ಹಿರಿಯ ರಾಜಕಾರಣಿಗಳು ಮತ್ತು ಕನ್ನಡದ ಮುಂದಾಳುಗಳು ಕನ್ನಡ ಜನಸಂಖ್ಯೆ ಯನ್ನು ೫ ಕೋಟಿ, ೬ ಕೋಟಿ ಎಂದು ಗಟ್ಟಿಯಾಗಿ ಹೇಳುವುದನ್ನು ನೀವು ಕೇಳಿರಬೇಕು. ಅವರ ಹೇಳಿಕೆಗಳ ಪ್ರಕಾರ ಅಷ್ಟು ದೊಡ್ಡ ಜನಸಂಖ್ಯೆಯ ಸಮಾಜಕ್ಕೆ ತಾವು ಸೇರಿರುವುದು ಹೆಮ್ಮೆಯ ವಿಷಯವೆಂದು ನಾವು ಭಾವಿಸಬೇಕು.

ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆ ಮತ್ತು ಜನಸಾಂದ್ರತೆಯುಳ್ಳ ಇತರ ಪ್ರಗತಿಪರ ರಾಜ್ಯಗಳೊಡನೆ ಸರಿಯಾಗಬೇಕಾದರೆ ೨೦೦೧ ರಲ್ಲಿ ಕನ್ನಡ ಜನಸಂಖ್ಯೆ ಎಷ್ಟಿತ್ತು, ಎಷ್ಟಿರಬೇಕಾಗಿತ್ತೆಂಬುದನ್ನು ನೋಡೋಣ. ಭಾರತ ಸರ್ಕಾರದ ಜನಗಣತಿ ವಿಭಾಗವು ಭಾರತದ ಜನಸಂಖ್ಯೆಯ ವಿಷಯದಲ್ಲಿ ಉತ್ತಮ ಪುಸ್ತಕಗಳನ್ನು ಪ್ರಕಾಶಪಡಿಸಿದೆ.

ಕರ್ನಾಟಕದ ಜನಸಾಂದ್ರತೆಯನ್ನು ಇತರ ರಾಜ್ಯಗಳ ಜನಸಾಂದ್ರತೆಯೊಡನೆ ಹೋಲಿಸುವುದು ಅವಶ್ಯಕ. ರಾಜ್ಯದ ಭೂವಿಸ್ತಾರದಲ್ಲಿ ಒಂದು ಚದರ ಕಿ.ಮೀ ಪ್ರದೇಶದಲ್ಲಿ ವಾಸಿಸುವ ಸರಾಸರಿ ಜನಸಂಖ್ಯೆಯು ಜನಸಾಂದ್ರತೆಯನ್ನು ಲಕ್ಷಿಸುತ್ತದೆ. ರಾಜ್ಯಕ್ಕೆ ಇದು ಒಂದು ಮುಖ್ಯವಾದ ಅಂಶ. ಇದನ್ನು ರಾಜ್ಯದ ಕಾರ್ಯ ಚಟುವಟಿಕೆಯ ಅಂಶವೆಂದು ಕರೆಯುತ್ತೇನೆ. ರಾಜ್ಯದ ಜನಸಾಂದ್ರತೆ ಹೆಚ್ಚಿದಷ್ಟೂ ರಾಜ್ಯದ ಕಾರ್ಯ ಚಟುವಟಿಕೆ ಹೆಚ್ಚು. ಸಾಂದ್ರತೆ ಕಡಿಮೆಯಾದಷ್ಟು ಜನರ ನಮ್ರತೆ ಹೆಚ್ಚು.

೨೦೦೧ ರ ಜನಗಣತಿಯ ಪ್ರಕಾರ ಜನಸಾಂದ್ರತೆಯನ್ನು ಈ ಕೆಳಗೆ ಕೊಡಲಾಗಿದೆ.

೨೭೬ ಕರ್ನಾಟಕದ ಜನಸಾಂದ್ರತೆ
೪೮೦ ತಮಿಳುನಾಡಿನ ಜನಸಾಂದ್ರತೆ
೮೧೯ ಕೇರಳದ ಜನಸಾಂದ್ರತೆ
೯೦೩ ಪಶ್ಚಿಮಬಂಗಾಳದ ಜನಸಾಂದ್ರತೆ
೮೮೧ ಬಿಹಾರದ ಜನಸಾಂದ್ರತೆ
೪೮೪ ಪಂಜಾಬಿನ ಜನಸಾಂದ್ರತೆ

