ವಾಗ್ದೇವಿ – ೨೪

ವಾಗ್ದೇವಿ – ೨೪

ಆಚಾರ್ಯರೆಲ್ಲರೂ ಅವರವರ ಊರಿಗೆ ಹೋಗಲಿಕ್ಕೆ ಅನುವಾದರೂ ಬಾಲಮುಕುಂದನು ತಾಮಸ ಮಾಡುತ್ತಿದ್ದನು. ಯಾಕಂದರೆ ತಮ್ಮಣ್ಣ ಭಟ್ಟನು ಪ್ರತಿಸಾಯಂಕಾಲ ಅವನನ್ನು ಕಂಡು ಅವನ ಭೇಟಿಯು ವಾಗ್ದೇವಿಗೆ ದೊರಕುವ ಉಪಾಯವನ್ನು ಸಫಲವಾಗಿ ನಡೆಸುತ್ತಾ ಬಂದನು. ಇವರಿಬ್ಬರ ಅನ್ಯೋನ್ಯ ಮಿತ್ರತ್ವವು ದಿನೇ ದಿನೇ ವೃದ್ಧಿಯಾಗುತ್ತಾ ಬಂದುದರಿಂದ ಅವರ ಅಗಲುವಿಕೆಯು ಶಾನೆ ಸಂಕಟಕರವಾಯಿತು. ಕೊನೆಗೆ ನಿರ್ವಾಹವಿಲ್ಲದೆ ಬಾಲಮುಕುಂದನು ಮನಸ್ಸನ್ನು ಗಟ್ಟಿ ಮಾಡಿ ಹೊರಟನು. “ಅನಾಥೆ ಯಾದ ನನ್ನನ್ನು ಸದಾ ರಕ್ಷಿಸು” ಎಂದು ವಾಗ್ದೇವಿಯು ಕಂಬನಿ ತುಂಬಿದ ಕಣ್ಣುಗಳಿಂದ ತನ್ನ ಪೂರ್ಣ ಮೋಹನ ಶಕ್ತಿಯನ್ನು ಅನನ ಮೇಲೆ ಪಸರಿದ ವೇಳೆಯಲ್ಲಿ ಬಾಲಮುಕುಂದನ ಹೃದಯವು ಬೆಣ್ಣೆಯಂತೆ ಕರಗಿತು. “ಒಡಲಲ್ಲಿ ಜೀವವಿರುವ ವರೆಗೆ ನೀನು ಮುಡಿದ ಹೂವು ಬಾಡದು, ಧೈರ್ಯವಾಗಿರು” ಎಂದು ಅವಳನ್ನು ಸಂಪೂರ್ಣ ಮಮತೆಯಿಂದ ಸಂತೈಸಿ, ಅರೆ ಮನಸ್ಸಿನಿಂದ ಅವಳನ್ನು ಅಗಲಿ ಕುಮುದಪುರದಿಂದ ತನ್ನ ಸಂಗಡಿಗರೊಡನೆ ಭೀಮಾ ಚಾರ್ಯನನ್ನು ಕರಕೊಂಡು ಮರಳಿದನು.

