ದಾಂಪತ್ಯ

ಎಲ್ಲಾ ಕನಸುಗಳ ದಾಟಿ
ಕಣ್ಣ ಕಾಡಿಗೆ ತೀಡಿದೆ,
ಮದರಂಗಿ ಅರಳಿದೆ ಕೈಯಲಿ,
ಮಾಯೆ ಎದೆಯೊಳಗೆ ಇಳಿದಿದೆ,
ಇಲ್ಲಿ ಅರಳುವ ಹೂಮನ ಎಲ್ಲೆಲ್ಲೂ ಘಮಘಮ.

ಅಂತರ ದೃಷ್ಠಿಯ ಅಂತರದಲಿ
ಸರಿದಾಗ ಆಳ ನಿರಾಳ ಕಣ್ಣೋಟಗಳು,
ಬಿಂಬಿಸಿವೆ ಕಾಮನ ಬಿಲ್ಲಿನ ಬಣ್ಣ
ಸಮಸಮ ಅಮಲು ಏರಿದ ರಸಕಾವ್ಯ.

ಪುಟ್ಟ ಪಾದಗಳ ಮೇಲೆ ಇಟ್ಟ
ದೊಡ್ಡ ಹೆಜ್ಜೆಗಳ ಸಪ್ತಪದ.
ಸಪ್ತರ್ಷಿ ಮಂಡಲದಲಿ ಮಿಂಚಿದ
ಅರುಂಧತಿ ಘಮ್ಮೆಂದು ಸೂಸಿದ ಪರಿಮಳ.

ಬಿಂದು ಸಿಂಧುವಿನ ಒಲವಿನ
ನದಿ ಹರಿದು ಎದೆಯ ಆಳಕೆ
ಅಪ್ಪಳಿಸಿತು ಪ್ರೀತಿ ದಾಂಪತ್ಯದಲೆಗಳು
ಆನುತಾನು ನಿತ್ಯ ನಿರಂತರ ಚಿರನೂತನ.
*****

ಕೀಲಿಕರಣ : ಕಿಶೋರ್ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀನೆ ನನಗೆಲ್ಲ
Next post ಮರೀಚಿಕೆ

ಸಣ್ಣ ಕತೆ

 • ಸಾವು

  ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

 • ಅವನ ಹೆಸರಲ್ಲಿ

  ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

 • ಇರುವುದೆಲ್ಲವ ಬಿಟ್ಟು

  ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

 • ಕಂಬದಹಳ್ಳಿಗೆ ಭೇಟಿ

  ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…