ದಕ್ಷಿಣ ರಾಜ್ಯಗಳು ಕೇರಳ ಮತ್ತು ತಮಿಳುನಾಡುಗಳ ಜೊತೆ ಹೋಲಿಸಿದರೆ ಕರ್ನಾಟಕದ ಜನಸಾಂದ್ರತೆ ತುಂಬ ಕಡಿಮೆ ಇದೆ. ಕೇರಳದ ಜನಸಾಂದ್ರತೆಯೊಡನೆ ಹೋಲಿಸಿದರೆ ನಮ್ಮ ಜನಸಾಂದ್ರತೆ ಅದರ ಮೂರನೆ ಒಂದರಷ್ಟಿದೆಯೆಂದು ಅಚ್ಚರಿಯಾಗುತ್ತದೆ.

ಭೂವಿಸ್ತಾರದಲ್ಲಿ ಕರ್ನಾಟಕವು ತಮಿಳುನಾಡು-ಕೇರಳ ಒಟ್ಟುಗೂಡಿಸಿದುದಕ್ಕಿಂತ ಹೆಚ್ಚೆಂದು ಹೇಳಲ್ಪಟ್ಟಿದೆ. ಆದರೆ ಜನಸಂಖ್ಯೆಯು ಒಂದು ಮುಖ್ಯವಾದ ಅಂಶವಾಗಿದ್ದು ಅವೆರಡು ರಾಜ್ಯಗಳ ಜನಸಂಖ್ಯೆಯ ಅರ್ಧಕ್ಕಿಂತ ಕಡಿಮೆ ಇದೆ.

ಹೆಚ್ಚು ಜನಸಂಖ್ಯೆಯ ಬಗ್ಗೆ ಮಾತೇಕೆ? ಸಾವಿರಾರು ವರ್ಷಗಳು ಉಳಿಯಬೇಕಾದರೆ ಯಾವುದೇ ಸಮಾಜಕ್ಕೂ ಒಂದು ದೊಡ್ಡ ಗಾತ್ರದ ಜನಸಂಖ್ಯೆ ಅವಶ್ಯಕ. ಆದರೆ ದುರದೃಷ್ಟವಶಾತ್ ಕನ್ನಡ ಸಮಾಜವು ಯಾವಾಗಲೂ ಕಡಿಮೆ ಜನಸಾಂದ್ರತೆಯ ಕಾರಣ ಕಷ್ಟಕ್ಕೀಡಾಗಿದೆ. ೧೮೫೬ರಲ್ಲಿ ಕರ್ನಾಟಕದ ಜನ ಸಾಂದ್ರತೆಯು ಚ.ಕಿ.ಮೀಟರ್‌ಗೆ ಕೇವಲ ೪೩ ಇತ್ತೆಂಬುದು ಚಕಿತಗೊಳಿಸುತ್ತದೆ. ಅಂತಹ ನ್ಯೂನಸಾಂದ್ರತೆಯು ಯುದ್ಧಗಳು, ಕ್ಷಾಮ, ಸಾಂಕ್ರಾಮಿಕ ರೋಗಗಳು ಮತ್ತು ಅನಾವೃಷ್ಟಿಯ ಕಾರಣ ಜನಸಂಖ್ಯೆಯ ನಿರ್ನಾಮಕ್ಕೆ ಸುಲಭವಾಗಿ ಈಡಾಗುತ್ತದೆ.