ವೇದವ್ಯಾಸ ಉಪಾಧ್ಯನು ಕಂಗೆಟ್ಟು ನರಳುತ್ತ ತನ್ನ ಅಪಜಯದ ವದಂತಿಯನ್ನು ಪತ್ನಿಗೆ ತಿಳಿಸಿದನು. ಆ ಪತಿವ್ರತೆಯ ಸಂತಾಪವು ಹೆಚ್ಚಿತು. “ಸಮರ್ಥರ ಮೇಲೆ ಸೊಂಟ ಕಟ್ಟಿದರೆ ಬಡವರಿಗೆ ಎಂದಾದರೂ ಜಯ ಸಿಕುವದುಂಟೀ? ಈ ಗ್ರಹಿಕೆಯು ಮೊದಲೇ ಇಲ್ಲದೆ, ಶೂನ್ಯ ಬುದ್ಧಿಯಿಂದ ನಡೆದ ಕಾರ್ಯವು ಶೂನ್ಯವೇ ಆಯಿತು. ಆದರೂ ಪರಮಾತ್ಮನು ಕರು ಣಾಳು; ಅವನನ್ನು ನೆಚ್ಚಿದವರನ್ನು ಬಿಡುವವನಲ್ಲ.” ಇಂಥಾ ಜ್ಞಾನೋಕ್ತಿ ಗಳಿಂದ ಅವಳು ಗಂಡನನ್ನು ಸಮಾಧಾನ ಪಡಿಸಿದಳು. ಮಠಾಧಿಪತಿಗಳ ಸಭೆಯು ಹ್ಯಾಗೂ ಕೂಡಲಿಕ್ಕುಂಟು. ಆಗ ಇದರ ಅವಸಾನ ಹ್ಯಾಗಾ ಗುತ್ತೋ ನೋಡಬೇಕೆಂಬ ಆಶೆಯಿಂದ ವೇದವ್ಯಾಸ ಉಪಾಧ್ಯನು ಹೆಂಡತಿಯ ಅನುಮತಿಯಿಂದ ಹೊರಟನು.

ಆಚಾರ್ಯರೆಲ್ಲರೂ ಸ್ವಲ್ಪ ಮುಂದಾಗಿ ಹೊರಟರು. ವೇದವ್ಯಾಸ ಉಪಾ ಧ್ಯನು ಅವರ ಬೆನ್ನು ಹಿಡಿದನು. ಭೀಮಾಚಾರ್ಯಗೂ ಈತಗೂ ಸಂಭಾ ಷಣೆ ನಡಿಯಿತು.

ವೇದವ್ಯಾಸ–“ಆಚಾರ್ಯರೇ! ನನ್ನ ಮೇಲೆ ತಮಗೂ ವೈಮನಸ್ಸು ಉಂಟಾದ ಹಾಗೆ ತೋರುತ್ತೆ.”

ಭೀಮಾಚಾರ್ಯ–“ಆಚಾರ್ಯರ ಸಭೆಯ ಮುಂದೆ ನಿನಗೆ ಬಂದ ಸಂಕಷ್ಟದಿಂದ ತಪ್ಪಿಸಿದ ಉಪಕಾರಕ್ಕೆ ಪ್ರತಿಯಾಗಿ ದೂರುತ್ತಿಯಾ? ಷೇ! ಕೃತಘ್ನನೇ, ಇಷ್ಟು ಕೊಳಕು ಮನಸ್ಸಿನವನಾದ ನಿನಗೆ ಜಯ ಹ್ಯಾಗೆ ದೊರಕುವದು?”

ವೇದವ್ಯಾಸ–“ನಾನು ತಮ್ಮನ್ನು ದೂರಿದೆನೇ? ತಾವು ನನ್ನ ಮೇಲೆ ಮುಂಚೆ ಇಟ್ಟ ಪ್ರೀತಿಯು ಈಗ ಕೊಂಚ ಕಡಿಮೆಯಾಯಿತೋ ಎಂಬ ಸಂದೇಹ ಹುಟ್ಟದ ಪ್ರಯುಕ್ತ ಹಾಗಂದೆ; ಸಿಟ್ಟು ಮಾಡಿಕೋಬ್ಯಾಡಿ.?

ಭೀಮಾಚಾರ್ಯ–“ಮೈಯುರಿಯುವ ಮಾತಿಗೆ ಸಿಟ್ಟು ಉಂಟೇ? ದೇವರು ಅವರವರ ಮನಸ್ಸಿನ ಸ್ಥಿತಿ ಪರೀಕ್ಷಿಸಿ ಅದಕ್ಕೆ ತಕ್ಕದಾಗಿ ಲಕ್ಷ ವಿಡುತ್ತಾನೆ.?

ವೇದವ್ಯಾಸ–“ಸೋತುಹೋದವನಿಗೆ ಎಲ್ಲವರೂ ಹೀನಿಸುವದು ಲೋಕರೂಢಿಯಷ್ಟೇ.?

