ಒಲವೇ… ಭಾಗ – ೬

ಸೂರ್ಯನ ಶಾಖದಿಂದ ಮುಖ ಕಪ್ಪಾದ್ರೆ ನನ್ಗೇನು ಚಿಂತೆ ಇಲ್ಲ. ಈ ಚಿಂತೆ ಮೊದ್ಲೆಲ್ಲಾ ಇತ್ತು. ಆದರೆ, ಈಗ ಕಟ್ಕೊಳ್ಳೋದಕ್ಕೆ ಒಬ್ಬ ಸಿಕ್ಕಿದ್ದಾನಲ್ಲ… ಇನ್ನು ಈ ಮುಖನ ಯಾರು ನೋಡ್ಬೇಕು ಹೇಳು? ಎಂಬ ಅಕ್ಷರಳ ಪ್ರಶ್ನಾರ್ಥಕ ಮಾತಿಗೆ ಹುಡುಗಿ ಯರು ದೊಡ್ಡ ಛತ್ರಿಗಳು ಅಂತ ಈಗ ಅರ್ಥವಾಯ್ತು ಬಿಡು ಎಂದು ಹೇಳಿ ಅಭಿಮನ್ಯು ನಕ್ಕ.

*  *  *

ಮಧ್ಯಾಹ್ನ ಊಟದ ವೇಳೆಗೆ ಅಕ್ಷರ ಮನೆ ಸೇರಿಕೊಂಡಳು. ಮನೆಯ ಬಾಗಿಲು ತೆರೆದುಕೊಂಡೇ ಇತ್ತು. ಲೀಲಾವತಿ ಯಾವತ್ತೂ ಮನೆಯ ಬಾಗಿಲು ತೆರೆದಿಡುತ್ತಿರಲಿಲ್ಲ. ವಯಸ್ಸಾಗುತ್ತಾ ಹೋದಂತೆ ಮರೆವು ಕೂಡ ಹಿಂಬಾಲಿಸಿಕೊಂಡು ಬಂದಿತು. ಮನೆಯ ಬಾಗಿಲು ಹಾಕಿದ್ದೇನೋ ಅಥವಾ ಇಲ್ಲವೋ ಎಂಬುದು ಅವರಿಗೆ ತಿಳಿದಿರಲಿಲ್ಲ. ಬಿಸಿಲಿನ ಧಗೆಗೆ ಬೆವತು ಹೋಗಿದ್ದ  ಅಕ್ಷರ ನೇರ ಬಾತ್‌ರೂಂ ಕಡೆಗೆ ತೆರಳಿ ಮುಖ ತೊಳೆದು ಬಟ್ಟೆ ಬದಲಾಯಿಸಿಕೊಂಡು ಆಯಾಸ ನೀಗಿಸಿಕೊಳ್ಳಲು ಫ್ಯಾನ್ ಕೆಳಗೆ ಕುಳಿತುಕೊಂಡಳು.

ಮನೆಯ ಹಾಲ್‌ನಲ್ಲಿ ಏನೋ ಸದ್ದು ಕೇಳಿ ಅಡುಗೆ ಮನೆಯಿಂದ ಲೀಲಾವತಿ ಹೊರ ಬಂದರು. ಸೋಫಾದಲ್ಲಿ ಕುಳಿತು ಫ್ಯಾನಿನ ಗಾಳಿಗೆ ಮೈಯೊಡ್ಡುತ್ತಾ ಕುಳಿತ ಅಕ್ಷರಳನ್ನು ಕಂಡು ರೇಗಾಡಿದರು. ಅದ್ಯಾಕ್ಕೆ ಬಿಸ್ಲಲ್ಲಿ ಹಂಗೆ ಓಡಾಡ್ತಿಯ? ಬೆಳಗ್ಗೆ ಮನೆ ಬಿಟ್ಟವಳು ಮಧ್ಯಾಹ್ನ ಬತಾ ಇದ್ದಾಳೆ. ಪೋಲಿ ಹುಡುಗರು ಸುತ್ತಾಡೋ ಹಾಗೆ ಸುತ್ತಾಡ್ತಾ ಇದ್ದೀಯ. ಒಂದು ನಿಮಿಷನೂ ನಿಂತ ಕಾಲಲ್ಲಿ ನಿಲ್ಲೋದಿಲ್ಲ. ಮರದಲ್ಲಿರುವ ಕೋತಿಗೂ ನಿನ್ಗೂ ಯಾವ ವ್ಯತ್ಯಾಸ ಇಲ್ಲ. ಅತ್ತಿಂದಿತ್ತ ಓಡಾಡ್ತನೇ ಇಬೇಕು. ಇಲ್ದಿದ್ರೆ ಸಮಾಧಾನವೇ ಇಲ್ಲ. ಅದ್ಯಾವ ಘಳಿಗೆಯಲ್ಲಿ ನಿನ್ನ ಹೆತ್ತು ಬಿಟ್ಟೆನೋ… ಮಗಳ ಅವತಾರ ಕಂಡು ರೇಗಿದರು.

ಅದ್ಯಾಕ್ಕೆ ಹಾಗೆ ವಟವಟಾಂತ ಅರಚ್ಕೋತ್ತಾ ಇದ್ದೀಯ? ಮನೇಲಿ ಕೂತು ಎಷ್ಟೂಂತ ಟೀವಿ ನೋಡೋದು. ಸ್ವಲ್ಪ ಬೋರಾಯ್ತು ಅದ್ಕೆ ಭಾಗ್ಯಳ ಮನೆಗೆ ಹೋಗಿ ಬಂದೆ. ಈಗ ಸುತ್ತಾಡದೆ ಇನ್ನೇನು ಮದ್ವೆಯಾದ ನಂತರ ಸುತ್ತಾಡೋದಕ್ಕೆ ಸಾಧ್ಯನಾ? ಸಾಧ್ಯವಾದ್ರೆ ಇನ್ನೊಂದೆರಡು ದಿನ ರಜೆ ಹಾಕಿ ಸುತ್ತಾಡ್ಬೇಕೂಂತ ಅನ್ನಿಸ್ತಾ ಇದೆ ಅಂದಳು. ಲೀಲಾವತಿ ಮಗಳ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಅಡುಗೆ ಮನೆಯ ಕಡೆಗೆ ನಡೆದರು.

ಅಮ್ಮ, ಕರಿಯನಿಗೆ ಅಪ್ಪ ದುಡ್ಡು ಕೊಟ್ರಾ…? ಕೂತಲ್ಲಿಂದಲೇ ಕೂಗಿ ಕೇಳಿದಳು.

ಈಗತಾನೆ ಬಂದು ತಗೊಂಡೋದ ಎಂದು ಲೀಲಾವತಿ ಅತ್ತಿಂದ ಕೂಗಿ ಹೇಳಿದರು.

ಅಕ್ಷರ, ಸೋಫಾದಿಂದ ಎದ್ದು ಅಡುಗೆ ಮನೆಯ ಕಡೆಗೆ ನಡೆದಳು. ಅಮ್ಮ, ಅಪ್ಪ ಅದ್ಯಾಕ್ಕೆ ದುಡ್ಡಿನ ಬಗ್ಗೆ ಅಷ್ಟೊಂದು ಆಸೆ ಇಟ್ಕೊಂಡಿದ್ದಾರೋ ಗೊತ್ತಿಲ್ಲ. ಅಪ್ಪನಿಗೆ ಮನುಷ್ಯರಿಗಿಂತ ದುಡ್ಡಿನ ಬಗ್ಗೆಯೇ ಹೆಚ್ಚು ಆಸಕ್ತಿ. ನಾನೇನೋ ಮದ್ವೆಯಾಗಿ ಹೊರಟೋಗ್ತಿನಿ. ಇನ್ನು ಇರೋ ಒಬ್ನೇ ಮಗನಿಗೆ ಅದ್ಯಾಕೆ ಅಷ್ಟೊಂದು ಆಸ್ತಿ, ಹಣ ಕೂಡಿಡ್ಬೇಕು. ಇರೋ ಹಣದಲ್ಲಿ ಸ್ವಲ್ಪನಾದ್ರು ದಾನಧರ್ಮ ಮಾಡಿ ಪುಣ್ಯ ಕಟ್ಕೋಬಾದ? ಎಂಬ ಮಗಳ ಪ್ರಶ್ನೆಗೆ ನಿಮ್ಮಪ್ಪನೇ ಹೋಗಿ ಕೇಳು ಎಂದು ಲೀಲಾವತಿ ಸಿಡುಕುತ್ತಾ ಹೇಳಿದರು.

ರಾಜಶೇಖರ್‌ಗೆ ಆಸ್ತಿಮೇಲೆ ಆಸ್ತಿ ಸಂಪಾದಿಸಬೇಕೆಂಬ ಆಸೆ. ಹೀಗಾಗಿ ಒಂದೈದು ಪೈಸೆಯನ್ನ ಕೂಡ ಅನಗತ್ಯವಾಗಿ ದುಂದುವೆಚ್ಚ ಮಾಡುತ್ತಿರಲಿಲ್ಲ. ಮೂರು ತಲೆಮಾರು ತಿನ್ನುವಷ್ಟು ಆಸ್ತಿ ಕೂಡಿಟ್ಟುಕೊಂಡಿದ್ದರೂ ದಿನವಿಡೀ ಕಾಫಿ ಎಸ್ಟೇಟ್‌ನಲ್ಲಿ ಕಾಲ ಕಳೆಯುವ ರಾಜಶೇಖರ್ ಅವರನ್ನು ನೋಡಿ ಜನರು ಕಕ್ಕಸಿನಲ್ಲಿ ಕಂಡ ಕಾಸನ್ನೂ ಕೂಡ ಈ ಮನುಷ್ಯ ಬಿಡೋದಿಲ್ಲ ಎಂದು ಆಡಿಕೊಳ್ಳುತ್ತಿದ್ದರು. ಎಸ್ಟೇಟ್ ನೋಡಿಕೊಳ್ಳಲು ಒಂದು ರೈಟರನ್ನು ಕೂಡ ನೇಮಕ ಮಾಡಿಕೊಳ್ಳಲು ಆಸಕ್ತಿ ತೋರಲಿಲ್ಲ.

ರೈಟರ್‌ಗೆ ತಿಂಗಳು ತಿಂಗಳು ಸಂಬಳ ಎಣಿಸಿಕೊಡಬೇಕಲ್ಲ.! ಅಷ್ಟಕ್ಕೂ ಯಾರನ್ನೂ ನಂಬುವ ಹಾಗಿಲ್ಲ. ತಮ್ಮ ಎಸ್ಟೇಟ್‌ಗೆ ರೈಟರಾಗಿ ಬರುವ ವ್ಯಕ್ತಿ ಒಳ್ಳೆಯವನೋ ಕೆಟ್ಟವನೋ ಎಂದು ನಿರ್ಧರಿಸುವುದಾದರೂ ಹೇಗೆ? ಹಲವು ಕಾಫಿ ಎಸ್ಟೇಟ್‌ಗಳಿಗೆ ರೈಟರಾಗಿ ಬಂದವರು ಹತ್ತಿಪ್ಪತ್ತು ವರ್ಷಗಳಲ್ಲಿ ತಾವೂ ಕೂಡ ಕಾಫಿ ತೋಟದ ಮಾಲಿಕರಾದ ಪ್ರಸಂಗ ಅವರ ಕಣ್ಣಮುಂದೆಯೇ ಇದೆ. ಹಾಗಾಗಿ ಕಾಫಿ ಎಸ್ಟೇಟ್‌ನ ಉಸ್ತುವಾರಿಯನ್ನು ಅವರೇ ನಿಭಾಯಿಸುತ್ತಿದ್ದರು.

ಇಷ್ಟೆಲ್ಲ ಆಸ್ತಿ, ಅಂತಸ್ತು ಇದ್ದರೂ ಅವರ ಜೀವನದಲ್ಲಿ ನೆಮ್ಮದಿ ಎಂಬುದು ತುಸು ದೂರವೇ ಉಳಿದುಕೊಂಡಿದೆ. ಇರುವ ಒಬ್ಬನೇ ಮಗ ಪ್ರೀತಮ್‌ಗೆ ಮನೆಯ ಕಡೆಯಂತು ನೆನಪೇ ಇಲ್ಲ. ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ನಂತರ ಮನೆಯ ಕಡೆ ತಲೆಹಾಕುವುದು ವರ್ಷಕ್ಕೊಮ್ಮೆ ಮಾತ್ರ. ಎಸ್ಟೇಟ್ ಕಡೆಗಂತೂ ಅವನಿಗೆ ಸಣ್ಣ ವಯಸ್ಸಿನಿಂದಲೂ ಆಸಕ್ತಿ ಹುಟ್ಟಲೇ ಇಲ್ಲ. ಅವನ ಕಾಲದಲ್ಲಿ ಈ ತೋಟ, ಮನೆಯನ್ನೆಲ್ಲ ಮಾರಾಟ ಮಾಡಿ ಬೆಂಗಳೂರು ಸೇರಿಕೊಳ್ಳುತ್ತಾನೋ ಏನೋ ಎಂಬ ಭಯ ರಾಜಶೇಖರ್‌ಗೆ. ಮಗನ ವಿಷಯದಲ್ಲಿಯೇ ಕೊರಗಿ, ಕೊರಗಿ ಅವರು ಸಾಕಷ್ಟು ಸೊರಗಿ ಹೋಗಿದ್ದರು. ಒಮ್ಮೊಮ್ಮೆ ಯಾರಿಗೋಸ್ಕರ ದುಡಿಯಬೇಕೆಂದು ಅನ್ನಿಸಿ ವಾರಗಟ್ಟಲೇ ತೋಟದ ಕಡೆಗೆ ತಲೆಹಾಕಿ ನೋಡುತ್ತಿರಲಿಲ್ಲ. ಲೀಲಾವತಿ ಮತ್ತೆ ಸಮಾಧಾನಪಡಿಸಿ ಸಹಜ ಸ್ಥಿತಿಗೆ ತರುತ್ತಿದ್ದರು.

ಅಕ್ಷರ ಅಮ್ಮನೊಂದಿಗೆ ಮಾತ್ತಾಡುತ್ತಲೇ ಊಟ ಮುಗಿಸಿ ಬೆಡ್‌ರೂಂ ಕಡೆಗೆ ತೆರಳಿ ನಿದ್ರೆಗೆ ಜಾರಿದಳು. ಯಾರೋ ಕಾಲಿಂಗ್‌ಬೆಲ್ ಹೊತ್ತಿದ ಸದ್ದು ಕೇಳಿ ಲೀಲಾವತಿ ಓಡಿ ಹೋಗಿ ಬಾಗಿಲು ತೆರೆದರು. ಕಾಫಿ ಎಸ್ಟೇಟ್‌ನಲ್ಲಿ ಬೆಳಗ್ಗಿನಿಂದ ಮಧ್ಯಾಹ್ನವರೆಗೆ ಕೆಲಸದವರೊಂದಿಗೆ ಕೂಗಾಡಿ ಕೆಲಸ ಮಾಡಿಸಿ ಸುಸ್ತಾಗಿ ಮನೆಯೊಳಗೆ ಪ್ರವೇಶಿಸಿದ ರಾಜಶೇಖರ್ ಅವರ ಕಣ್ಗಳು ಮಗಳಿಗಾಗಿ ಹುಡುಕಾಡುತ್ತಿದ್ದವು.

ಮಗಳೆಲ್ಲಿ, ಕಾಣ್ತಾ ಇಲ್ಲ? ಬೆಳಗ್ಗೆ ಹೋದವಳು ಇನ್ನೂ ಬಲಿಲ್ವ?

ಈಗತಾನೇ ಬಂದು ಊಟ ಮಾಡ್ಕೊಂಡು ಮಲ್ಕೊಂಡಿದ್ದಾಳೆ. ನಿಮ್ಮ ಸ್ವಭಾವನೇ ಅವಳಿಗೆ ಅಂಟಿಕೊಂಡಿದೆ. ನಿಂತ ಕಾಲಲ್ಲಿ ನಿಲ್ಲೋದಿಲ್ಲ. ಭಾಗ್ಯನ ನೋಡೋದಕ್ಕೆ ಅಷ್ಟೊಂದು ದೂರ ನಡ್ಕೊಂಡು ಹೋಗಿದ್ಲು. ಏನು ಹುಚ್ಚೋ ಏನೋ..!?

ಎಷ್ಟೇ ಆದ್ರೂ ಅವಳು ನನ್ನ ಮಗಳಲ್ವ ಅಂದುಕೊಂಡ ರಾಜಶೇಖರ್ ಮನದೊಳಗೆ ಮಗಳನ್ನು ನೆನೆದುಕೊಂಡು ನಕ್ಕರು. ವಿವಾಹದ ವಿಚಾರ ಎತ್ತಿದಾಗ ಮಗಳು ಕೋಪಗೊಂಡದ್ದನ್ನು ಕಂಡು ರಾಜಶೇಖರ್ ಸಾಕಷ್ಟು ನೊಂದುಕೊಂಡಿದ್ದರು. ಬಹಳ ಮುದ್ದಾಗಿ ಆಕೆಯನ್ನು ಬೆಳೆಸಿದ್ದರು. ಮಗಳ ಮನಸ್ಸಿಗೆ ನೋವಾಗಬಾರದೆಂದು ತೀರ್ಮಾನಿಸಿ ಮನಸ್ಸಿಲ್ಲದಿದ್ದರೂ ಕರಿಯನಿಗೆ ಐವತ್ತು ಸಾವಿರ ರೂಪಾಯಿ ಕೊಡುವಂತಾಯಿತು. ಕರಿಯನೇ ನಿಜವಾದ ಅದೃಷ್ಟವಂತ. ಅಕ್ಷರಳ ದೆಸೆಯಿಂದ ಹಣ ಗಿಟ್ಟಿಸಿ ಕೊಂಡ. ಆಕೆಗೆ ಬಡವರನ್ನು ಕಂಡರೆ ಎಲ್ಲಿಲ್ಲದ ಅಕ್ಕರೆ. ಅಕ್ಷರ ಏನಾದರು ಎಸ್ಟೇಟ್ ಕಡೆಗೆ ಕಾಲಿಟ್ಟರೆ ಕೆಲಸದವರು ಕೆಲಸ ಮಾಡದೆ ಆಕೆಯೊಂದಿಗೆ ಹರಟೆಯಲ್ಲಿ ತಲ್ಲೀನರಾಗಿಬಿಡುತ್ತಾರೆ. ಎಲ್ಲರಿಗೂ ಬಿಸ್ಕೇಟ್ ನೀಡಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿ ಪಟ್ಟಂಗ ಹೊಡೆಯಲು ಕುಳಿತರೆ ಇನ್ನು ರಾಜಶೇಖರ್ ಬಂದು ಗದರಿಸಿದಾಗಲೇ ಆಳುಗಳು ಕೆಲಸದ ಕಡೆಗೆ ಗಮನ ಹರಿಸೋದು. ಕಾರ್ಮಿಕರ ಕಡೆಗೆ ಆಕೆ ತೋರುತ್ತಿದ್ದ ಪ್ರೀತಿ, ವಾತ್ಸಲ್ಯದಿಂದ ಆಕೆ ಪ್ರತಿಯೊಬ್ಬ ಕಾರ್ಮಿಕರ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದಳು.

