ಸೊಳ್ಳೆ ನಾಶಕಗಳಿಂದ ಅಪಾಯ

ಸೊಳ್ಳೆ ನಾಶಕಗಳಿಂದ ಅಪಾಯ

ಸೊಳ್ಳೆ ನಮಗೆ ಪ್ರಮುಖ ಪೀಡೆಗಳಲ್ಲೊಂದು. ಅವು ಹರಡುವ ಹಲವು ಘಾತಕ ರೋಗಗಳಿಂದ ಬಚಾವಾಗಲು ನಾವು ಅವುಗಳ ವಿರುದ್ಧ ಸಮರ ಸಾರುತ್ತಲೇ ಇದ್ದೇವೆ. ಎಲ್ಲೆಡೆ ಈಗ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸೊಳ್ಳೆನಾಶಕ ಕಾಯ್ಲ್, ಮ್ಯಾಟ್ ಮತ್ತು ಆವಿಕೃತ ದ್ರವಗಳ ಉಪಯೋಗ ಭರದಿಂದಲೇ ಸಾಗಿದೆ. ಇವುಗಳನ್ನು ಉರಿಸಿ ಕೊಂಚಮಟ್ಟಿಗೆ ಸೊಳ್ಳೆಗಳಿಂದ ಮುಕ್ತಿ ಪಡೆಯುವಲ್ಲಿ ನಾವೂ ಯಶಸ್ವಿಯಾಗಿದ್ದೇವೆ. ಇಂತಹ ಸೊಳ್ಳೆನಾಶಕಗಳನ್ನು ಉಪಯೋಗಿಸುವುದರಿಂದ ಅಪಾಯವಿದೆಯೇ?

ಹೌದು ಎನ್ನುತ್ತಾರೆ ಇಲಿಗಳ ಮೇಲೆ ಅಧ್ಯಯನ ನಡೆಸಿದ ಓರಿಸ್ಸಾದ ಸಂಬಲ್ಪುರ ವಿಶ್ವವಿದ್ಯಾಲಯದ ಜೀವ ವಿಜ್ಞಾನ ಅಧ್ಯಯನ ಕೇಂದ್ರದ ವಿಜ್ಞಾನಿಗಳಾದ ಆರ್‍. ಕೆ. ದಾಸ್ ಮತ್ತು ಕೆ. ಸಹು ಅವರು.

ಇಲಿಗಳನ್ನು ದೀರ್‍ಘ ಕಾಲದವರೆಗೆ ಸೊಳ್ಳೆನಾಶಕ ಮ್ಯಾಟ್‌ಗಳ ಆವಿಗೆ ಒಳಪಡಿಸಿದಾಗ ಅವುಗಳ ಜೀವಕೋಶದಲ್ಲಿಯ ಕ್ರೋಮೋಸೋಮ್ ವಿಪಥನವಾಗಿದ್ದು ಕಂಡುಬಂದದ್ದಲ್ಲದೇ ಅನೇಕ ಜೀವ ಕೋಶಗಳ ನಾಶಕ್ಕೆ ಕಾರಣವಾಗಿತ್ತು. ಅದೇ ಸ್ಥಿತಿಯು ಮುಂದುವರಿದಲ್ಲಿ ಕ್ಯಾನ್ಸರ್‌ಗೆ ದಾರಿ ತೋರುತ್ತದೆಂದು ತಿಳಿದುಬಂದಿದೆ. ಸೊಳ್ಳೆ ನಾಶಕಗಳನ್ನು ಭದ್ರಪಡಿಸಿದ ಕೋಣೆಗಳಲ್ಲಿ ಉರಿಸುವುದರಿಂದ ಪ್ರತಿಕೂಲ ಪರಿಣಾಮ ಬೀರಬಲ್ಲದು ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಸೊಳ್ಳೆನಾಶಕ ಕಾಯ್ಲ್‌ಗಳು: ಸೊಳ್ಳೆನಾಶಕ ಕಾಯ್ಲ್‌ಗಳನ್ನು ತೆಂಗಿನಕಾಯಿಯ ಚಿಪ್ಪಿನ ಪುಡಿ ಅಥವಾ ಕಟ್ಟಿಗೆ ಹೊಟ್ಟನ್ನು ಕೀಟನಾಶಕ ರಾಸಾಯನಿಕದಿಂದ ಸಂಸೇಚಿಸಿ, ಅಂಟು ಅಥವಾ ಮೇಣವನ್ನು ಬಂಧಕಾರಕವಾಗಿ ಉಪಯೋಗಿಸಿ ತಯಾರಿಸಲಾಗುತ್ತದೆ.

