ಯುಗಾದಿ ಬರುತಿದೆ

ಯುಗಾದಿ ಬರುತಿದೆ
ಹೊಸಯುಗಾದಿ ಬರುತಿದೆ|
ಎಲ್ಲೆಡೆ ಹಸಿರ ಸಿರಿಯು ಚಿಗುರಿ
ಬೇವುಹೊಮ್ಮಿ ಮಾವು ಚಿಮ್ಮಿ
ನಮಗೆ ಹರುಷ ತರುತಿದೆ
ಹೊಸ ವರುಷ ಬರುತಿದೆ
ನವಯುಗಾದಿ ಬರುತಿದೆ||

ವನರಾಶಿ ನವ್ಯನವಿರಾಗಿ
ಮೈಯತಳೆದು ಬಾಗಿ ತೂಗಿ|
ಸಸ್ಯ ಶ್ಯಾಮಲೆ ಕಂಪಬೀರಿ ಕೈಯಬೀಸಿ
ಕರೆಯುತಿದೆ ಹೊಸವರುಷವ||

ಹಳೆಯ ಕಹಿಯು ಎಲ್ಲಾಮರೆತು
ಬರೀ ಸಿಹಿಯು ಮಾತ್ರ ಉಳಿಯಲಿ|
ಹೊಸ ಬಗೆಯ ಸ್ನೇಹ ಪ್ರೀತಿ ಚಿಗುರಿ
ಸಂಯಮದಲಿ ಎಲ್ಲಾ ಸೇರಿ
ಹೊಸವರ್ಷವ ಸ್ವಾಗತಿಸವ ಬನ್ನಿರಿ||

ಪ್ರಕೃತಿಯಂತೆ ಪ್ರತೀವರ್ಷ
ನಮ್ಮಲಿ ನವಜೀವ ಮೈತುಂಬಲಿ|
ಹೊಸ ಉತ್ಸಾಹದಿಂದ
ನಿತ್ಯಜೀವನ ಸುಗಮ ಸಾಗಲಿ|
ಎಲ್ಲರಿಗೂ ಒಳ್ಳೆಯದಾಗಲೆಂದು
ಬಯಸಿ ಹೊಸಯುಗಾದಿಯ
ಆಚರಿಸುವ ಬನ್ನಿರೆಲ್ಲಾ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಸ್ಯ ಕಾಸಿಯ ಮ್ಯೂಸಿಯಂ
Next post ನಿನ್ನ ತೊರೆದು ಇನ್ನೇನು

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…