ಒಮ್ಮೊಮ್ಮೆ ಮಗಳ ತುಂಟಾಟ ನೋಡುತ್ತಾ ರಾಜಶೇಖರ್ ಕಾಲ ಕಳೆದುಬಿಡುತ್ತಿದ್ದರು. ಆಕೆಯನ್ನು ಮದುವೆಮಾಡಿ ಕಳುಹಿಸುವುದಕ್ಕೂ ಅವರಿಗೆ ಇಷ್ಟವಿಲ್ಲ. ಜೀವನ ಪರ್ಯಂತ ಅವಳು ಹೀಗೆ ನಗುನಗುತ್ತಾ ಈ ಮನೆಯಲ್ಲಿಯೇ ಸಂತೋಷವಾಗಿ ಬಾಳಬೇಕೆಂದು ಅವರ ಮನಸ್ಸು ಹೇಳುತಿತ್ತು. ಆದರೆ ಏನು ಮಾಡೋದಕ್ಕ್ಕೆ ಸಾಧ್ಯ? ಹೆಣ್ಣಾಗಿ ಹುಟ್ಟಿ ಬಿಟ್ಟಳಲ್ಲಾ… ಎಂದು ಮರುಗುತ್ತಿದ್ದರು.

ಇತ್ತೀಚಿನ ದಿನಗಳಲ್ಲಂತೂ ರಾಜಶೇಖರ್ ಏನೋನೋ ಯೋಚನೆಯಲ್ಲಿ ಮುಳುಗಿ ಆರೋಗ್ಯ ಹದಗೆಡಿಸಿಕೊಳ್ಳುತ್ತಿದ್ದರು. ಮಗ ಅಥವಾ ಮಗಳ ವಿಚಾರದಲ್ಲಿ ಇತ್ತೀಚೆಗೆ ಚಿಂತೆಗೆ ಬೀಳುತ್ತಿದ್ದಾರೆಂಬ ಅರಿವು ಲೀಲಾವತಿಗೆ ಇತ್ತು. ಹೀಗಾಗಿ ಒಂದಷ್ಟು ಗದರಿಸಿ ಸರಿದಾರಿಗೆ ತರುವ ಪ್ರಯತ್ನ ಆಕೆಗೆ ನಿತ್ಯದ ಕಾಯಕವಾಯಿತು.

ನೀವು ಏನೇನೋ ಕಲ್ಪನೆ ಮಾಡ್ಕೊಂಡು ಯಾಕೆ ಮನಸ್ಸು ಭಾರ ಮಾಡ್ಕೋತ್ತಿರ? ಮಗಳು ಒಂದೆರಡು ವರ್ಷ ಇಲ್ಲೇ ಇಲಿ. ನಂತರ ಮದ್ವೆ ಮಾಡಿಸಿದ್ರೆ ಆಯ್ತು. ನಡಿರಿ, ಕೈತೊಳ್ಕೊಂಡು ಬನ್ನಿ. ಊಟ ಮಾಡೋಣ ಗಂಡನನ್ನು ಊಟಕ್ಕೆ ಅಣಿಗೊಳಿಸಿದರು.

ರಾಜಶೇಖರ್ ಊಟ ಮುಗಿಸಿಕೊಂಡು ಸೋಫಾದಲ್ಲಿ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಬೆಡ್‌ರೂಂನಿಂದ ಆಕಳಿಸುತ್ತಾ ಹೊರಗೆ ಬಂದ ಅಕ್ಷರಳನ್ನು ರಾಜಶೇಖರ್ ಕರೆತಂದು ಸೋಫಾದಲ್ಲಿ ಕೂರಿಸಿದರು.

ಯಾಕಮ್ಮ ಇಷ್ಟು ಬೇಗ ಎದ್ದು ಬಿಟ್ಟೆ? ಸ್ವಲ್ಪ ಹೊತ್ತು ಮಲ್ಕೋ ಬಹುದಿತ್ತಲ್ಲ? ಭಾಗ್ಯ ಹೇಗಿದ್ದಾಳೆ? ಕ್ಷೇಮತಾನೆ? ಕೇಳಿದರು.

ಅವಳಿಗೇನಪ್ಪ, ಚೆನ್ನಾಗಿಯೇ ಇದ್ದಾಳೆ. ಇಷ್ಟೊತ್ತು ಅವಳ ಜೊತೆನೇ ಕಷ್ಟ, ಸುಖ ಹಂಚ್ಕೊಂಡು ಬಂದೆ ನಿದ್ದೆಗಣ್ಣಿನಲ್ಲಿ ಅಪ್ಪನ ಪ್ರಶ್ನೆಗೆ ಉತ್ತರಿಸಿ ಸುಮ್ಮನಾದಳು.

ಸರಿ..ಸರಿ.., ಇವತ್ತು ಸಂಜೆ ರಾಜಾಸೀಟ್‌ಗೆ ನಿನ್ನೊಂದಿಗೆ ನಾನು ಹಾಗೂ ನಿನ್ನಮ್ಮ ಒಟ್ಟಿಗೆ ಬತಿವಿ. ಮಗಳ ಜೊತೆ ಸ್ವಲ್ಪ ಸುತ್ತಾಡುವ ಅನ್ನಿಸ್ತಾ ಇದೆ. ಇನ್ನು ಅಪ್ಪ, ಅಮ್ಮ ನನ್ನ ರಾಜಾಸೀಟ್‌ಗೆ ಕಕೊಂಡೋಗಿಲ್ಲ ಅಂತ ನಮ್ಗೆ ಬೈಯ್ತಾ ಕೂಬೇಡ ರಾಜಶೇಖರ್ ಮಗಳ ಮನಸ್ಸು ಗೆಲ್ಲುವ ಪ್ರಯತ್ನ ಮಾಡಿದರು.

ಅಪ್ಪನ ಮಾತುಕೇಳಿ ಆಕೆಯ ನಿದ್ರೆ ಮಂಪರು ಹಾರಿ ಹೋಯಿತು. ಎಲ್ಲಿ ದಿನನಿತ್ಯ ರಾಜಾಸೀಟ್‌ಗೆ ತನ್ನೊಂದಿಗೆ ಬಂದು ಬಿಡುತ್ತಾರೋ? ಒಂದ್ವೇಳೆ ದಿನಾ ಬಂದರೆ ಅಭಿಮನ್ಯುವನ್ನು ಭೇಟಿಯಾಗೋದಕ್ಕೆ, ಅವನೊಂದಿಗೆ ಆಡುವ ಸರಸ ಸಲ್ಲಾಪಕ್ಕೆ ಕಡಿವಾಣ ಹಾಕಿದ್ದಂತೆಯೇ ಸರಿ. ಹೇಗಾದರು ಮಾಡಿ ಅಪ್ಪ, ಅಮ್ಮ ರಾಜಾಸೀಟ್‌ಗೆ ಬರೋದನ್ನು ತಪ್ಪಿಸಬೇಕೆಂಬುದು ಆಕೆಯ ಮನದ ಬಯಕೆ.

ನನ್ಗೆ ರಾಜಾಸೀಟ್‌ಗೆ ಹೋಗೋದಕ್ಕೆ ಇಷ್ಟ ಇಲ್ಲ. ಈಗತಾನೆ ಭಾಗ್ಯಳ ಮನೆಗೆ ಹೋಗಿ ಬಂದು ಸುಸ್ತಾಗಿದ್ದೀನಿ. ನಡ್ದು, ನಡ್ದು ಸಾಕಾಗಿ ಹೋಗಿದೆ. ಇನ್ನು ರಾಜಾಸೀಟ್‌ಗೆ ಹೋಗ್ಲಿಕ್ಕೆ ನನ್ನಿಂದ ಸಾಧ್ಯ ಇಲ್ಲ ಅಪ್ಪನ ಕೋರಿಕೆಗೆ ಕುಂಟುನೆಪ ಹೇಳಿ ಜಾರಿಕೊಳ್ಳುವ ಪ್ರಯತ್ನ ಮಾಡಿದಳು.

ರಾಜಶೇಖರ್‌ಗೂ ಕೂಡ ರಾಜಾಸೀಟ್‌ಗೆ ಹೋಗೋದಕ್ಕೆ ಮನಸ್ಸಿರಲಿಲ್ಲ. ಆದರೆ, ಮಗಳ ಮನಸ್ಸನ್ನು ಗೆಲ್ಲೋದಕ್ಕೆ ಬೇರೆ ಮಾರ್ಗ ಅವರಿಗೆ ಹೊಳೆಯಲಿಲ್ಲ. ಮಗಳ ಮನಸ್ಸಿನಲ್ಲಿ ತನ್ನ ಮೇಲೆ ತುಂಬಿರುವ ಸಿಟ್ಟನ್ನು ದೂರ ಮಾಡಲು ಅವಳಿಗಿಷ್ಟ ವಾದ ರಾಜಾಸೀಟ್‌ಗೆ ಕರೆದೊಯ್ಯಬೇಕೆಂಬ ನಿರ್ಧಾರ ಕೈಗೊಂಡರು.

ಅಕ್ಷರ, ನೀನು ರಾಜಾಸೀಟ್‌ಗೆ ಬರದಿದ್ರೆ ನಾವಿಬ್ರೇ ಅಲ್ಲಿಗೆ ಹೋಗಿ ಏನ್ಮಾಡೋದು? ಅಷ್ಟೊಂದು ದೂರ ನೀನೇನು ನಡ್ಕೊಂಡು ಹೋಗ್ಬೇಕಾಗಿಲ್ಲ. ಎಲ್ಲರು ಕಾರಲ್ಲಿ ಹೋಗೋಣ ಮತ್ತೆ ಮಗಳ ಮುಂದೆ ಕೋರಿಕೆ ಮುಂದಿಟ್ಟು ಒಪ್ಪಿಗೆಗಾಗಿ ಕಾದರು.

ಅಪ್ಪ ಹಿಡಿದ ಹಟದಿಂದ ಬಿಡುವಂತೆ ಕಾಣದೆ ಇದ್ದಾಗ ಆಯ್ತು, ಸಂಜೆ ಹೋಗುವ ಎಂದು ಒಪ್ಪಿಗೆ ಸೂಚಿಸಿ ಒಂದೆರಡು ಕ್ಷಣದ ಬಳಿಕ ಮರೆತುಹೋದ ವಿಷಯವನ್ನು ನೆನಪಿಗೆ ತಂದುಕೊಂಡವಳಂತೆ ಅಪ್ಪ, ಕಾರ್‌ನಲ್ಲಿ ಹೋಗೋದಾದ್ರೆ ಅಭಿಮನ್ಯುವನ್ನು ಬಲಿಕ್ಕೆ ಹೇಳ್ತೇನೆ. ಅವನು ಜೊತೆಗೆ ಬಂದ್ರೆ ಚೆನ್ನಾಗಿರುತ್ತೆ ಅಂದಳು.

ಪಕ್ಕದಲ್ಲಿಯೇ ಇದ್ದ ಲೀಲಾವತಿಗೆ ಮಗಳ ಮಾತು ರುಚಿಸಲಿಲ್ಲ. ದಿನಾ ಅಭಿಮನ್ಯುವಿನೊಂದಿಗೆ ಯಾಕಾದ್ರು ಸುತ್ತಾಡ್ತಾ ಇದ್ದಾಳೋ? ಒಂದ್ವೇಳೆ ಮಗಳೇನಾದ್ರು ಪ್ರೀತಿ ಗೀತಿ ಮಾಡ್ತಾ ಇದ್ದಾಳಾ? ಅಯ್ಯೋ ದೇವರೇ! ಹಾಗೇನು ಆಗದೆ ಇರಲಿ ಎಂದು ಮನದಲ್ಲಿಯೇ ದೇವರಿಗೆ ಕೋರಿಕೆ ಸಲ್ಲಿಸಿ ಅಭಿಮನ್ಯುವಿನ ಆಗಮನಕ್ಕೆ ತಮ್ಮ ಅಸಂತೃಪ್ತಿ ಹೊರಹಾಕಲು ಅಣಿಯಾದರು.

ಮನೆಯವರೆಲ್ಲ ಒಟ್ಟಿಗೆ ಹೋಗುವಾಗ ಅವನ ಯಾಕೆ ಕಕೊಂಡು ಹೋಗ್ಬೇಕು? ನನ್ಗೇನೋ ಇದು ಸರಿ ಕಾಣಿಸ್ತಾ ಇಲ್ಲ ಎಂದು ಹೇಳಿ ಮಗಳ ಮುಖವನ್ನೇ ನೋಡಿದರು. ಅಕ್ಷರಳಿಂದ ಯಾವುದೇ ಪ್ರತಿಕ್ರಿಯೆ ಬರದೆ ಇದ್ದಾಗ  ಏನೋ ನಿನ್ನಿಷ್ಟ. ಪುನಃ ಅದ್ಕೂ ಬೇಸರ ಮಾಡ್ಕೊಂಡು ಮುಖ ಊದಿಸಿಕೊಂಡು ಕೂಬೇಡ. ನಿನ್ಗೆ ಇಷ್ಟವಿದ್ರೆ ಬಲಿಕ್ಕೆ ಹೇಳು ಎಂದು ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬಂತೆ ಮಗಳ ಮನಸ್ಸಿಗೂ ನೋವಾಗಬಾರದು, ಅಭಿಮನ್ಯು ಜೊತೆಗೆ ಬರಬಾರದು ಎಂಬ ರೀತಿಯಲ್ಲಿ ಮಾತು ಮುಗಿಸಿ ಮೌನಕ್ಕೆ ಶರಣಾದರು.

ಅಪ್ಪ, ಅಭಿಮನ್ಯು ಇಲ್ದಿದ್ರೆ ನಾನು ರಾಜಾಸೀಟ್‌ಗೆ ಬರೋದಿಲ್ಲ. ನೀವೇ ಅವನನ್ನ ಬಲಿಕ್ಕೆ ಹೇಳಿ. ದಿನಾ ಅವನೊಟ್ಟಿಗೆನೇ ರಾಜಾಸೀಟ್‌ಗೆ ಹೋಗ್ತಾ ಇತೇನೆ. ಇವತ್ತು ಬಿಟ್ಟು ಹೋದ್ರೆ ಅವನು ಎಷ್ಟೊಂದು ಬೇಸರ ಮಾಡ್ಕೊಳ್ತಾನೋ ಏನೋ…? ಅವನು ಬರೋದಕ್ಕೆ ಒಪ್ಪಿದ್ರೆ ಮಾತ್ರ ಬತೇನೆ ಎಂದು ಷರತ್ತು ವಿಧಿಸಿದಳು.

ಮಗಳ ಮಾತು ಮೀರುವ ಶಕ್ತಿ ರಾಜಶೇಖರ್‌ಗೆ ಇಲ್ಲ. ಮೊಬೈಲ್ ಕೈಗೆತ್ತಿಕೊಂಡು ಅಭಿಮನ್ಯುವಿಗೆ ಕರೆ ಮಾಡಿ ಸಂಜೆ ರಾಜಾಸೀಟ್‌ಗೆ ಬರಬೇಕೆಂದು ವಿನಯಪೂರ್ವಕವಾಗಿ ಕೇಳಿಕೊಂಡರು. ಸಂಜೆಯಾಗುತ್ತಿದ್ದಂತೆ ಮೂವರು ಕಾರಿನಲ್ಲಿ ರಾಜಾಸೀಟ್‌ಗೆ ಪಯಣ ಬೆಳೆಸಿದರು. ಅಷ್ಟೊತ್ತಿಗಾಗಲೇ ಅಭಿಮನ್ಯು ಅಕ್ಷರಳ ಆಗಮನಕ್ಕಾಗಿ ರಾಜಾಸೀಟಿನ ಕಲ್ಲು ಬೆಂಚಿನ ಮೇಲೆ ಕಾದು ಕುಳಿತ್ತಿದ್ದ. ಅಕ್ಷರ ಅಭಿಮನ್ಯುವನ್ನು ಅಪ್ಪ, ಅಮ್ಮನಿಗೆ ಪರಿಚಯ ಮಾಡಿಕೊಟ್ಟಳು.

ನೀನೇನಮ್ಮ ನನ್ಗೆ ಅಭಿಮನ್ಯು ಗೊತ್ತೇ ಇಲ್ಲದ ತರ ಹೊಸದಾಗಿ ಪರಿಚಯ ಮಾಡಿಕೊಡ್ತಾ ಇದ್ದೀಯ? ಅವನ ಗಿಫ್ಟ್‌ಸೆಂಟರ್‌ಗೆ ಆಗಿಂದಾಗೆ ಹೋಗ್ತನೇ ಇತೇನೆ. ಅವನ ಪರಿಚಯ ತುಂಬಾ ವರ್ಷದಿಂದ ಇದೆ ಅಂದರು ರಾಜಶೇಖರ್.

ನಿಮ್ಗೆ ಪರಿಚಯ ಇಬೊಹುದು. ಆದರೆ, ಅಮ್ಮ ಇದುವರೆಗೂ ಅಭಿಮನ್ಯುವನ್ನು ನೋಡಿಲಿಲ್ಲ. ಹೆಸರು ಮಾತ್ರ ಕೇಳಿದ್ರು ಅದ್ಕೋಸ್ಕರ ಪರಿಚಯ ಮಾಡಿಕೊಟ್ಟೆ ಎಂದು ರಾಜಾಸೀಟ್ ಮುಂಭಾಗದಲ್ಲಿ ಪ್ರಕೃತಿ ಸೊಬಗಿನ ಕಡೆಗೆ ಕೈ ತೋರಿಸಿ ಎಷ್ಟೊಂದು ಸುಂದರವಾಗಿದೆಯಲ್ಲ? ಅಂದಳು.

ಏನಮ್ಮ ನೀನು ಬಯಲು ಸೀಮೆಯಲ್ಲಿ ಹುಟ್ಟಿದ ಹುಡ್ಗಿ ತರ ಮಾತಾಡ್ತಾ ಇದ್ದೀಯ? ಕೊಡಗಿನಲ್ಲಿ ಬೆಟ್ಟ,ಗುಡ್ಡ, ಕಾಡು ಇದ್ದದ್ದೇ. ಅದರಲ್ಲೇನು ವಿಶೇಷತೆ ಇದೆ ಹೇಳು? ಇದನ್ನೆಲ್ಲ ನೋಡಿ, ನೋಡಿ ಸಾಕಾಗಿ ಹೋಗಿದೆ ಮಗಳನ್ನು ಸಂತೃಪ್ತಿ ಪಡಿಸುವುದಕೋಸ್ಕರ ರಾಜಾಸೀಟ್‌ಗೆ ಬಂದ ರಾಜಶೇಖರ್ ರಾಜಾಸೀಟ್‌ನ ಮುಂಭಾಗದ ಪ್ರಕೃತಿ ಸೊಬಗನ್ನು ನೋಡಿ ಪುಳಕಿತರಾಗಲಿಲ್ಲ. ಆದರೆ, ಹದಿಹರೆಯದಲ್ಲಿ ತನ್ನ ಪ್ರೇಯಸಿಯೊಂದಿಗೆ ಇದೇ ರಾಜಾಸೀಟ್‌ನಲ್ಲಿ ಕಳೆದ ಕ್ಷಣಗಳು ನೆನಪಿಗೆ ಬಂದು ಪುಳಕಿತರಾಗಿ ತಮ್ಮೊಳಗೇ ಸಂಭ್ರಮ ಪಟ್ಟುಕೊಂಡರು. ಆದರೆ, ಆ ಸಂಭ್ರಮವನ್ನು ಎಲ್ಲರ ಮುಂದೆ ತೆರೆದಿಡುವ ಸಾಹಸ ಕೈಗೊಳ್ಳಲಿಲ್ಲ. ತಾನು ಪ್ರೀತಿಸಿದ ಹುಡುಗಿಯ ಗುಂಗಿನಲ್ಲಿ ಮೈಮರೆತ್ತಿದ್ದ ರಾಜಶೇಖರ್ ಅವರನ್ನು ಮಗಳು ವಾಸ್ತವ ಪ್ರಪಂಚಕ್ಕೆ ಕರೆತಂದರು.

ನಿಮ್ಗೆ ಒಂದುಚೂರು ಅಭಿರುಚಿನೇ ಇಲ್ಲ. ವಯಸ್ಸಾಗ್ತಾ ಹೋದಂತೆ ಮನುಷ್ಯ ಅಭಿರುಚಿ ಕಳ್ಕೊಂಡು ಹೋಗ್ತಾನೆ. ಅದೇ ರೀತಿ ನಿಮ್ಗೂ ಆಗಿದೆ. ಅಭಿರುಚಿ ಇದ್ದಿದ್ದರೆ ನಿಸರ್ಗದ ಸೊಬಗನ್ನು ಸೊಗಸಾಗಿ ಸವಿಯಬಹುದು ಅಂದಳು.

