
ಅಮರ ಕಲಾವಿದ ಸಪ್ದರ
ಹೊಸ ವರ್ಷದ ಹರುಷವನ್ನು ಸ್ವಾಗತಿಸುತ್ತಾ, ಸ್ವಾದಿಸುತ್ತಾ ದೆಹಲಿಯ ಸಮೀಪದ ಸಾಹಿ ಬಾಬಾದಲ್ಲಿ ಜನನಾಟ್ಯ ಮಂಚ ತಂಡದ ‘ಹಲ್ಲಾ ಬೋಲಾ’ ನಾಟಕದ ಹಾಸ್ಯಮಯ ದೃಶ್ಯ ವೀಕ್ಷಿಸುತ್ತಾ ಕಲೆಯ, ಅಭಿನಯದ ಸವಿ ಸವಿಯುತ್ತಲಿದ್ದ ಪ್ರೇಕ್ಷಕರ ಮಧ್ಯೆ ಒಮ್ಮೆಲೇ ಕ್ರೂರ ಮೃಗಗಳಂತೆ ದಾಳಿಯಿಟ್ಟ ಕೆಲ ಧಾಂಡಿಗರ ಅನಾಗರಿಕ ವರ್ತನೆ. ಅಲ್ಲೆಲ್ಲಾ ಹರಡಿ, ಮಾನವೀಯತೆ ಕಾಲಲ್ಲಿ ತುಳಿದ ಸಮಾಜಘಾತುಕ ಗೂಂಡಾಗಳಿಗೆ ಬಲಿಯಾಗಿ, […]