ಪರ್ಯಾಯ ಸಾಂಸ್ಕೃತಿಕ ಚಿಂತನೆಯ ಹರಿಕಾರ

ಪರ್ಯಾಯ ಸಾಂಸ್ಕೃತಿಕ ಚಿಂತನೆಯ ಹರಿಕಾರ

ಚಿತ್ರ ಸೆಲೆ: ಕರ್ನಾಟಕ.ಕಾಂ

ಅದು ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ನಗರದ ಬಹಳ ಹಳೆಯದಾದ ಅಭಿನಯ ರಂಗ ತಂಡವು ತನ್ನ ೨೫ನೇ ವರ್ಷದ ರಂಗ ವಾರ್ಷಿಕ ಉತ್ಸವದ ಅಂಗವಾಗಿ ತನ್ನ ರಂಗ ಕಲಾವಿದರು, ತನ್ನ ಗರ್ಭದ ರಂಗ ಕುಡಿಗಳಾದ ವಿಜಯ ಕಾಶಿ ಹಾಗೂ ಸಂಕೇತಕಾಶಿ, ನಾಡು ಕಂಡ ಪ್ರತಿಭಾವಂತ ರಂಗ ನಟರನ್ನು ಸನ್ಮಾನಗೊಳಿಸುವುದರೊಂದಿಗೆ, ಹೂಲಿ ಶೇಖರ ರವರ ‘ ಅರಗಿನ ಬೆಟ್ಟ’ ನಾಟಕ ಪ್ರದರ್ಶನ ನೋಡಿದೆ. ಜೊತೆಯಲ್ಲಿ ಉತ್ತಮ ಇಂಪಾದ ರಂಗ ಸಂಗೀತದ ಸವಿ ಸವಿದು, ಮನುಕುಲದ ನಿರಂತರ ನಿಸರ್ಗದ ಮೇಲಿನ ಅತ್ಯಾಚಾರಕ್ಕೆ ಪ್ರತಿಭಟನೆ ಎನ್ನುವಂತಹ ಸಿಟ್ಟು ಆಕ್ರೋಶದಲ್ಲಿ, ಆಗಾಗ ಕಣ್ಣುಮುಚ್ಚಾಲೆ ಆಟ ಆಡುವ ವರುಣನ ಆಗಮನದಲ್ಲಿ ಮಿಂದು, ಅಂದಿನ‘ ರಸ ಸಂಗೀತ’ ದ ಮೋಡಿಯಲ್ಲಿ ಮಲಗಿ ರಾತ್ರಿ ಕಳೆದು ಬೆಳಕು ಕಾಣುತ್ತಿದ್ದಾಗಲೇ….

ಪಕ್ಕದಲ್ಲಿಟ್ಟಿದ್ದ ಮೊಬೈಲ ಗಂಟೆ ಬಾರಿಸುತ್ತಿತ್ತು. ಅವಸರದಲ್ಲಿ ಬೆಳಗಾವಿಯ ಫೋನ್ ಇರಬೇಕೆಂದು ಮಾತನಾಡಿದಾಗ, ಸಾಗರದ ನನ್ನ ಇಲಾಖೆಯ ಸಹೋದ್ಯೋಗಿ ಮಿತ್ರ ‘ಸರ್ ಒಂದು ಕೆಟ್ಟ ಸುದ್ದಿ’ ಎಂದಾಗ ಒಂದುಕ್ಷಣ ಬೆಚ್ಚಿದ. ಮನದಲ್ಲಿಯೇ ಸಾಗರದಲ್ಲಿ ಏನಾಯಿತು? ಅಷ್ಟರಲ್ಲಿ ಅವರ ಬಾಯಿಂದ ಸುಬ್ಬಣ್ಣನವರು ಹೊರಟು ಹೋದರು ಸರ್…. ಎಂದಾಗ ಒಂದು ಕ್ಷಣ ದೇಹ ಕಂಪಿಸಿದಂತಾಗಿ ತಾನೇ… ತಾನಾಗಿ ಮೌನ ಆವರಿಸಿತು. ಆದರೂ ಮಾತಾಡುತ್ತಾ ಬೆಳಿಗ್ಗೆ ೧೧:೩೦ಕ್ಕೆ ಅಂತಿಮ ಸಂಸ್ಕಾರವೆಂದು ತಿಳಿದು ಫೋನ್ ಕೆಳಗಿಟ್ಟು, ಹಾಸಿಗೆಯ ಮೇಲೆ ಭದ್ರವಾಗಿ ಕುಳಿತೆ. ಆದರೆ ಮನಸ್ಸು ತನ್ನಷ್ಟಕ್ಕೆ ತಾನೇ ಓಡಾಡುತ್ತಾ ಒಮ್ಮೆಲೆ ಹಿಂದಿನ ತಿಂಗಳ ಜೂನ್ ದಿನಾಂಕ ೧೫ ಬುಧವಾರದ ಕಡೆಗೆ ವಾಲಿತು.

ಅದು ಸಾಗರದ ಜನ ಮಹಾಗಣಪತಿ ಎಲ್ಲಿ ಹುಂಡಿ ಎಣಿಕೆಯ ಮೇಲ್ವಿಚಾರಣೆಗಾಗಿ ಜಿಲ್ಲಾಧಿಕಾರಿಗಳು- ಶಿವಮೊಗ್ಗ ಅವರ ಪ್ರತಿನಿಧಿಯಾಗಿ ಕಚೇರಿ ಕೆಲಸದ ಮೇಲೆ ಹೋಗುತ್ತಿದ್ದಾಗಲೇ ಈ ದಿನ ‘ಹುಂಡಿ ಎಣಿಕೆ’ ಕಾರ್ಯ ಮುಗಿಸಿಕೊಂಡು, ಮಧ್ಯಾಹ್ನದ ನಂತರ, ಹೆಗ್ಗೋಡಿಗೆ ಹೋಗಲೇಬೇಕು. ಏಕೆಂದರೆ ಮೂಲತಃ ನಾನು ರಂಗಭೂಮಿ ಪ್ರೀತಿಸುವವ, ಸುಬ್ಬಣ್ಣ ನವರನ್ನು ಮಾತಾಡುವುದು, ಅವರ ಭೇಟಿಯಾಗುವುದೇ ನನಗೆ ಒಂದು ರೀತಿಯ ಸಂತೋಷದ ಸಾಕ್ಷಾತ್ಕಾರವೆಂಬ ಅಭಿಮಾನದ ಅಭಿಲಾಷೆಯಲ್ಲಿ ಅತಿ ನಮ್ರತೆಯಲಿ ಆ ಕನ್ನಡ ರಂಗಕಾಶಿ ‘ಹೆಗ್ಗೋಡಿನ ನೀನಾಸಂ ಮತ್ತು ಸುಬ್ಬಣ್ಣನವರ ಬಗ್ಗೆ ಮಾನಸಿಕವಾಗಿ, ಭಾವನಾತ್ಮಕವಾಗಿ ಗೌರವ, ವಿಧೇಯತೆಗಳೊಂದಿಗೆ ಸಾಗರದಲ್ಲಿ ಎಲ್ಲಿದೆ.