ಭೀಮಾಚಾರ್ಯ–“ನಿನ್ನೊಬ್ಬನ ಮಾತೇ ಪ್ರಮಾಣವೆಂದು ಸಭೆಯ ವರು ಚಂಚಲನೇತ್ರರನ್ನು ಅಪರಾಧಿಗಳಾಗಿ ನಿರ್ಣಯಿಸಬೇಕಿತ್ತೇನು?”

ವೇದವ್ಯಾಸ–“ಹಾಗೆ ಹೇಳ ಒಲ್ಲೆ. ಸಾಕ್ಷ ನುಡಿಯಲಿಕ್ಕೆ ನನ್ನ ಕಡೆಯಿಂದ ಯಾರು ಬರುವರು? ನಾನು ಕೇವಲ ಬಡವನು. ವೆಂಕಟಪತಿ ಆಚಾರ್ಯನೂ ತಿಪ್ಪಾಶಾಸ್ತ್ರಿಯೂ ಒಂದೇ ರಥದಲ್ಲಿ ಕೂತರೆಂಬಂತೆ ನನ್ನ ಕಡೆ ಸಾಕ್ಷಿಗಾರರಿಗೆಲ್ಲಾ ಹೆದರಿಸಿಯೋ ಲಂಚಕೊಟ್ಟೋ ವಿವಿಧ ರೀತಿ ಯಿಂದ ತಿರುಗಿಸಿಬಿಟ್ಟಿರು. ಮತ್ತೆ ನಾನೇನು ಬಡಕೊಳ್ಳಲೇ!

ಭೀಮಾಚಾರ್ಯ–“ಒಡೆಯನ ಮರ್ಯಾದೆ ಕಾಯುವದು ಚಾಕರರ ಧರ್ಮವಲ್ಲವೇನು?”

ವೇದವ್ಯಾಸ–“ಹೌದಪ್ಪಾ; ಒಡೆಯನಿಗಿಂತಲೂ ಒಡತಿಯ ದಾಕ್ಷಿಣ್ಯ ಮುರಿಯುವ ಮಗನ್ಯಾರು? ನನ್ನ ಆಯುಷ್ಯ ತೀರುವ ತನಕ ನಾನು ಹೇಳ ಕೊಂಡರೂ ನನ್ನ ಮಾತಿಗೆ ಕಿವಿಗೊಡುವವರಿಲ? ಅವಳಾದರೋ ಒಮ್ಮೆ ಕಡೆಗಣ್ಣಿನ ನೋಟದಿಂದ ನೋಡಿಬಿಟ್ಟರೂ ಸರಿ. ಅತ್ತು ಹೇಳಿಕೊಂಡರೂ ಸರಿ, ಅವಳ ಪಕ್ಷವನ್ನು ಹಿಡಿಯಲಿಕ್ಕೆ ತಾಮಸಮಾಡುವವನ್ಯಾರು? ಮುಖ್ಯ ಅವಳ ಸುಪ್ರಸನ್ನತೆಯನ್ನು ಗಳಸಿಕೊಂಡವನು ತ್ರಿಭುವನದಲ್ಲಿಯೂ ಧನ್ಯನೇ, ಸಾವಿರ ಮಾತ್ಯಾಕೆ?”

