ಅವಳು ಹರಟೆ ಮಲ್ಲಿ. ಎಲ್ಲಿ ಜನ ಸಿಕ್ಕರೆ ಅಲ್ಲಿ ಅವರ ಜೊತೆ ಹರಟುತಿದ್ದಳು. ಅಕ್ಕ ಪಕ್ಕದ ಮನೆಯಾಕೆ ಹೇಗೆ? ಅವಳ ಕಾಲೇಜ್ ಹೋಗುವ ಆ ಮಕ್ಕಳ ಫ್ಯಾಷನ್ ಹೇಗೆ? ಅವರಿಗೆ ಎಷ್ಟು ಜನ ಬಾಯ್ ಫ್ರೆಂಡ್ಸ್ ಇದ್ದಾರೆ? ಆಚೆಮನೆ ಮಗು ಯಾಕೆ ರೊಚ್ಚಿಗೇಳುತ್ತೆ? ಮುಂದಿನ ಮನೆ ಅತ್ತೆ ಸೊಸೆ ಜಗಳ ಹೇಗಿರುತ್ತೆ? ಎದುರು ಮನೆಯಾಕೆ ಏಕೆ ಸಾಲ ಕೇಳುತ್ತಾಳೆ? ಹಿಂದಿನ ಮನೆ ಮೂವತ್ತು ವರ್ಷದ ಹುಡುಗಿಗೆ ಯಾಕೆ ಇನ್ನೂ ಮದುವೆಯಾಗಿಲ್ಲ? ಮಹಡಿ ಮನೆ ಹುಡುಗ ಕಿಟಕಿ ಇಂದ ಹೇಗೆ ರೊಮಾನ್ಸ್ ಮಾಡುತ್ತಾನೆ? ಎಂದು ಎಲ್ಲಾ ವಿಷಯ ಸಂಗ್ರಹಿಸಿ ಹರುಟುತ್ತಿದ್ದಳು. “ಈಕೆ ಹೀಗೇಕೇ?” ಎಂದು ನಾನು ಕೇಳಿದಾಗ “ಅವಳದು ಭಗ್ನ ಸಂಸಾರ, ಗಂಡ ಕುಡುಕ, ಮಕ್ಕಳು ಮಾತು ಕೇಳೋಲ್ಲ. ಅವಳು, ಅವಳ ಸಂಸಾರದಲ್ಲಿ ಬಾಳಲು ಆಗುತ್ತಿಲ್ಲ. ಬೇರೆಯವರ ಸಂಸಾರದ ತಂತುಗಳಲ್ಲಿ ತನ್ನನ್ನು ಹೆಣೆದುಕೊಂಡು ಬಾಳುತ್ತಿದ್ದಾಳೆ” ಎಂದರು.
*****