ಕ್ಯಾಲಿಕಟ್‌ಗೆ ವಾಸ್ಕೋಡಗಾಮ ೧೪೯೮ ರಲ್ಲಿ ತಲುಪಿದ. ಅವನೇನಾದರೂ ಮಂಗಳೂರಿಗೆ ಬಂದಿದ್ದರೆ ಪರಿಣಾಮವು ವಿನಾಶಕವಾಗುತ್ತಿತ್ತು. ೧೪೯೮ರ ಮೇ ತಿಂಗಳಲ್ಲಿ ಅವನು ಮಂಗಳೂರಿನ ಕಡೆಗೇ ಧಾವಿಸುತ್ತಿದ್ದನೆಂದು ಹೇಳಲಾಗಿದೆ. ಕರ್ನಾಟಕ್ಕೆ ಅತ್ಯಂತ ಹೆಚ್ಚಿನ ಕಷ್ಟವಾಗುವುದನ್ನು ತಪ್ಪಿಸಲೆಂದೋ ಎಂಬಂತೆ ಕನ್ನಡ ಜನರ ದೇವತೆ ಭುವನೇಶ್ವರಿಯು ಅವನನ್ನು ಕ್ಯಾಲಿಕಟ್ ಕಡೆಗೆ ತಿರುಗಿಸಿದಳು. ಬೇರೆ ಕಡೆಗೆ ತಿರುಗುವುದರ ಆವಶ್ಯಕತೆಯೇನು? ಸಿಂಹಾವಲೋಕನ ಮಾಡಿದರೆ ತಿಳಿಯುವುದೇನೆಂದರೆ ಪಾಶ್ಚಾತ್ಯ ಯೂರೋಪ್ ದೇಶಗಳು ವಸತಿ ಮತ್ತು ಉದ್ಯೋಗಳಿಗಾಗಿ ವಸಾಹತು ನಿರ್ಮಿಸಿಕೊಳ್ಳಲು ಅಂತಾರಾಷ್ಟೀಯವಾಗಿ ವಿರಳ ಜನಸಂಖ್ಯೆಯ ಭೂಪ್ರದೇಶಗಳಿಗಾಗಿ ಹುಡುಕುತ್ತಿದ್ದರು. ಆ ಕಾಲದಲ್ಲಿ ಕ್ಯಾಲಿಕಟ್ ಹೆಚ್ಚಿನ ಜನ ಸಾಂದ್ರತೆಯಿಂದ ಕೂಡಿತ್ತು. ಆದ್ದರಿಂದ ವಾಸ್ಕೊಡಗಾಮ ತನ್ನ ವಸಾಹತು ಯೋಜನೆಯನ್ನು ಕೈಬಿಡಬೇಕಾಯಿತು. ಯೂರೋಪ್‌ಗೆ ಸಂದೇಶವನ್ನೇನೂ ಕಳುಹಿಸಲಿಲ್ಲ.

ವಾಸ್ಕೊಡಗಾಮನು ಮಂಗಳೂರಿನಲ್ಲಿ ಇಳಿದಿದ್ದರೆ ಅವನು ಸಂತೋಷ ಮತ್ತು ಆಶ್ಚರ್ಯದಿಂದ ಆ ಪ್ರದೇಶವನ್ನು ಅತ್ಯಂತ ವಿರಳ ಜನಸಾಂದ್ರತೆಯಿಂದಿರುವುದನ್ನು ಕಂಡು ಕೆಟ್ಟ ಸಂದೇಶಗಳನ್ನು ಯೂರೋಪ್ ರಾಷ್ಟ್ರಗಳಿಗೆ ಕಳುಹಿಸುತ್ತಿದ್ದ. ೧೫ನೇ ಶತಮಾನದಲ್ಲಿ ಕರ್ನಾಟಕದ ನೈ‌ಋತ್ಯ ಪ್ರದೇಶ ಅತ್ಯಲ್ಪ ಜನಸಂಖ್ಯೆಯಿಂದ ಕೂಡಿತ್ತು. ಜಾಮೊರಿನ್‌ನ್ನು ವಾಸ್ಯೊಡಗಾಮ ಎದುರಿಸಿದಾಗ ಆ ಶತಮಾನದಲ್ಲಿ ತನ್ನ ವೈಭವದ ಉತ್ತುಂಗ ಶಿಖರದಲ್ಲಿ ವಿಜಯನಗರ ಸಾಮ್ರಾಜ್ಯವಿದ್ದಾಗ ಅಲ್ಲೇ ಎಲ್ಲ ಕೇಂದ್ರೀಕೃತವಾಗಿತ್ತು. ವಿರಳ ಜನಸಂಖ್ಯೆಯ ಸಮಸ್ಯೆಗಳು ಬಹಳ ಮತ್ತು ಎಲ್ಲ ಗಂಭೀರವಾದವುಗಳೇ. ನಿಮ್ಮ ರಾಜ್ಯವು ಮಾನವಬಲದ ಬಗ್ಗೆ ಸ್ವತಃ ಸಾಕಷ್ಟು ಇರಬೇಕಾದರೆ ಅತ್ಯಂತ ಅನುಕೂಲವಾದ ಒಂದು ಜನಸಾಂದ್ರತೆಯ ಸಂಖ್ಯೆ ಇದೆ; ಆದ್ದರಿಂದಲೇ ೨೦೦೧ ರಲ್ಲಿ ಕರ್ನಾಟಕ ರಾಜ್ಯಕ್ಕೆ ಜನಸಾಂದ್ರತೆ ಸಂಖ್ಯೆಯನ್ನು ೪೮೦ ಎಂದು ನಾನು ಆಯ್ಕೆ ಮಾಡಿಕೊಂಡೆ. ತಮಿಳುನಾಡಿನ ಜನಸಾಂದ್ರತೆಯೂ ೪೮೦.