ನನ್ನ ಇಲಾಖೆಯ ಸಹೋದ್ಯೋಗಿ ರಘು ಅವರೊಂದಿಗೆ ಮೊದಲೇ ನಿರ್ಧರಿಸಿದಂತೆ ಹುಂಡಿ ಕಾರ್ಯ ಪೂರ್ಣಗೊಳಿಸಿ, ನಂತರ ಹೆಗ್ಗೋಡಕ್ಕೆ, ನೀನಾಸಂಗೆ ಭೇಟಿ ಕೊಡೋಣ. ನನ್ನ ಅದೃಷ್ಟವಿದ್ದರೆ ಸುಬ್ಬಣ್ಣನವರು ಇದ್ದರಂತೂ ನನ್ನ ಆಶಯ ಸಾರ್ಥಕ ವೆಂಬ ಧನ್ಯ ಭಾವದಲ್ಲಿ ತಿಳಿಸಿದೆ. ಆ ದಿನ ಪ್ರಬಂಧ ಕೆಲಸವನ್ನು ಮಧ್ಯಾನದ ಹೊತ್ತಿಗೆ ಪೂರ್ಣಗೊಳಿಸಿದೆ.

ಅಷ್ಟೊತ್ತಿಗೆ ಇನ್ನೋರ್ವ ಬಂದಗದ್ದೆಯ ಸ್ನೇಹಿತ ವೆಂಕಟೇಶನಿಗೆ ಫೋನ್ ಮಾಡಿದ್ದೆ. ಅವರು ಸರಿಯಾದ ಸಮಯಕ್ಕೆ ದೇವಸ್ಥಾನದ ನಮ್ಮ ಆಫೀಸಿಗೆ ತನ್ನ ಕಾರಿನೊಂದಿಗೆ ಬಂದು ನಮ್ಮನ್ನು ಸೇರಿದ.

ಇನ್ನು ತಡ ಬೇಡ… ಹೆಗ್ಗೋಡಿಗೆ ಹೋಗುವಾ… ಅಂತ ನಾವು ಮೂವರು ಬಂದಗದ್ದೆ ಸ್ನೇಹಿತನ ಕಾರಿನಲ್ಲಿ ಪ್ರಯಾಣಿಸುತ್ತಲೆ ನೆನಪಿನಾಳದಲ್ಲಿ ನೀನಾಸಂ ಸಂಬಂಧದ ಸುರಳಿ ಬಿಚ್ಚತೊಡಗಿತು.

ನಾನು೧೯೯೨ ರಲ್ಲಿ ೧೦ ದಿನಗಳ ಸಾಂಸ್ಕೃತಿಕ ಶಿಬಿರದಲ್ಲಿ ಭಾಗವಹಿಸಲು ಹೆಗ್ಗೋಡಿಗೆ ಹೋಗಿದ್ದು, ಆ ಕಳೆದ ದಿನಗಳು. ಆಗಿನ ಹೆಗ್ಗೋಡು, ನಾ ಕಂಡ ನೀನಾಸಂದ ಪರಿಸರ, ರಂಗ ಸಾಧಕ ಸುಬ್ಬಣ್ಣ ರನ್ನು ನೋಡುವ, ಮಾತಾಡಿಸುವ ಕಾತರತೆ ಯಲ್ಲಿ ಹೆಗ್ಗೋಡಿಗೆ ಬಂದಾಗ ‘ನೀನಾಸಂ’ ಕಾಣುವ, ಸುಬ್ಬಣ್ಣ ರವರು ಇರುವರೇ ಅಥವಾ ಬೇರೆ ಎಲ್ಲಿಯಾದರೂ? ಎನ್ನುವ ದುಗುಡದಲ್ಲಿ… ಕಾರು ನೀನಾಸಂ ಶಿವರಾಮ ಕಾರಂತ ರಂಗಮಂದಿರ ಎದುರಿಗೆ ನಿಲ್ಲಿಸಿ ಕೆಳಗೆ ಇಳಿದೆ.

ರಂಗಮಂದಿರ ಮತ್ತು ಸುತ್ತಲಿನ ಆ ರಂಗಭೂಮಿಯ ಸಾಧಕನ ಸಾಧನೆಗಳು, ಆ ವೈವಿಧ್ಯಮಯ ಕಲಾ ಕೃತಿಗಳು ಹೋಲುವಂತಹ ಕಲೆ, ಮೆದ್ದುಕೊಂಡು ನಿಂತ ಕಟ್ಟಡಗಳು, ಸುತ್ತಲೂ ಒಮ್ಮೆ ತಿರುಗಿ ನೋಡಿದೆ. ಸುಬ್ಬಣ್ಣರವರು ಇರುವರೆ? ಎನ್ನುತ್ತಿದ್ದಾಗ, ಮಿತ್ರರಾದ ವೆಂಕಟೇಶ್, ರಘು, ಸರ್… ಸುಬ್ಬಣ್ಣ ರವರು ಇದ್ದಾರೆ…. ಅಲ್ಲಿ ಎದುರಿಗೆ ಕುಳಿತಿದ್ದಾರೆ ಎಂದರು.

ನನಗೆ ಎಲ್ಲಿಲ್ಲದ ಸಂತಸ, ಉತ್ಸಾಹ, ಮನದಲ್ಲಿ ತುಂಬಿ ಭೋರ್ಗರೆದಂತೆ, ದೇಹ ಒಂದು ಕ್ಷಣ ಕಂಪಿಸಿತು. ಒಳಗೆಲ್ಲ ಆನಂದದ ಅಲೆಯಲ್ಲಿ ಕಂಪಿಸುವ ಅನುಭವ ಆಗುತ್ತಿತ್ತು.

ಹಾಗೆ ನೋಡುತ್ತಾ, ಸುತ್ತ ಮುತ್ತಲು ನೋಡುತ್ತಾ ಮೆಟ್ಟಿಲುಗಳೇರಿ ಆ ಎದುರಿನ ಕೋಣೆಯಲ್ಲಿ ರಂಗ ಮಹರ್ಷಿ, ರಂಗ ಸಾಧಕ ಸುಬ್ಬಣ್ಣ ರವರು ನಮ್ಮನ್ನ ನೋಡುತ್ತಾ, ತಮ್ಮ ಬಾಯಿ ತುಂಬಿ ಕೊಂಡ ಕವಳದ ರಸಾಸ್ವಾದನೆ ಯಲ್ಲಿ ನಮ್ಮನ್ನು ಒಳಗೆ ಬರಮಾಡಿಕೊಂಡರು.

