ಎರಡು ಹಕ್ಕಿಗಳು ಬಾಳನ್ನು ಬಹುವಾಗಿ ಪ್ರೀತಿಸುತ್ತಾ ಅನಂತ ಪಯಣದಲ್ಲಿ ಸಾಗಿದ್ದವು. “ಒಂದು ಹಕ್ಕಿ ಪೀತಿಯೇ ನನ್ನಗುರಿ” ಎಂದಿತು. ಇನ್ನೊಂದು ಹಕ್ಕಿ “ಜ್ಞಾನವೇ ನನ್ನ ಗುರಿ” ಎಂದಿತು. ಮೊದಲ ಹಕ್ಕಿ ಹೇಳಿತು- “ಪ್ರೀತಿಯಲ್ಲಿ ಜ್ಞಾನದ ಜನನ” ಎಂದಿತು. ಎರಡನೆಯ ಹಕ್ಕಿ ಹೇಳಿತು- “ಅದು ಹಾಗಲ್ಲ ಜ್ಞಾನ, ಪರಿಜ್ಞಾನ, ಪ್ರಜ್ಞೆ ಇಂದ ಪ್ರೀತಿ” ಎಂದಿತು. ಅನಂತ ಪಯಣದಲ್ಲಿ ಪ್ರೀತಿ ಮೊದಲ ಘಟ್ಟವಾದರೆ ಜ್ಞಾನೋದಯವೇ ಕೊನೆಯ ಘಟ್ಟ” ಎಂಬ ಅರಿವಿನಸಂತಸ ಪಡೆದು ರೆಕ್ಕೆ ಬಿಚ್ಚಿ ನೀಲಾಗಸದಲ್ಲಿ ತೇಲಿ ಹಾರಿ ಹೋದವು.
*****