ಈ ಸಂಭಾಷಣೆಯು ಮುಂದುವರಿಯಲಿಕ್ಕೆ ಭೀಮಾಚಾರ್ಯನು ಬಿಡಲಿಲ್ಲ. ಯಾಕಂದರೆ ವೇದವ್ಯಾಸ ಉಪಾಧ್ಯನ ಮಾತಿನಲ್ಲಿ ದ್ವಯಾರ್ಥ ವಿದ್ದ ಹಾಗೆ ಅವನ ಮನಸ್ಸಿಗೆ ತೋಚಿತು. ತನ್ನ ಮೇಲೆ ಬಹುಶ ಈತ ಗೇನೋ ಅನುಮಾನ ಉಂಟಾಗಿಯದೆಂದು ಭೀಮಾಚಾರ್ಯನು ತಿಳು ಕೊಂಡನು. ಇವರಿಬ್ಬರ ಸಂವಾದವನ್ನು ಕೇಳುತ್ತಿದ್ದ ಬಾಲಮುಕುಂದಾ ರ್ಚಾಯನು ತನ್ನ ಮೇಲೆ ವೇದವ್ಯಾಸಗೆ ಸಂಶಯ ಹುಟ್ಟಿಯದೆಂಬ ಹಾಗೆ ಗ್ರಹಿಸಿದನು. ಕಳ್ಳನ ಮನಸು ಕಳ್ಳಗೆ ನೋಯುವದೇನು ಆಶ್ಚರ್ಯ! ಹಾಗೂ ಹೀಗೂ ಐವರಾಚಾರ್ಯರೂ ಅವರ ಪರಿವಾರ ಜನರೂ ವೇದವ್ಯಾಸ ಉಪಾಧ್ಯನೂ ನೃಸಿಂಹಪುರಕ್ಕೆ ತಲಪಿದರು. ಆ ಮಠಾಧಿಪತಿಗಳಿಗೆ ಆಚಾ ರ್ಯರು ತಮ್ಮ ವಿಚಾರಣೆಯ ಫಲವನ್ನು ನಿವೇದಿಸಿದರು. ವೇದವ್ಯಾಸನು ಸೋತ ಸಮಾಚಾರವು ಅವರ ಕಿವನಿಗೆ ರಮ್ಯವಾಯಿತು. ಬೇರೆ ಮೂರು ಮಠಾಧಿಪರು ತಮ್ಮ ಮಠದಲ್ಲಿ ಒಟ್ಟು ಕೂಡಿ ಆಲೋಚನೆಯಾದ ಮೇಲೆ ರಾಜದ್ವಾರದ ಪರವಾನೆಗೆ ಉತ್ತರ ಬರೆದುಕೆೊಳ್ಳುವದು ನ್ಯಾಯವಾದ ಕ್ರಮ ವೆಂಬ ಅಭಿಪ್ರಾಯವನ್ನು ಅವರಿಗೆ ಆವಾವ ಪಾರುಸತ್ಯಗಾರರ ಪರಿಮುಖ ತಿಳಿಸಿದಾಗ ಅವರು, ಅದಕ್ಕೆ ಸಮ್ಮತಿಸಿ ನೃಸಿಂಹಪುರಕ್ಕೆ ತೆರಳಿದರು.

ನಾಲ್ಕು ಮಠದವರು ವೇದವ್ಯಾಸ ಉಪಾಧ್ಯನನ್ನು ಕರೆಸಿ, ತಮ್ಮ ಮುಂದೆ ನಿಲ್ಲಿಸಿಕೊಂಡು, ಬಾಲಮುಕುಂದಾಚಾರ್ಯನು ನಿವರಿಸಿದ ವೃತ್ತಾಂತ ವನ್ನೆಲ್ಲಾ ಸ್ವಸ್ಥ ಚಿತ್ತದಿಂದ ಅವಧರಿಸಿ, ಚಂಚಲನೇತ್ರರು ನಿರ್ದೋಷಿ ಗಳೆಂದೂ ವಾಗ್ದೇವಿಯ ಪಾತಿವ್ರತ್ಯ ನಿರಾನುಮಾನಕರವಾದ್ದೆಂದೂ ಇತ್ಯರ್ಧ ಮಾಡಿದರು. ಹಾಗೆಯೇ ನಯ ನುಡಿಯಿಂದ ಉತ್ತರವನ್ನು ಬರಸಿ ಮಠದ ಪದ್ಧತಿಗನುಸರಣೆಯಿಂದ ರಾಜನಿಗೆ ಆಶೀರ್ವಾದ ಸಹಿತ ಶ್ರೀಮುಡಿ ಗಂಧ ಪ್ರಸಾದ ಉತ್ಕೃಷ್ಟವಾದ ಉಚಿತಗಳೊಡನೆ ಮರ್ಯಾದೆಪೂರ್ವಕವಾಗಿ ಕಳುಹಿಸಿಕೊಟ್ಟಿರು. ರಾಜನು ಅವರ ತೀರ್ಮಾನದಲ್ಲಿ ಏಕೀಭವಿಸಿದನು.

