ಮಾಡದ ತಪ್ಪು ಒಪ್ಪಿ
ಕ್ಷಮೆ ಯಾಚಿಸುತ್ತದೆ
ಬಡಪಾಯಿ ರೊಟ್ಟಿ.
ತಾನೇ ತಪ್ಪು ಮಾಡಿಯೂ
ಉದಾರವಾಗಿ ಕ್ಷಮಿಸುತ್ತದೆ
ಪೀಠಸ್ಥ ಹಸಿವು.
ಸ್ವಾಮಿತ್ವದ ಎದುರು
ಲೋಕನಿಯಮಗಳು ತಲೆಕೆಳಗು.
*****