ಸೊಳ್ಳೆನಾಶಕ ಕಾಯ್ಲ್‌ಗಳಲ್ಲಿ ಜನಪ್ರಿಯ ಬ್ರಾಂಡ್‌ಗಳಲ್ಲಿ ಒಂದಾಗಿರುವ ‘ಟಾರ್‍ಟಾಯ್ಸ್’ ನ ತಯಾರಿಕೆಯಲ್ಲಿ ಪೆರಿಥ್ರಿನ್ ಎಂಬ ಘಾತಕ ಕೀಟನಾಶಕವನ್ನು ಬಳಸಲಾಗುತ್ತದೆ. ಸೊಳ್ಳೆನಾಶಕ ಕಾಯ್ಲ್‌ಗಳನ್ನು ಉರಿಸುವುದರಿಂದ ಉಂಟಾಗುವ ಧೂಮವು ಕಾರ್‍ಬನ್ ಮೊನಾಕ್ಸೈಡ್ ಎಂಬ ವಿಷಕಾರಿ ಅನಿಲವನ್ನು ಮತ್ತು ಇನ್ನಿತರ ಅಪಾಯಕರ ಆಯಾಮಗಳುಳ್ಳ ಅಂಶಗಳನ್ನು ಒಳಗೊಂಡಿರುತ್ತದೆ.

ಇಂತಹ ಉತ್ಪನ್ನಗಳನ್ನು “ವಿಕರ್‍ಷಕ” ಎಂದು ಘೋಷಿಸಿ “ಸೊಳ್ಳೆಗಳನ್ನು ಹೊಡೆದೋಡಿಸುವ ಮತ್ತು ಮಾನವನಿಗೆ ಹಾನಿಕರಕವಲ್ಲ” ಎಂದು ಹೇಳಲಾಗುತ್ತದೆ. ಹೆಚ್ಚು ಕಡಿಮೆ ಎಲ್ಲಾ ಸೊಳ್ಳೆನಾಶಕ ಕವರ್‌ಗಳ ಮೇಲೆ ಘಟಕಾಂಶಗಳ ಪಟ್ಟಿಯಾಗಲೀ, ಅವುಗಳ ಅಪಾಯದ ಕುರಿತಾಗಲೀ ಮಾಹಿತಿ ಇರದಿದದ್ದದು ಕಾನೂನಿಗೆ ವಿರುದ್ಧವಾಗಿದೆ.

ಸೊಳ್ಳೆನಾಶಕ ಮ್ಯಾಟ್‌ಗಳು : ಸೊಳ್ಳೆನಾಶಕ ಮ್ಯಾಟ್‌ಗಳಲ್ಲಿ ವಿಷಕಾರಕವಾದ ಅಲಿಥ್ರಿನ್ ಎಂಬ ಕೀಟನಾಶಕ ಇರುತ್ತದೆ. ಅವುಗಳ ತಯಾರಿಕೆಯಲ್ಲಿ ಬೇರೆ ಬೇರೆ ಘಟಕಾಂಶಗಳನ್ನು ಸೇರಿಸಲಾಗಿದೆಯಲ್ಲದೆ ಅವುಗಳ ಹೆಸರನ್ನು ಗುಪ್ತವಾಗಿಡಲಾಗುತ್ತದೆ.

“ಗುಡ್ ನೈಟ್” “ಮಾರ್‍ಟೀನ್” ಗಳಂಥ ಜನಪ್ರಿಯ ಬ್ರಾಂಡ್‌ನ ಸೊಳ್ಳೆನಾಶಕ ಮ್ಯಾಟ್‌ಗಳು ಅಲಿಥ್ರಿನ್‌ನೊಂದಿಗೆ ಪೈಪರೋನಿಲ್ ಬ್ಯುಟಾಕ್ಸೈಡ್ ಎಂಬ ಘಟಕ ಹೊಂದಿದ್ದು ಅದೊಂದು ಕೀಟನಾಶಕವಾಗಿದೆ. ಇನ್ನೊಂದು ಜನಪ್ರಿಯ ಬ್ರಾಂಡ್ “ರೂಸ್ಟರ್‍” ಕೂಡ ಇದನ್ನು ಹೊಂದಿದೆ. ಈ ರಾಸಾಯನಿಕ ಅಲ್ಪಸ್ವಲ್ಪ ಮೌಖಿಕ ವಿಷಕರತೆಯಾಗಿದ್ದು ಚರ್‍ಮದ ಮೂಲಕ ದೇಹ ಸೇರಿದರೆ ಅತಿ ವಿಷಕರವಾತ್ತದೆ. ಮ್ಯಾಟ್ ಬಿಸಿಯಾದಾಗ ಈ ರಾಸಾಯನಿಕ ಬಿಡುಗಡೆಯಾಗುವುದಿಲ್ಲವಾದರೂ ಅದರ ಶರೀರ ಶಾಸ್ತ್ರೀಯ ಪರಿಣಾಮ ಮತ್ತು ವಿಷ್ಣೀಯ ಶಿಥಿಲಕರಣದಿಂದ ಉಂಟಾಗುವ ಉತ್ಪನ್ನಗಳು ಪರಿಣಾಮ ಬೀರಬಲ್ಲವು.