ವೇದವ್ಯಾಸ ಉಪಾಧ್ಯನು ಮಾಡಿದ ಮನನಿಯು ಸ್ವತೇವ ಸುಳ್ಳೆಂದು ಕಂಡ ಮೇಲೆ ಅವನನ್ನು ಜಾತಿಯಿಂದ ತ್ಯಜಿಸಬೇಕೆಂದು ಕೆಲವು ಆಚಾ ರ್ಯರು ಆಲೋಚನೆ ಕೊಟ್ಟರು. ಆದರೆ ಅಂಥಾ ಕಠಿಣವಾದ ಶಿಕ್ಷೆಯನ್ನು ಕೊಡುವುದು ಉಚಿತವಲ್ಲ. ಅವನಿಗಾದ ಅಪಜಯನೇ ಅವನ ಹಾರಾಟ ವನ್ನು ನಿಲ್ಲಿಸಲಿಕ್ಕೆ ಸಾಕೆಂದು ಬಾಲಮುಕುಂದಾಚಾರ್ಯನು ಪಟ್ಟ ಅಭಿ ಪ್ರಾಯವು ಮಠಾಧಿಪತಿಗಳಿಗೆ ಸರಿಯಾಗಿ ಕಂಡುಬಂತು. ವೇದವ್ಯಾಸ ಉಪಾ ಧನು ಮಾತ್ರ ಸುಮ್ಮಗಿರಲಿಲ್ಲ. ಅವನು ಅರಸುಗಳ ಒಡ್ಡೊಲಗಕ್ಕೆ ಪುನಃ ಇನ್ನೊಂದು ಮನವಿಯನ್ನು ಮಾಡಿದನು. ಇವನ ತಳ್ಳಿ ಇನ್ನು ಒಳ್ಳೇದಲ್ಲ ವೆಂದು ಮುಂಚಿನ ಸ್ನೇಹಿತರೂ ವಕೀಲರೂ ದೂರವಾದರು. ಸರಕಾರದಲ್ಲಿ ನಡೆದುಬರುವ ಕ್ರಮಕ್ಕನುಗುಣವಾಗಿ ಆ ಮನವಿಯು ವಿಮರ್ಶೆಗೆ ಇಡ ಲ್ಪಟ್ಟ ದಿನವನ್ನು ಕಾಣಿಸಿ ಮನವಿದಾರಗೆ ನಿರೂಪ ಕೊಡೋಣಾಯಿತು. ಅವನು ತೀರಾ- ಸಹಾಯ ಹೀನನಾದ ದೆಸೆಯಿಂದ ಅಂದು ರಾಜದ್ವಾರಕ್ಕೆ ಹೋಗಲೇ ಇಲ್ಲ. ಮನವಿಯು ತಿರಸ್ಕರಿಸಲ್ಪಟ್ಟಿತು. ಮುಖ್ಯ ತಾತ್ಪರ್ಯ– ವೇದವ್ಯಾಸ ಉಪಾಧ್ಯಗೆ ಇತಿಶ್ರೀಯಾಯಿತು. ಇದನ್ನು ಅವನ ಪ್ರಾಣ ಸಖ ಭೀಮಾಚಾರ್ಯನು ಕೇಳಿ, ಮಲಿನ ಚಿತ್ತವುಳ್ಳ ಪುರುಷಗೆ ಇಂಥಾ ಸೋಲು ಬರುವುದು ಜೋದ್ಯವಲ್ಲವೆಂದನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆರಳು
Next post ಬೆಟ್ಟಕ್ಕೆ ಮಣ್ಣೊತ್ತವು

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys