ಹೊತ್ತು ಮುಳುಗಿತು ಜಗದಿ ಕತ್ತಲಾದಿತು

ಹೊತ್ತು ಮುಳುಗಿತು ಜಗದಿ ಕತ್ತಲಾದಿತು || ಪ ||

ಮತ್ತೆ ಗಗನತಾರಿ ಮೂಡಿ
ಗೊತ್ತು ಐಸುರ ಚಂದ್ರನ್ನ ನೋಡಿ
ಗೊತ್ತುಗೆಡಸಿತು ರಣದಿ ಕಿತ್ತು ಜಡಸಿತು || ಅ. ಪ. ||

ಹಗಲಿ ಹರದಿತು ಸಮರ ಕತ್ತಲಾದಿತು
ಮತ್ತೆ ಬರುವ ಮೂಡಲಾದ್ರಿ ದಿಕ್ಕಿನೊಳಗೆ ಬಾಸ್ಕಾರಾದ್ರಿ
ಅಕ್ಕರತಿಲೆ ತಕ್ಕ ಬಿಸಿಲು
ಚಕ್ಕನೆ ಎದ್ದಿತು ಸಮರಾ ಕತ್ತಲಾದಿತು || ೧ ||

ಮಕ್ಕಾಮದೀನದಿ ರಾಜ
ಹೊಕ್ಕ ಸಮಯದಿ
ಮಿಕ್ಕ ಶಿಶುನಾಳಧೀಶನರಗಿಳಿ
ಮುಳುಗಿತು ಜಗಳಾ ಚಿಗಿಸಿತು || ೨ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿಲ್ಪಿ
Next post ಒಲವೇ… ಭಾಗ – ೬