ರಂಗಸಂಸ್ಕೃತಿಯ ಜಾಗತಿಕ ವಕ್ತಾರ

ರಂಗಸಂಸ್ಕೃತಿಯ ಜಾಗತಿಕ ವಕ್ತಾರ

ಸ್ವಾತಂತ್ರ್ಯಾ ನಂತರದ ಭಾರತ ದೇಶದಲ್ಲಿ, ಅದು ಕನ್ನಡನಾಡಿನಲ್ಲಿ ಕನಸುಗಳಿಗೇನು ಕೊರತೆಯಿರಲಿಲ್ಲ. ಜಾಗತಿಕ, ಪಾಶ್ಚಾತ್ಯ ದೇಶಗಳಂತೆ ನಾವು ಕೂಡ, ಶಕ್ತಿಶಾಲಿ, ಬಲಿಷ್ಠರಾಗಿ, ಹೆಚ್ಚು ಹೆಚ್ಚು ವೈವಿಧ್ಯಮಯ ವಸ್ತುಗಳನ್ನು ಉತ್ಪಾದಿಸಿ ಉಪಯೋಗಿಸುತ್ತಾ ಕಾಲಾನುಕ್ರಮವಾಗಿ, ಪಾಶ್ಚಾತ್ಯ ಜೀವನಶೈಲಿಯನ್ನು ಸರಳವಾಗಿ ಅಳವಡಿಸಿಕೊಳ್ಳುವ ಕನಸನ್ನು ಬಹಳ ಜನರು, ಅದರಲ್ಲೂ ಮುಖ್ಯವಾಗಿ ಆಳುವ ವರ್ಗ ಮತ್ತು ಮಧ್ಯಮವರ್ಗದ ಜನರು ಕಾಣುತ್ತಿದ್ದರೆನ್ನುವದು ಈಗ ಸ್ಪಷ್ಟವಾಗಿದೆ. ಈ ಕನಸುಗಳ ಆಂತರ್ಯದಲ್ಲಿ ಪಾಶ್ಚಾತ್ಯ ನಾಗರೀಕತೆ ನಮ್ಮ ದೇಶಿ ಜೀವನಶೈಲಿಗಳಿಗಿಂತ ಉತ್ತಮವೆಂಬ ಭ್ರಮೆಯು ಸೇರಿತ್ತು. ಈ ರೀತಿಯ ಭ್ರಮೆಗಳನ್ನು ನಿಜವಾಗಿಸಿದ್ದವರು ಸಿನಿಮಾದವರು ಮತ್ತು ಸಾಂಸ್ಕೃತಿಕ ಜಗತ್ತು.

ಆಳವಾಗಿ ಬೇರು ಬಿಟ್ಟಿರುವ ಭಾರತೀಯ ಸಾಂಸ್ಕೃತಿಕ ಲೋಕದ ಕಲೆ, ಸಾಹಿತ್ಯ, ಸಂಗೀತ, ನಾಟಕ, ನೃತ್ಯಗಳಂತಹುವು ತನ್ನದೇ ಆದ ಜನಪದದ ವೈಶಿಷ್ಟ್ಯವನ್ನು ಈ ಪರಕೀಯ ಸಾಂಸ್ಕೃತಿಕ ದಬ್ಬಾಳಿಕೆಗೆ ಮುಖಾಮುಖಿಯಾಗಿ ಮೆರೆಸುತ್ತಾ, ಮರೆಯುತ್ತಾ, ಬಂದಂತಹ, ಕನ್ನಡ ಸಾಂಸ್ಕೃತಿಕ ಲೋಕದ ಮೂಲ ಆಶಯದೊಂದಿಗೆ ಮತ್ತು ಕನ್ನಡ ರಂಗಭೂಮಿಯ ಕುರಿತು ಹೊಂದಿದ ಕಳಕಳಿಯೊಂದಿಗೆ, ನಾಟಕ, ಅಭಿನಯ, ಕಲೆ, ಸಂಗೀತ, ಸಾಹಿತ್ಯ, ರಂಗಗಳಲ್ಲಿ ಬೆಂಗಳೂರು ಬಹು ಹಿಂದಿನಿಂದಲೂ ಪ್ರಮುಖ ಕೇಂದ್ರವೆನಿಸಿದೆ. ಇಂಥ ಕೇಂದ್ರ ಸ್ಥಳದಲ್ಲಿ ನಾಟ್ಯಾಸಕ್ತ ಪ್ರೇಕ್ಷಕರ ಅಭಿರುಚಿ ಹೆಚ್ಚಿಸುವ ವಿನೂತನ ಶೈಲಿಯ ರಂಗಪ್ರಯೋಗಗಳು ಕಲಾವಿದರಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಅವಕಾಶ ನೀಡುವ ಒಂದು ವೇದಿಕೆ ಮತ್ತು ರಂಗಚಟುವಟಿಕೆಗಳಿಗೆ ಜೀವಂತಿಕೆಯನ್ನು ತುಂಬುವ ಹೊಸ, ಜನಪರ ಸಮಾಜಮುಖಿ ಕಳಕಳಿಯ ರಂಗಪ್ರಯೋಗ ನೀಡುವ ಉದ್ದೇಶದೊಂದಿಗೆ ತಮ್ಮ ಅವಿರತ-ರಂಗ ಬದುಕಿನೊಂದಿಗೆ ಬೆಳೆದಂತಹ ತಮ್ಮ ಅಂತರಾಳದಲ್ಲಿ ತುಂಬಿಕೊಂಡಂತಹ ರಂಗಶ್ರೀಯ ಉತ್ಸಾಹ, ಶ್ರಮ, ಶ್ರದ್ಧೆಯನ್ನು ಬಂಡವಾಳವಾಗಿಸಿಕೊಂಡ ಯುವ ದಂಪತಿಗಳಾದ, ನಾಟಕ, ಸಿನಿಮಾ, ಧಾರವಾಹಿಗಳಲ್ಲಿ ನಟನೆ, ನಿರ್ದೇಶನಗಳೆಂದು ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡವರು ರಂಗಚೇತನಗಳಾದ ದೇವನಾಗೇಶ, ರತ್ನಾ ನಾಗೇಶ. ಬದುಕಿನಲ್ಲಿ ಕೈ ಹಿಡಿದ ಕನ್ನಡ ರಂಗಭೂಮಿಯ ಕೈಹಿಡಿದು ದಶಕಗಳ ಹಿಂದೆ ಸ್ಥಾಪಿಸಿ ಮುನ್ನಡೆಸಿದ ‘ನಂದನ’, ಇಂದು ಕನ್ನಡ ರಂಗಭೂಮಿ ಜಗತ್ತಲ್ಲಿ ಹೆಸರಾಗಿದೆ. ಬೆಂಗಳೂರಿನ ನಾಗಾಲೋಟದ ನಾಟಕ ಲೋಕದಲ್ಲಿ ‘ಹರಕೆಯ ಕುರಿ’ಯೊಂದಿಗೆ ಈ ತಂಡ ಪ್ರಾರಂಭಿಸಿದ ರಂಗಸಾಧನೆಗಳಿಂದ ರಂಗಾಸಕ್ತರ ಮನ ಗೆದ್ದುಕೊಂಡಿದೆ. ರಂಗ ಸಂಘಟನೆ, ನಾಟಕ ಪ್ರದರ್ಶನ, ನಿರ್ದೇಶನ, ನಿರ್ವಹಣೆ, ರಂಗಚಿಂತನೆ, ರಂಗತರಬೇತಿ ಶಿಬಿರ, ರಂಗಕರ್‍ಮಿಗಳ ಸಾಧನೆಯನ್ನು ಗೌರವಿಸುವ ವಿನೂತನ ಪರಂಪರೆಯೊಂದಿಗೆ ನಾಡಿನ ನಾಟಕ ಪ್ರೇಮಿಗಳ ಗಮನ ಸೆಳೆದ ‘ನಂದನ’ದ ಸಾಧನೆ ಗುರುತರವಾದುದು.

ಇತ್ತೀಚೆಗೆ ರಂಗಕರ್ಮಿಗಳು, ರಂಗ ತಂಡಗಳು, ರಂಗ ಜಗತ್ತಿಗೆ, ರಂಗಾಸಕ್ತರಿಗೆ ಏನಾದರೂ ಹೊಸತನದೊಂದಿಗೆ, ರಂಗ ಪ್ರಯೋಗಕ್ಕಾಗಿ ಹಂಬಲಿಸುತ್ತಾ, ತಡಪಡಿಸುತ್ತಿದ್ದ ಸಂದರ್ಭದಲ್ಲಿಯೇ, ದೇವ-ರತ್ನಾರ ನೇತೃತ್ವದಲ್ಲಿ ವಿವಿಧ ವರ್ಗಗಳಿಂದ ಕಲೆಹಾಕಿದ, ಕಲಾವಿದರು, ರಂಗತಜ್ಞರನ್ನು ಒಂದೆಡೆ ಕೂಡಿಸಿ ‘ರಂಗ ಶತಕ’ವೆಂಬ ಸತತ ನೂರು ಗಂಟೆಗಳ ಕಾಲ ರಂಗ ಪ್ರದರ್ಶನವನ್ನು ಸುಮಾರು ನಲವತ್ತು ನಾಟಕಗಳನ್ನು, ಅರ್ಧಗಂಟೆಯ ನಾಟಕದಿಂದ ಹಿಡಿದು, ಮೂರು ಗಂಟೆಯ ಸುದೀರ್ಘ ನಾಟಕದವರೆಗೆ, ವಿವಿಧ ಬಗೆಯ ಕನ್ನಡದ ಬೇರೆ-ಬೇರೆ ಪ್ರಮುಖ ನಾಟಕಕಾರ ನಾಟಕಗಳನ್ನು ರಂಗದ ಮೇಲೆ ತಂದು ಪ್ರತಿ ನಾಟಕ ಪ್ರದರ್ಶನವು ತನ್ನ ಗುಣಮಟ್ಟದಲ್ಲಿ ಲವಲೇಶವು, ಲೋಪ, ಕೊರತೆಗೆ ಅವಕಾಶ ನೀಡದೆ ಉತ್ತಮ ಸಂಯೋಜನೆಯ ಗುಣಾತ್ಮಕ ಅಂಶಗಳಿಂದ ನೂರು ಗಂಟೆಗಳವರೆಗೆ, ಪ್ರೇಕ್ಷಕರನ್ನು ಹಿಡಿದಿಟ್ಟು, ಅವರ ಮನಗೆದ್ದು, ಯಶಸ್ವಿಗೊಳಿಸಿದ ‘ರಂಗಶತಕ’ ‘ನಂದನ’ದ ದಾಖಲೆಯೊಂದಿಗೆ ಅದು ಮಾಡಿದ ಸಾಧನೆಯು ರಾಷ್ಟ್ರೀಯ ರಂಗಭೂಮಿಗೆ ಸಂಬಂಧಿಸಿದ ದಾಖಲೆಯೆಂದು ಅಧಿಕೃತವಾಗಿ ‘ಲಿಮ್ಕಾ’ ದಾಖಲೆ ಪುಸ್ತಕದಲ್ಲಿ ನಮೂದಾಗಿರುವದು. ಇಡೀ ಕನ್ನಡ ರಂಗಜಗತ್ತು, ರಂಗಭೂಮಿಗೆ ಹೆಮ್ಮೆಪಡುವಂತ ಸಾಧನೆಗೈದ ‘ನಂದನ’ ಕನ್ನಡಿಗರ ಹೆಮ್ಮೆಯ ರಂಗಸಂಸ್ಥೆಯನ್ನುವದರಲ್ಲಿ ಎರಡು ಮಾತಿಲ್ಲ.

ಈಗಾಗಲೆ ಅಂತರಾಷ್ಟ್ರೀಯ ದಾಖಲೆ ಇರುವದೇ ೫೭ ಗಂಟೆಗಳ ಸತತ ನಾಟಕ ಪ್ರದರ್ಶನ, ಈ ಅಂತರಾಷ್ಟ್ರೀಯ ದಾಖಲೆಯನ್ನು ಹಿಮ್ಮೆಟ್ಟಿಸಿರುವ ‘ನಂದನ’ ತಂಡ ನೂರು ಗಂಟೆಗಳ ಸತತ ರಂಗಪ್ರದರ್ಶನದಿಂದ ಕನ್ನಡ ರಂಗಭೂಮಿಯ ಜಾಗತಿಕ ರಂಗ ದಾಖಲೆಯಾಗಿದೆ.

ಕನ್ನಡ ರಂಗಭೂಮಿಯೊಂದಿಗೆ ಸದಾ ಹೆಜ್ಜೆಯಿಡುತ್ತಾ ಹಲವು ಹತ್ತು ಹೊಸ ಪ್ರಯೋಗಗಳನ್ನು ಜೊತೆಗೆ ರಂಗ ಸಂಘಟನೆಯಂತ ಮಹತ್ವದ ಕೆಲಸವನ್ನು, ಆರ್ಥಿಕವಾಗಿ ಸವಾಲು ಸ್ವೀಕರಿಸಿ ಎದೆಗುಂದದೆ “ರಾವಿ ನದಿ ದಂಡೆಯ ಮೇಲೆ” ಕೋಮುಸೌಹಾರ್ದತೆಯನ್ನು ಸಾರುವ ಕೃತಿಯನ್ನು ದಿಟ್ಟತನದ ಸವಾಲಾಗಿ ರಂಗ ಮೇಲೆ ತರುವಂತಹ ಎದೆಗಾರಿಕೆ ಮರೆಯುವ ಸಾಮಾಜಿಕ ಕಳಕಳಿಯ ನಿಷ್ಟೆಯಲಿ ರಂಗ ಸೇವೆ ಮಾಡುತ್ತಾ ರಂಗ ಚಟುವಟಿಕೆಗಳಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸದಾ ರಂಗಚಿಂತನೆ ಯೊಂದಿಗೆ ತಮ್ಮ ಪ್ರತಿಭೆ ಮತ್ತು ರಂಗಚಟುವಟಿಕೆ, ದೂರದರ್ಶನ, ಚಲನಚಿತ್ರ, ಅಭಿನಯ ನಿರ್ದೆಶನಗಳಂತಹ ಸಾಂಸ್ಕೃತಿಕ ಲೋಕದ ಒಡನಾಟದೊಂದಿಗೆ, ಸಾಂಸ್ಕೃತಿಕ ರಾಯಭಾರಿಗಳಾಗಿರುವ ದೇವ-ರತ್ನಾ ನಾಗೇಶ ಹಾಗೂ ಅವರ ರಂಗ ಗೆಳೆಯರು ಕನ್ನಡ ರಂಗಭೂಮಿಯ ಗೌರವ ಹೆಚ್ಚಿಸಿದ ಅವರಿಗೂ ಅವರ ‘ನಂದನ’ಕ್ಕೆ ಅಭಿನಂದನೆಗಳು. ‘ನಂದನ’ ರಂಗಭೂಮಿಯ ಜಗತ್ತಲ್ಲಿ ಕ್ರಿಯಾಶೀಲತೆಯೊಂದಿಗೆ, ನಾಟಕ ಚಟುವಟಿಕೆಗಳ ಮತ್ತು ರಂಗಲೋಕದ ಜೀವಂತಿಕೆಗಾಗಿ ಸದಾ ಶ್ರಮಿಸುವಂತಾಗಲಿ, ಹೆಚ್ಚು-ಹೆಚ್ಚು ರಂಗಪ್ರಯೋಗಗಳನ್ನು ಹೊಸತನದೊಂದಿಗೆ ನೀಡಲಿ.

ಕಳೆದ ಐದಾರು ದಶಕಗಳಿಂದ ‘ವೃತ್ತಿ-ಹವ್ಯಾಸಿ’ ರಂಗಭೂಮಿಯಲ್ಲಿ ಮಾತ್ರ ಯಾವುದೇ ಹೇಳಿಕೊಳ್ಳುವಂತಹ ಗುಣಾತ್ಮಕ ಬದಲಾವಣೆ ಆಗದಿರುವಂತಹ ಕರ್ನಾಟಕ ರಂಗಭೂಮಿಯ ತೀವ್ರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ‘ನಂದನ’ ಚಾಲನೆ ನೀಡುವದರೊಂದಿಗೆ ನಾಡಿನ ಸಮಾಜಮುಖಿ, ಜನಪರ ಸ್ಪಂದಿಸುವ ಕ್ರಿಯಾಶೀಲ ರಂಗಸಂಸ್ಥೆಯಾಗಿ ‘ನಂದನ’ವು ನಾಟ್ಯಸೇವೆ ಸದಾ ಗೈಯ್ಯುವಂತಾಗಲಿ, ಕನ್ನಡಿಗರ ಹೆಮ್ಮೆಯ ರಂಗ ಸಂಸ್ಥೆಯಾಗಿ ಮುನ್ನಡೆಯಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಟ್ಯೂಷನ್
Next post ಕುಣಿಕುಣಿವಳು ನಮ್ಮ ಕುಂಬಾರಗಿತ್ತಿ

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…