ಎಲ್ಲರು ರಾಜಾಸೀಟ್ ಉದ್ಯಾನವನದ ಹುಲ್ಲು ಹಾಸಿನಲ್ಲಿ ಕುಳಿತು ಸಾಕಷ್ಟು ಸಮಯ ಹರಟೆಯಲ್ಲಿ ಕಳೆದರು. ಆದರೆ, ಅಭಿಮನ್ಯು ಅಷ್ಟು ಹೊತ್ತುಕೂಡ ತೀವ್ರ ಚಡಪಡಿಕೆಗೆ ಸಿಲುಕಿಕೊಂಡಿದ್ದ. ಒಂದುಸಲ ಇಲ್ಲಿಂದ ಜಾಗ ಖಾಲಿ ಮಾಡಿದರೆ ಸಾಕು ಎಂದು ಹೊರಡುವ ಸಮಯಕ್ಕಾಗಿ ಕಾದು ಕುಳಿತ್ತಿದ್ದ.

ಅಭಿ, ಏನಾದ್ರು ಮಾತಾಡೋ… ಸುಮ್ನೆ ಗುಮ್ಮನಂತೆ ಕೂತ್ಕೊಂಡಿದ್ದೀಯ ಅಲ್ಲ, ನೀನು ಹೀಗೆ ಆಡ್ತಾ ಇದ್ರೆ ಅಪ್ಪ, ಅಮ್ಮ ಏನಾದ್ರು ಅಂದ್ಕೋಬಹುದು ಎಂದು ರಾಜಶೇಖರ್, ಲೀಲಾವತಿ ದಂಪತಿ ಯಾವುದೋ ವಿಚಾರದ ಬಗ್ಗೆ ಮಾತಿನಲ್ಲಿ ತಲ್ಲೀನರಾಗಿದ್ದ ಸಮಯವನ್ನು ಸದುಪಯೋಗ ಪಡಿಸಿಕೊಂಡ ಅಕ್ಷರ ಮೆಲ್ಲನೆ ಅಭಿಮನ್ಯುವಿನ ಬಳಿ ಪಿಸುಗುಟ್ಟಿದಳು.

ಸಾರ್ ಹೇಗಿದ್ದೀರ? ಎಸ್ಟೇಟ್ ಹೇಗಿದೆ? ಹೆಚ್ಚಾಗಿ ಎಸ್ಟೇಟ್‌ನಲ್ಲೇ ಕಾಲ ಕಳೆದು ಬಿಡ್ತೀರ ಅಲ್ವ? ಇತ್ತೀಚೆಗಂತೂ ಶಾಪ್ ಕಡೆ ಬರೋದನ್ನೇ ಬಿಟ್ಟು ಬಿಟ್ಟೀದೀರಲ್ಲ? ಅಭಿಮನ್ಯು ಆಕೆಯ ಕೋರಿಕೆಗೆ ಏನೋ ಒಂದೆರಡು ಪ್ರಶ್ನೆ ಕೇಳಿ ಸುಮ್ಮನಾಗಿ ಬಿಟ್ಟ.

ಅಭಿಮನ್ಯು ತಾನು ಕೇಳಿದ ಪ್ರಶ್ನೆಗಳಿಗೆ ಉತ್ತರ ಬೇಕೆಂದು ನಿರೀಕ್ಷೆ ಮಾಡಲಿಲ್ಲ. ಉತ್ತರಕ್ಕಾಗಿ ಕಿವಿಗೊಟ್ಟು ಆಲಿಸಬೇಕೆಂಬ ಆಸಕ್ತಿಯೂ ಇರಲಿಲ್ಲ. ಬಾಯಿಗೆ ಬಂದ ಪ್ರಶ್ನೆ ಕೇಳಿ ಸುಮ್ಮನೆ ಕುಳಿತುಬಿಟ್ಟ. ಆದರೆ, ರಾಜಶೇಖರ್ ಅವನ ಪ್ರಶ್ನೆಗೆ ತುಂಬಾ ಆಸಕ್ತಿಯಿಂದಲೇ ಉತ್ತರಿಸಲು ಪ್ರಾರಂಭಿಸಿದರು.

ಹೌದು ಅಭಿಮನ್ಯು, ಇತ್ತೀಚೆಗೆ ಸ್ವಲ್ಪ ಕೆಲ್ಸ ಜಾಸ್ತಿನೇ. ಕಾಫಿ ಕೊಯ್ಲಿಗೆ ಬಂದಿದೆ. ಕೈತುಂಬ ಕೂಲಿ ಕೊಟ್ರೂ ಕೆಲ್ಸದವರು ಸಿಗೋದಿಲ್ಲ. ಒಂದ್ಸಲ ಕಾಫಿ ಕೆಲ್ಸ ಮುಗಿದೋದ್ರೆ ಸಾಕು ಅನ್ನಿಸ್ತಾ ಇದೆ. ಅದ್ಸರಿ ನಿನ್ನ ವ್ಯಾಪಾರ ವಹಿವಾಟು ಹೇಗೆ ನಡಿತಾ ಇದೆ? ಅಭಿಮನ್ಯುವಿನ ಮೇಲೆ ಅಭಿಮಾನವಿಟ್ಟು ಕೇಳಿದರು.

ಓ… ಚೆನ್ನಾಗಿಯೇ ನಡಿತಾ ಇದೆ. ಕೊಡಗಿಗೆ ಪ್ರವಾಸಿಗರ ಕೊರತೆ ಏನು ಇಲ್ಲ ಬಿಡಿ. ನೋಡಿ ರಾಜಾಸೀಟ್‌ನಲ್ಲೇ ಎಷ್ಟೊಂದು ಪ್ರವಾಸಿಗರು ತುಂಬಿಕೊಂಡಿದ್ದಾರೆ. ಅವರಿಂದ ಜೀವನಕ್ಕೆ ಸಾಕಾಗುವಷ್ಟು ಸಂಪಾದನೆ ಆಗ್ತಾ ಇದೆ. ಜೊತೆಗೆ ಗಿಫ್ಟ್‌ಸೆಂಟರ್ ಕೂಡ ಚೆನ್ನಾಗಿಯೇ ನಡಿಯ್ತಾ ಇದೆ. ಒಟ್ನಲ್ಲಿ ಹೇಳ್ಬೇಕಂದ್ರೆ ನೆಮ್ಮದಿ ಜೀವನ ಅನ್ಬೊಹುದು ಅಂದ ಅಭಿಮನ್ಯು ತುಂಬ ಕಷ್ಟದಿಂದ ಮುಗುಳ್ನಗೆ ಬೀರಿದ.

ಏನೋ ಒಳ್ಳೆಯದಾಗಿ ನಡೆಯಲಿ. ದೇವರ ದಯೆ ಇದ್ರೆ ಏನು ಬೇಕಾದ್ರೂ ಸಾಧಿಸ್ಬೊಹುದು. ಎಲ್ಲರು ನಿನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಇಟ್ಕೊಂಡಿದ್ದಾರೆ. ಒಳ್ಳೆಯ ಹೆಸರಿದೆ, ಇತ್ತೀಚೆಗೆ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸಿದೆ. ಒಂದೊಳ್ಳೆ ಹುಡುಗಿನ ನೋಡಿ ಮದ್ವೆ ಮಾಡ್ಕೋ. ಒಬ್ನೇ ಮಗ, ಮನೆಯಲ್ಲಿ ವಯಸ್ಸಾದ ಅಮ್ಮ ಒಬ್ರೇ ಇದ್ದಾರೆ. ಏನಂತಿಯ? ರಾಜಶೇಖರ್ ಆತ್ಮೀಯವಾಗಿ ಕೇಳಿದರು.

ಅಭಿಮನ್ಯು ಅಕ್ಷರಳ ಕಡೆಗೊಮ್ಮೆ ನೋಡಿ ಮುಗುಳ್ನಗೆ ಬೀರಿದ. ನಾನಂತೂ ಈಗ್ಲೇ ಮದ್ವೆಯಾಗೋದಕ್ಕೆ ರೆಡಿಯಾಗಿದ್ದೇನೆ ಸಾರ್. ಈಗಾಗ್ಲೇ ಒಂದು ಸುಂದರವಾದ ಹುಡುಗಿಯನ್ನ ನೋಡಿದ್ದೇನೆ. ಒಂದೆರಡು ವರ್ಷ ಕಳೆದ ನಂತರ ಮದ್ವೆಯಾಗೋಣ ಅಂತ ನಿರ್ಧಾರ ಮಾಡಿಯಾಗಿದೆ. ನೀವು ನಮ್ಮ ಮದ್ವೆಗೆ ಮಿಸ್ ಮಾಡದೆ ಬಬೇಕು. ನೀವು ಬರದೆ ಇದ್ರೆ ಮದ್ವೆಗೊಂದು ಕಳೆನೇ ಇರೋದಿಲ್ಲ ಅಂದ ಅಭಿಮನ್ಯು ಅಕ್ಷರಳ ಕಡೆಗೆ ಮತ್ತೊಮ್ಮೆ ದೃಷ್ಟಿ ಹಾಸಿದ. ಅಕ್ಷರ ಸಂಭ್ರಮದಿಂದ ನಾಚಿ ನೀರಾಗಿ ತಲೆತಗ್ಗಿಸಿದಳು.

ನಿನ್ನ ಮದ್ವೆಗೆ ಬರದೆ ಇಲಿಕ್ಕೆ ಸಾಧ್ಯನಾ ಹೇಳು? ನಾನು ಬರೋದಿಲ್ಲ ಅಂದ್ರೂ ಮಗಳು ಬಿಡ್ಬೇಕಲ್ಲ? ಎಲ್ಲದಕ್ಕಿಂತ ಹೆಚ್ಚಾಗಿ ನೀವಿಬ್ರು ಬೆಸ್ಟ್‌ಫ್ರೆಂಡ್ಸ್ ಬೇರೆ. ದಿನ ಒಟ್ಟಿಗೆ ಓಡಾಡ್ತಿರ. ನಿನ್ನ ಮದ್ವೆಗೆ ಒಂದು ದಿನ ಮುಂಚಿತವಾಗಿಯೇ ಮಗಳೊಂದಿಗೆ ಹಾಜರಾಗಿ ಬಿಡ್ತೇವೆ ಅಂದರು ಲೀಲಾವತಿ.

ಅಭಿಮನ್ಯು ಮದ್ವೆಯಾದ ನಂತರ ನಮ್ಮನ್ನೆಲ್ಲ ಮರೆತು ಬಿಡ್ತಾನೆ. ಹೆಂಡ್ತಿ ಬಂದ ಮೇಲೆ ನನ್ನೊಂದಿಗೆ ರಾಜಾಸೀಟ್‌ಗೆ ಬರುವುದನ್ನೂ ನಿಲ್ಲಿಸಿ ಬಿಡ್ತಾನೆ. ಅಲ್ಲಿಗೆ ನಾನು ಒಬ್ಬೊಂಟಿ ಎಂದು ಅಕ್ಷರ ನನ್ನದೂ ಒಂದು ಮಾತು ಇರಲಿ ಎಂದು ಆಡಿದಳು.

ಅಭಿಮನ್ಯು ಅಷ್ಟೇ ಚುರುಕಿನ ಮನುಷ್ಯ. ಆಕೆಯ ಮಾತಿಗೆ ತಕ್ಷಣ ಪ್ರತಿಕ್ರಿಯಿಸದೆ ಇರಲಿಲ್ಲ. ಒಬ್ಬೊಂಟಿ ಅಂತ ಯಾಕೆ ಕೊರಗುತ್ತಾ ಕೂಬೇಕು? ನೀನು ಮದ್ವೆಯಾಗೋದಕ್ಕೆ ರೆಡಿಯಾಗಿ ಬಿಡು? ಎಂದು ದ್ವಂದ್ವಾರ್ಥದ ಸಲಹೆ ನೀಡಿ ಆಕೆಗೆ ಮಾತಿನಲ್ಲಿಯೇ ತಿವಿದ.

ನೋಡು ಅಭಿಮನ್ಯು, ನೀನು ಹೇಳಿದ ವಿಚಾರದ ಬಗ್ಗೆನೇ ನಿನ್ನೆ ಅವಳಿಗೆ ಹೇಳಿದ್ದೆ. ಅದಕ್ಕೆ ಮುಖ ಊದಿಸಿಕೊಂಡು ಕೂತಿದ್ಲು. ಮದ್ವೆ ಮಾಡ್ಕೋ ಅಂದ ತಕ್ಷಣ ಕೋಪ ಮಾಡ್ಕೊಂಡು ಇವತ್ತು ಕಚೇರಿಗೂ ಹೋಗದೆ ಕೂತಿದ್ದಾಳೆ. ಅವಳಿಗೆ ನೀನಾದ್ರು ಸ್ವಲ್ಪ ಬುದ್ಧಿ ಹೇಳು ಎಂದು ರಾಜಶೇಖರ್ ಅಭಿಮನ್ಯುವಿಗೆ ಹೇಳಿದರು.

ನೀವೇನು ಚಿಂತೆ ಮಾಡ್ಕೋಬೇಡಿ ಸಾರ್. ಅವಳನ್ನ ಮದ್ವೆ ಮಾಡಿಸೋ ಜವಾಬ್ದಾರಿ ನಂದು. ಅವಳು ಈಗಾಗಲೇ ಮದ್ವೆಗೆ ತಯಾರಿ ನಡೆಸ್ತಾ ಇದ್ದಾಳೆ. ಮದ್ವೆಗೆ ಬೇಕಾದ ಒಡವೆಗಳನ್ನೆಲ್ಲ ಈಗ್ಲೇ ಕೂಡಿಟ್ಟುಕೊಂಡಿದ್ದಾಳೆ. ಇನ್ನೊಂದೆರಡು ವರ್ಷದೊಳಗೆ ನೀವು ಮದ್ವೆ ಮಾಡಿಕೊಡದೆ ಇದ್ರೆ ಅವಳೇ ನಿಮ್ಮ ಹತ್ರ ಬಂದು ಯಾಕೆ ನನ್ನ ಮದ್ವೆ ಮಾಡಿಕೊಡ್ತಾ ಇಲ್ಲ ಅಂತ ಕೇಳೋದು ನಿಶ್ಚಿತ ಎಂದು ನಕ್ಕು ಹೇಳಿದ.

ನಾವು ದುಡ್ದು ಕೂಡಿಟ್ಟಿದ್ದು ಸಾಲ್ದು ಅಂತ ಅವಳು ಬೇರೆ ದುಡ್ದು ಕೂಡಿಡ್ತಾ ಇದ್ದಾಳೆ. ಕೆಲ್ಸ ಬಿಟ್ಟು ಮನೆಯಲ್ಲಿ ಹಾಯಾಗಿರು ಅಂದ್ರೆ ಕೇಳೊಲ್ಲ. ಯಾರ ಹಂಗಿನಲ್ಲಿಯೂ ಬದುಕಬಾರದು ಅಂತ ದುಡಿಯೋದಕ್ಕೆ ಹೋಗ್ತಾ ಇದ್ದಾಳೆ. ಏನ್ಮಾಡೋದು ಎಲ್ಲಾ ಅವಳಿಷ್ಟ. ಅವಳಿಗೆ ಸ್ವಾಭಿಮಾನ ಜಾಸ್ತಿ. ಕೈ ಹಿಡಿಯೋ ಹುಡುಗನ ಜೊತೆ ಹೇಗೆ ಹೊಂದ್ಕೊಂಡು ಸಂಸಾರ ಸಾಗಿಸ್ತಾಳೋ… ನನ್ಗೊಂದು ಅರ್ಥವಾಗ್ತಾ ಇಲ್ಲ ಅಂದ ಲೀಲಾವತಿ ಮತ್ತೆ ಮಗಳ ಮದುವೆ ವಿಚಾರದಲ್ಲಿ ತಲೆ ಕೆಡಿಸಿಕೊಂಡರು.

ಮಾತು ಯಾಕೋ ಗಡಿ ದಾಟಿ ಹೋಗುತ್ತಿದೆ ಅಂಥ ಅಕ್ಷರಳಿಗೆ ಅನ್ನಿಸದೆ ಇರಲಿಲ್ಲ. ಅಪ್ಪ, ಅಮ್ಮನಿಗೆ ಮದುವೆ ವಿಚಾರದಲ್ಲಿ ಮಾತಾಡೋದಕ್ಕ್ಕೆ ಅವಕಾಶ ಮಾಡಿಕೊಟ್ಟರೆ ಈಗಲೇ ಹುಡುಗನನ್ನು ಹುಡುಕಿ ತಾಳಿ ಕಟ್ಟಿಬಿಡುತ್ತಾರೆಂಬ ಕಳವಳ ಕಾಣಿಸಿಕೊಂಡಿತು.

ನೀವ್ಯಾರೂ ಕೂಡ ನನ್ನ ಮದ್ವೆ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಸಿಡುಕಿ ಎಲ್ಲರ ಮುಖವನ್ನೊಮ್ಮೆ ದುರುಗುಟ್ಟಿಕೊಂಡು ನೋಡಿ ಮಾತುಮುಂದುವರೆಸಿದಳು. ನನ್ಗೆ ಇಷ್ಟವಾಗುವ ಹುಡುಗನನ್ನ ನಾನೇ ಹುಡುಕಿಕೊಳ್ತೇನೆ. ನನ್ಗೆ ನನ್ನ ಜಾತಿಯ ಹುಡುಗರ ಜೊತೆ ಮದ್ವೆ ಮಾಡಿಕೊಳ್ಳೋದಕ್ಕೆ ಒಂದುಚೂರು ಇಷ್ಟವಿಲ್ಲ. ಮದ್ವೆ ಆಗೋದೇನಾದ್ರು ಇದ್ರೆ ಅದು ಬೇರೆ ಜಾತಿಯ ಹುಡುಗನೊಂದಿಗೆ ಮಾತ್ರ. ಇಷ್ಟ ಇದ್ದವರು ಮದ್ವೆಗೆ ಬಬೊಹುದು ಸ್ವಲ್ಪ ದುಃಖವಾಗಿಯೇ ಹೇಳಿದ ಅಕ್ಷರ ಆಕಾಶವನ್ನು ದಿಟ್ಟಿಸಿ ನೋಡುತ್ತಾ ಕುಳಿತುಬಿಟ್ಟಳು.

ಅಂತರ್ಜಾತಿ ವಿವಾಹ ಅಂದ ತಕ್ಷಣ ರಾಜಶೇಖರ್ ಎದೆಗೆ ಯಾರೋ ಒದ್ದ ಅನುಭವವಾಯಿತಾದರೂ ಅದನ್ನು ವ್ಯಕ್ತಪಡಿಸಲಿಲ್ಲ. ತೋರ್ಪಡಿಕೆಗೆ ಎಂಬಂತೆ ಮಗಳ ಕಡೆಗೆ ನೋಡಿ ಮುಗುಳ್ನಗೆ ಬೀರಿದರು. ಏನೋ ಒಟ್ನಲ್ಲಿ ಕೊನೆಗೂ ಮದ್ವೆಯಾಗೋ ನಿರ್ಧಾರಕ್ಕೆ ಬಂದಳ್ಳಲ್ಲ. ಅದೇ ಸಂತೋಷ. ನಿನ್ನೆ ಮದ್ವೆನೇ ಬೇಡ ಅಂತ ಕೂಗಾಡ್ತಾ ಇದ್ಲು. ಇವತ್ತು ಬೇರೆ ಜಾತಿಯ ಹುಡುಗನೊಂದಿಗೆ ಮದ್ವೆಯಾಗ್ತಿನಿ ಅಂತ ಹೇಳ್ತಾ ಇದ್ದಾಳೆ. ಜಾತಿ ಯಾವುದಾದರೇನಂತೆ. ಒಳ್ಳೆಯ ಹುಡುಗ ಆದ್ರೆ ನಾನೇ ಮುಂದೆ ನಿಂತು ಮದ್ವೆ ಮಾಡಿಸ್ತೇನೆ ಅಂದ ರಾಜಶೇಖರ್ ಮೊಗದಲ್ಲಿ ಸಂತೋಷಕ್ಕಿಂತ ಹೆಚ್ಚಾಗಿ ದುಃಖವೇ ಆವರಿಸಿಕೊಂಡಿತು.

ರಾಜಾಸೀಟ್ ಉದ್ಯಾನವದಲ್ಲಿ ಹಿತವಾದ ಕತ್ತಲು ಆವರಿಸಿಕೊಳ್ಳಲು ಪ್ರಾರಂಭಿಸಿತು. ಸುತ್ತಲೂ ಆಹ್ಲಾದಕರ ವಾತಾವರಣ. ಅಲ್ಲೊಂದಿಲ್ಲೊಂದು ಉರಿಯುತ್ತಿದ್ದ ವಿದ್ಯುತ್ ದೀಪಗಳು ಕತ್ತಲೆಯನ್ನು ಸರಿಸುವ ಪ್ರಯತ್ನ ಮಾಡುತ್ತಿದ್ದವು. ಪ್ರವಾಸಿಗರು ಉತ್ಸಾಹದಿಂದ ಅತ್ತಿಂದಿತ್ತ ಓಡಾಡುತ್ತಾ ಕಾಲ ಕಳೆಯುತ್ತಿದ್ದರು. ಇನ್ನೇನು ಕೆಲವೇ ಕೆಲವು ನಿಮಿಷಗಳಲ್ಲಿ ಕಾಣುವ ಸೂರ್ಯಾಸ್ತಮದ ಅಭೂತಪೂರ್ವ ದೃಶ್ಯ ನೋಡಲು ಜನ ರಾಜಾಸೀಟ್ ಮುಂಭಾಗದಲ್ಲಿ ನೆರೆದಿದ್ದರು. ಆ ಜನದಟ್ಟಣೆಯ ನಡುವೆ ಇವರು ಕೂಡ ಸೇರಿಕೊಂಡು ನೇಸರನ ಹೊನ್ನ ಕಿರಣಗಳನ್ನು ಕಂಡು ಪುಳಕಿತರಾದರು. ನೇಸರನು ಬೆಟ್ಟದ ಮರೆಯಲ್ಲಿ ಕಣ್ಮರೆಯಾಗುತ್ತಿದ್ದಂತೆ ಕತ್ತಲು ತನ್ನ ಸಾಮ್ರಾಜ್ಯ ಸ್ಥಾಪಿಸುವ ತವಕದಲ್ಲಿತ್ತು.

ಹೊತ್ತಾಯ್ತು, ಇನ್ನು ಹೊರಡುವ ಎಂದು ರಾಜಶೇಖರ್ ಎಲ್ಲರನ್ನು ಕರೆದೊಯ್ಯಲು ಸಿದ್ಧರಾದರು. ಇನ್ನೊಂದಿಷ್ಟು ಹೊತ್ತು ರಾಜಾಸೀಟ್‌ನಲ್ಲಿ ಕಳೆಯಬೇಕೆಂಬ ಹಂಬಲ ಅಕ್ಷರಳ ಮನದಲ್ಲಿ ಮೊಳಕೆಯೊಡೆಯಿತು. ದಿನನಿತ್ಯ ರಾಜಾಸೀಟ್‌ಗೆ ಭೇಟಿ ನೀಡುತ್ತಿದ್ದರೂ ಸಂಗೀತ ನೃತ್ಯ ಕಾರಂಜಿ ನೋಡೋದಕ್ಕ್ಕೆ ಆಕೆಗೆ ಸಾಧ್ಯವಾಗುತ್ತಿರಲಿಲ್ಲ. ಸಂಜೆಯಾಯಿತು ಎಂದು ತರಾತುರಿಯಲ್ಲಿ ಮನೆಗೆ ಓಡಿ ಹೋಗುತ್ತಿದ್ದಳು. ಇವತ್ತು ಹೇಗಿದ್ದರೂ ಅಪ್ಪ, ಅಮ್ಮ ಜೊತೆಯಲ್ಲಿಯೇ ಇದ್ದಾರಲ್ಲ? ಸಂಗೀತ ನೃತ್ಯ ಕಾರಂಜಿ ನೋಡದೆ ಮನೆಗೆ ಹೋಗೋದಿಲ್ಲ ಎಂಬ ನಿರ್ಧಾರಕ್ಕೆ ಬಂದಳು.

ಅಪ್ಪ, ಯಾಕೆ ಇಷ್ಟೊಂದು ಅವಸರ ಮಾಡ್ತಿರ? ಒಂದರ್ಧ ತಾಸು ಇದ್ದು ಹೋಗುವ. ಮನೆಯಲ್ಲಿ ಹೋಗಿ ಮಾಡೋದಕ್ಕೇನಿದೆ? ನಾನು ಇದುವರೆಗೂ ಸಂಗೀತ ನೃತ್ಯ ಕಾರಂಜಿ ನೋಡ್ಲೇ ಇಲ್ಲ. ಇವತ್ತಾದ್ರೂ ನೋಡ್ಲಿಕ್ಕೆ ಅವಕಾಶ ಕೊಡಿ ಗೋಗರೆದುಕೊಂಡಳು.

ರೀ… ನಡಿರಿ. ಅವಳಿಗೇನು, ಬಿಟ್ರೆ ಬೆಳಗಾಗುವ ತನಕ ಇಲ್ಲೇ ಇದ್ದು ಬಿಡ್ತಾಳೆ. ಅವಳಿಗೆ ಒಂದುಚೂರು ಜವಾಬ್ದಾರಿನೇ ಇಲ್ಲ. ಅಡುಗೆ ಬೇರೆ ಆಗಿಲ್ಲ ಲೀಲಾವತಿ ಮನೆಯ ಜವಾಬ್ದಾರಿಯನ್ನು ಗಂಡನಿಗೆ ನೆನಪಿಸಿದರು.

ನೀನು ಸ್ವಲ್ಪ ಸುಮ್ನಿರು. ನಾವೇನು ದಿನಾ ಬತಿವಾ? ಅದೇನೋ ಸಂಗೀತ ನೃತ್ಯ ಕಾರಂಜಿ ಇದೆಯಂತೆ. ನೋಡ್ಕೊಂಡು ಹೋಗೋಣ. ನಾನು ಕೂಡ ಇದುವರೆಗೆ ನೋಡ್ಲಿಲ್ಲ. ಮಗಳು ಬೇರೆ ನೋಡ್ಬೇಕೂಂತ ಆಸೆ ಪಡ್ತಾ ಇದ್ದಾಳೆ. ಎಲ್ಲರು ಒಟ್ಟಿಗೆ ನೋಡ್ಕೊಂಡು ಹೋಗೋಣ ರಾಜಶೇಖರ್ ತಮ್ಮ ನಿರ್ಧಾರ ಪ್ರಕಟಿಸಿ ಸಂಗೀತ ನೃತ್ಯ ಕಾರಂಜಿಯ ವೈಭವವನ್ನು ಸವಿಯಲು ಅಣಿಯಾದರು.

ಸುತ್ತಲೂ ದಟ್ಟ ಕತ್ತಲು ಆವರಿಸಿಕೊಳ್ಳುತ್ತಿದ್ದಂತೆ ಸಂಗೀತ ನೃತ್ಯ ಕಾರಂಜಿ ಪ್ರಾರಂಭಗೊಂಡಿತು. ಸಂಗೀತಕ್ಕೆ ತಕ್ಕಂತೆ ಕುಣಿಯುತ್ತಿದ್ದ ನೃತ್ಯ ಕಾರಂಜಿಯೊಂದಿಗೆ ನೆರೆದಿದ್ದ ಜನರು ಕುಣಿದು ಸಂತೋಷ ಹಂಚಿಕೊಂಡರು. ಬೆಳಕಿನ ವೈಭವದ ನಡುವೆ ನೃತ್ಯ ಕಾರಂಜಿಯು ಬಣ್ಣದ ಚಿತ್ತಾರ ಮೂಡಿಸಿತು. ಸಂಗೀತಕ್ಕೆ ತಲೆದೂಗಿದ ಅಕ್ಷರ ನಿಂತಲ್ಲೇ ಕುಣಿಯಲು ಪ್ರಾರಂಭಿಸಿದಳು. ಹೊತ್ತು ಮೀರುತ್ತಿದ್ದಂತೆ ಅಕ್ಷರಳನ್ನು ಒತ್ತಾಯ ಮಾಡಿ ಎಲ್ಲರು ಸೇರಿ ರಾಜಾಸೀಟ್‌ನಿಂದ ಹೊರಗೆ ಕರೆ ತರುವಷ್ಟರಲ್ಲಿ ಸಾಕು ಸಾಕಾಗಿ ಹೋಯಿತು.

ತುಂಬಾ ಸಂತೋಷದಿಂದಲೇ ದಿನ ಕಳೆದ ಅಕ್ಷರ ಮರು ದಿನವೂ ಕಚೇರಿಗೆ ಚಕ್ಕರ್ ಹಾಕಿದಳು.  ಇವತ್ತು ತುಂಬಾ ಮುಖ್ಯವಾದ ಕೆಲಸ ಇದೆ. ಅದ್ಕೋಸ್ಕರ ಕಚೇರಿ ಹೋಗೊಲ್ಲ. ಸಂಜೆಯೊಳಗೆ ಮನೆಗೆ ಬತೇನೆ ಎಂದು ಅಮ್ಮನಿಗೆ ಹೇಳಿ ಮನೆಯಿಂದ ಹೊರಡಲು ಅಣಿಯಾದಳು. ಅಮ್ಮ ಆಕೆಯ ಹಣೆಗೊಂದು ತಿಲಕವನ್ನಿಟ್ಟು ಸಿಹಿ ಮುತ್ತು ನೀಡಿ ನೋಡ್ಕೊಂಡು ಹೋಗು. ಬೇಗ ಮನೆಗೆ ಬಂದ್ಬಿಡು ಎಂದು ಹೇಳಿ ಕಳುಹಿಸಿದರು.

ಮನೆಯ ಶೆಡ್‌ನಲ್ಲಿದ್ದ ಕಾರನ್ನು ಹೊರ ತೆಗೆದಳು. ಅಕ್ಷರ ಕಾರನ್ನು ಬಳಕೆ ಮಾಡುವುದೇ ಅಪರೂಪ. ಆಕೆಯ ಹುಟ್ಟು ಹಬ್ಬಕ್ಕೆ ರಾಜಶೇಖರ್ ಉಡುಗೋರೆಯಾಗಿ ಎಸ್ಟೀಮ್ ಕಾರನ್ನು ಕೊಡಿಸಿದ್ದರು. ಕಾರು ಕೊಂಡುಕೊಂಡಲ್ಲಿಂದ ಹಿಡಿದು ಇಲ್ಲಿಯವರೆಗೆ ಕಾರಿನಲ್ಲಿ ಓಡಾಡಿದ್ದಕ್ಕಿಂತ ಅದಕ್ಕೆ ಹೆಚ್ಚು ವಿಶ್ರಾಂತಿ ನೀಡಿದ ದಿನಗಳೇ ಹೆಚ್ಚು. ವರ್ಷವಿಡೀ ಕಾರು ಶೆಡ್‌ನಲ್ಲಿ ಬಿದ್ದಿದರೂ ಕಾರನ್ನು ಯಾರಿಗೂ ಓಡಿಸಲು ಕೊಡಲು ಆಕೆ ಒಪ್ಪುತ್ತಿರಲಿಲ್ಲ. ಪ್ರತಿ ಭಾನುವಾರ ಮನೆಯ ಸುತ್ತಲೂ ಕಾರ್‌ನಲ್ಲಿ ಒಂದು ರೌಡ್ ಹಾಕಿದ ಬಳಿಕ ಕಾರನ್ನು ಶುಚಿಗೊಳಿಸುವ ಕೆಲಸವನ್ನು ಕೆಲಸದವರ ಕೈಗೆ ಒಪ್ಪಿಸಿ ನೋಡುತ್ತಾ ಕುಳಿತುಬಿಡುತ್ತಿದ್ದಳು. ಕಾರನ್ನು ಸ್ನಾನ ಮಾಡಿಸಿದ ಬಳಿಕ ತಾನೆ ಕೊಂಡೊಯ್ದು ಶೆಡ್‌ನಲ್ಲಿ ನಿಲ್ಲಿಸಿ ಬಿಡುತ್ತಿದ್ದಳು. ಕಾರಿನ ಬಗ್ಗೆ ಸಾಕಷ್ಟು ಅಕ್ಕರೆ ಇದ್ದರೂ ಕೂಡ ಆಕೆಗೆ ಕಾಲ್ನಡಿಗೆಯೇ ಹೆಚ್ಚು ಪ್ರೀತಿ. ಅಪ್ಪ, ಅಮ್ಮ ಒತ್ತಾಯ ಮಾಡಿದರೂ ಕಾರ್ ತಗೊಂಡು ಹೋಗುವವಳಲ್ಲ. ಮನಸ್ಸಿಗೆ ತುಂಬಾ ಸಂತೋಷವಾದಾಗ ಮಾತ್ರ ಆಕೆ ಕಾರನ್ನು ಶೆಡ್‌ನಿಂದ ಹೊರ ತೆಗೆಯುತ್ತಾಳೆ ಎಂಬ ವಿಚಾರ ತಿಳಿದಿದ್ದ ಲೀಲಾವತಿಗೆ ಮಗಳ ಮನಸ್ಸಿಗೆ ಅಷ್ಟೊಂದು ಸಂತೋಷವಾಗುವಂತಹದ್ದೇನು ಇಂದು ಆಗಿದೆ ಎಂದು ತನ್ನನ್ನು ತಾನೇ ಆಶ್ಚರ್ಯದಿಂದ ಪ್ರಶ್ನಿಕೊಂಡರು.

ತುಂಬಾ ಉತ್ಸಾಹದಿಂದ ಡ್ರೈವ್ ಮಾಡಿಕೊಂಡು ಅಭಿಮನ್ಯುವಿನ ಕಚೇರಿ ಕಡೆಗೆ ತೆರಳಿದಳು. ಅಕ್ಷರಳನ್ನು ಕಂಡ ಅಭಿಮನ್ಯು ಹೊರ ಬಂದು ಆಕೆಯನ್ನು ಕಚೇರಿಗೆ ಒಳಗೆ ಬರ ಮಾಡಿಕೊಂಡ.

ಅಭಿ, ಒಂದ್ಕಡೆ ಹೋಗ್ಲಿಕ್ಕೆ ಇದೆ, ಬಾ ಹೋಗಿ ಬರುವ ಎಂದು ಅಭಿಮನ್ಯು ಕೈ ಹಿಡಿದು ಎಳೆದೊಯ್ದು ಕಾರಿನಲ್ಲಿ ಕೂರಿಸಿಕೊಂಡಳು.

ದೂರ ಹೊರಟ್ಟಿದ್ದು!? ಕುತೂಹಲದಿಂದ ಕೇಳಿದ.

ಎಲ್ಲಿಗೆ ಹೋಗ್ತಾ ಇದ್ದೀವಿ ಅಂತ ಮಾತ್ರ ಕೇಳ್ಬೇಡ. ಸುಮ್ನೆ ಕೂತ್ಕೊಂಡ್ರೆ ಸಾಕು. ಎಲ್ಲಿಗೆ ಹೋಗ್ತಾ ಇದ್ದೇವೋ ಅಲ್ಲಿಗೆ ಹೋದ ನಂತರ ಎಲ್ಲಾ ಹೇಳ್ತೇನೆ ಎಂದು ಅಭಿಮನ್ಯುವಿನಲ್ಲಿ ಕುತೂಹಲ ಹುಟ್ಟಿಸುವಂತೆ ಮಾತನಾಡಿದಳು.

ಎಲ್ಲಿಗೆ ಹೋಗ್ತಾ ಇರೋದು ಹೇಳು. ಇಲ್ದಿದ್ರೆ ನಾನು ಬರೊಲ್ಲ ಅಭಿಮನ್ಯು ಹಟ ಹಿಡಿದವನಂತೆ ನಟಿಸಿದ. ಆದರೆ, ಅಭಿಮನ್ಯುವಿನ ಮಾತು ಕಿವಿಗೆ ಹಾಕಿಕೊಳ್ಳದೆ ಕಾರ್‌ಸ್ಟಾರ್ಟ್ ಮಾಡಿ ಡ್ರೈವಿಂಗ್ ಕಡೆಗೆ ಗಮನ ಹರಿಸಿದಳು. ಕಾರು ಮಡಿಕೇರಿ ನಗರ ದಾಟಿ ಮೈಸೂರಿನ ಕಡೆಗೆ ಸಾಗಿತ್ತು.

ಇದೇನು ಮೈಸೂರಿಗೆ ಹೋಗ್ತಾ ಇದ್ದೇವಾ!? ಕೇಳಿದ.

ಹೌದು, ಅಲ್ಲಿಗೆ ಹೋಗ್ತಾ ಇರೋದು. ಆದರೆ, ಯಾಕೆ ಅಂತ ಮಾತ್ರ ಕೇಳ್ಬೇಡ. ತುಂಬಾ ಸಸ್ಪೆನ್ಸ್. ಅಲ್ಲಿಗೆ ಹೋದ ನಂತರ ಹೇಳ್ತೇನೆ ಅಕ್ಷರ ಗುಟ್ಟು ಬಿಟ್ಟುಕೊಡಲು ತಯಾರಿರಲಿಲ್ಲ.

ಎಂತ ಹಾಳಾದ ಸಸ್ಪೆನ್ಸೋ… ಅದನ್ನ ಇಲ್ಲೇ, ಈಗ್ಲೇ ಹೇಳ್ಬೊಹುದಲ್ಲ? ಅಭಿಮನ್ಯು ತುಸು ಕೋಪ ತೋರ್ಪಡಿಸಿದ.

ನೀನು ಕೋಪ ಮಾಡ್ಕೊಂಡ್ರೂ ಚಿಂತೆ ಇಲ್ಲ. ಮೈಸೂರಿಗೆ ತಲುಪಿದ ನಂತರವೇ ಹೇಳೋದು. ಅಂತಹ ದೊಡ್ಡ ಸಸ್ಪೆನ್ಸ್ ಏನು ಇಲ್ಲ. ಸುಮ್ನೆ ಏನೆಲ್ಲೋ ಕಲ್ಪನೆ ಮಾಡ್ಕೊಂಡು ತಲೆ ಹಾಳು ಮಾಡ್ಕೋಬೇಡ. ನಿನ್ಗೆ ಎಲ್ಲಾ ಗೊತ್ತಿರುವಂತ ವಿಚಾರನೇ. ಆದರೂ ಅದನ್ನ ಈಗ್ಲೇ ಬಿಚ್ಚಿಡೋದಿಲ್ಲ ಎಂದು ಅಭಿಮನ್ಯುವಿನಲ್ಲಿ ಕುತೂಹಲ ಕೆರಳುವಂತೆ ಮಾಡಿಟ್ಟು ಮಜಾ ತೆಗೆದುಕೊಳ್ಳುತ್ತಿದ್ದಳು.

