ಮಾತನಾಡಿದರೆ
ಬಾಯ್ಮುಚ್ಚಿಸುವ
ಆಡದಿದ್ದರೆ ಬಾಯ್ಬಿಚ್ಚಿಸುವ
ಮಾಟಗಾರ ಹಸಿವು.
ಒತ್ತಾಯಕ್ಕೆ ಆಡಿದ್ದು ತಾನಲ್ಲ
ಒತ್ತರಿಸಿಟ್ಟಿದ್ದಕ್ಕೆ ಆಡದೇ
ಉಳಿದದ್ದು ತಾನಲ್ಲ.
ತನ್ನ ಆತ್ಮ ಸಾಕ್ಷಾತ್ಕಾರವೇ
ಅಯೋಮಯ ರೊಟ್ಟಿಗೆ.
*****