ಇಂತಹ ಉತ್ಪನ್ನಗಳನ್ನು ಇಲೆಕ್ಟ್ರಾನಿಕ್ ಸೊಳ್ಳೆ ವಿಕರ್‍ಷಕ (ರಿಪೆಲ್ಲೆಂಟ್) ಎಂದು ಪ್ರಚಾರ ಮಾಡಲಾಗುತ್ತದೆ. ಇದರರ್‍ಥ ಅದು ಸೊಳ್ಳೆಗಳನ್ನು ಓಡಿಸುತ್ತದೆ ಎಂದು, ಆದರೆ ಅದರಲ್ಲಿರುವ ಆಲಿಥ್ರಿನ್ ಉಚ್ಛಾಸದಿಂದ ದೇಹ ಸೇರಿ ಶ್ವಾಸನಾಳ ಮತ್ತು ನರವ್ಯೂಹದ ಮೇಲೆ ದುಷ್ಪರಿಣಾಮ ಬೀರುತ್ತದೆ (ಈ ಉತ್ಪನ್ನಗಳನ್ನು ಶೇಕಡ ನೂರರಷ್ಟು ಸುರಕ್ಷಿತ ಎಂದು ಸಾರಲಾಗುತ್ತದೆ!) ಇಂತಹ ಉತ್ಪನ್ನಗಳನ್ನು ಇಲೆಕ್ಟ್ರಾನಿಕ್ ವಿಕರ್‍ಷಕ ಎಂದು ಘೋಷಿಸಿದರೂ ಅವು ರಾಸಾಯನಿಕವಾಗಿ ಕೆಲಸ ನಿರ್‍ವಹಿಸುತ್ತವೆ ವಿನಃ ಇಲೆಕ್ಟ್ರಾನಿಕ್ ಆಗಿ ಅಲ್ಲ! ಅವುಗಳಲ್ಲಿ ಕೇವಲ ತಾಪ ನಿಯಂತ್ರಣ ಮಾಡಲು ಹೀಟರನ್ನು ಇಲೆಕ್ಟ್ರಾನಿಕ್ ಥರ್‍ಮಿಸ್ಟರ್‍ ಸಾಧನಕ್ಕೆ ಅಳವಡಿಸಲಾಗಿರುತ್ತದೆ ಅಷ್ಟೇ!

ಸೊಳ್ಳೆನಾಶಕ ಮ್ಯಾಟ್‌ಗಳನ್ನು ಧೂಮರಹಿತ ಎಂದು ಘೋಷಿಸಿದರೂ ಅವುಗಳನ್ನು ಉರಿಸಿದಾಗ ಸಕ್ರಿಯ ಘಟಕಾಂಶದ ಆವಿಯಾಗುವಿಕೆಯು ನಿಯಮಿತವಾಗಿರುವುದಿಲ್ಲ. ಮೊದಲೆರಡು ಗಂಟೆ ತ್ವರಿತಗತಿಯಲ್ಲಿ ಆವಿಯಾಗುತ್ತದೆ ಹಾಗೂ ರಾತ್ರಿಯ ಬಹುಭಾಗದವರೆಗೆ ಪರಿಣಾಮರಹಿತವಾಗಿರುತ್ತದೆ.

