ಧನ್ಯ ಧನ್ಯ ಧನ್ಯ ಹೂವೆ
ನಿನ್ನ ದಾನ ಪಾವನಂ
ನಿನಗೆ ನನ್ನ ನಮನ ನಮನ
ನೀನೆ ನನ್ನ ಜೀವನಂ ||೧||

ಮುಗಿಲ ತುಂಬ ರತ್ನ ಪಕ್ಷಿ
ನೀನೆ ಅದರ ಕಾರಣಂ
ನೆಲದ ತುಂಬ ಯಕ್ಷ ಯಕ್ಷಿ
ನೀನೆ ರಸದ ತೋರಣಂ ||೨||

ಅವನೆ ನೀನು ವಿಮಲ ಧೇನು
ಜೋಗ ಯೋಗ ಸಂಭ್ರಮಾ
ನಿನ್ನ ಚರಣ ತನನ ತನನ
ಓಡಿ ಹೋಯ್ತು ವಿಭ್ರಮಾ ||೩||

ಒಹೋ ಹೂವೆ ನಗುವ ನಾವೆ
ತುಂಬಿ ತೂಗು ಋಷಿವನಂ
ನಿನಗೆ ನಾನು ಮುಗ್ಧ ಗೋವು
ಹಸಿರು ಉಸಿರು ಅಪರ್ಣಂ ||೪||
*****