ಆಕೆಗೆ ಹುಟ್ಟಿದ್ದು ಹತ್ತು ಮಕ್ಕಳು. ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆ ಸೇರಿದ್ದರು. ಗಂಡು ಮಕ್ಕಳು ಮದುವೆಯಾಗಿ ಬೇರೆ ಸಂಸಾರ ಹೂಡಿದ್ದರು. ಅವಳು ಸಾಕಿದ ಎರಡು ಸಂತಾನವೆಂದರೆ ಹಿತ್ತಲ ಮಾವು, -ಅಂಗಳದ ತೆಂಗು ವೃಕ್ಷಗಳು- ಒಂದು ಕಾಮಧೇನು ಇನ್ನೊಂದು ಕಲ್ಪವೃಕ್ಷ. ಅವಳ ಒಂಟಿ ಜೀವಕ್ಕೆ ನೆರಳಾಗಿ, ನೆಲೆಯಾಗಿ ಅವಳನ್ನು ಪ್ರೀತಿಸಿದ್ದವು.
*****