ಈಗ ಇನ್ನೂ ಗಂಭೀರವಾದ ವಿಷಯದ ಕಡೆಗೆ ಗಮನ ಹರಿಸೋಣ. ೨೦೫೧ ರಲ್ಲಿ ಕರ್ನಾಟಕದ ಜನಸಂಖ್ಯೆ ಎಷ್ಪಿರಬೇಕೆಂದು ನಿರ್ಧರಿಸಬೇಕಾಗಿದೆ. ೨೦೫೧ ರ ಹೊತ್ತಿಗೆ ಭಾರತದ ಜನಸಂಖ್ಯೆ ೧೬೦ ಕೋಟಿಯಾಗುವುದೆಂದು ಹೇಳಲಾಗಿದೆ. ಸ್ವಾಭಾವಿಕವಾಗಿಯೇ ಕರ್ನಾಟಕದ ಜನಸಂಖ್ಯೆ ೨೦೫೧ ರಲ್ಲಿ ಎಷ್ಟಾಗುವುದೆಂಬುದೇ ಪ್ರಶ್ನೆ. ಹತ್ತು ಕೋಟಿ ಆಗಬಹುದೇ?

ಈಗ ೧೯೦೧ಕ್ಕೆ ಹಿಂತಿರುಗೋಣ. ಕರ್ನಾಟಕದ ಜನಸಂಖ್ಯೆ ೧.೩೧ ಕೋಟಿಯಿತ್ತು. ೧೯೧೧ ರಲ್ಲಿ ೧.೩೫ ಕೋಟಿ ಮಾತ್ರಕ್ಕೆ ಏರಿತು. ಆಘಾತಕಾರಿ ಅಂಶವೆಂದರೆ ೧೯೨೧ ರಲ್ಲಿ ಜನಸಂಖ್ಯೆಯು ೧.೩೩ ಕೋಟಿಗೆ ಇಳಿಯಿತು. ಅದು ತುಂಬ ದುರಂತಮಯವಷ್ಟೆ.

ಈ ಜನಸಂಖ್ಯೆಯ ಇಳಿತವು ೧೮೦೧-೧೮೨೧ ರ ಭಯಂಕರ ದಶಕಗಳಲ್ಲಿ ಆಯಿತು. ಹಾಗೂ ಯುದ್ದಗಳು, ದಂಗೆಗಳು, ಬಂಡೇಳುವುದನ್ನು ತಪ್ಪಿಸಲು ಮಾಡಿದ ಸಾಮೂಹಿಕ ಹತ್ಯೆಗಳು, ಪಾಳೆಗಾರಿಕೆಯ ಹತ್ಯೆಗಳು ಮತ್ತು ಬ್ರಿಟಿಷರ ಮೇಲೆ ಯುದ್ಧ ಮಾಡಿದ ಕನ್ನಡಿಗರ ಮೇಲಿನ ಸೇಡಿನ ಹತ್ಯೆಗಳು ನಿಮಿತ್ತವಾಗಿತ್ತು. ಆ ದುರಂತ ನಾವುಗಳು ಮತ್ತು ಕ್ಷೀಣಿಸುವ ಕಾರಣಗಳಿಂದ ಕನ್ನಡ ಜನಸಂಖ್ಯೆಯು ೧೮೫೬ ರಲ್ಲಿ ಕೇವಲ ೮೦ ಲಕ್ಷ ಇತ್ತು.

