ಭವ್ಯ ಭಾರತದ ಕುಶಲ ತೋಟಿಗ
ನಾಡಿನ ಭವಿಷ್ಯದ ಸಾಕಾರ ಶಿಲ್ಪಿ
ನಿನಗೆಷ್ಟೊಂದು ಪೂಜಿಸಿದರೂ…
ಪ್ರೀತಿಯಲಿ ಗೌರವಿಸಿದರೂ
ನಿನ್ನಾ.. ಮಹಾನ್ ತ್ಯಾಗ-ಭೋದನೆಗೆ ಬೆಲೆಯಿಲ್ಲ.
ಇಂದು.. ಅದು ಮಾಯವಾಗುತಿಹದು
ನಿಷ್ಠೆ-ಗೌರವ-ಹುಸಿಯಾಗುತಿಹವು
ನಾಚಿಕೆ-ಸಂಕೋಚ ದೂರ ತಳ್ಳುತ
ಹಗಲಿನಲಿ ಹರಾಜು ಮಾಡುತಿಹರು
ಪೂಜ್ಯ.. ಶಿಕ್ಷಕ.. ವೃತ್ತಿಯನು…
ಕೀಳಾಗಿಸಿ ಅಪಹಾಸ್ಯ ಮಾಡುತಿಹರು
ಅಸ್ಪೃಶ್ಯತೆಯಲಿ ಶಿಕ್ಷಕನು ತಳ್ಳುತ
ನಿಜದಲಿ ಗುರುವನರಿಯದೆ…
ಬರಿ-ಪೊಳ್ಳು ಸಭೆ-ಭಾಷಣದಲಿ ಹೊಗಳುತಿಹರು
ನವನಾಗರೀಕತೆಯ ನಿರ್ಮಾಪಕ ಎನ್ನುತಲೇ
ಅರಳಿ-ಬೆಳಗುವ ಕುಸುಮಗಳ ಶಿಲ್ಪಿ
ಅಧಿಕಾರಶಾಹಿ-ಕೊಳಚೆಯ
ಭವಿಷ್ಯದಲಿ ಆತಂಕದ ಘಂಟೆಯ ಬಾರಿಸುತ
ಶಿಕ್ಷಕನನು ಕಡೆಗಣಿಸಿ… ನಿರ್ಲಕ್ಷಿಸಿ…
ನಾಗರೀಕತೆಯ ನಾಶದ ಸಮಾಧಿಯನು ನಿರ್ಮಿಸುತಿಹರು.
***