ನಾನು ಅವರಿಗೆ ಕೈಮುಗಿದು, ಯಾವುದೇ ದೇವಸ್ಥಾನದ ಒಳಗೆ ಭಕ್ತಿ ಭಾವದಲ್ಲಿ ಒಳ ಹೋಗುವಂತೆ, ಭಕ್ತಿಯಿಂದಲೇ ಒಳಹೋಗಿ ಮುಗಿದ ಕೈಗಳೊಂದಿಗೆ ಅವರ ಆತ್ಮೀಯತೆ ನಿಸ್ವಾರ್ಥ, ಪ್ರೀತಿಯ ಸರಳತೆಯಲ್ಲಿ ನಮ್ಮನ್ನು ತಮ್ಮ ಪಕ್ಕದಲ್ಲಿ ಕುಳ್ಳಿರಿಸಿಕೊಂಡು… ಎಲ್ಲಾ ಕುಶಲೋಪಚಾರ ವಿವರ ತಿಳಿದುಕೊಂಡರು.

ನಾನು ಸ್ನೇಹಿತರೊಂದಿಗೆ ಕುಳಿತುಕೊಂಡು ನನ್ನ ಮತ್ತು ನೀನಾಸಂದೊಂದಿಗಿನ ೧೫ ವರ್ಷಗಳ ಹಿಂದಿನ ಅವಿಸ್ಮರಣೀಯ ರಂಗ ಸಂಬಂಧ ತಿಳಿಸಿದೆ. ೧೯೯೨ ರಲ್ಲಿ ಸಾಂಸ್ಕೃತಿಕ ಶಿಬಿರದಲ್ಲಿ ಭಾಗವಹಿಸಿದ ಆ ದಿನಗಳು, ನನ್ನ ಅನುಭವ, ಪಡೆದುಕೊಂಡ ಸಾಂಸ್ಕೃತಿಕ ತಿಳುವಳಿಕೆ, ಅರಿವು ಹೆಚ್ಚಿಸುವಲ್ಲಿ ನೀನಾಸಂ ಅದರಲ್ಲೂ ತಮ್ಮ ಮಂತ್ರಶಕ್ತಿಯ ಪ್ರಭಾವದೊಂದಿಗೆ ನಮ್ಮಲ್ಲಿನ ರಂಗಭೂಮಿ, ಒಟ್ಟಾರೆ ಸಾಂಸ್ಕೃತಿಕತೆಯ ಬೌದ್ಧಿಕಮಟ್ಟ ವಿಸ್ತಾರಗೊಳಿಸಿದ ಬಗ್ಗೆ ತಿಳಿಸುತ್ತಾ… ಮಾತಾಡಿದೆವು.

ಹಾಗೆ… ಹಾವೇರಿಗೆ ಸುಬ್ಬಣ್ಣನವರು, ಆತ್ಮೀಯರಾದ ಕವಿ, ನಟ, ಬಂಡಾಯ ಸಂಗಾತಿಯಾದ ಸತೀಶ ಕುಲಕರ್ಣಿಯವರ ಬಗ್ಗೆ ನೆನಪಿಸಿ, ಅವರ ಕವನ ಸಂಕಲನ ಬಿಡುಗಡೆಗೆ ಬಂದಾಗ ತಮ್ಮೊಂದಿಗೆ ನಾವೆಲ್ಲ ಹಾಗೂ ಬೆಳಗಾವಿಯ ಖ್ಯಾತ ಕವಿ, ಲೇಖಕ, ಪತ್ರಕರ್ತರಾದ ಬಂಡಾಯದ ಸಾಹಿತಿಗಳಾದ ಡಾ|| ಸರಜೂ ಕಾಟ್ಕರ್ ರವರು ಜೊತೆಯಲ್ಲಿ ತಮ್ಮೊಂದಿಗೆ ಕಳೆದ ದಿನ ಬುತ್ತಿ ಬಿಚ್ಚಿದಾಗ ಅವರಿಗೆ ಒಂದು ರೀತಿಯ ಹಳೆಯ ನೆನಪು ಸುಳಿದಾಡಿದ ಅನುಭವ.

ಹಾಗೆ ಮಾತಾಡುತ್ತಾ ತಮ್ಮ ಆರೋಗ್ಯದ ಪ್ರಯುಕ್ತ ದೂರದ ಪ್ರವಾಸ ಹೆಚ್ಚಿಗೆ ಮಾಡುತ್ತಿಲ್ಲ ಎನ್ನುತ್ತಾ ಸುಬ್ಬಣ್ಣ ರವರು-

ಬೆಳಗಾವಿಯಲ್ಲಿ ರಂಗ ಚಟುವಟಿಕೆ ಹೇಗೆ ನಡೆದಿದೆ? ಎಂದು ಕೇಳುತ್ತಾ… ಗಡಿನಾಡು ಮರಾಠಿ ಪ್ರಭಾವ ಪ್ರದೇಶ… ಎನ್ನುತ್ತಲೇ, ಕಲೆಗೆ, ರಂಗಭೂಮಿ ಚಟುವಟಿಕೆಗಳಿಗೆ ಯಾವುದೇ ಭಾಷೆ, ಪ್ರದೇಶ, ರಂಗಭೂಮಿ, ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿ ಜೊತೆ- ಜೊತೆಯಲ್ಲಿಯೇ ಬೆಸೆದು ಬೆಳೆಯಬೇಕು. ಕಲೆಗೆ ಭಾಷೆ ಅಡ್ಡಗೋಡೆಯ ಆಗಬಾರದು ಎಂಬ ಜಾಗತಿಕ ಸತ್ಯವನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾ… ವಿಷಯ ನನ್ನ ವಯಕ್ತಿಕ ವೃತ್ತಿಯ ಕಡೆಗೆ ತಿರುಗಿತು.

ನಾನು ಕೆಲಸ ಮಾಡುವ ಮುಜರಾಯಿ ಇಲಾಖೆಯ ಬಗ್ಗೆ, ದೇವಸ್ಥಾನಗಳ ಆಡಳಿತದ ಕುರಿತು, ಹೊಸದಾಗಿ ಶಿವಮೊಗ್ಗ ಜಿಲ್ಲಾಧಿಕಾರಿಗಳಾಗಿ ಬಂದವರ ಬಗ್ಗೆ, ಜಿಲ್ಲಾಧಿಕಾರಿಗಳ ಕಛೇರಿಯ ವ್ಯವಸ್ಥೆಗಳ ಬಗ್ಗೆ ಮಾತನಾಡಿದರು.

ನೂತನ ಜಿಲ್ಲಾಧಿಕಾರಿಗಳೊಂದಿಗಿನ ಆಕಸ್ಮಿಕವಾಗಿ ನಡೆದ ಫೋನ್ ಸಂಭಾಷಣೆ ಕುರಿತು ಚರ್ಚಿಸುತ್ತಿದ್ದಾಗಲೆ…

ಒಮ್ಮೆಲೆ ನಮ್ಮೆಲ್ಲರ ಕಡೆ ನೋಡಿ ಆ… ನಿಮಗೆ ಚಹಾ… ಅಥವಾ ಕಷಾಯ ಬೇಕೆ ಎಂದು ಚಿಕ್ಕಮಕ್ಕಳಿಗೆ ಕೇಳುವಂತೆ, ಮಾತೃ ವಾತ್ಸಲ್ಯದಿಂದ ಕೇಳಿದರು.

ಸರ್… ಏನಾದರೂ ನಡೆಯುತ್ತಿದೆ… ನೀವೇನೇ ತೆಗೆದುಕೊಳ್ಳುವಿರಿ… ಅದನ್ನ ನಮಗೂ ಕೊಡಿ… ಎನ್ನುತ್ತಾ ‘ಕಷಾಯ’ ಎಂದಾಗ ಪಕ್ಕದಲ್ಲಿರುವವರಿಗೆ ಕಷಾಯ ತರಲು ಹೇಳಿ… ಮತ್ತೆ…

ಬೆಳಗಾವಿ ರಂಗಭೂಮಿ, ಅಲ್ಲಿ ಸದ್ಯದಲ್ಲಿರುವ, ಕ್ಷೀಣಿಸುತ್ತಿರುವ ರಂಗ ಚಟುವಟಿಕೆ, ರಂಗತಂಡಗಳ, ನಟ- ನಟಿ( ಕಲಾವಿದ)ಯರ, ರಂಗಾಸಕ್ತರ ಕೊರತೆಯ, ನಿರಾಸಕ್ತಿಯ ಬಗ್ಗೆ ಮಾತಾಡುತ್ತಾ, ಜೊತೆಗೆ ನಾನು ನನ್ನ ನಾಟಕ ಅಕಾಡೆಮಿಯ ಸದಸ್ಯತ್ವದ ಮೂರು ವರ್ಷದ ಅನುಭವ ಹಂಚಿಕೊಂಡೆ. ವೃತ್ತಿ ರಂಗಭೂಮಿ ಅದರಲ್ಲೂ ಪಾರಿಜಾತ ಕುರಿತು ಕಳವಳದೊಂದಿಗೆ ಅವರೊಂದಿಗೆ ರಚಿಸುವ ಮಾತಾಡುವ ಆ ಅವಿಸ್ಮರಣೀಯ ಗಳಿಗೆ, ಸಂದರ್ಭ ನನ್ನನ್ನು ಮಂತ್ರಮುಗ್ಧಗೊಳಿಸಿತು.

ರಂಗ ಚಟುವಟಿಕೆಗಳನ್ನು, ನಮ್ಮ ತಂಡವಾದ ‘ಕಲಾರಂಗ’ದ ಮೂಲಕ ಪ್ರಾಮಾಣಿಕವಾಗಿ ಕೆಲಸ ಮಾಡಿ, ಕಲಾವಿದರ ಬಗ್ಗೆ ಗೌರವದೊಂದಿಗೆ, ಗ್ರಾಮೀಣ ಕಲೆಗಳನ್ನು ಉಳಿಸಲು ಕೆಲಸ ಮಾಡಿ, ನಿಮ್ಮ ಪ್ರಾಮಾಣಿಕ ಕಾಳಜಿ, ರಂಗ ಕಳವಳ ಬಗ್ಗೆ ಬಹಳ ಸಂತೋಷವಾಗುತ್ತದೆ ಅಂತ… ನಮ್ಮನ್ನು ಹರಿಸಿದರು.

“ಆಯಿತು ರವಿಯವರೇ, ಬಹಳ ದಿನಗಳ ನಂತರದಲ್ಲಿ ಇಲ್ಲಿಗೆ ಬಂದಿದ್ದೀರಿ, ನಮ್ಮ ‘ನೀನಾಸಂ’ ಎಲ್ಲಾ ತಿರುಗಾಡಿ ನೋಡಿ ಬನ್ನಿರಿ…” ಎನ್ನುತ್ತಾ ಅವರು… ನೀನಾಸಂ ಪದವೀಧರ ರಂಗ ಶಿಷ್ಯ ಶ್ರೀಧರ ಹೆಗ್ಗೋಡ ಅವರನ್ನು ಕರೆದು, ಶ್ರೀಧರ ಅವರಿಗೆ ಅರ್ಧ ಗಂಟೆ ಮಾತ್ರ ಸಮಯವಿದು, ಆನಂತರ ಅವರಿಗೆ ‘ಕೊಳಲು ಭೂಮಿಗೀತ’ ಮೊದಲನೇ ಪ್ರಯೋಗದ ರಂಗ ಸಿದ್ಧತೆಯ ಕೆಲಸದ ಬಿಡುವಿನ ಅವಧಿಯಲ್ಲಿ ಶ್ರೀಧರನಿಗೆ ‘ನೀನಾಸಂ’ ಸಭಾಗೃಹ (ಶಿವರಾಮ ಕಾರಂತ ರಂಗಮಂದಿರ) ತೋರಿಸಲು ಸ್ವತಃ ತಿಳಿಸಿ ನಮ್ಮೊಡನೆ ಕಳಿಸಿದರು.

ಶ್ರೀಧರ ಅವರೊಂದಿಗೆ ಶಿವರಾಮ ಕಾರಂತ ರಂಗಮಂದಿರದ ಒಳಗೆ ಹೋಗುವಾಗ ತಲೆಬಾಗಿ, ನಮಸ್ಕರಿಸಿ, ಕೈಮುಗಿದು ಒಳಗೆ ಹೋಗುತ್ತಾ ರಂಗಮಂದಿರದ ಪ್ರೇಕ್ಷಕ ಆಸನ ಸ್ಥಳ, ರಂಗಸ್ಥಳದ ಮೇಲೆ ತಿರುಗಾಡಿ ರಂಗ ಪರಿಕರಗಳು, ರಂಗ ವಸ್ತ್ರ- ವಿನ್ಯಾಸಗಳು, ಸಂಗೀತ ಪರಿಕರಗಳು, ಬಣ್ಣದ ಪುರುಷ- ಸ್ತ್ರೀ, ಕಲಾವಿದರ ಬೇರೆ ಬೇರೆ ಸುಸಜ್ಜಿತ (ಮೇಕಪ್) ಕೋಣೆಗಳನ್ನು ನೋಡುತ್ತಾ… ಇಡಿ ರಂಗಸ್ಥಳದ ದರ್ಶನ ಪಡೆದು, ಹೊರಬಂದಾಗ, ಮತ್ತೆ ನಮ್ಮ ಎದುರಿಗೆ ರಂಗ ಋಷಿ ಸುಬ್ಬಣ್ಣನವರಿದ್ದರು. ಅವರ ಸಲಹೆಗಳೊಂದಿಗೆ ಶ್ರೀಧರ ಇನ್ನೋರ್ವ ಹಿರಿಯ ಸಿಬ್ಬಂದಿ ಅವರ ಜೊತೆಯಲ್ಲಿ ಇಡೀ ನೀನಾಸಂ ಆವರಣದಲ್ಲಿ ರಂಗ ಸಾಧಕನ ಸಾಧನೆ ಸಾರಿ ಹೇಳುವ ಕಲಾವಿದರ ವಸತಿ ಗೃಹಗಳು, ವಾಚನಾಲಯ, ರಂಗ ತಾಲೀಮಕ್ಕಾಗಿ ಕಿರು ರಂಗ ಗೃಹಗಳು, ಮುಕ್ತ ನಿಸರ್ಗದಲ್ಲಿ ಬಯಲು ರಂಗಮಂದಿರ ಗಳ ನಿರ್ಮಾಣ, ನೋಡಿ ಖುಷಿಪಟ್ಟೆವು.

