ಮೋರುಮದಲಾವಾ ಖೇಲ ಖೇಲ
ಆರಾಮದ ಐಸುರ ಖೇಲ ಖೇಲ || ಪ ||

ಸಮರಾಂಗ ಸರಸ ರಣಕಾಲ ಕಾಲ
ಸುಮರನ ಸ್ಯೆನ್ಯದೊಳು ಕೋಲಾಹಲ || ೧ ||

ರಣದೊಳಗೆ ಬಾಣ ಬಲು ಮೇಲ ಮೇಲ
ಹೆಣ ಎದ್ದು ಕುಣಿಯುವ ಬಾಳ ಬಾಳ || ೨ ||

ಆರ್ಭಟದ ಕರ್ಬಲ ವಾಲ ವಾಲ
ನಿರ್ಜಲವು ಬತ್ತಿ ಜಲ ಸಾಲ ಸಾಲ || ೩||

ಶಿಶುನಾಳಧೀಶನೊಳು ಹೇಳ ಹೇಳ
ದಶದಿನದ ವಿಧಾನದ ಹಾಳ ಹಾಳ || ೪ ||
*****