭಾರತದಲ್ಲಿ ಒಟ್ಟು – ೪೦,೦೦೦ ಹುಲಿಗಳಿದ್ದವು. ಈ ಸಂಖ್ಯೆ ಬರಬರುತ್ತ ಕ್ಷೀಣಿಸುತ್ತಾ ಬಂದಿದೆ. ಸಮೀಕ್ಷೆಯ ಪ್ರಕಾರ ೧೯೮೯ರಲ್ಲಿ ದೇಶದಲ್ಲಿದ್ದ ಹುಲಿಗಳ ಸಂಖ್ಯೆ ಕೇವಲ ೪,೩೩೦. ಇದು ೧೯೯೫ರಲ್ಲಿ ೩,೦೦೦ಕ್ಕೆ ಇಳಿಯಿತು. ಅಂತಾರಾಷ್ಟ್ರೀಯ ಪರಿಸರ ತನಿಖಾ ಸಂಸ್ಥೆಯ ಲೆಕ್ಕಾಚಾರದ ಪ್ರಕಾರ ಭಾರತದಲ್ಲಿ ಪ್ರತಿನಿತ್ಯ ಒಂದು ಹುಲಿ ನಾಶವಾಗುತ್ತಿದೆ. ವರ್ಷಕ್ಕೆ ಐದುನೂರು!

ಉತ್ತರ ಪ್ರದೇಶ, ರಾಜಸ್ತಾನ ಮತ್ತು ಮಹಾರಾಷ್ಟ್ರ ರಾಜ್ಯಗಳ ಅರಣ್ಯಗಳಲ್ಲಿನ ಹುಲಿಗಳ ಸಂಖ್ಯೆ ಇತರ ರಾಜ್ಯಗಳ ಅರಣ್ಯಗಳಲ್ಲಿನ ಹುಲಿಗಳ ಸಂಖ್ಯೆಗಿಂತ ಕಡಿಮೆಯಾಗಿದೆ. ಈ ಶತಮಾನದ ಹೊತ್ತಿಗೆ ದೇಶದ ವಿವಿಧ ಕಾಡುಗಳಲ್ಲಿ ಒಟ್ಟು ಎಂಟು ಉಪಜಾತಿಗಳ ಹುಲಿಗಳಾದ ಸೈಬೇರಿಯನ್, ರಾಯಲ್ ಬೆಂಗಾಲ್, ಇಂಡೋ-ಚೀನಾ, ದಕ್ಷಿಣ ಚೀನಾ, ಸುಮಾಟ್ರನ್, ಬಾಲಿ, ಜವಾನ್ ಮತ್ತು ಕ್ಯಾಸ್ಪಿಯನ್ ಟೈಗರ್ ಜಾತಿಯ ಹುಲಿಗಳ ಸಂತತಿಯು ಈಗಾಗಲೇ ನಿರ್ನಾಮವಾಗಿವೆ. ಉಳಿದದ್ದು ಕೇವಲ ಐದು ಜಾತಿಯ ಹುಲಿಗಳು, ಅವೂ ಅಪಾಯದ ಅಂಚಿನಲ್ಲಿವೆ. ಇದೇ ಸ್ಥಿತಿ ಮುಂದುವರಿದರೆ ಒಂದೆರಡು ದಶಕಗಳಲ್ಲಿ ಹುಲಿ ಸಂತತಿ ಸಂಪೂರ್ಣವಾಗಿ ನಿರ್ನಾಮವಾಗಬಹುದು. ಹುಲಿ ಸಂತತಿಯ ಕೊನೆಯ ಆಶಾಕಿರಣ ಭಾರತ. ಇಲ್ಲಿಯೇ ಇಂಥ ಸ್ಥಿತಿ ಎಂದ ಮೇಲೆ ಈ ಪ್ರಾಣಿಯು ಅದೃಶ್ಯವಾಗಬಹುದು. ಚೀನಾ ಮತ್ತು ಪೂರ್ವ ಏಶಿಯಾ ರಾಷ್ಟ್ರಗಳಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.

ಚೀನಾ ಮತ್ತು ಪೂರ್ವ ಏಶಿಯಾ ರಾಷ್ಟ್ರಗಳಲ್ಲಿ ಹುಲಿಯ ಮೂಳೆಗಳಲ್ಲಿ ರೋಗನಿವಾರಕ ಔಷಧೀಯ ಗುಣಗಳು ಮತ್ತು ಕಾಮಪ್ರಚೋದಕ ಗುಣಗಳಿವೆ ಎಂಬ ನಂಬಿಕೆಯಿದೆ. ಅದರ ಶರೀರದ ಅಂಗಗಳ ಸೇವನೆಯಿಂದ ಸಂಧಿವಾತ, ನರದೌರ್ಬಲ್ಯ ನಪುಂಸಕತ್ವ ಮುಂತಾದ ರೋಗಗಳಿಗೆ ಔಷಧಿ ಎಂಬ ಮೂಢನಂಬಿಕೆಯೂ ಬೇರುಬಿಟ್ಟಿದೆ. ಚೀನಿ ವೈದ್ಯಕೀಯ ಗ್ರಂಥವೊಂದರಲ್ಲಿ ಹುಲಿಯ ಮೂಳೆಗಳೊಂದಿಗೆ ಮೂಲಿಕೆಗಳನ್ನು ಸೇರಿಸಿ ತಯಾರಿಸುವ ‘ಟೈಗರ್ ಬೋನ್ ವೈನ್’ ಸೇವನೆಯಿಂದ ಸಂಧಿವಾತದಂತಹ ರೋಗಗಳು ಗುಣವಾಗುತ್ತವೆಂಬ ಪ್ರಚಾರವಿದೆ. ಹುಲಿಯ ಮಾಂಸದಿಂದ ಬಗೆಬಗೆಯ ಭಕ್ಷ್ಯಗಳನ್ನು ತಯಾರಿಸಲಾಗುತ್ತಿದೆ. ಅಲ್ಲದೆ ಅದರ ಚರ್ಮ, ಮೂಳೆ ಮತ್ತು ಹಲ್ಲುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆಯಿದೆ. ಈ ಎಲ್ಲ ಬೇಡಿಕೆಗಳನ್ನು ಪೂರೈಸಲು ಭಾರತದಿಂದ ಹುಲಿಗಳನ್ನು ಕಳ್ಳತನದಿಂದ ಕೊಂದು ಸಾಗಿಸಲಾಗುತ್ತಿದೆ. ಅಥವಾ ತುಂಡು ತುಂಡಾಗಿಸಿ ಸಂದೇಹ ಬರದಂತ ಪ್ಯಾಕ್ ಮಾಡಿ ಚೀನಾ ದೇಶಕ್ಕೆ ರವಾನಿಸಲಾಗುತ್ತಿದೆ. ಲಾವೋಸ್ ಮತ್ತು ಕಾಂಬೋಡಿಯಾಗಳಲ್ಲಿ ಕಳ್ಳತನದಿಂದ ಜೀವಂತವಾಗಿ ಸೆರೆಹಿಡಿಯುವ ಹುಲಿಯನ್ನು ಅರಣ್ಯ ಮಾರ್ಗಗಳಲ್ಲಿ ರಹಸ್ಯವಾಗಿ ಬ್ಯಾಂಕಾಕ್‌ಗೆ ಸಾಗಿಸಲಾಗುತ್ತದೆ. ಅಲ್ಲಿಂದ ಮತ್ತೆ ಸಿಂಗಪೂರ್‌ಗೆ. ಮುಕ್ತ ವ್ಯಾಪಾರಕ್ಕೆ ಅವಕಾಶವಿರುವ ಸಿಂಗಪೂರ್‌ನಲ್ಲಿ ಅವುಗಳ ಖರೀದಿ ಮತ್ತು ಮಾರಾಟಕ್ಕೆ ಯಾವ ಅಡ್ಡಿಯೂ ಇಲ್ಲ. ಯೂರೋಪ್ ಮತ್ತು ಅಮೆರಿಕಾದ ಶ್ರೀಮಂತರು ಇವುಗಳನ್ನು ಸಿಂಗಾಪೂರದಲ್ಲಿ ಕಾನೂನಿನ ಉಲ್ಲಂಘನೆಯಾಗದಂತೆ ತಮ್ಮೊಂದಿಗೆ ಕೊಂಡೊಯ್ಯಬಹುದಾಗಿದೆ. ನ್ಯೂಯಾರ್ಕ್ ಕೂಡ ಹುಲಿ ಬೇಟೆಗಾರರ ರಹಸ್ಯ ವ್ಯವಹಾರ ಕೇಂದ್ರವಾಗಿದ್ದು ಅಲ್ಲಿಯೂ ವ್ಯಾಪಾರದ ವಿನಿಮಯ ನಡೆ ಯುತ್ತಿರುವುದು ಈಗೀಗ ಕಂಡು ಬಂದಿದೆ.

ಚೀನಾದಲ್ಲಿ ಹುಲಿಯ ಮೂಳೆಗಳಿಗೆ ಅಪಾರ ಬೇಡಿಕೆಯಿದೆ. ಅದರಿಂದ ಔಷಧಿ ತಯಾರಿಸುವ ನೂರಾರು ಕಾರ್ಖಾನೆಗಳಿವೆ. ಆ ಕಾರ್ಖಾನೆಗಳಿಗೆ ಪ್ರತಿವರ್ಷ ೧೦೦ ಹುಲಿಗಳ ಎಲುಬುಗಳಂತೂ ಬೇಕೇಬೇಕು. ತೈವಾನ್‌ದಂತಹ ದಕ್ಷಿಣ ಪೂರ್ವ ಏಶಿಯಾ ದೇಶದಲ್ಲಿಯೂ ಇಂತಹ ಲೈಸೆನ್ಸ್ ಹೂಂದಿರದ ಕಾರ್ಖಾನೆಗಳು ಕಂಡುಬಂದಿವೆ.

ಚೀನಾದ ಔಷಧ ಅಂಗಡಿಗಳಲ್ಲಿ ಹುಲಿಯ ಎಲುಬಿನಿಂದ ತಯಾರಿಸಿದ ಗುಳಿಗೆಗಳು, ಟಾನಿಕ್ಗಳು, ಪ್ಲಾಸ್ಟರ್‌ಗಳು ಹಾಗೂ ಮತ್ತಿತರ ವನ್ಯಪ್ರಾಣಿಗಳಿಂದ ತಯಾರಿಸಿದ ಔಷಧಗಳನ್ನು ರಾಜಾ ರೋಷವಾಗಿ ಮಾರಲಾಗುತ್ತದೆ. ಅಲ್ಲಿ ಬೆಳಕಿಗೆ ಬಂದಿರುವ ಇನ್ನಿತರ ಸಂಗತಿಯೆಂದರೆ ಕೆಲವು ಉತ್ಪನ್ನಗಳ ಹೆಸರು ಚೀನಿ ಭಾಷೆಯಲ್ಲಿ ಬರೆಯಲಾಗಿರುತ್ತದೆ. ಇಂಗ್ಲಿಷ್ನಲ್ಲಿದ್ದರೆ ಅಪಾಯದಲ್ಲಿ ಸಿಲುಕಬಹುದೆಂಬ ಆತಂಕದಿಂದ ಹೀಗೆ ಮಾಡಲಾಗುತ್ತದೆ. ಅಲ್ಲದೆ ಕೆಲವು ಉತ್ಪನ್ನಗಳ ಘಟಕ ದ್ರವ್ಯ (Ingredients)ಗಳ ಪಟ್ಟಿಯಲ್ಲಿ ‘ಚಿರತೆಯ ಮೂಳೆ’ ಎಂದು ನಮೂದಿಸಿರುತ್ತದೆ. ಆದರೆ ಆ ಉತ್ಪನ್ನದ ತಯಾರಿಕೆಯಲ್ಲಿ ಹುಲಿಯ ಮೂಳೆ ಉಪಯೋಗಿಸಲಾಗಿರುತ್ತದೆ!

ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ, ನಮ್ಮಲ್ಲಿ ೩೭ ಕಾರ್ಖಾನೆಗಳು ಜಾನುವಾರುಗಳ ಎಲುಬನ್ನು ರಫ್ತು ಲೈಸನ್ಸ್ ಹೊಂದಿವೆ. ಈ ಕಾರ್ಖಾನೆಗಳು ಜಾನುವಾರುಗಳ ಎಲುಬಿ ನೊಂದಿಗೆ ಹುಲಿಯ ಎಲುಬು ಸೇರಿಸಿ ರಫ್ತು ಮಾಡುವುದಿಲ್ಲ ಎಂದು ಹೇಳಲಿಕ್ಕಾಗದು.

ಇತ್ತೀಚಿನ ವರದಿಯ ಪ್ರಕಾರ ಹುಲಿಯ ಕಳ್ಳಸಾಗಣೆಯಲ್ಲಿ ಟಿಬೇಟಿಯನ್ನರ ಕೈವಾಡವಿದೆ ಎಂದು ತಿಳಿದುಬಂದಿದೆ. ರಾಷ್ಟ್ರದ ರಾಜಧಾನಿಯಿಂದ ಕಾಶ್ಮೀರದ ಮುಖಾಂತರ ಟಿಬೇಟ್‌ಗೆ ಹುಲಿಯ ತುಂಡಿನ ಪ್ಯಾಕ್‌ಗಳು ರಹಸ್ಯವಾಗಿ ರವಾನೆಯಾಗುತ್ತಿವೆ ಎಂದು ತಿಳಿದುಬಂದಿದೆ. ಎಂಬತ್ತರ ದಶಕದ ಕೊನೆಯಲ್ಲಿ ರಣಥಂಬೂರ ಅರಣ್ಯಧಾಮದಲ್ಲಿ ಹುಲಿಗಳನ್ನು ಕೊಂದು ತಯಾರಿಸಿದ ಉತ್ಪನ್ನಗಳನ್ನು ಚೀನಾ ಮತ್ತದರ ನರೆಯ ದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ಸಾಗಿಸುವಾಗ ಕಳ್ಳಸಾಗಣೆಯ ಜಾಲವೊಂದು ಮಧ್ಯಪ್ರದೇಶದ ಹಲವು ಸ್ಥಳಗಳಲ್ಲಿ ಸಿಕ್ಕಿಬಿದ್ದಿದೆ.

ಅಷ್ಟೇ ಅಲ್ಲ ಹುಲಿಗಳಿಗೆ ಮೀಸಲಾದ ಅರ್ಧಕ್ಕಿಂತಲೂ ಹೆಚ್ಚಿನ ಅರಣ್ಯಧಾಮಗಳು ಭಯೋತ್ಪಾದಕರ ಆಶ್ರಯ ತಾಣಗಳಾಗಿದ್ದು ಕಂಡುಬಂದಿದೆ. ಈ ಭಯೋತ್ಪಾದಕರು ಹುಲಿ ಬೇಟೆಗಾರರೊಂದಿಗೆ ಒಂದಾಗಿದ್ದು ಆತಂಕದ ಸಂಗತಿಯಾಗಿದೆ. ಇದಕ್ಕೆ ಸಾಕ್ಷಿಯೆಂದರೆ ಅಸ್ಸಾಂನ ಮಾನಸ ಅರಣ್ಯಧಾಮದಲ್ಲಿ ಕಳ್ಳಸಾಗಣೆಯ ವಿರುದ್ಧ ಸಿಡಿದೆದ್ದ ಕೆಲವು ಅರಣ್ಯ ಅಧಿಕಾರಿಗಳ ಕೊಲೆಗಳು.

ಒಂದು ಕಿಲೋ ಹುಲಿ ಮೂಳೆಯ ಬೆಲೆ ಸುಮಾರು ೫,೦೦೦ ಡಾಲರ್‌ಗಳು! ಅಂದರೆ ೧,೭೫,೦೦೦ ರೂಪಾಯಿಗಳು. ಒಂದು ಹುಲಿಯಲ್ಲಿರುವ ಮೂಳೆಗಳ ತೂಕ ೧೮ ಕಿಲೋ. ಹಾಗಾಗಿ ಒಂದು ಹುಲಿಯ ಒಟ್ಟು ಮೂಳೆಗೆ ಸುಮಾರು ೩೧,೫೦,೦೦೦ ರೂ.ಗಳು. ಅದರ ಚರ್ಮಕ್ಕೆ ಶ್ರೀಮಂತ ರಾಷ್ಟ್ರಗಳಲ್ಲಿ ಅಪಾರ ಬೇಡಿಕೆಯಿದೆ. ಅದರಿಂದ ಬೆಲೆ ಬಾಳುವ ಕಂಬಳಿಗಳನ್ನು ತಯಾರಿಸುತ್ತಾರೆ. ಒಂದು ಹುಲಿಯ ಚರ್ಮಕ್ಕೆ ೩ ಲಕ್ಷಕ್ಕೂ ಮೀರಿ ಬೇಡಿಕೆಯಿದೆ. ಹೀಗೆ ಒಂದು ಹುಲಿಯಿಂದ ಸುಮಾರು ೩೫ ಲಕ್ಷ ರೂ.ಗಳ ಅದಾಯವಿದೆ. ಈ ಕಾರಣದಿಂದಲೇ ಹುಲಿಯ ಕಳ್ಳಸಾಗಣೆ ನಿರಂತರವಾಗಿ ಸಾಗುತ್ತಿದೆ.

ಪ್ರಾಜೆಕ್ಟ್ ಟೈಗರ್: ೧೯೭೨ರಲ್ಲಿ ಕೇಂದ್ರ ಸರ್ಕಾರವು ‘ಹುಲಿ’ಯನ್ನು ರಾಷ್ಟ್ರ ಪ್ರಾಣಿಯನ್ನಾಗಿ ಘೋಷಿಸಿತು. ರಾಷ್ಟ್ರ ಪ್ರಾಣಿಯೆಂದ ಮೇಲೆ ಅದು ಅಳಿವಿನ ಅಂಚಿನಲ್ಲಿದೆ ಎಂಬುದನ್ನು ಮನಗಂಡು ಅದರ ಸಂತತಿ ಉಳಿಸಲು ಎಪ್ರಿಲ್ ೧, ೧೯೭೩ರಲ್ಲಿ ‘ವಿಶ್ವ ವನ್ಯ ಪ್ರಾಣಿ ನಿಧಿ’ (World Wide Life Fund) ಎಂಬ ಅಂತಾರಾಷ್ಟ್ರೀಯ ಸಂಸ್ಥೆಯ ಸಹಯೋಗದಿಂದ ‘ಹುಲಿ ಸಂರಕ್ಷಣಾ ಯೋಜನೆ’ (Project Tiger) ಆರಂಭಿಸಲಾಯಿತು. ಮೊದಲು ೯ ಅರಣ್ಯಧಾಮಗಳನ್ನು ಹುಲಿಗಳ ಅಭಯಾರಣ್ಯ ಎಂದು ಘೋಷಿಸಿತು, ೧೯೭೮ರಲ್ಲಿ ೧೧ ಅರಣ್ಯಧಾಮಗಳಲ್ಲಿ, ೧೯೮೩ರಲ್ಲಿ ೧೫, ೧೯೮೮ರಲ್ಲಿ ೧೮ ಹೀಗೆ ಈ ಯೋಜನೆಯಡಿ ಶುರುಮಾಡಿ ಈಗ ದೇಶದಲ್ಲಿಯ ಹುಲಿವಾಸದ ಎಲ್ಲ ಅರಣ್ಯಧಾಮ ಮತ್ತು ರಾಷ್ಟ್ರೀಯ ಉದ್ಯಾನಗಳಲ್ಲಿ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ. ಇದರ ಪ್ರಕಾರ ಕ್ರೀಡೆ ಅಥವಾ ವ್ಯಾಪಾರಕ್ಕಾಗಿ ಹುಲಿಯನ್ನು ಬೇಟೆಯಾಡುವುದು ನಿಷೇಧಿಸಲಾಗಿದೆ. ಈ ಕಾನೂನನ್ನು ಉಲ್ಲಂಘಿಸಿದರೆ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಈ ಯೋಜನೆ ಆರಂಭಿಸಿದಾಗ ದೇಶದ ರಾಜಕಾರಣಿಗಳು ಮತ್ತು ಪರಿಸರವಾದಿಗಳು ‘ಇದು ಜನರ ಅಭಿರುಚಿಗೆ ವಿರುದ್ಧವಾಗಿದೆ’ ಎಂದು ಉದ್ಗಾರ ತೆಗೆದಿದ್ದರಂತೆ!

ಹುಲಿ ಸಂರಕ್ಷಣಾ ಯೋಜನೆ ಆರಂಭಿಸಿದಾಗ ಸುಮಾರು ೨,೦೦೦ಕ್ಕೆ ಇಳಿದಿದ್ದ ಹುಲಿಗಳ ಸಂಖ್ಯೆ ೧೯೮೯ರ ಹೊತ್ತಿಗೆ ೪,೦೦೦ ಆಯಿತು. ಈ ಸಂಖ್ಯೆ ೧೯೯೫ರಲ್ಲಿ ೩,೦೦೦ಕ್ಕೆ ಇಳಿಯಿತು ಎಂದಮೇಲೆ ಯೋಜನೆ ಫಲಕಾರಿಯಾಗಿಲ್ಲ ಎಂದು ಹೇಳಬಹುದು. ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಸಂಘವೂ ಕೂಡ ಭಾರತದಲ್ಲಿ ಹುಲಿ ಬೇಟೆ ನಿರಾತಂಕವಾಗಿ ನಡೆಯುತ್ತಿದೆ ಎನ್ನುತ್ತ ಇದನ್ನೇ ಒತ್ತಿ ಹೇಳಿದೆ.

ನಿಜ, ರಾಷ್ಟ್ರ ಪ್ರಾಣಿಯ ಸಂತತಿಯನ್ನು ಉಳಿಸಿಕೂಳ್ಳಬೇಕಾದ ಜರೂರತ್ತು ಈಗ ಹೆಚ್ಚಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುದ್ದಲಿಗಿದೆಯೇ ಲೇಖನಿ ಶಕ್ತಿ ?
Next post ಬೆಳಗುಜಾವದಲಿ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

cheap jordans|wholesale air max|wholesale jordans|wholesale jewelry|wholesale jerseys