ಕಾರ್‌ಸ್ಟೀರಿಯೋದಲ್ಲಿ ಅಕ್ಷರಳಿಗೆ ತುಂಬಾ ಇಷ್ಟವಾದ ತನುವು ನಿನ್ನದು ಮನವು ನಿನ್ನದು… ಭಾವಗೀತೆ ಮನಕ್ಕೆ ಇಂಪು ನೀಡಲು ಪ್ರಾರಂಭಿಸಿತು. ಮೈಸೂರು ತನಕ ಒಂದರ ಮೇಲೊಂದರಂತೆ ಸುಂದರವಾದ ಭಾವಗೀತೆಗಳು ತೇಲಿ ಬಂದು ಮನಸ್ಸಿಗೆ ಮುದ ನೀಡುತ್ತಿದ್ದವು. ಮೈಸೂರು ನಗರದೊಳಗೆ ಪ್ರವೇಶಿಸುತ್ತಿದ್ದಂತೆ ಅಭಿಮನ್ಯುವನ್ನು ಕರೆತಂದ ವಿಷಯವನ್ನು ತೆರೆದಿಟ್ಟಳು.

ನಾಳೆ ನಿನ್ನ ಬರ್ತ್‌ಡೇ ಅಲ್ವ? ನಿನ್ಗೊಂದು ಒಳ್ಳೆಯ ಗಿಫ್ಟ್ ಕೊಡಿಸ್ಬೇಕೂಂತ ಆಸೆ ಆಯ್ತು. ಅದ್ಕೋಸ್ಕರ ಇಲ್ಲಿಗೆ ಕಕೊಂಡು ಬಂದೆ ತುಂಬಾ ಸಂತೋಷದಿಂದ ಹೇಳಿಕೊಂಡಳು.

ನನ್ಗೆ ಯಾಕೆ ಗಿಫ್ಟ್? ಅಷ್ಟಕ್ಕೂ ಗಿಫ್ಟ್ ಕೊಡ್ಬೇಕೂಂತ ಅನ್ನಿಸಿದ್ರೆ ಮಡಿಕೇರಿಯಲ್ಲಿಯೇ ಕೊಡಿಸ್ಬೊಹುದಿತ್ತಲ್ಲ? ಇಲ್ಲಿಗೆ ಬರೋ ಖರ್ಚಿನಲ್ಲಿಯೇ ಮಡಿಕೇರಿಯಲ್ಲಿ ಗಿಫ್ಟ್ ತಗೊಳ್ಬೊಹುದಿತ್ತು. ಹಣ ಖರ್ಚು ಮಾಡೋದಕ್ಕೂ ಒಂದು ಇತಿಮಿತಿ ಬೇಡ್ವ?

ಮಡಿಕೇರಿಯಲ್ಲಿ ಗಿಫ್ಟ್ ಕೊಡೋದಕ್ಕೂ, ಇಷ್ಟೊಂದು ದೂರ ಬಂದು ಗಿಫ್ಟ್ ಕೊಡೋದಕ್ಕೂ ವೆತ್ಯಾಸ ಇದೆ ಕಣೋ ಕೋತಿ. ಅದು ನಮ್ಮೂರು, ಅಲ್ಲಿ ಕೊಡಿಸಿದ್ರೆ ಅಷ್ಟೊಂದು ಖುಷಿ ಆಗೋದಿಲ್ಲ. ಇಲ್ಲಿಗೆ ಬಂದು ಗಿಫ್ಟ್ ಕೊಡೋದ್ರಲ್ಲಿ ಒಂಥರಾ ಮಜ ಇದೆ. ಜೊತೆಗೆ ದೂರದ ಊರಿಗೆ ಒಂದು ಟ್ರಿಪ್ ಹೋಗಿ ಬಂದಂಗಾಯ್ತದಲ್ಲ? ಅದ್ಕೋಸ್ಕರ ಇಲ್ಲಿಗೆ ಕಕೊಂಡು ಬಂದೆ ಮೈಸೂರು ದೇವರಾಜ ಅರಸು ರಸ್ತೆಯಲ್ಲಿ ಕಾರು ನಿಲ್ಲಿಸಿ ಗಾರ್ಮೆಂಟ್ಸ್ ಕಡೆಗೆ ನಡಿಗೆ ಹಾಕಿದರು.

ಅಭಿಮನ್ಯು ನಿನ್ಗೆ ಯಾವ ಡ್ರೆಸ್ ಬೇಕೋ ನೀನೇ ಸೆಲೆಕ್ಟ್ ಮಾಡ್ಕೋ. ಒಟ್ನಲ್ಲಿ ನಿನ್ಗೆ ಖುಷಿ ಆಗ್ಬೇಕು ಅಷ್ಟೆ. ದುಡ್ಡಿನ ಬಗ್ಗೆ ಯೋಚ್ನೆ ಮಾಡ್ಬೇಡ. ಪ್ಲೀಸ್ ಬೇಡ ಅಂತ ಅನ್ಬೇಡ. ಇದು ನನ್ನ ಖುಷಿಗೋಸ್ಕರ ವಿನಂತಿಸಿಕೊಂಡಳು.

ಬಟ್ಟೆಗಳ ರಾಶಿಯ ನಡುವೆ ಕಣ್ಣು ಹಾಯಿಸಿದ ಅಕ್ಷರ ತನಗೆ ಇಷ್ಟವಾದ ಕೆಂಪು ಬಣ್ಣದ ಶರ್ಟ್, ಜತೆಗೆ ಕಪ್ಪು ಬಣ್ಣದ ಜೀನ್ಸ್‌ಪ್ಯಾಂಟ್ ಆಯ್ಕೆ ಮಾಡಿಕೊಂಡು ಅಭಿಮನ್ಯುವಿಗೆ ತೋರಿಸಿದಳು. ಹೇಗಿದೆ ಅಭಿ, ಚೆನ್ನಾಗಿದೆಯಾ? ಚೆನ್ನಾಗಿಲ್ದಿದ್ರೆ ಹೇಳು,

“ಬೇರೆ ತಗೊಳ್ಳುವ” ಪ್ರೀತಿ ತುಂಬಿದ ಕಣ್ಗಗಳಿಂದ ಕೇಳಿದಳು.

ಅಭಿಮನ್ಯು ಮರುಮಾತಾಡದೆ ನನ್ಗೆ ಡ್ರೆಸ್ ಹಿಡಿಸಿದೆ, ಇದೇ ಸಾಕು ಎಂದು ಆಕೆಯ ಅಯ್ಕೆಗೆ ಒಪ್ಪಿಗೆ ಸೂಚಿಸಿದ.

ಅಭಿ, ನಾಳೆ ನೀನು ಇದೇ ಡ್ರೆಸ್ ಹಾಕ್ಕೊಳ್ಬೇಕು. ಬರ್ತ್ ಡೇ ಅಂತ ಹೇಳಿ ಆ ದಿನ ಪೂರ್ತಿ ‘ಬರ್ತ್‌ಡ್ರೆಸ್’ನಲ್ಲಿಯೇ ಇಲಿಕ್ಕೆ ನೋಡ್ಬೇಡ. ಈ ಡ್ರೆಸ್ ಹಾಕ್ಕೊಂಡು ಮುದ್ದು ಮುದ್ದಾಗಿ ಕಾಣ್ಬೇಕು.

ಆಕೆಯ ತುಂಟ ಮಾತು ಅಭಿಮನ್ಯುವಿಗೆ ಅರ್ಥವಾಗಲಿಲ್ಲ. ಆಕೆಯ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಇಷ್ಟೊಂದು ದೂರ ಕಕೊಂಡು ಬಂದು ಪ್ರೀತಿಯಿಂದ ಗಿಫ್ಟ್ ಕೊಡಿಸಿದ್ದೀಯ. ಇನ್ನು ನೀನು ಕೊಟ್ಟ ಬಟ್ಟೆ ಹಾಕ್ಕೊಂಡಿಲ್ಲದ್ದಿದ್ರೆ ನೀನು ಸುಮ್ನೆ ಇತೀಯ? ಮುಖನ ಕುಂಬಳಕಾಯಿ ಮಾಡ್ಕೋತ್ತಿಯ ಅಷ್ಟೆ. ಇನ್ನು ನಿನ್ನ ಸಮಾಧಾನ ಪಡಿಸೋದಕ್ಕೆ ಆ ದೇವರೇ ಧರೆಗಿಳಿದು ಬಬೇಕು ಎಂದು ಆಕೆಯ ಸ್ವಭಾವದ ಪೂರ್ಣಪಾಠ ಓದಿ ಮನನ ಮಾಡಿಕೊಂಡಿರುವ ಅಭಿಮನ್ಯು ವಾಸ್ತವ ವಿಚಾರವನ್ನೇ ಹೇಳಿದ.

ಅಷ್ಟೊಂದು ಹೆದ್ರಿಕ್ಕೆ ಇಬೇಕು. ಇಲ್ಲ ಅಂದ್ರೆ ನೀನು ಕೈಗೆ ಸಿಗೋದಿಲ್ಲ. ನಾಳೆ ಬೆಳಗ್ಗೆ ಬರ್ತ್‌ಡೇಗೆ ನಾನೇ ಮೊದ್ಲು ನಿನ್ಗೆ ಶುಭಾಶಯ ಹೇಳ್ಬೇಕು. ನನ್ಗಿಂತ ಮೊದ್ಲು ಯಾರಾದ್ರು ನಿನ್ಗೆ ಶುಭಾಶಯ ಹೇಳಿದ್ರೆ ನಾನು ಸುಮ್ನೆ ಇರೊಲ್ಲ. ನಾಳೆ ನನ್ನ ಫೋನ್ ಕಾಲ್ ಮಾತ್ರ ಫಸ್ಟ್ ರಿಸೀವ್ ಮಾಡ್ಬೇಕು, ಗೊತ್ತಾಯ್ತಾ? ಪ್ರೀತಿಯಿಂದ ಆದೇಶ ಹೊರಡಿಸಿದಳು.

ಆಯ್ತು ಬಿಡು, ಅದ್ಕ್ಕೆ ಯಾಕೆ ಅಷ್ಟೊಂದು ತಲೆಬಿಸಿ ಮಾಡ್ಕೋತ್ತಿಯ? ಮೊದ್ಲು ನೀನೇ ಶುಭಾಶಯ ಹೇಳು. ಯಾರು ಬೇಡ ಅಂದವರು? ನಾಳೆ ಬರ್ತ್‌ಡೇ ಪಾರ್ಟಿಗೆ ಸ್ನೇಹಿತರೆಲ್ಲ ಬರ್ತಾರೆ ನೀನು ಕೂಡ ಬಬೇಕು. ಖಂಡಿತ ಬತಿಯ ಅಲ್ವ? ಅಕ್ಕರೆಯ ಆಮಂತ್ರಣ ನೀಡಿದ.

ಖಂಡಿತ ಬತೇನೆ ಕಣೋ ಕೋತಿ ಎಂದು ಹೇಳಿ ಜೋರಾಗಿ ನಕ್ಕಳು.

ಇಬ್ಬರು ಮೈಸೂರಿನಲ್ಲಿ ಒಂದಷ್ಟು ಹೊತ್ತು ಕಾಲ ಕಳೆದು ಮಧ್ಯಾಹ್ನದ ಊಟ ಮೈಸೂರಿನಲ್ಲಿಯೇ ಮುಗಿಸಿ ಮಡಿಕೇರಿ ಕಡೆಗೆ ಪಯಣ ಬೆಳೆಸಿದರು. ಕಾರಿನ ಸ್ಟೀರಿಯೋದಲ್ಲಿ ಹಳೆಯ ಚಿತ್ರಗೀತೆಗಳು ಗುನುಗುತ್ತಿದ್ದವು. ಓಡುವ ನದಿ ಸಾಗರವ ಬೆರೆಯಲೆ ಬೇಕು, ನಾನು ನೀನು ಎಂದಾದರು ಸೇರಲೆ ಬೇಕು, ಸೇರಿ ಬಾಳಲೇ ಬೇಕು, ಬಾಳು ಬೆಳಗಲೇ ಬೇಕು….. ಪ್ರೀತಿ ತುಂಬಿದ ಇಂಪಾದ ಹಾಡು ಇಬ್ಬರಿಗೂ ಹಿತವೆನಿಸಿ ತಮ್ಮದೇ ಕಲ್ಪನೆಯ ಲೋಕದಲ್ಲಿ ವಿಹರಿಸತೊಡಗಿದರು. ಆ ಹಾಡಿನ ಪ್ರತಿಯೊಂದು ಸಾಲು ಕೂಡ ತಮಗೋಸ್ಕರವೇ ಕವಿ ರಚಿಸಿದ್ದಾನೆಂದು ತಿಳಿದು ಇಬ್ಬರು ಮನದಲ್ಲಿಯೇ ಆ ಹಾಡಿನ ಒಂದೊಂದು ಸಾಲನ್ನು ಮತ್ತೆ, ಮತ್ತೆ ನೆನೆದು ಕಲ್ಪನೆಯಲ್ಲಿ ಮುಂದಿನ ವೈವಾಹಿಕ ಜೀವನದ ಒಂದೊಂದೇ ಮೆಟ್ಟಿಲು ಏರಿದರು.

ಕೊಡಗಿನ ಹೆಬ್ಬಾಗಿಲು ಕುಶಾಲನಗರವನ್ನು ಹಾದು ಮಡಿಕೇರಿ ಕಡೆಗೆ ಬರುತ್ತಿದ್ದಂತೆ ತಿರುವು ರಸ್ತೆಗಳಲ್ಲಿ ಕಾರು ನಿಧಾನವಾಗಿ ಚಲಿಸತೊಡಗಿತು. ಅಕ್ಷರ ತುಂಬಾ ಸಂತೋಷದಲ್ಲಿದ್ದಳು. ಮಡಿಕೇರಿ ಸಮೀಪಿಸುತ್ತಿದ್ದಂತೆ ತಂಪಾದ ಕುಳಿರ್ಗಾಳಿ ಮೈಸೋಕಲು.

ಪ್ರಾರಂಭಿಸಿತು. ಮಡಿಕೇರಿ ತಲುಪುವುದರೊಳಗೆ ಚಳಿ ವಿಪರೀತ ಅನ್ನಿಸಿತು. ಆದಷ್ಟು ಬೇಗ ಒಂದು ಪೆಗ್ ಏರಿಸಬೇಕೆಂದು ಅಂದುಕೊಂಡ. ಸರಿಸುಮಾರು ಇನ್ನೂರ ಐವತ್ತಕ್ಕೂ ಹೆಚ್ಚು ಕಿ.ಮೀ. ಪಯಣ ಮಾಡಿದ ಅಭಿಮನ್ಯು ಸಾಕಷ್ಟು ಬಳಲಿದ್ದ. ಆಯಾಸ ನೀಗಿಸಿಕೊಳ್ಳಲು, ಚಳಿಯನ್ನು ಒಂದಷ್ಟು ಹೊತ್ತು ದೂರ ಇಡಲು ಪೆಗ್ಗ್ ಬೇಕೇ ಬೇಕು ಅನ್ನಿಸಿತು.

ಮಡಿಕೇರಿ ತಲುಪಿ ಇಬ್ಬರು ಹೋಟೆಲ್‌ನಲ್ಲಿ ಕಾಫಿ ಕುಡಿಯುತ್ತಾ ಮೈಸೂರು ಪಯಣವನ್ನು ಮೆಲುಕು ಹಾಕಿದರು. ಅಭಿಮನ್ಯು ಅಕ್ಷರಳನ್ನು ಮನೆಗೆ ಕಳುಹಿಸಿ ಕಚೇರಿ ಕಡೆ ನಡೆದ. ಕಚೇರಿಯಲ್ಲಿ ರಾಹುಲ್ ಗೆಳೆಯನ ಆಗಮನಕ್ಕಾಗಿ ಕಾದು ಕುಳಿತ್ತಿದ್ದ.

ಎಲ್ಲಿ ಹಾಳಾಗಿ ಹೋಗಿದ್ದ್ದೆ ಬೆಳಗ್ಗಿಂದ? ಕೈಯಲ್ಲಿ ಏನೋ ಇದ್ದಂಗೆ ಇದೆ? ಓಹೋ… ನಾಳೆ ನಿನ್ನ ಬರ್ತ್‌ಡೇ ಅಲ್ವ. ಬಟ್ಟೆ ತಗೊಳ್ಳೋದಕ್ಕ್ಕೆ ಹೋಗಿದ್ದೀಯ? ಕೇಳಿದ ರಾಹುಲ್.

ಬಟ್ಟೆ ತಗೊಳ್ಳೋದಕ್ಕೆ ಹೋಗ್ಲಿಲ್ಲ. ಬಟ್ಟೆಯನ್ನ ಗಿಫ್ಟ್ ಕೊಡಿಸೋದಕ್ಕೆ ಅಕ್ಷರ ಮೈಸೂರಿಗೆ ಕಕೊಂಡೋಗಿದ್ಲು. ನಾಳೆ ದಿನ ಸಣ್ಣದೊಂದು ಬರ್ತ್‌ಡೇ ಪಾರ್ಟಿ ಇದೆ. ನಿನ್ಗೊಬ್ಬನಿಗೆ ಹೇಳೋದಕ್ಕೆ ಬಾಕಿ ಇತ್ತು. ಉಳಿದ ಎಲ್ಲರಿಗೂ ಹೇಳಿಯಾಗಿದೆ. ನೀನು ತಪ್ಪದೆ ಬಬೇಕು. ಅಕ್ಷರ ಕೂಡ ಪಾರ್ಟಿಯಲ್ಲಿ ಇತಾಳೆ. ಅಂದ ಅಭಿಮನ್ಯು ಬರ್ತ್‌ಡೆ ಪಾಟಿರ್ಯ ವಿಷಯವನ್ನು ಅಲ್ಲಿಗೆ ಬಿಟ್ಟು ಚಳಿ ದೂರ ಮಾಡಲು ಶಿವಾ ಅಂತ ಹೇಳಿ ಒಂದು ಪೆಗ್ಗ್ ಏರಿಸಿ ಬಿಡುವ ಅಂದ. ಇಬ್ಬರು ಬಾರ್ ಕಡೆಗೆ ನಡೆದರು. ಒಂದರ ಮೇಲೊಂದರಂತೆ ಪೆಗ್ಗ್‌ಗಳು ಏರಿಸಿ ಮಾತಿನಲ್ಲಿ ಮುಳುಗಿದರು.

ಅಭಿಮನ್ಯು, ನೀನು ತುಂಬಾ ಅದೃಷ್ಟವಂತ ಕಣೋ. ಎಂಥಾ ಒಳ್ಳೆಯ ಹುಡುಗಿ ಸಿಕ್ಕಿದ್ದಾಳೋ ನಿನ್ಗೆ. ಮೈಸೂರಿಗೆ ಕಕೊಂಡೋಗಿ ಗಿಫ್ಟ್ ಕೊಡಿಸಿದ್ದಾಳಲ್ಲೋ…!? ನನ್ಗಂತೂ ಹೊಟ್ಟೆ ಉರಿತಾ ಇದೆ. ನನ್ಗೆ ಅಂತ ಹುಡ್ಗಿ ಸಿಗ್ಲಿಲ್ವಲ್ಲ ಅಂತ. ಅವಳಿಗೇನು ಅವರಪ್ಪ ಸಾಕಷ್ಟು ಕೂಡಿಟ್ಟಿದ್ದಾರೆ. ಜೊತೆಗೆ ಒಂದು ಸರಕಾರಿ ಕೆಲಸ ಬೇರೆ. ದುಡ್ಡಿಗೇನು ಕೊರತೆ ಇಲ್ಲ. ದುಡ್ಡು ಹೇಗೆ ಖರ್ಚು ಮಾಡ್ಬೇಕೆಂಬುದೇ ಅವಳಿಗೆ ಚಿಂತೆ. ಗಿಫ್ಟ್ ಕೊಡಿಸೋದಕ್ಕೆ ಒಂದು ಸಣ್ಣ ಕಾರಣ ಸಿಕ್ಕರೂ ಸಾಕು. ತಕ್ಷಣವೇ ನಿನ್ಗೊಂದು ಗಿಫ್ಟ್ ತಂದುಕೊಡ್ತಾಳೆ. ಲವ್ ಮಾಡಿದ್ರೆ ಅಂತಹ ಹುಡುಗಿಯನ್ನೇ ಮಾಡ್ಬೇಕು. ಆದ್ರೆ ನನ್ಗೆ ಅಂಥ ಅದೃಷ್ಟ ಇನ್ನು ಒಲಿದಿಲ್ಲವಲ್ಲ. ನನ್ಗೂ ನಿನ್ನ ತರ ಲವ್ ಮಾಡ್ಬೇಕು, ಗಿಫ್ಟ್ ಪಟ್ಕೋಬೇಕೂಂತ ಅನ್ನಿಸ್ತಾ ಇದೆ ರಾಹುಲ್ ಮನದೊಳಗಿದ್ದ ಆಸೆಯನ್ನು ಹೊರಗೆಡವಿದೆ.