ಇಂತಹ ಗ್ರಾಮದಲ್ಲಿ, ಕಾಡಿನ ಮಧ್ಯದಲ್ಲಿ ಸಾಂಸ್ಕೃತಿಕ ಮುಖಿಯಾಗಿದ್ದು ಬಹುಮುಖಿ ಸುಬ್ಬಣ್ಣರವರು ರಂಗ ಕ್ರಿಯೆಯೊಂದಿಗೆ ನೀನಾಸಂ ಜೀವಂತಗೊಳಿಸಿರುವುದನ್ನು ಕಣ್ಣಾರೆ ಕಂಡು ಧನ್ಯತೆಯ ಸಾರ್ಥಕತೆಯಲ್ಲಿ ತಿರುಗಾಡಿ‘ಅಕ್ಷರ ಪ್ರಕಾಶನ’ ಅವರ ಸಾಹಿತ್ಯ ಪ್ರೇಮದೊಂದಿಗೆ ಕನ್ನಡದ ಚಿಂತನಶೀಲ ನವ್ಯತೆಗೆ ಅಪಾರ ಕೊಡುಗೆಯ ಶಕ್ತಿ- ವ್ಯಕ್ತಿ ಆಗಿರುವುದನ್ನು ಕಣ್ಣಾರೆ ಕಂಡು ಅವರ ಸಾಹಿತ್ಯ ಆಸಕ್ತಿ, ಒಲವು, ಶ್ರಮ ಎಲ್ಲಾ ಎದ್ದು ಕಾಣುತ್ತಿತ್ತು.

ಶ್ರೀಧರ ಹೆಗ್ಗೋಡ ಹಾಗೂ ಹಿರಿಯರಾದ ಇನ್ನೊಬ್ಬ ನೀನಾಸಂ ಸಿಬ್ಬಂದಿಗಳ ಜೊತೆಯಲ್ಲಿ ಮಿತ್ರರೆಲ್ಲ ನೀನಾಸಂ ಸುತ್ತಾಡಿ ಸುಬ್ಬಣ್ಣ ರವರಿಂದ ಸ್ಥಳಕ್ಕೆ ಮರಳಿ ಬಂದು ಅವರನ್ನು ಕಂಡು ಧನ್ಯತೆಯ ಭಾವದಲ್ಲಿ ಮತ್ತೊಮ್ಮೆ ಕೈಮುಗಿದು ನಿಮ್ಮ ಅಗಾಧ ಅಗೋಚರ ಶಕ್ತಿಯಲ್ಲಿ ಈ ರಂಗ ಪ್ರೀತಿಯೊಂದಿಗೆ ನೀವು ನಿರ್ಮಿಸಿದ ಈ ಕನ್ನಡ ರಂಗಕಾಶಿ, ನಮ್ಮ ನಾಡಿಗೆ ಹೆಮ್ಮೆಯ ರಂಗಸ್ಥಳವೆಂದಾಗ… ಅಷ್ಟೇ ಸರಳವಾಗಿ ರಂಗ ಸಾಧಕ… “ರವಿಯವರೇ ಇದು ನಿಮಗೆ ಸೇರಿದ್ದು ಎನ್ನುತ್ತಾ… ಆಗಾಗ ಬನ್ನಿರಿ. ಮತ್ತೊಮ್ಮೆ ಮಕ್ಕಳನ್ನು ಪರಿವಾರ ಸಮೇತ ಕರೆದುಕೊಂಡು ಬನ್ನಿರಿ” ಎನ್ನುತ್ತಾ ಮಾತು…

ತ್ರೈಮಾಸಿಕ ನೀನಾಸಂ ರಂಗಪತ್ರಿಕೆ ‘ಮಾತುಕತೆ’ ಕಡೆ ತಿರುಗಿತು. ‘ಸರ್ ನಾನು ಅದರ ಹಳೆಯ ಓದುಗನ ಆಗಿದ್ದು, ಇತ್ತೀಚೆಗೆ ಮಾತುಕತೆ ಬರದೆ, ಚಂದ ನೀಡದ ಪ್ರಯುಕ್ತ ನಿಂತು ಹೋಗಿದೆ’ ಎಂದಾಗ ಅವರು ಮಾತನಾಡುತ್ತಾ… ಇಲ್ಲಾ… ಇಲ್ಲಾ… ನಮಗೆ ನಿಮ್ಮಂತಹ ರಂಗಾಸಕ್ತರು ‘ಮಾತುಕತೆ’ ಓದಿದರೆ ಸಾಕು. ಚಂದ ಬೇಕಂತಲೇ ಇಲ್ಲ… ಎನ್ನುತ್ತಾ ತಮ್ಮ ಆ ಹಿರಿಯ ಸಿಬ್ಬಂದಿಗಳನ್ನು ಕರೆದು ನನ್ನೆಡೆಗೆ ಮಾತಾಡುತ್ತಾ ರವಿಯವರೇ ನಿಮ್ಮ ಮನೆಯಿರುವ ಬೆಳಗಾವಿಯ ವಿಳಾಸ ಬರೆದು ಕೊಡಿ, ಏಕೆಂದರೆ ನೀವೆಲ್ಲ ಸರ್ಕಾರಿ ನೌಕರಿಯಲ್ಲಿರುವವರು, ಅದಕ್ಕೆ ಎಲ್ಲಿದ್ದರೂ ಮನೆಗೆ ಕಳಿಸಿದರೆ ನಿಮಗೆ ‘ಮಾತುಕತೆ’ ತಪ್ಪದೇ ಓದಲು ದೊರಕುತ್ತದೆ, ತಲುಪುತ್ತದೆ, ಎಂದು ನನ್ನ ವಿಳಾಸ ಬರೆಯಿಸಿಕೊಂಡರು.

