ಆಲಾಪ

ಜೀವ ಮೆಲ್ಲನೆ ಒಜ್ಜೆಯಾದ ಸಂಜೆ
ಕೌನೆರಳು ಕವಿದ ಗೋಡೆಯ ಮೇಲೆ
ಗಡಿಯಾರದ ಮೆದು ಶಬ್ದಗಳು, ನೀನು
ಬರುವ ಹೆಜ್ಜೆಯ ಸಪ್ಪಳದಂತೆ, ಕೇಳಿ
ಓಣಿಯ ಕೆಂಪು ಮಣ್ಣಿನಲ್ಲಿ ಮೂಡಿದವು
ನಿನ್ನಯ ಪಾದದ ಗುರುತುಗಳು.
ನನ್ನ ಮನೆಯ ಅಂಗಳದ ಆಕಾಶದ
ನೀಲಿಯಲಿ ಅದ್ದಿ ಬೆರೆಯಲಿ ನಿನ್ನ
ಬೆರಳುಗಳು ಹೊಸ ಪ್ರೇಮ ಕಾವ್ಯ
ಅದ್ಯಮ ತೀವ್ರಭಾವ ಹೊರಳಿ ಅರಳಿ
ಎಣ್ಣೆ ಸುರಿದ ನಂದಾದೀಪ ಬೆಳಗಲಿ
ಮೂರು ಸಂಜೆಯ ಹೊತ್ತಿನಲಿ
ದೇವರು ಮನೆಯ ಕೆಂಪು ಹಾಸು ಮಿನುಗಲಿ.

ಅಲ್ಲಿ ಅಂಬರದ ನೀಲಿಯಲಿ
ನಿನ್ನ ಸಹಿ ನನ್ನ ಪ್ರೇಮ ಕಾವ್ಯಕ್ಕೆ
ತಗುಲಿದಾಗ ಚಕ್ಕನೆ ಬೆಳಗಿದವು
ಚುಕ್ಕಿಗಳು. ಚಂದ್ರ ಮುನಿಸಿಕೊಂಡು ನನ್ನೊಡನೆ.
ಅವನಿಗೇನು ಗೊತ್ತು ತಿಂಗಳಲ್ಲಿ
ಹದಿನೈದು ದಿವಸಗಳು ನಾ ಅವನ
ಬೆಳದಿಂಗಳ ಹಾಲು ಮೈ ಮನಸ್ಸು.
ಸ್ನಾನ ಮಾಡಿ ಪುಳಕಗೊಂಡು ಕವಿತೆಗಳ ಬರೆಯುತ್ತೇನೆಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೊಳ್ಳೆ ನಾಶಕಗಳಿಂದ ಅಪಾಯ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೮೫

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…