ಗಿಫ್ಟ್ ಆಸೆಗೆ ಕಂಡ, ಕಂಡ ಹುಡುಗಿಯರಿಗೆಲ್ಲ ಗಾಳ ಹಾಕ್ಲಿಕ್ಕೆ ಹೋಗ್ಬೇಡ ಗುರು. ನಿನ್ಗೆ ಗಿಫ್ಟ್ ಕೊಡೋ ಬದಲು ಚೆಂಬು ಕೊಟ್ಟು ಬಿಡ್ತಾರೆ ಅಷ್ಟೆ ಅಂದ ಅಭಿಮನ್ಯು ಗಿಫ್ಟ್ ಆಸೆ ಬೆನ್ನತ್ತಿ ಹೊರಟ ಗೆಳಯನನ್ನು ಎಚ್ಚರಿಸಿದ.

ನಾನೇನು ನಿನ್ನ ತರ ದಡ್ಡ ಅಂದ್ಕೊಡಿದ್ದೀಯ? ಬಹಳ ಬುದ್ದಿವಂತ ಕಣೋ ನಾನು, ಬಹಳ ಬುದ್ಧಿವಂತ. ಹುಡುಗಿಯರು ಯಾವತ್ತಾದರು ಒಂದು ದಿನ ಕೈಗೆ ಚೆಂಬು ಕೊಡ್ತಾರೆಂಬ ಸತ್ಯ ನನ್ಗೆ ಗೊತ್ತೇ ಇದೆ. ಅದ್ಕೋಸ್ಕರ ನಾನು ಯಾವ ಹುಡುಗಿಯರನ್ನೂ ಕಣ್ಣೆತ್ತಿ ನೋಡೋದಿಲ್ಲ. ಒಂದ್ವೇಳೆ ಎಲ್ಲಾದ್ರು ಅಪ್ಪಿತಪ್ಪಿ ನೋಡಿಬಿಟ್ರೆ ಹುಡುಗಿಯರು ಕ್ಯೂನಲ್ಲಿ ಬಂದು ನನ್ನೆದರು ನಿಲ್ತಾರೆ. ಆದ್ರೆ ಯಾಕೆ ಬೇಕೂಂತ ಸುಮ್ನೆ ಇದ್ದೀನಿ ದ್ರಾಕ್ಷಿ ಸಿಗಲಿಲ್ಲ ಎಂಬ ಕಾರಣಕ್ಕೆ ದ್ರಾಕ್ಷಿ ಹುಳಿ ಎಂದು ನಿರಾಸೆಯಿಂದ ಹೊರಟ ನರಿಯಂತಿತ್ತು ರಾಹುಲ್‌ನ ಮಾತು. ರಾಹುಲ್ ಅರೆ ಕ್ಷಣದಲ್ಲಿ ಮಾತು ಬದಲಾಯಿಸಿದ್ದನ್ನು ಕಂಡು ಅಭಿಮನ್ಯುವಿಗೆ ಆಶ್ಚರ್ಯದ ಜೊತೆಗೆ ನಗೂ ಬಂತು.

ಭಾರೀ ಪಟಿಂಗ ಕಣೋ ನೀನು. ಈಗತಾನೆ ಲವ್ ಮಾಡಿ ಹುಡುಗಿ ಕೈಯಿಂದ ಗಿಫ್ಟ್ ಪಡ್ಕೋ ಬೇಕೂಂತ ಹೇಳ್ತಾ ಇದ್ದೆ. ಅರೆಕ್ಷಣದಲ್ಲಿ ಮಾತು ಬದಲಾಯಿಸಿಬಿಟ್ಟೆಯಲ್ಲ? ನಿನ್ಗೂ ಈ ರಾಜಕೀಯದವರಿಗೂ ಯಾವುದಾದರು ವೆತ್ಯಾಸ ಉಂಟ? ನೀನು ರಾಜಕಾರಣಿಯಾಗಲು ಹೇಳಿ ಮಾಡಿಸಿದ ಜನ ಬಿಡು ಅಂದ ಅಭಿಮನ್ಯು ಮಾತಿನಿಂದ ರಾಹುಲ್‌ನ ರಾಜಕೀಯ ಪ್ರಜ್ಞೆ ಜಾಗೃತಗೊಂಡಿತು.

ಯಾರಿಗೆ ಗೊತ್ತು ಅಭಿಮನ್ಯು, ದೇವರು ನನ್ನ ಹಣೆಯಲ್ಲಿ ಏನು ಬರೆದಿದ್ದಾನೆ ಅಂತ. ಒಂದ್ವೇಳೆ ನಾನು ರಾಜಕೀಯಕ್ಕೆ ಧುಮುಕಿ ಟಿಕೆಟ್ ಗಿಟ್ಟಿಸಿಕೊಂಡು ಶಾಸಕನಾಗಿ, ಕೊನೆಗೆ ಮುಖ್ಯಮಂತ್ರಿ ಆದ್ರೂ ಆದೆ. ಒಂದ್ವೇಳೆ ನಾನೇನಾದ್ರು ಮುಖ್ಯಮಂತ್ರಿ ಆಗೋದ್ರೆ ನೀನೇ ಗೃಹಖಾತೆ ಸಚಿವ. ಏನಂತಿಯ? ಗೃಹಖಾತೆ ನಿನ್ಗೆ ಇಷ್ಟ ಇದೆ ತಾನೆ? ನಾಳೆ ದಿನ ಸುಮ್ನೆ ತಕರಾರರು ತೆಗಿಬಾದು ನೋಡು, ಮುಂಜಾಗ್ರತಾ ಕ್ರಮವಾಗಿ ಹೀಗ್ಲೇ ಹೇಳಿ ಬಿಟ್ಟೆ ರಾಹುಲ್ ರಾಜಕೀಯದ ಕನಸ್ಸು ಕಾಣತೊಡಗಿದ.

ಹೆಂಡ ಕುಡ್ದು ಹಗಲುಗನಸು ಕಾಣ್ಬೇಡ. ನೀನು ಮುಖ್ಯಮಂತ್ರಿಯಾಗೋ ವಿಚಾರ ಬಿಟ್ಟಾಕು. ಮೊದಲು ಗ್ರಾಮ ಪಂಚಾಯಿತಿ  ಸದಸ್ಯ ಆಗೋದಕ್ಕೆ ನೋಡೋಲೇ ಮೂರ್ಖ. ಹತ್ತಾರು ವರ್ಷಗಳಿಂದ ಪಕ್ಷದಲ್ಲಿ ದುಡಿದವರಿಗೆ ವಿಧಾನಸಭೆ ಪ್ರವೇಶಕ್ಕೆ ಪಕ್ಷದಲ್ಲಿ ಟಿಕೆಟ್ ಸಿಗೊಲ್ಲ. ಇನ್ನು ನಿನ್ನಂತವನಿಗೆ ಟಿಕೆಟ್ ಸಿಗೋದಕ್ಕೆ ಸಾಧ್ಯನಾ? ಸುಮ್ನೆ ಯಾಕೋ ಹುಚ್ಚುಚ್ಚಾಗಿ ಕಲ್ಪನೆ ಮಾಡ್ಕೊತ್ತಾ ಇದ್ದೀಯ?

ಸುಮ್ನೆ ತಮಾಷಿಗೆ ಹೇಳ್ದೆ ಕಣೋ. ಕನಸು ಕಾಣೋದಕ್ಕೇನು ದುಡ್ಡು ಕೊಡ್ಬೇಕಾ ಹೇಳು? ಏನು ಬೇಕಾದ್ರು ಕನಸು ಕಾಣು. ದೇವರು ಅದೊಂದನ್ನು ಮಾತ್ರ ಉಚಿತವಾಗಿ ಕೊಟ್ಟಿದ್ದಾನೆ. ಅದನ್ನು ಬಳಸಿಕೊಳ್ಳೋದು ಬಿಡೋದು ನಿನ್ಗೆ ಬಿಟ್ಟ ವಿಚಾರ. ಮುಖ್ಯಮಂತ್ರಿ ಆಗ್ಬೇಕೂಂತ ನನ್ಗೆ ಆಸೆ ಇದೆ. ಅದು ಈಡೇರುವ ಆಸೆ ಅಲ್ಲ ಅಂತ ನನ್ಗೂ ಕೂಡ ಗೊತ್ತು. ಕನಿಷ್ಠಪಕ್ಷ ಕನಸಿನಲ್ಲಾದರೂ ಮುಖ್ಯಮಂತ್ರಿಯಾಗೋಣ ಅಂತ ಕನಸು ಕಾಣ್ತಾ ಇದ್ದೇನೆ. ಅದರಲ್ಲಿ ತಪ್ಪೇನಿದೆ? ತನ್ನ ನಿಲುವನ್ನು ರಾಹುಲ್ ಬಲವಾಗಿ ಸಮರ್ಥಿಸಿಕೊಂಡ.

ಛೆ..ಛೇ…, ತಪ್ಪೇನು ಇಲ್ಲ ಬಿಡು. ನೀನು ಸರಿಯಾದ ದಿಕ್ಕಿನಲ್ಲಿಯೇ ಆಲೋಚನೆ ಮಾಡ್ತಾ ಇದ್ದೀಯ. ನಾನು ತಿಳಿಯದೆ ಏನೋ ಹೇಳ್ಬಿಟ್ಟೆ. ನೀನು ಮುಖ್ಯಮಂತ್ರಿಯಾದ ನಂತರ ನನ್ಗೆ ಸಚಿವ ಸ್ಥಾನ ನೀಡುವುದು ಬೇಡ. ಸಚಿವ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ಇರುತ್ತೆ. ‘ಮುಖ್ಯಮಂತ್ರಿ ರಾಹುಲ್ ಸ್ನೇಹಿತರಿಗೆ ಸಚಿವಸ್ಥಾನ ಹಂಚಿಕೆ ಮಾಡಿ ಪಕ್ಷದ ನಿಷ್ಟಾವಂತ ಕಾಯಕರ್ತರನ್ನು ಕಡೆಗಣಿಸಿದರು ಅಂತ ನಾಳೆ ದಿನ ದೊಡ್ಡ ಸುದ್ದಿ ಆಗೋದು ಬೇಡ. ಅದ್ಕೋಸ್ಕರ ಯಾವುದಾರೊಂದು ಕೆಲಸಕ್ಕೆ ಬಾರದ ನಿಗಮ, ಮಂಡಳಿಯ ಅಧ್ಯಕ್ಷ ಸ್ಥಾನ ಕೊಟ್ರೆ ಸಾಕು. ಅದರಲ್ಲಿಯೇ ತೃಪ್ತಿಪಟ್ಟುಕೊಳ್ತೇನೆ ರಾಹುಲ್‌ನನ್ನು ಛೇಡಿಸಿದ.

ಅಭಿಮನ್ಯು, ನೀನು ಏನೇ ಹೇಳು. ಕನಸು ಕಂಡ್ರೆ ಸಣ್ಣಪುಟ್ಟ ಕನಸು ಕಾಣ್ಬಾದು ಕಣೋ. ದಿಗಂತದೆತ್ತರಕ್ಕಿರುವ ಕನಸು ಕಾಣ್ಬೇಕು. ನೀನು ನೋಡಿದ್ರೆ ಕನಸಿಗೆ ದುಡ್ಡು ಕೊಡುವವನ ತರ ಮಾತಾಡ್ತಾ ಇದ್ದೀಯ. ಪುಕ್ಕಟೆಯಾಗಿ ಸಿಗೋದನ್ನೆಲ್ಲ ಪಟ್ಕೋಬೇಕು ಮಗ, ಅದು ನಿನ್ಗೆ ಗೊತ್ತಿಲ್ಲ ಬಿಡು. ಆ ವಿಷಯವೆಲ್ಲ ಸಾಯ್ಲಿ ಬಿಡು. ನಾಳೆ ದಿನ ನಿನ್ನ ಬರ್ತ್‌ಡೇ. ನನ್ಗಂತು ತುಂಬನೇ ಖುಷಿಯಾಗ್ತಾ ಇದೆ ಎಂದು ಅಭಿಮನ್ಯುವನ್ನು ತಬ್ಬಿ ಒಂದು ಸಿಹಿ ಮುತ್ತು ನೀಡಿದ.

ಬಾರ್‌ನಿಂದ ಹೊರಗೆ ಬರುತ್ತಿದ್ದಂತೆ ಇಬ್ಬರಿಗೂ ಆಕಾಶದಲ್ಲಿ ತೇಲಾಡುವ ಅನುಭವವಾಯಿತು. ಸ್ವಲ್ಪ ಅಳತೆಗಿಂತ ಜಾಸ್ತಿಯೇ ಕುಡಿದು ಅಲ್ಲೊಂದು ಇಲ್ಲೊಂದು ಹೆಜ್ಜೆ ಊರುತ್ತಾ ಬೈಕ್‌ನ ಕಡೆಗೆ ನಡೆದರು. ಇಬ್ಬರು ಯಮಹಾ ಬೈಕ್‌ನಲ್ಲಿ ಹತ್ತಿ ಕುಳಿತು ಹೊರಟರು. ಆದರೆ, ಎಲ್ಲಿಗೆ ಹೋಗುತ್ತಿದ್ದೇವೆ ಎಂಬ ಪರಿವೇ ಇರಲಿಲ್ಲ.  ಯಮಹಾ ಬೈಕ್ ಇಡೀ ನಗರಕ್ಕೆ ಕೇಳಿಸೋ ಹಾಗೆ ಶಬ್ದ ಮಾಡುತ್ತಾ ಮುನ್ನಡೆಯುತ್ತಿತ್ತು. ಬೈಕ್ ಸಾಗುತ್ತಿದ್ದ ವೇಗಕ್ಕೆ ಅಭಿಮನ್ಯುವಿಗೆ ತಲೆ ಸುತ್ತಿದ ಅನುಭವವಾಯಿತು. ಅವನ ಚಿತ್ತ ರಸ್ತೆಯ ಕಡೆಗೆ ನೆಟ್ಟಿತ್ತು. ಇದೇನು ಮಡಿಕೇರಿ ರಸ್ತೆ ಇಷ್ಟೊಂದು ಚೆಂದ ಆಗಿಬಿಟ್ಟಿದೆಯಲ್ಲ? ಅನ್ನಿಸಿ ತಡೆಯಲಾರದೆ ರೈಡ್ ಮಾಡುತ್ತಿದ್ದ ರಾಹುಲ್‌ನನ್ನು ತಟ್ಟಿ ಕೇಳಿದ.

ರಾಹುಲ್, ಇದೇನೋ ನಾನು ಮೈಸೂರಿಗೆ ಹೋಗಿ ಬರುವಷ್ಟರೊಳಗೆ ಮಡಿಕೇರಿಯಲ್ಲಿ ಡಬಲ್ ರೋಡ್ ಮಾಡ್ಬಿಟ್ಟಿದ್ದಾರೆ. ಈ ಸರಕಾರವನ್ನು ಮೆಚ್ಲೇಬೇಕು. ನೀನು ಮುಖ್ಯಮಂತ್ರಿಯಾಗಿದ್ರೂ ಕೂಡ ಇಷ್ಟೊಂದು ಅಭಿವೃದ್ಧಿ ಕೆಲಸವನ್ನ ಇಷ್ಟೊಂದು ಬೇಗ ಮಾಡಿ ಮುಗಿಸೋದಕ್ಕೆ ಸಾಧ್ಯವಾಗ್ತಾ ಇಲಿಲ್ಲ ಬಿಡು. ಹೀಗೆ ಅಭಿವೃದ್ಧಿ ಆಗಿಬಿಟ್ರೆ ಮಡಿಕೇರಿ ಬೆಂಗಳೂರಿಗಿಂತ ಮೊದ್ಲೇ ಸಿಂಗಾಪುರ ಆಗಿಬಿಡುತ್ತೆ ಬಿಡು ಅಂದ ಅಭಿಮನ್ಯುವಿಗೆ ಕುಡಿದ ಮತ್ತಿನಲ್ಲಿ ಒಂದಿದ್ದ ರಸ್ತೆ ಎರೆಡೆರಡಾಗಿ ಕಾಣತೊಡಗಿತು.

ಇಬ್ಬರು ಬೈಕ್‌ನಲ್ಲಿ ಇಡೀ ನಗರ ಪ್ರದಕ್ಷಿಣೆ ಹಾಕಿದ್ದಾಯ್ತು. ದೂರದಲ್ಲೆಲ್ಲೋ ಸಣ್ಣದೊಂದು ಜನರ ಗುಂಪು ಕಣ್ಣಿಗೆ ಕಾಣಿಸಿತು. ಗುಂಪಿನ ಕಡೆಗೆ ಬೈಕ್ ಸಾಗಿತು. ಗುಂಪು ಹತ್ತಿರವಾಗುತ್ತಿದ್ದಂತೆ ಗುಂಪಿನ ಹಿಂದೆ ಇರುವುದು ಗಣಪತಿ ತೇರು ಎಂದು ಇಬ್ಬರಿಗೆ ಮನವರಿಕೆ ಆಗಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಹುಡುಗರೆಲ್ಲ ತೇರಿನ ಮುಂದೆ ಮನಸ್ಸಿಗೆ ಬಂದಹಾಗೆ ಕುಣಿಯುತ್ತಿದ್ದರು. ಅಭಿಮನ್ಯು ಹಾಗೂ ರಾಹುಲ್ ಹುಡುಗರೊಂದಿಗೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ನಲಿದರು. ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದ ಯುವಕರ ಪೈಕಿ ಕೆಲವರು ಶಂಕರಾಚಾರಿಕೀ ಜೈ ಅಂತ ಆಗಿಂದಾಗೆ ಕೂಗುತ್ತಿದ್ದದ್ದು ಇಬ್ಬರ ಕಿವಿಗೂ ಕೇಳಿಸಿತು. ಇನ್ನು ಕೆಲವರು ಸಿಳ್ಳೆ ಹೊಡೆದು ಸಂಭ್ರಮಿಸುತ್ತಿದ್ದರು.

ಜನರಿಗೇನಾದ್ರು ತಲೆಕೆಟ್ಟೋಗಿದೆಯಾ? ಗಣೇಶೋತ್ಸವದಲ್ಲಿ ಗಣಪತಿಗೆ ಜೈಕಾರ ಹಾಕೋದು ಬಿಟ್ಟು ಅದ್ಯಾವನೋ ಶಂಕರಾಚಾರಿಗೆ ಜೈಕಾರ ಹಾಕುತ್ತಿದ್ದೀರಲ್ಲ? ಇತ್ತೀಚಿನ ವರ್ಷಗಳಲ್ಲಿ ಜನರಂತೂ ತುಂಬಾನೇ ಹಾಳಾಗಿ ಹೋಗಿದ್ದಾರೆ. ಗಣೇಶೋತ್ಸವಕ್ಕೆ ಶಂಕರಾಚಾರಿ ಸಾಕಷ್ಟು ಹಣ ಸುರಿದಿರಬೇಕು. ಬಹುಶಃ ಅದಕ್ಕೇ ಅವನಿಗೆ ಜೈಕಾರ ಹಾಕುತ್ತಾ ಇಬೊಹುದೆಂದು ಅಭಿಮನ್ಯು ಅಂದುಕೊಂಡ. ಅಂತೂ ಕುತೂಹಲ ತಡೆಯಲಾರದೆ ಕುಣಿಯುತ್ತಿದ್ದ ಒಂದಿಬ್ಬರು ಹುಡುಗರನ್ನು ತಡೆದು ನಿಲ್ಲಿಸಿ ಗಣಪತಿಗೆ ಜೈಕಾರ ಹಾಕುವ ಬದಲು ಶಂಕರಾಚಾರಿಗೆ ಯಾಕೆ ಜೈಕಾರ ಹಾಕ್ತಾ ಇದ್ದೀರ? ಎಂದು ಕೇಳಿದ. ಆದರೆ, ಯಾರೂ ಉತ್ತರ ನೀಡುವ ಪರಿಸ್ಥಿತಿಯಲ್ಲಿ ಇರಲಿಲ್ಲ.

ಹಾಳಾದ ಜನ ಮಾತಾಡೋದಕ್ಕೂ ಹಿಂದೆ-ಮುಂದೆ ನೋಡುತ್ತಾರೆ. ಆ ವಿಚಾರವೆಲ್ಲ ನಮ್ಗೆ ಯಾಕೆ? ಏನಾದ್ರು ಮಾಡ್ಕೊಂಡು ಹಾಳಾಗಿ ಹೋಗ್ಲಿ. ನಾವು ಬಂದಿರೋದು ಕುಣಿಯೋದಕ್ಕೆ. ಮನಸ್ಸಿಗೆ ಸಂತೋಷವಾಗುವಷ್ಟು ಕುಣಿಯುವ ಎಂದು ಮತ್ತೆ ತಾಳಕ್ಕೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದ.

ರಾಜಬೀದಿಯಲ್ಲಿ ಸಾಗಿ ಬರುತ್ತಿದ್ದ ತೇರು ಇದ್ದಕ್ಕಿದ್ದಂತೆ ರುದ್ರಭೂಮಿಯ ಕಡೆಗೆ ತೆರಳಲು ಪ್ರಾರಂಭಿಸಿತು. ಗಣೇಶನ ಹೊತ್ತೊಕೊಂಡು ಇದ್ಯಾಕ್ಕೆ ರುದ್ರಭೂಮಿಗೆ ಹೋಗುತ್ತಾ ಇದ್ದಾರೆಂದು ಒಮ್ಮೆ ಕಣ್ಣುಜ್ಜಿಕೊಂಡು ಇಬ್ಬರು ತೇರಿನ ಕಡೆಗೆ ದೃಷ್ಟಿ ಹಾಸಿದರು. ಹೆಣವಾಗಿದ್ದ ಶಂಕರಾಚಾರಿ ಹಾಯಾಗಿ ಮಲಗಿದ್ದ. ಶಂಕರಾಚಾರಿ ನೂರು ವಸಂತಗಳನ್ನು ಕಂಡು ಮೃತಪಟ್ಟ ಕಾರಣ ಆತನ ಹೆಣವನ್ನು ಮಣ್ಣು ಮಾಡುವ ಮೊದಲು ನಡೆಯುವ ಶವ ಯಾತ್ರೆಯಲ್ಲಿ ಹುಡುಗರೆಲ್ಲ ಕುಣಿಯುತ್ತಿದ್ದರು. ಮದ್ಯದ ನಶೆಯಲ್ಲಿದ್ದ ಅಭಿಮನ್ಯು, ರಾಹುಲ್‌ಗೆ ಶವಯಾತ್ರೆ ಗಣಪತಿ ತೇರಿನಂತೆ ಕಂಡಿತು. ಕೆಲ ಸಮಯ ಪ್ರಜ್ಞೆ ಕಳೆದುಕೊಂಡವರಂತೆ ಆ ಶವಯಾತ್ರೆಯನ್ನೇ ನೋಡುತ್ತಾ ನಿಂತರು. ಸ್ವಲ್ಪ ಹೊತ್ತಿನ ಬಳಿಕ ಸುಧಾರಿಸಿಕೊಂಡು ಅತ್ತ ಕಡೆ ತಿರುಗಿ ಸಹ ನೋಡದೆ ಬೈಕ್‌ನಲ್ಲಿ ಶರವೇಗದಲ್ಲಿ ಹಿಂತಿರುಗಿದರು.

ಛೇ… ಎಂಥಾ ಅವಸ್ಥೆಯಾಗಿ ಬಿಡ್ತಲ್ಲ. ಕುಡಿದ ಅಮಲು ತಲೆಯಿಂದ ಒಂದೇ ಏಟಿಗೆ ಇಳ್ದೋಯ್ತು. ಕುಡಿದದ್ದೆಲ್ಲ ವೇಸ್ಟ್ ಆಗೋಯ್ತು ಎಂದು ಇಬ್ಬರು ತಮ್ಮ ತಮ್ಮ ಮುಖನೋಡಿಕೊಂಡು ನಕ್ಕು ಮನೆಯ ಹಾದಿ ಹಿಡಿದರು.
*  *  *

ಅಭಿಮನ್ಯುವಿನ ಹಾದಿ ಕಾಯುತ್ತಾ ವಾತ್ಸಲ್ಯ ಮನೆಯಲ್ಲಿ ಕುಳಿತ್ತಿದ್ದರು. ವಿದ್ಯುತ್ ಇರಲಿಲ್ಲ. ಮನೆಯೊಳಗೆ ಗ್ಯಾಸ್‌ಲೈಟ್ ಉರಿಯುತಿತ್ತು.

ಏನ್ ಮಗ ಕೈಯಲ್ಲಿ ವಾತ್ಸಲ್ಯ ಕೇಳಿದರು.

ಏನಿಲ್ಲಮ್ಮ, ಅಕ್ಷರ ಬರ್ತ್‌ಡೇಗೆ ಗಿಫ್ಟ್ ಕೊಟ್ಟಿದ್ದಾಳೆ. ನೋಡು ಹೇಗಿದೆ? ಚೆನ್ನಾಗಿದೆಯಾ?

ಆ ಹುಡುಗಿ ಏನು ಕೊಟ್ರೂ ಹೊತ್ಕೊಂಡು ಬತಿಯಲ್ಲ. ನಿನ್ಗೆ ನಾಚಿಕೆಯಾದ್ರೂ ಆಗೊಲ್ವ? ಅವಳ ಕೈಯಿಂದ ಆಗಿಂದಾಗೆ ಗಿಫ್ಟ್ ಕೇಳ್ಕೊಂಡು ಬರೋದನ್ನ ನೋಡ್ತನೇ ಇತಿನಿ. ಆದರೆ, ಒಂದು ದಿನನಾದ್ರೂ ನೀನು ಅವಳಿಗೇನಾದ್ರು ಗಿಫ್ಟ್ ಕೊಟ್ಟಿದ್ದೀಯ?

ಹೆಣ್ಮಕ್ಕಳ ಕೈಯಿಂದ ಹೀಗೆ ಪದೇ ಪದೆ ಗಿಫ್ಟ್ ಪಡ್ಕೊಂಡು ಬರೋದು ನಾಚಿಕೆಗೇಡು. ಹುಡುಗರು ಹುಡುಗಿಯರಿಗೆ ಗಿಫ್ಟ್ ಕೊಡ್ಬೇಕು ಮಗ. ಆದ್ರೆ ನೀನ್ಯಾವತ್ತೂ ಆ ಕೆಲ್ಸ  ಮಾಡ್ಲೇ ಇಲ್ಲ ಅಂಥ ನನ್ಗೆ ಅನ್ನಿಸ್ತಾ ಇದೆ ಸಂಭ್ರಮದಿಂದ ಗಿಫ್ಟ್‌ಹೊತ್ತುಕೊಂಡು ಬಂದ ಮಗನನ್ನು ಕೂರಿಸಿ ಬುದ್ಧಿವಾದ ಹೇಳಿದರು ವಾತ್ಸಲ್ಯ.

ಹೌದಲ್ವ? ನನ್ಗೇಕೆ ಈ ವಿಷಯ ಹೊಳೆಯಲೇ ಇಲ್ಲ. ನನ್ನಿಂದ ಏನಾದ್ರು ಗಿಫ್ಟ್ ಸಿಗಬಹುದೆಂದು ಅಕ್ಷರ ಎಷ್ಟೊಂದು ನಿರೀಕ್ಷೆ ಇಟ್ಟುಕೊಂಡಿರಬಹುದು? ಆದರೆ, ಒಂದೇ ಒಂದು ದಿನ ಒಂದು ಸಣ್ಣ ಗಿಫ್ಟ್ ಕೂಡ ಕೊಡಿಸಲು ಈ  ಹಾಳಾದ ತಲೆಗೆ ಹೊಳೆಯಲೇ ಇಲ್ವಲ್ಲ್ಲ? ಸಾಧ್ಯವಾದ್ರೆ ನಾಳೆನೇ ಆಕೆಗೊಂದು ಗಿಫ್ಟ್ ಕೊಡಿಸಬೇಕು ಅಂದುಕೊಂಡ. ಆದರೆ, ಮನದೊಳಗೆ ಮೂಡಿ ಬಂದ ವಿಚಾರವನ್ನು ಅಮ್ಮನ ಎದುರು ಮಾತ್ರ ತೆರೆದಿಡಲು ಅಭಿಮನ್ಯು ಮುಂದಾಗಲಿಲ್ಲ.

ನೀನು ಸ್ವಲ್ಪ ಸುಮ್ನೆ ಇರಮ್ಮ. ಹುಡುಗಿಯರ ಕೈಯಲ್ಲಿ ಗಿಫ್ಟ್ ತಗೋಬಾದು ಅಂಥ ಯಾರಾದ್ರು ಶಾಸನ ಬರೆದಿಟ್ಟಿದ್ದಾರಾ? ನಾನೇನು ಗಿಫ್ಟ್ ಕೊಡು ಅಂಥ ಅವಳನ್ನ ಕೇಳ್ಲಿಲ್ಲ. ಅವಳೇ ಕಕೊಂಡೋಗಿ ಗಿಫ್ಟ್ ಕೊಡಿಸಿದ್ದಾಳೆ. ನಾನು ಎಷ್ಟು ಹೇಳಿದ್ರೂ ಕೇಳ್ಲಿಲ್ಲ. ಅವಳು ತುಂಬಾ ಹಟಮಾರಿ. ಗಿಫ್ಟ್ ತಗೊಳ್ಳಲ್ಲ ಅಂದ್ರೆ ಕೋಪ ಮಾಡ್ಕೋತ್ತಾಳೆ. ಅವಳ ಮನಸ್ಸಿಗೇಕೆ ನೋವು ಮಾಡೋದು ಅಂಥ ಗಿಫ್ಟ್ ತಗೊಂಡೆ. ಇದರಲ್ಲಿ ತಪ್ಪೇನಿದೆ. ನೀನಿನ್ನೂ ಹಳೆಯ ಕಾಲದಲ್ಲಿಯೇ ಇದ್ದೀಯ ಅಮ್ಮನ ಪ್ರಶ್ನೆಗೆ ಅರ್ಥವಿಲ್ಲದ ಉತ್ತರ ನೀಡಿ ಸುಮ್ಮನಾದ.

ಬಾತ್‌ರೂಂನಲ್ಲಿ ವಾತ್ಸಲ್ಯ ಬಿಸಿನೀರು ಕಾಯಿಸಿಟ್ಟಿದ್ದರು. ಅಭಿಮನ್ಯು ಬಿಸಿನೀರಿಗೆ ತಣ್ಣೀರು ಸುರಿದುಕೊಂಡು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ಹೊರ ಬಂದ. ಸ್ವಲ್ಪ ಹೊತ್ತು ಸೋಫಾದ ಮೇಲೆ ಕುಳಿತು ಏನೋ ಗಂಭೀರವಾಗಿ ಯೋಚಿಸುವವನಂತೆ ಕುಳಿತು ಎದುರಿಗಿನ ಟೇಬಲ್ ಮೇಲೆ ಕಣ್ಣಾಡಿಸಿದ. ದಿನನಿತ್ಯದ ಸುಪ್ರಭಾತದಂತೆ ಮುಖಪುಟದಲ್ಲಿ ಅದೇ ಹೊಲಸು ರಾಜಕೀಯದ ಸುದ್ದಿ ರಾರಾಜಿಸುತಿತ್ತು. ಎಲ್ಲಾ ಪುಟಗಳನ್ನು ಒಮ್ಮೆ ತಿರುವಿ ಹಾಕಿ ಹೆಡ್‌ಲೈನ್ಸ್‌ಗಳನ್ನು ಓದಿ ಪೇಪರನ್ನು ಟೇಬಲ್ ಮೇಲಿಟ್ಟು ಅಮ್ಮನೆಡೆಗೆ ತಿರುಗಿ.

ಅಮ್ಮ ನಾಳೆ ಬೆಳಗ್ಗೆ ದೇವಸ್ಥಾನಕ್ಕೆ ಹೋಗ್ತಾ ಇದ್ದೀನಿ. ನೀನು ಬತಿಯ? ಅಕ್ಷರ ಕೂಡ ಬತಾಳೆ. ನೀನು ಬಂದ್ಬಿಡು. ನಿನ್ನ ನೋಡ್ಬೇಕೂಂತ ಆಸೆ ಪಡ್ತಾ ಇದ್ದಾಳೆ. ಬತಿಯಲ್ವ? ಎಂದು ಕೇಳಿ ಅಮ್ಮನ ಉತ್ತರಕ್ಕಾಗಿ ಕಾದ.

ಗಂಡ ಮೃತಪಟ್ಟು ಹಣೆಯ ಮೇಲಿದ್ದ ಸಿಂಧೂರ ತಿಲಕ ಅಳಿಸಿ ಹೋದ ನಂತರ ವಾತ್ಸಲ್ಯ ದೇವಾಲಯಕ್ಕೆ ಕಾಲಿಟ್ಟದ್ದೇ ಇಲ್ಲ. ಹಾಗಂತ ದೇವರ ಬಗ್ಗೆ ತಿರಸ್ಕಾರವೇನು ಇಲ್ಲ. ಮನೆಯಲ್ಲಿಯೇ ದೇವರಿಗೆ ಪೂಜೆ ಸಲ್ಲಿಸಿ ಅದರಲ್ಲಿಯೇ ಸಂತೃಪ್ತಿ ಕಂಡುಕೊಳ್ಳುತ್ತಿದ್ದರು. ಮಗ ದೇವಾಲಯಕ್ಕೆ ಬರುವಂತೆ ಕೊರಿಕೊಂಡರೂ ಆಕೆ ಒಪ್ಪಲಿಲ್ಲ.

ನಾನು ಬರೋದಿಲ್ಲ ಮಗ, ನೀನು ಹೋಗಿ ಬಾ. ಹೇಗಿದ್ದರು ನಿನ್ನ ಜೊತೆ ಅಕ್ಷರ ಇದ್ದೇ ಇತಾಳಲ್ಲ? ನಿನ್ನ ಬಾಲದಂತೆ. ಎಲ್ಲಿ ಹೋದ್ರೂ ಹಿಂಬಾಲಿಸ್ತನೇ ಇತಾಳೆ. ಮತ್ತೆ ನಾನ್ಯಾಕೆ ಬಬೇಕು ಹೇಳು? ಇಬ್ಬರು ಹೋಗಿ ದೇವರ ಆಶೀರ್ವಾದ ಪಡ್ಕೊಂಡು ಬನ್ನಿ. ದೇವರು ಒಳ್ಳೆಯದು ಮಾಡ್ಲಿ ಅಂದರು.

ಮಗನಿಗೆ ಊಟ ಬಡಿಸಿ ವಾತ್ಸಲ್ಯ ನಿದ್ರೆಗೆ ಜಾರಿದರು. ಅಭಿಮನ್ಯು ಊಟ ಮುಗಿಸಿ ಅಕ್ಷರ ಕೊಟ್ಟ ಗಿಫ್ಟ್‌ನೊಂದಿಗೆ ಬೆಡ್‌ರೂಂ ಕಡೆ ನಡೆದ. ಸಂಭ್ರಮದಿಂದ ಕವರ್‌ನೊಳಗಿದ್ದ ಪ್ಯಾಂಟ್, ಶರ್ಟ್ ಹೊರ ತೆಗೆದು ಮುಟ್ಟಿ ನೋಡಿ ಸಂತಸಪಟ್ಟ. ಎಷ್ಟೊಂದು ಸುಂದರವಾಗಿದೆಯಲ್ವ? ಎಂದು ತನ್ನನ್ನು ತಾನೆ ಪ್ರಶ್ನಿಸಿಕೊಂಡು ಸುಂದರವಾಗಿದೆ. ಎಷ್ಟೇ ಆದ್ರೂ ನನ್ನಾಕೆಯ ಸೆಲೆಕ್ಷನ್ ತಾನೆ ಅಂದುಕೊಂಡ. ಹೊಸ ಪ್ಯಾಂಟ್, ಶರ್ಟ್ ಮೈಗೆ ಹೊಂದಿಕೆಯಾಗುತ್ತದೆಯೇ ಎಂದು ನೋಡಲು ಹೊಸಬಟ್ಟೆ ಹಾಕಿಕೊಂಡು ಕನ್ನಡಿಯ ಎದುರು ನಿಂತು ಎಷ್ಟೊಂದು ಸುಂದರವಾಗಿ ಕಾಣ್ತಾ ಇದ್ದಿಯಲ್ಲೋ ಅಭಿ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡ. ಹೊಸಬಟ್ಟೆ ತೊಟ್ಟ ಸಂಭ್ರಮದಲ್ಲಿ ಬೆಡ್‌ರೂಂನಲ್ಲಿ ಅತ್ತಿಂದಿತ್ತ ಓಡಾಡಿದ ನಂತರ ಛೇ, ಇಷ್ಟೊಳ್ಳೆ ಬಟ್ಟೆಯನ್ನ ಈ ರಾತ್ರಿನೇ ಹಾಕ್ಕೊಳ್ಬೇಕಾಗಿತ್ತಾ? ಬೆಳಗ್ಗೆ ಹಾಕ್ಕೊಂಡಿದ್ರೆ ಚೆನ್ನಾಗಿತಾ ಇತ್ತು ಎಂದು ಬಟ್ಟೆಯನ್ನು ಕಳಚಿ ಜೋಪಾನವಾಗಿ ಮಡಚಿಟ್ಟು ಸೊಂಟಕ್ಕೆ ಪಂಚೆ ಸುತ್ತಿಕೊಂಡು ನಿದ್ರೆಗೆ ಜಾರಿದ.

ಸೂರ್ಯೋದಯಕ್ಕೂ ಮುನ್ನ ಅಕ್ಷರ ಫೋನಾಯಿಸಿ ಅಭಿಮನ್ಯುವಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದಳು. ನಾನೇ ತಾನೆ ನಿನ್ಗೆ ಫಸ್ಟ್ ವಿಷ್ ಮಾಡಿದ್ದು. ಬೇರೆ ಯಾರಾದ್ರು ಫೋನ್ ಮಾಡಿದ್ರಾ? ಎಂಬ ಪ್ರಶ್ನೆ ಬೇರೆ.

ಹೌದಪ್ಪ… ನೀನೇ ಫಸ್ಟ್ ವಿಷ್ ಮಾಡಿದ್ದು. ನೀನಲ್ದೆ ಇನ್ಯಾರು ತಾನೆ ಬೆಳಗ್ಗೆ ಕೋಳಿ ಕೂಗೂವುದಕ್ಕಿಂತ ಮುಂಚೆ ಎದ್ದು ವಿಷ್ ಮಾಡೋದಕ್ಕೆ ಸಾಧ್ಯ ಹೇಳು? ಬೆಳಗ್ಗೆ ಎಂಟು ಗಂಟೆಯೊಳಗೆ ದೇವಾಲಯಕ್ಕೆ ಬಂದ್ಬಿಡು. ಅಲ್ಲೇ ಭೇಟಿಯಾಗುವ. ಅಂದಹಾಗೆ ಇವತ್ತಿನ ಪಾರ್ಟಿಗೆ ಬತಿಯ ಅಲ್ವ? ಇವತ್ತು ಕಚೇರಿಗೆ ರಜೆ ಹಾಕಿ ಬಿಡು ಅಂದ ಅಭಿಮನ್ಯು.