ಮತ್ತೊಮ್ಮೆ ಈ ಕಡೆಗೆ ಬಂದಾಗ ಬನ್ನಿರಿ… ನೀವು- ಎನ್ನುವಾಗ ಅವರ ಹೂವಿನ ಮನಸ್ಸಲ್ಲಿ ಹೊಂದಿದ ಸರಳತೆ, ನಿರ್ಮಲವಾದ ಪ್ರೀತಿ, ಆತ್ಮೀಯ ಸಾಕಾರಮೂರ್ತಿ- ಸುಬ್ಬಣ್ಣ ರವರಿಂದ, ಆಶೀರ್ವಾದ ಪಡೆದು ಶಿವಮೊಗ್ಗಕ್ಕೆ ಹೊರಡಲು ಅಣಿಯಾದಾಗ ಒಮ್ಮೆಲೆ ಒಳಗೆ ಹೋಗಿ, ಹೊರಗೆ ಬಂದು ಕೈಯಲ್ಲಿ ಕೆಲವು ಬೇರೆ ಬೇರೆ ರಂಗ ಚಟುವಟಿಕೆಗಳ ಕುರಿತ ಮತ್ತು ನೀನಾಸಂ ಪರಿಚಯಾತ್ಮಕ- ಕನ್ನಡ-ಇಂಗ್ಲಿಷ್ ಅವತರಣಿಕೆ ಪತ್ರಿಕೆಗಳನ್ನು ಮತ್ತು ಹಿಂದಿನ ೨-೩ ಮಾತುಕತೆ ಸಂಚಿಕೆಗಳನ್ನು ತೆಗೆದುಕೊಂಡು ಬಂದು ನನ್ನ ಕೈಗೆ ಕೊಟ್ಟರು. ಅವುಗಳನ್ನು ಪಡೆದು ಮನದಲ್ಲೇ… ಮತ್ತೊಮ್ಮೆ ‘ನೀನಾಸಂ’ನ್ನು ಧನ್ಯತೆಯಲ್ಲಿ ಸ್ಮರಿಸಿಕೊಂಡು ಕೈಮುಗಿದು ಕಾರಲ್ಲಿ ಕುಳಿತು ಸಾಗರಕ್ಕೆ ಹೊರಟೆವು.

ರಸ್ತೆಯಲ್ಲಿ… ನನ್ನ ಸ್ನೇಹಿತರಿಗೆ ನೀವೆಲ್ಲ ಭಾಗ್ಯವಂತರು. ಏಕೆಂದರೆ ಇಂತಹ ನೀನಾಸಂದ ಹತ್ತಿರದಲ್ಲಿ ಇರುವಿರಿ. ಬೇಕೆಂದಾಗ ಬಂದು ಹೋಗಬಹುದು. ಸುಬ್ಬಣ್ಣ ನವರನ್ನು ಕಾಣಬಹುದು. ಈ ಮಾತಿನಿಂದ ನನ್ನ ಗೆಳೆಯರು ಅತೀವ ಸಂತೋಷ ಪಟ್ಟರು.

ನನ್ನ ಮಕ್ಕಳು, ಪತ್ನಿ, ಪರಿವಾರದೊಂದಿಗೆ ನೀನಾಸಂಗೆ ಬರಬೇಕು. ಒಂದು ದಿನ ವಾಸ್ತವ್ಯ ಮಾಡಬೇಕು. ಮಕ್ಕಳಿಗೆ ಈ ರಂಗ ಕಾಶಿ ದರ್ಶನ, ಸುಬ್ಬಣ್ಣನವರ ಆಶೀರ್ವಾದ ಪಡೆದುಕೊಳ್ಳುವ ಬಯಕೆಯಲ್ಲಿ ಹಿಂದಿರುಗಿದೆ.

ಒಮ್ಮೆಲೆ ೧೭-೭-೨೦೦೫ ಭಾನುವಾರದ ದಿನದಂದು ಸರಿಯಾಗಿ ೩೨ ದಿನಗಳು ಉರುಳಿದ್ದವು. ನನಗೆ ರಂಗ ಪ್ರೀತಿ ಸಾಕ್ಷಾತ್ಕಾರ ಗೊಳಿಸಿದ ಸುಬ್ಬಣ್ಣರವರು ಇಲ್ಲ ಎಂದಾಗ ತನು-ಮನಗಳೆರಡು ಭಾರವಾಗಿದ್ದವು.

ಆದರೂ ಆ ಮಹಾನ್ ರಂಗ ಹರಿಕಾರ ತನ್ನ ಬದುಕಿನುದ್ದಕ್ಕೂ ವೈಚಾರಿಕತೆಯ ಮೂಸೆಯಲ್ಲಿ, ಸ್ವಂತಿಕೆಯ ಕಳಕಳಿಯಲ್ಲಿ, ಅಪರಿಮಿತ ಅಂತಃಕರಣದ ಈ ರಂಗ ಸಂತ, ರಂಗ ದಾರ್ಶನಿಕ, ನನ್ನ ಕಣ್ಣ ಮುಂದೆ ಕುಳಿತು ಮಾತಾಡಿದಂತೆ ಭಾಸವಾಗತೊಡಗಿತು.

ಇಂಥ ರಂಗಚೇತನ, ರಂಗ ಕ್ರಾಂತಿ ಪುರುಷನ, ಅಂತಿಮ ದರ್ಶನ ಪಡೆಯಲೇಬೇಕು ಎನ್ನುವ ಛಲದಲ್ಲಿ ನಗರದ ರಂಗ ಗೆಳೆಯರಿಗೆ ಸಂಪರ್ಕಿಸಿದರೆ ಯಾರು ಲಭ್ಯವಾಗಲಿಲ್ಲ. ಕೊನೆಯಲ್ಲಿ ನಾನೇ ಮತ್ತೆ ಸಾಗರದ ಆ ಇಬ್ಬರು ಗೆಳೆಯರಿಗೆ ಫೋನ್ ಮಾಡಿ, ಬಸ್ ಮೂಲಕ ಸಾಗರಕ್ಕೆ ಬರುವೆ. ಹೆಗ್ಗೋಡಿಗೆ ಹೊರಡಲು ಸಿದ್ದರಾಗಿರಿ- ಎಂದು ತಿಳಿಸಿ ನಾನು ಬಸ್ ಹತ್ತಿದೆ.