“ಆಲ್ ಔಟ್”, “ಜೆಟ್ ಫೈಟರ್‍”ಗಳಂತಹ ಬ್ರಾಂಡ್‌ಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವು ಅಪಾಯಕಾರಿ ಕೀಟನಾಶಕಗಳನ್ನು ಹೊಂದಿದ್ದರೂ ಸಹ ಅಪಾಯರಹಿತ ಮತ್ತು ಸುರಕ್ಷಿತ ಎಂದು ಘೋಷಿಸಲಾಗುತ್ತದೆ.

ವಿಕರ್‍ಷಕ ಕ್ರೀಮ್‌ಗಳು: ಸೊಳ್ಳೆನಾಶಕ ವಿಕರ್‍ಷಕ (ರೆಪೆಲ್ಲೆಂಟ್) ಕ್ರೀಮ್‌ಗಳ ತಯಾರಿಕೆಯಲ್ಲಿ ಥ್ಯಾಲೇಟ್‌ಗಳು ಮತ್ತು ಆರೋಮೆಟಿಕ್ ಆಮೈಡ್‌ಗಳನ್ನು ಉಪಯೋಗಿಸಲಾಗುತ್ತದೆ. ಅವು ಕಣ್ಣು ಮತ್ತು ಲೋಳ್ಬೊರೆಗಳನ್ನು ಕೆರಳಿಸಬಲ್ಲವು. ಧೀರ್‍ಘಕಾಲದವರೆಗೆ ಡೈಮಿಥೈಲ್ ಥ್ಯಾಲೇಟ್‌ಗೆ ಒಟಪಟ್ಟರೆ ಮಾನವನಲ್ಲಿನ ಫಲವತ್ತತೆ ನಾಶವಾಗುವ ಸಂಭವವುಂಟು. ಗರ್‍ಭಿಣಿಯರು ದೋಷಪೂರಿತ ಮಕ್ಕಳಿಗೆ ಜನ್ಮಕೊಡಬಹುದು. ಇವುಗಳ ತಯಾರಿಕೆಯಲ್ಲಿ ಉಪಯೋಗಿಸುವ ಇನ್ನೊಂದು ಘಟಕಾಂಶ ಡೈಈಥೈಲ್ ಟೊಲ್ವಮೈಡ್ ವೀರ್‍ಯಾಣು ತಲೆಗಳನ್ನು ಅಸಹಜವಾಗಿಸುತ್ತದೆ. ಅಲರ್‍ಜಿ ಮತ್ತು ಕೇಂದ್ರ ನರವ್ಯೂಹದಲ್ಲಿ ಕಾಣಿಸಿಕೊಳ್ಳುತ್ತದೆ. “ಓಡೋಮಾಸ್” ಎಂಬ ಜನಪ್ರಿಯ ಬ್ರಾಂಡ್ ಡೈಈಥೈಲ್ ಬೆಂಜೆಮೈಡ್ ಹೊಂದಿದ್ದು ಇದು ಡೈಮಿಥೈಲ್ ಥ್ಯಾಲೇಟ್ ರಾಸಾಯನಿಕದ ಅಣುತೂಕದ ರಚನೆಯ ಅನುರೂಪವಾಗಿದೆ.

ಸೊಳ್ಳೆನಾಶಕ ಉತ್ಪನ್ನಗಳಿಂದ ಮಕ್ಕಳನ್ನು ದೂರವಿರುವಂಥೆ ಪಾಲಕರು ಜಾಗ್ರತೆ ವಹಿಸಬೇಕು. ಸೊಳ್ಳೆನಾಶಕಗಳನ್ನು ಉಪಯೋಗಿಸಬೇಕೆಂದಲ್ಲಿ ಮಲಗುವ ಒಂದೆರಡು ಗಂಟೆ ಮುಂಚೆ ಸೊಳ್ಳೆನಾಶಗಳನ್ನು ಉರಿಸಿ ಸೊಳ್ಳೆ ನಾಶವಾದಾಗ ಕೋಣೆ ಪ್ರವೇಶಿಸಬೇಕು. ಸೊಳ್ಳೆಪರದೆಯ ಉಪಯೋಗ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಅತ್ಯುಪಯುಕ್ತ ವಿಧಾನವಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಮರ್‍ಶಕ
Next post ಆಲಾಪ

ಸಣ್ಣ ಕತೆ

 • ನಂಟಿನ ಕೊನೆಯ ಬಲ್ಲವರಾರು?

  ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

 • ಆಪ್ತಮಿತ್ರ

  ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

 • ಮನೆಮನೆಯ ಸಮಾಚಾರ

  ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

cheap jordans|wholesale air max|wholesale jordans|wholesale jewelry|wholesale jerseys