ಓರ್ವ ವ್ಯಕ್ತಿಗೆ ಒಂದು ಸಸ್ಯ ಕಾಶಿಯ ಮ್ಯೂಸಿಯಂ ನಿರ್ಮಿಸಬೇಕೆಂಬ ಮಹತ್ವಾಕಾಂಕ್ಷೆ ಉಂಟಾಯಿತು. ಜಗತ್ತಿನ ಎಲ್ಲಾ ಮರಗಳನ್ನು ಕಡೆದು ಮ್ಯೂಸಿಯಂನಲ್ಲಿ ಇಟ್ಟ. ಜನರು ನೂರು ಡಾಲರ್ ಕೊಟ್ಟು ಟಿಕೆಟ್ ಕೊಂಡು ನೋಡಲು ಬಂದರು. ಮರದ ಹಸಿರು ಸ್ವರ್ಗವನ್ನು ಕಡೆದ ಎಲ್ಲಾ ಮರಗಳಲ್ಲಿ ಕಣ್ಣೀರಿನ ರಕ್ತ ಸೋರುತಿತ್ತು. ಅದು ನೋಡಿಯೂ ಮನುಷ್ಯನ ಮನ ಕರಗಲಿಲ್ಲ. ಬದಲಾಗಿ “ಎಂತಹ ಸ್ವರ್ಗವನ್ನು ನಿರ್ಮಿಸಿದ್ದಾರೆ ಈ ಮ್ಯೂಸಿಯಮ್ ನಲ್ಲಿ” ಎಂದುಕೊಂಡು ಹೊರಗೆ ಬಂದಾಗ ಅವರಿಗೆ ಕಂಡದ್ದು ಹಸಿರಿಲ್ಲದ ಬರಡಾದ ಮರುಭೂಮಿಯ ನರಕ.
*****