ಸಾಗರದಲ್ಲಿ ಗೆಳೆಯರೊಂದಿಗೆ ಸೇರಿ ಈ ೩೨ ದಿನಗಳ ಹಿಂದೆ ಅವರ ದರ್ಶನಕ್ಕೆ ಹೋಗುವ ಉತ್ಸಾಹ, ಆತುರ, ಖುಷಿ ಎಲ್ಲೋ ಮನದಲ್ಲಿ ಮೆಲುಕು ಹಾಕುತ್ತಲೇ ಹೆಗ್ಗೋಡು ತಲುಪಿದಾಗ ಅಪಾರ ರಂಗ ಶಿಷ್ಯ ಅಭಿಮಾನಿಗಳ ಜಾತ್ರೆಯಲ್ಲಿ ಮಹಾನ್ ರಂಗ ಜಂಗಮ, ರಂಗ ಋಷಿಯು ಚಿರ ನಿದ್ರೆಯಲ್ಲಿದ್ದ. ನೀನಾಸಂ, ಶಿವರಾಮ ಕಾರಂತ ರಂಗಮಂದಿರದ ಒಳಗೆ ಮಲಗಿದ್ದ ಸ್ಥಳಕ್ಕೆ ಕಾಲಿಟ್ಟು ಒಂದು ಕ್ಷಣ ನಿಂತುಕೊಂಡೆ. ಅವರ ಕಾಲಿಗೆ ಪುಷ್ಪಗಳನ್ನು ಅರ್ಪಿಸಿ ಮಳೆ ಬಾಗಿದಾಗ, ಕಳೆದ ಬಾರಿ ಬಂದಾಗ ಪ್ರೀತಿಯಲ್ಲಿ ಕೈ ಹಿಡಿದು ಮಾತಾಡಿಸಿದಂತೆ ಉಂಟಾದ ಮಿಂಚಿನ ಸೆಳೆತದ ಅನುಭವದೊಂದಿಗೆ ಹೆಜ್ಜೆ ಎತ್ತಿ ಇಡಲು ಭಾರವಾಗಿ, ಮನದಲ್ಲಿಯೇ ಮುದುಡಿ ಭಾರವಾದ ಹೆಜ್ಜೆಯಲ್ಲಿ ಒಂದು ಸುತ್ತು ಪ್ರದಕ್ಷಿಣೆಯಲ್ಲಿ ಅವರ ಅಂತಿಮ ದರ್ಶನ ಪಡೆದು ಮತ್ತೊಮ್ಮೆ ಅವರ ಪಾದಕಮಲಗಳಿಗೆ ಸ್ಪರ್ಶಿಸಿ, ತಲೆಬಾಗಿ ಕೈಮುಗಿದು ಮೌನವಾಗಿ ನಿಂತುಕೊಂಡು, ಮನದಲ್ಲಿಯೇ ಮಾತಾಡುತ್ತಾ… ನಿಮ್ಮ ಈ ಸ್ಥಾವರ ರಂಗಸ್ಥಳದಿಂದ ಇಡೀ ನಾಡಿಗೆ ರಂಗಜಂಗಮವಾಗಿಸಿ, ರಂಗಭೂಮಿ ಬೆಳೆಸಿ ಉಳಿಸಿದ ನಿಮ್ಮ ತ್ಯಾಗಮಯ ರಂಗ ಪ್ರೀತಿಗೆ, ಶ್ರಮಕ್ಕೆ ನಮನಗಳು- ಎಂದೆ.

ನಮ್ಮಂತಹವರಿಗೆಲ್ಲಾ ನೀವು ದಾರಿದೀಪವಾಗಲಿ, ನಿಮ್ಮ ಆಶೀರ್ವಾದ ರಂಗ ಸಾಕ್ಷಾತ್ಕಾರ ಸದಾ ಮುನ್ನಡೆಸಲಿ ಎಂದು ಮನದಲ್ಲಿ ನೆನೆಸಿಕೊಳ್ಳುತ್ತಾ… ಸೇರಿದ ಅಪಾರ ಸಾಂಸ್ಕೃತಿಕ, ರಂಗಪ್ರಿಯರು, ಹಿರಿಯರೊಂದಿಗೆ ಅವರ ಸಾಧನೆಯನ್ನು ನೆನೆಯುತ್ತಾ ನಿಂತುಕೊಂಡೆ. ಅಷ್ಟರಲ್ಲಿ…

ಸುಬ್ಬಣ್ಣನವರ ಹೆಜ್ಜೆಯಲ್ಲಿ ಹೆಜ್ಜೆ ಹಾಕಿ ನಡೆಯುತ್ತಿರುವಂತಹ ರಂಗ ಋಷಿಯ ಕನಸಿನ ಸಾಕಾರ ಮೂರ್ತಿ, ಕರುಳಿನ ಕುಡಿ ‘ಅಕ್ಷರ’ ಅವರು ಅಲ್ಲಿಯೇ ಕುಳಿತುಕೊಂಡಿದ್ದರು. ಅವರು ಕುಳಿತ ಭಂಗಿ ನೋಡುತ್ತಿದ್ದೆ. ತದೇಕ ದೃಷ್ಟಿಯಲ್ಲಿ ಆ ರಂಗ ಚೇತನದ ಚಿರ ನಿದ್ರೆಯಲ್ಲಿಯ ತಂದೆಯ ಚೇತಕ ಶಕ್ತಿ. ಆ ಕಣ್ಣಂಚಿನಲ್ಲಿ ವಿನಿಮಯಸಿ ಕೊಳ್ಳುತ್ತಿರುವಂತೆ ಏಕತೆಯ ದೃಷ್ಟಿಯ ಚಿತ್ತದಲಿ ನೋಡುತ್ತಿರುವ, ಮೌನದಲ್ಲಿಯೇ ಕಂಡ ತೇಜಸ್ಸಿನ ಆ ನೋಟ ಒಂದು ಕ್ಷಣ ಬೆರಗುಗೊಳಿಸಿತು.

ಅವರ ಹತ್ತಿರ ಹೋಗಿ ಅಕ್ಷರ ರವರೇ ಬೆಳಗಾವಿಯಿಂದ ಡಾ. ಸರಜೂ ಕಾಟ್ಕರ್ ಹಾಗೂ ರಂಗ ಗೆಳೆಯರು ಬರಲಿಕ್ಕೆ ಆಗಲಿಲ್ಲ. ತಂದೆಯವರ ಶಕ್ತಿ, ಅವರು ನಡೆದ ದಾರಿ ಇನ್ನು ನಿಮ್ಮದಾಗಲಿ. ನಿಮ್ಮೊಂದಿಗೆ ಇಡೀ ನಾಡು, ನಾವೆಲ್ಲಾ ಇರುವೆವು ಎಂದು ಮೌನದಲ್ಲಿಯೇ ಮಾತಾಡಿ ಅಲ್ಲಿಯ ರಂಗ ಸಂಸ್ಕೃತಿಯ ವಕ್ತಾರನ ಚಿರನಿದ್ರೆ ಯನ್ನು ಕಾಣುತ್ತಾ ನಿಂತುಕೊಂಡೆ.