೨೨.೦೯.೨೦೦೫ ರಂದು ಶ್ರೀ ಎನ್. ಆರ್. ನಾರಾಯಣಮೂರ್ತಿಯವರು ಈಗ ವಿಶ್ವವಿಖ್ಯಾತವಾಗಿರುವ ಇನ್ಫೊಸಿಸ್ ಸಂಸ್ಥೆಯನ್ನು ಸ್ಥಾಪಿಸಿ ಕನ್ನಡಿಗರ ಹೆಮ್ಮೆ ಅತ್ಯುನ್ನತ ಶಿಖರಕ್ಕೇರುವಂತೆ ಮಾಡಿದಾಗ ಪ್ರತಿವರ್ಷವೂ ತಮಿಳುನಾಡಿನಿಂದ ೯೦,೦೦೦ ಇಂಜಿನೀಯರ್‌ಗಳು ಆದರೆ ಕರ್ನಾಟಕದಿಂದ ಕೇವಲ ೫೦,೦೦೦ ಇಂಜಿನೀಯರ್‍ಗಳು ಹೊರಹೊಮ್ಮುವರೆಂದು ಹೇಳಿದರು. ಕರ್ನಾಟಕ ರಾಜ್ಯವು ಇನ್ನೂ ಹೆಚ್ಚಿನ ತಾಂತ್ರಿಕ ಶಕ್ತಿಯನ್ನು ಪಡೆಯಲು ಇಚ್ಚಿಸುವುದಾದರೆ ಇನ್ನೂ ಹೆಚ್ಚಿನ ಜನಸಂಖ್ಯೆ ಶಕ್ತಿಯೂ ಬೇಕು. ಏಕೆಂದರೆ ಐವಿಪಿ ಪ್ರಮಾಣವು (ಇನ್‌ಟೆಲಿಜೆನ್‌ಟ್‌ಸಿ ವರ್ಸಸ್ ಪಾಪ್ಯುಲೇಷನ್ ರೇಷಿಯೊ) ಭಾರತದ ಎಲ್ಲ ರಾಜ್ಯಗಳಿಗೂ ಸಮಾನವಾಗಿಯೇ ಇದೆ. ಕರ್ನಾಟಕದ ಜನಸಂಖ್ಯಾ ಸಾಂದ್ರತೆಯು ತಮಿಳುನಾಡಿನ ಜನ ಸಂಖ್ಯಾ ಸಾಂದ್ರತೆಯಷ್ಟೇ ಇರಬೇಕಿತ್ತೆಂದು ನನ್ನ ಅಭಿಪ್ರಾಯ. ಅದು ೪೮೦ ಇರಬೇಕಿತ್ತು. ಆದರೆ ಗಾಬರಿ ಹುಟ್ಟಿಸುವಂತಹ ಇಂದಿನ ಕಡಿಮೆ ಸಂಖ್ಯೆಯಲ್ಲ. ೪೮೦ ಜನಸಾಂದ್ರತೆಯಿದ್ದಿದ್ದರೆ ಕರ್ನಾಟಕವೂ ಕನಿಷ್ಠ ೮೦,೦೦೦ ಇಂಜಿನೀಯರ್ ಗಳನ್ನು ವಾರ್ಷಿಕವಾಗಿ ತಯಾರು ಮಾಡುತ್ತಿತ್ತು. ಒಂದು ರಾಜ್ಯಕ್ಕೆ ಅನುಕೂಲಕರ ಉಚ್ಚ ಸಂಖ್ಯೆಯ ಜನವೂ ಒಂದು ಉತ್ತಮ ಮೂಲಭೂತ ಸೌಕರ್ಯವೆಂದು ಕಾಣಿಸುತ್ತದೆ.

ಕರ್ನಾಟಕದ ಕಡಿಮೆ ಜನಸಾಂದ್ರತೆಗೆ ಕಳೆದ ಹಲವಾರು ಶತಕಗಳಲ್ಲಿ ಆದ ವಿನಾಶಕಾರಕ ಯುದ್ಧಗಳಲ್ಲಿ ಉಂಟಾದ ಲಕ್ಷಾಂತರ ಕನ್ನಡಿಗರ ಸಾವೂ ಒಂದು ಕಾರಣವಾಗಿದೆ. ೧೮೨೮ ರಲ್ಲಿ ಕಡೆಯ ಕನ್ನಡ ಯುದ್ಧ ನಡೆಯಿತು.

ರಾಜ್ಯದ ಜನಸಂಖ್ಯೆಗೆ ಮತ್ತೊಂದು ಮುಖ್ಯವಾದ ಸ್ಥಿರಾಂಶವಿದೆ. ಅದನ್ನು ಸಾಪೇಕ್ಷ ಜನಸಂಖ್ಯಾ ಸಾಂದ್ರತೆ (ರಿಲೇಟಿವ್ ಪಾಪ್ಯುಲೇಶನ್ ಡೆನ್ಸಿಟಿ) ಎಂದು ಕರೆಯುತ್ತಾರೆ. ಉದಾಹರಣೆಗೆ, ಕರ್ನಾಟಕದ ಸಾಪೇಕ್ಷೆ ಜನಸಂಖ್ಯಾ ಸಾಂದ್ರತೆ ಕೇವಲ ೩೦%, ತಮಿಳುನಾಡಿನದು ೬೦% ಮತ್ತು ಕೇರಳದ್ದು ೯೦%.
*****