ಒಬ್ಬ ಮಠಾಧೀಶರು ತಮ್ಮ ಶಿಷ್ಯರಿಗೆ ಒಂದು ಪ್ರಶ್ನೆ ಹಾಕಿದರು. ದಾರಿಯಲ್ಲಿ ಗುರುಗಳು ನಿಮಗೆ ಭೇಟಿಯಾದರೆ ನೀವು ಅವರ ಸಮಕ್ಷಮದಲ್ಲಿ ಮಾತನಾಡಬಾರದು, ಮೌನವಾಗಿಯು, ಇರಬಾರದು.

“ಹೇಳಿ, ಆಗ ನೀವೇನು ಮಾಡುತ್ತಿರಿ?”

“ಕಣ್ಣಿನಲ್ಲಿ ದೀಪಾರತಿ ಎತ್ತಿ, ಮುಗುಳು ಮಂದಾರವರಳಿಸಿ ಕೈಜೋಡಿಸುತ್ತೇನೆ.” ಎಂದ ಒಬ್ಬ ಶಿಷ್ಯ. “ಭಲೇ! ಎಂದರು” ಮಠಾಧೀಶರು.

ಮತ್ತೊರ್‍ವ ಶಿಷ್ಯ “ಇದು ಎಲ್ಲರು ಮಾಡುವ ಕಾರ್‍ಯ ಹೆಚ್ಚಳಿಕೆ ಏನೂ ಇಲ್ಲ” ಎಂದ.

“ಹಾಗಾದರೆ ನೀ ಏನು ಮಾಡುತ್ತೀ?” ಎಂದರು ಮಠಾಧೀಶರು.

“ಒಂದು ಕೋಲು ಅಡ್ಡ ಇಟ್ಟು ಅಡ್ಡ ಬೀಳುತ್ತೇನೆ” ಎಂದ ಇನ್ನೊಬ್ಬ ಶಿಷ್ಯ.

“ಇದರ ಅಂತರಾರ್‍ಥವೇನು, ತಿಳಿಯಬಹುದೆ?” ಎಂದರು.

“ಗುರು ನನ್ನ ಆಂತರ್‍ಯದಲ್ಲಿ, ಆಗಲೆ ಇದ್ದಾನೆ. ನಿಮಗೆ ನನ್ನೊಳಗೆ ಸ್ವಾಗತವಿಲ್ಲ” ಎಂದು ಅಡ್ಡ ಬಿಳುವೆ ಎಂದ.

ಭೇಷ್! ಶಿಷ್ಯಾ, ಎಂದು ಮಠಾಧೀಶರು ಬೆನ್ನು ತಟ್ಟಿದರು.
*****