ಬೆಳೆದು ಓಡಾಡಿದ ಮುಂಡಿಗೇಸರದ ಆ ಮನೆಯ ಬಾಗಿಲಲ್ಲಿ ಎಲ್ಲರಿಗೂ ವಿದಾಯ ಹೇಳಿ, ಗಗನ ತಾರೆಯಾಗಿ, ಚಿರ ನಿದ್ರೆಯಲ್ಲಿ ಮಲಗಿಸಿ, ಪ್ರೀತಿಯಲ್ಲಿ ನೀರು ಸ್ಪರ್ಶ ಮಾಡುತ್ತಿದ್ದಾಗ, ತದೇಕಚಿತ್ತದಿಂದ ಮೌನದಿ ಕೈ ಕಟ್ಟಿಕೊಂಡು ನಿಂತುಕೊಂಡೆ.

ರಂಗ ಜಂಗಮನಾಗಿದ್ದ ಸುಬ್ಬಣ್ಣ ರವರು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ, ಗೌರವ ಪಡೆದವರಾಗಿದ್ದರು ಎಂದೂ ಬಿಂಕನ್ನು ಅಥವಾ ದೊಡ್ಡಸ್ತಿಕೆಯನ್ನು ತಮ್ಮ ಸಮೀಪ ಸುಳಿದಾಡಲು ಅವಕಾಶ ನೀಡದ ಮಹಾನ್ ಛಲದಂಕಮಲ್ಲನಾಗಿದ್ದರು. ಸರಳತೆ, ವಿನಯ, ಸೌಜನ್ಯ, ನಿರ್ವಾಜ್ಯ ಪ್ರೀತಿಯಲ್ಲಿ ಮಗುವಿನ ಮನಸ್ಸು ಹೊಂದಿದ ಸುಬ್ಬಣ್ಣ ರವರು ಅಷ್ಟೇ ಸರಳವಾಗಿ ಅಂತಿಮ ಪಯಣದ ಕೊನೆಯ ಬದುಕಿನ ಯಾತ್ರೆಯ ನಿಲ್ದಾಣದಲ್ಲಿ ಮಲಗಿದ್ದರು. ಅದನ್ನು ನೋಡುತ್ತಿದ್ದಾಗ ನನಗೆ ಅಗೋಚರ… ಅಗಾಧ ಶಕ್ತಿಯ ದರ್ಶನವಾದ ಅನುಭವದಲ್ಲಿಯೇ ಮೌನಿಯಾಗಿದ್ದೆ.

ರಂಗ ಋಷಿಯ ಕೊನೆಯ ಪಯಣದಲ್ಲಿ ಅವರನ್ನು ಬೀಳ್ಕೊಡಲು ಅರಿಯದ ಅವಿಸ್ಮರಣೀಯ ಸಂಬಂಧ ಸೆಳೆತದ ಮೌನದಲ್ಲಿಯೇ ಹುಟ್ಟಿ ಬೆಳೆದ ಮನೆಯ ಪಕ್ಕದಲ್ಲಿಯೇ ಅಂತಿಮಯಾತ್ರೆಯಲ್ಲಿ ಭಾಗವಹಿಸಿ ಅಕ್ಷರ, ಮೊಮ್ಮಗ ಶಿಶಿರ ಅವರ ಜೊತೆಯಲ್ಲಿ ಅಪಾರ ರಂಗ ಬಳಗ, ನಾಡಿನಾದ್ಯಂತದಿಂದ ಬಂದಂತಹ ರಂಗ ಪ್ರಿಯರ ಹೃದಯಸ್ಪರ್ಶಿ, ಆತ್ಮೀಯ ಪ್ರೀತಿಯ ವಿದಾಯ ಪಡೆದು ಆ ರಂಗ ಜ್ಯೋತಿಯ ದಹನದ ಅಗೋಚರ ಶಕ್ತಿಯ ಬೆಂಕಿಯ ಜ್ವಾಲೆ ಯು ಆ ರಂಗ ಜ್ಯೋತಿಯೊಂದಿಗೆ ಸೇರಿ, ಕನ್ನಡ ನಾಡು, ಕನ್ನಡ ರಂಗಭೂಮಿ, ಅಷ್ಟೇ ಅಲ್ಲ ರಾಷ್ಟ್ರ ರಂಗಭೂಮಿಯ ಸಾಂಸ್ಕೃತಿಕ ಜ್ಯೋತಿಯಾಗಿ ಸದಾ ನಂದಾದೀಪವಾಗಿ ಬೆಳಗಲೆಂದು ಬೆರೆತು ಹೋದರು. ನಮ್ಮನ್ನೆಲ್ಲ ಪ್ರೀತಿಯಿಂದ ಕೈ ಮಾಡುತ್ತ, ನಗುಮೊಗದಲ್ಲಿ ಆ ಮೋಡಗಳ ನಡುವೆ ಅನಂತ ಜ್ಯೋತಿಯಾಗಿ ಬೆಳಕಲಿ ಸೇರಿ ಬೆಳಕಾದರು.

ಸುಬ್ಬಣ್ಣ ರವರ ಸರಳ ಮಾತು, ವಿನಯ, ಕಿರಿಯ ರಂಗ ಆಸಕ್ತರ ಬಗ್ಗೆ ತೋರುವ ಪ್ರೀತಿ, ಸೌಜನ್ಯ, ವಿಶ್ವಾಸ, ಜೊತೆಗೆ ಅವುಗಳೊಂದಿಗೆ ಜನಪದದ ಕಳಕಳಿ, ರಂಗಭೂಮಿ ಪ್ರೇಮ-ಶ್ರಮಗಳ ಭಾರ ಹೊತ್ತು ಶಿವಮೊಗ್ಗ ಬಸ್ಸು ಏರಿದೆ. ಮನದಲ್ಲೇ ಅವರ ರಂಗಕನಸು, ಆಸೆಯ, ಚಿಂತನೆಗಳು, ಸರಳತೆ ಗಳ ಸಾಕಾರ ಮೂರ್ತಿಯ ಅಗಲುವಿಕೆಯಿಂದಾದ ಆ ವಾಸ್ತವಿಕತೆಯನ್ನು ಅರಿತು, ಅಳವಡಿಸಿಕೊಂಡು ಒಂದು ಹೆಜ್ಜೆ ಯಾದರೂ ರಂಗಭೂಮಿಯಲ್ಲಿ ಇಟ್ಟಾಗಲೇ ಅವರಿಗೆ ಸಲ್ಲಿಸಬಹುದಾದ ಶ್ರದ್ಧಾಂಜಲಿ, ಗೌರವ, ನಮನಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಕ್ರಾಂತಿ
Next post ಗಾಂಧಾರಿ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

cheap jordans|wholesale air max|wholesale jordans|wholesale jewelry|wholesale jerseys