ಇವತ್ತು ಕಚೇರಿಗೆ ಹೋಗದಿದ್ರೆ ಅಮ್ಮ ಮನೆಯಲ್ಲಿ ರಗಳೆ ಶುರು ಮಾಡಿ ಬಿಡ್ತಾರೆ. ನಿನ್ನ ಬರ್ತ್‌ಡೇ ಇರುವಾಗ ಕಚೇರಿಗೆ ಹೇಗೆ ಹೋಗೋದಕ್ಕೆ ಸಾಧ್ಯ ಹೇಳು? ಕಚೇರಿಗೆ ಹೊರಡುವ ಹಾಗೆ ನಾಟಕವಾಡಿ ಮನೆಯಿಂದ ಹೊರಟು ಬತಿನಿ. ಸಂಜೆ ಮನೆಗೆ ಹೋದ್ರೆ ಆಯ್ತು. ಇವತ್ತು ನೀನೇ ತಿಂಡಿ, ಊಟ ಎಲ್ಲಾ ಕೊಡಿಸ್ಬೇಕು. ಗೊತ್ತಾಯ್ತಾ? ಇನ್ನೂ ಮಲ್ಕೊಂಡಿಬೇಡ. ಬೇಗ ಎದ್ದು ರೆಡಿಯಾಗು. ನಾನು ದೇವಾಲಯದಲ್ಲಿ ನಿಗ್ಗೋಸ್ಕರ ಕಾಯ್ತಾ ಇತೇನೆ ಅಂದಳು.

ಅಭಿಮನ್ಯು ಎದ್ದು ಶುಚಿಯಾಗಿ ಅಕ್ಷರ ಕೊಟ್ಟ ಉಡುಗೆ ತೊಟ್ಟು ಬೆಳಗ್ಗೆ ಮನೆಯ ಮುಂಭಾಗಿಲಿನಲ್ಲಿ ಬಿದ್ದಿದ್ದ ದಿನ ಪತ್ರಿಕೆಯನ್ನು ಕೈಗೆತ್ತಿಕೊಂಡು ಸ್ವಲ್ಪ ಹೊತ್ತು ಓದುತ್ತಾ ಕುಳಿತ. ಗಡಿಯಾರದಲ್ಲಿ ಗಂಟೆ ಎಂಟು ಬಾರಿಸುತ್ತಿದ್ದಂತೆ ಮನೆಯಿಂದ ದೇವಾಲಯದ ಕಡೆಗೆ ನಡೆದ.

ದೇವಾಲಯದ ಮುಂಭಾಗದಲ್ಲಿ ಅಕ್ಷರ ಅಭಿಮನ್ಯುವಿನ ಹಾದಿ ಕಾಯುತ್ತಾ ಕುಳಿತ್ತಿದ್ದಳು. ಅಭಿಮನ್ಯುವನ್ನು ಕಂಡೊಡನೆ  ಬರಸೆಳೆದು ಅಪ್ಪಿಕೊಂಡು ಮುತ್ತಿಡಬೇಕೆಂದು ಆಕೆಗೆ ಅನ್ನಿಸಿತು. ಛೇ.. ದೇವಾಲಯಕ್ಕೆ ಬಂದು ತಲೆಯೊಳಗೆ ಏನೇನೋ ಹೊಳೆಯ್ತಾ ಇದೆಯಲ್ಲ? ಅಂದುಕೊಂಡು ತನ್ನ ತಲೆಗೆ ತಾನೇ ಒಂದು ಪೆಟ್ಟುಕೊಟ್ಟು ಎಂಥಾ ಹುಚ್ಚಿ ನಾನು ಎಂದು ಮನದೊಳಗೆ ನಕ್ಕಳು.

ಅಭಿ, ನೀನು ಬರ್ತ್‌ಡೇ ಆಚರಿಸಿಕೊಳ್ಳುವ ತರನೇ ಕಾಣ್ತಾ ಇಲ್ಲ. ಎಲ್ಲಿ ನಿನ್ನ ‘ಬರ್ತ್‌ಡ್ರೆಸ್ ಕಾಣ್ತನೇ ಇಲ್ಲ? ಕೆಣಕಿದಳು. ಹಾಕ್ಕೊಂಡಿದ್ದೀನಲ್ಲ. ಕಣ್ಣಿಗೆ ಕಾಣಿಸ್ತಾ ಇಲ್ವ? ನಿನ್ನೆ ಮೈಸೂರಿಗೆ ಕಕೊಂಡೋಗಿ ನೀನೇ ಕೊಡಿಸಿದ ಡ್ರೆಸ್ ಇದು. ಅಷ್ಟು ಬೇಗ ಮರೆತು ಬಿಟ್ಯಾ? ಆಕೆಯ ದ್ವಂದ್ವಾರ್ಥದ ಪ್ರಶ್ನೆಗೆ ಮುಗ್ಧನಂತೆ ಉತ್ತರಿಸಿದ.

ನೀನು ಹೇಳ್ತಾ ಇರೋದು ನಾನು ಕೊಟ್ಟ ಡ್ರೆಸ್ ಬಗ್ಗೆ. ನಾನು ಹೇಳ್ತಾ ಇರೋದು ನಿನ್ನ ‘ಬರ್ತ್‌ಡ್ರೆಸ್ ಬಗ್ಗೆ. ಇನ್ನೂ ಅರ್ಥವಾಗಿಲ್ವೆನೋ ಕೋತಿ. ಬರ್ತ್‌ಡ್ರೆಸ್ ಅಂದ್ರೆ ‘ಬೆತ್ಲೆಡ್ರೆಸ್ ಅಂಥ ಅರ್ಥ. ನೀನು ಆ ಡ್ರೆಸ್‌ನಲ್ಲಿ ಬಂದಿದ್ರೆ ಇನ್ನೂ ಚೆನ್ನಾಗಿತಾ ಇತ್ತು ನೋಡು… ಎಂದು ಹೇಳಿ ಹೊಟ್ಟೆತುಂಬ ನಕ್ಕಳು.

ದೇವಸ್ಥಾನಕ್ಕೆ ಬಂದ್ರೂ ಕೂಡ ನಿನ್ನ ತಲೆ ಬಿಡೋದಿಲ್ಲ. ನಡಿ ಹೋಗೋಣ ಎಂದು ಆಕೆಯನ್ನು ದೇವಾಲಯಕ್ಕೆ ಕರೆದೊಯ್ದ. ದೇವರನ್ನು ನಂಬದ ಅಭಿಮನ್ಯುವಿಗೆ ಅಕ್ಷರಳ ಸಹವಾಸದಿಂದ ದೇವರ ಬಗ್ಗೆ ಎಲ್ಲಿಲ್ಲದ ಭಕ್ತಿ ಮೊಳಕೆಯೊಡೆಯಿತು. ಹುಟ್ಟು ಹಬ್ಬದ ದಿನದಂದು ಯಾವ ವರ್ಷನೂ ಕೂಡ ಅಭಿಮನ್ಯು
ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದವನಲ್ಲ. ಸ್ನೇಹಿತರೊಂದಿಗೆ ರಾತ್ರಿ ಪಾರ್ಟಿಯಲ್ಲಿ ಕಳೆದು ಬಿಡುತ್ತಿದ್ದ. ಇತ್ತೀಚೆಗಂತೂ ಅವನ ಬದುಕಿನ ಶೈಲಿಯನ್ನೇ ಆಕೆ ಬದಲಿಸಿ ಬಿಟ್ಟಳು.

ದೇವಾಲಯದಲ್ಲಿ ಸಾಕಷ್ಟು ಭಕ್ತಾದಿಗಳು ನೆರೆದಿದ್ದರು. ಎಲ್ಲರು ಶ್ರದ್ಧಾ, ಭಕ್ತಿಯೊಂದಿಗೆ ದೇವರಿಗೆ ತಲೆ ಬಾಗಿ ನಮಿಸುತ್ತಿದ್ದರು. ಒಂದಷ್ಟು ಜನ ದೇವರಿಗೆ ಅಡ್ಡ ಬಿದ್ದು ನಮಿಸುತ್ತಾ ಅವರವರ ಕಷ್ಟಕಾರ್ಪಣ್ಯಗಳನ್ನು ದೇವರ ಬಳಿ ತೋಡಿಕೊಳ್ಳುತ್ತಿದ್ದರು. ಅಭಿಮನ್ಯು, ಅಕ್ಷರ ಇಬ್ಬರು ಎಲ್ಲರಂತೆ ದೇವರಿಗೆ ನಮಿಸಿ ಪೂಜೆ ಸಲ್ಲಿಸಿ ದೇವಾಲಯದ ಆವರಣದಲ್ಲಿ ಒಂದಷ್ಟು ಹೊತ್ತು ಕುಳಿತು ಹೊರ ಬಂದರು.

ಅಕ್ಷರ, ತುಂಬಾ ದಿನಗಳಿಂದ ನನ್ನ ಅಮ್ಮನ ನೋಡ್ಬೇಕೂಂತ ಆಸೆ ಪಡ್ತಾ ಇದ್ದೆಯಲ್ಲ. ಇವತ್ತು ಬಾ ಮನೆಗೆ ಕಕೊಂಡೋಗ್ತಿನಿ. ಅಮ್ಮ ನಿನ್ನ ಬಗ್ಗೆ ತುಂಬಾ ಅಭಿಮಾನ ಇಟ್ಟುಕೊಂಡಿದ್ದಾರೆ ಅಂದ ಅಭಿಮನ್ಯು ಅಕ್ಷರಳನ್ನು ಮನೆಗೆ ಕರೆದೊಯ್ದ.

ಪುಟ್ಟದಾದ ಒಂದು ಮನೆ. ಮನೆ ತುಂಬಾ ಸಣ್ಣದಾಗಿದ್ದರೂ ವಾತ್ಸಲ್ಯ ತುಂಬಾ ಶ್ರದ್ಧೆಯಿಂದ ಮನೆಯನ್ನು ಅಚ್ಚುಕಟ್ಟಾಗಿ ಇಟ್ಟಿದ್ದರು. ಮನೆಯ ಅಂಗಳದ ಮುಂಭಾಗದಲ್ಲಿ ತುಂಬಾ ಶ್ರದ್ಧೆಯಿಂದ ಬೆಳೆಸಿದ ಹೂ ತೋಟದಲ್ಲಿ ಗಿಡಗಳೆಲ್ಲ ಹೂ ಬಿಟ್ಟು ಗಮ್ಮೆನ್ನುತ್ತಿದ್ದವು. ಪುಟ್ಟದಾದ ಹೂ ತೋಟ ಆ ಮನೆಗೊಂದು ಮೆರಗು ನೀಡುತಿತ್ತು. ಮನೆಯ ಅಂಗಳದಲ್ಲಿದ್ದಲ್ಲಿಯೇ ನಿಂತಿದ್ದ ವಾತ್ಸಲ್ಯ ಇಬ್ಬರನ್ನು ಮನೆಯೊಳಗೆ ಕರೆದೊಯ್ದರು. ಮನೆಯೊಳಗೆ ಕಾಲಿಡುತ್ತಿದ್ದಂತೆ ಅಕ್ಷರ ವಾತ್ಸಲ್ಯ ಅವರ ಪಾದಮುಟ್ಟಿ ನಮಸ್ಕರಿಸಿ ಆಶೀರ್ವಾದ ಮಾಡಿ ಎಂದು ಕೇಳಿಕೊಂಡಳು.

ವಾತ್ಸಲ್ಯ ಒಂದು ಕ್ಷಣ ಆಘಾತಕ್ಕೆ ಒಳಗಾಗಿ ಚೇತರಿಸಿಕೊಂಡು ಆಕೆಯನ್ನು ಎಬ್ಬಿಸಿ ನೂರು ಕಾಲ ಸುಖವಾಗಿ ಬಾಳಮ್ಮ ಎಂದು ಹರಸಿದರು.

ಅಕ್ಷರ ತನ್ನ ಕಾಲಿಗೆ ಬಿದ್ದದ್ದು ವಾತ್ಸಲ್ಯ ಅವರಿಗೆ ಇರಿಸು ಮುರಿಸಾಯಿತು. ಅಗರ್ಭ ಶ್ರೀಮಂತ ಮನೆತನದ ಹೆಣ್ಣು ಮಗಳು ನನ್ನ ಕಾಲಿಗೆ ಬಿದ್ದುಬಿಟ್ಟಳಲ್ಲ? ನಾನೇ ಅವಳ ಕಾಲು ಹಿಡ್ಕೋ ಬೇಕು. ಅಂತದರಲ್ಲಿ ಯಾವುದೇ ಸಂಕೋಚವಿಲ್ಲದೆ ಕಾಲು ಹಿಡಿದು ಆಶೀರ್ವಾದ ಮಾಡುವಂತೆ ಕೇಳಿಕೊಂಡಳಲ್ಲ.! ಎಂಥಾ ದೊಡ್ಡ ಗುಣ ಅವಳದ್ದು! ಹುಡುಗಿ ಎಲ್ಲೇ ಇದ್ದರೂ ಸುಖವಾಗಿ ಬಾಳುತ್ತಾಳೆ. ಅಂತಹ ಒಂದು ವಿನಯ ಆಕೆಯಲ್ಲಿದೆ ಅಂದುಕೊಂಡರು.

ನೀನು ಈ ಬಡವರ ಮನೆಗೆ ಬತಿಯ ಅಂಥ ನಾನು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ನಿಂದು ತುಂಬಾ ದೊಡ್ಡ ಗುಣ ಅಮ್ಮ. ಶ್ರೀಮಂತ ಮನೆಯಲ್ಲಿ ಹುಟ್ಟಿದ್ರೂ ಒಂದು ಚೂರು ಅಹಂ ಇಲ್ಲ. ನೀನು ಎಲ್ಲೇ ಇದ್ರೂ ಸುಖವಾಗಿತಿಯ. ಬಡವರ ಮನೆ. ವ್ಯವಸ್ಥೆ ಅಷ್ಟೊಂದು ಅಚ್ಚುಕಟ್ಟಾಗಿಲ್ಲ. ಬೇಸರ ಮಾಡ್ಕೋ ಬೇಡ. ಇಬ್ಬರು ಮಾತಾಡ್ತಾ ಇರಿ. ನಾನೋಗಿ ತಿಂಡಿ ತತೇನೆ ಎಂದು ವಾತ್ಸಲ್ಯ ಅಡುಗೆ ಮನೆಯ ಕಡೆಗೆ ನಡೆದರು.

ವಾತ್ಸಲ್ಯ ಅಡುಗೆ ಮನೆಯ ಕಡೆಗೆ ಹೋಗುತ್ತಿದ್ದಂತೆ ಅಭಿಮನ್ಯು ಅಕ್ಷರಳಿಗೆ ತಿವಿದು ನೀನ್ಯಾಕೆ ಅಮ್ಮನ ಕಾಲಿಗೆ ಬೀಳೋದಕ್ಕೆ ಹೋದೆ. ನಾನೇನಾದ್ರು ಹೇಳಿದ್ನಾ? ತುಸು ಅಸಮಾಧಾನದಿಂದ ಕೇಳಿದ.

ನಿನ್ಗೆಲ್ಲ ಅದು ಅರ್ಥವಾಗೋಲ್ಲ. ನಿನ್ನಮ್ಮ ನಾಳೆ ದಿನ ನನ್ಗೆ ಅತ್ತೆ ಆಗುವವರು. ಅದ್ಕೆ ಇವಾಗ್ಲೇ ಪೂಸಿ ಹೊಡ್ದು ಇಟ್ಕೋಬೇಕು ಎಂದು ಅಭಿಮನ್ಯುವಿನ ಕಿವಿಯ ಬಳಿ ಪಿಸುಗುಟ್ಟಿದಳು.

ನೀನು ಅಂದುಕೊಂಡತ್ತಿಲ್ಲ. ಬಹಳ ಹುಷಾರಿದ್ದೀಯ… ಎಂದು ಆಕೆಯನ್ನು ಬರಸೆಳೆದು ಮುತ್ತಿಕ್ಕಿದ್ದ. ತೋಳಿಂದ ಹಿತವಾಗಿ ಬಳಸಿ ನೀಡಿದ ಚುಂಬನ ಆಕೆಗೆ ಖುಷಿ ನೀಡಿತ್ತಾದರೂ ವಾತ್ಸಲ್ಯ ಎಲ್ಲಿ ನೋಡಿಬಿಡುತ್ತಾರೋ ಎಂಬ ಭಯದಿಂದ ದೂರ ಸರಿದು ಕೂತಳು.

ನಿನ್ಗೆ ಬುದ್ಧಿ ಇಲ್ವ? ಅಮ್ಮ ನೋಡಿದ್ರೆ ಏನು ಗತಿ? ನನ್ನ ಹತ್ರ ಬಬೇಡ ಎಂದು ದೂರದಲ್ಲಿ ಕುಳಿತು ಗೊಣಗಿಕೊಂಡಳು. ವಾತ್ಸಲ್ಯ ಅಕ್ಕಿ ರೊಟ್ಟಿ ತಂದು ಇಬ್ಬರ ಮುಂದಿಟ್ಟರು. ಇಬ್ಬರು ಒಟ್ಟಿಗೆ ತಿಂಡಿ ಮುಗಿಸಿ ಒಂದೆರಡು ತಾಸು ಮನೆಯಲ್ಲಿಯೇ ಕಳೆದು ಮಡಿಕೇರಿ ನಗರದ ಕಡೆಗೆ ನಡೆದರು.

ನಗರ ಪ್ರವೇಶಿಸುತ್ತಿದ್ದಂತೆ ಒಂದು ದಿನನಾದ್ರೂ ನೀನು ಅವಳಿಗೇನಾದ್ರೂ ಗಿಫ್ಟ್ ಕೊಟ್ಟಿದ್ದೀಯ? ಎಂದು ಅಮ್ಮ ಕೇಳಿದ ಪ್ರಶ್ನೆ ಅಭಿಮನ್ಯುವಿಗೆ ನೆನಪಿಗೆ ಬಂದು ಆಕೆಯನ್ನು ನೇರವಾಗಿ ಗಿಫ್ಟ್‌ಸೆಂಟರ್‌ವೊಂದಕ್ಕೆ ಕರೆದೊಯ್ದು ಆಕೆ ತುಂಬಾ ಇಷ್ಟ ಪಡುವ ಟೆಡ್ಡಿಬೇಸ್‌ಗಳನ್ನು ಕೊಡಿಸಿದ. ಸಾಲದು ಎಂಬಂತೆ ಶ್ವೇತವರ್ಣದ ಚೂಡಿದಾರ್‌ವೊಂದನ್ನು ಉಡುಗೋರೆಯಾಗಿ ನೀಡಿ ನೆಮ್ಮದಿಯ ನಿಟ್ಟುಸಿರು ಬಿಟ್ಟ.

ನಗರದಲ್ಲಿ ಗೆಳೆಯರಾದ ರಾಹುಲ್, ಸಂಜಯ್, ಅರುಣ ಹಾಗೂ ಪುರುಷೋತ್ತಮ್ ಅವರೊಂದಿಗೆ ಇಬ್ಬರು ಜೊತೆ ಸೇರಿಕೊಂಡು ರಾಜಾಸೀಟ್ ಕಡೆಗೆ ನಡೆದರು. ರಾಜಾಸೀಟ್‌ನಲ್ಲಿ ಎಲ್ಲರು ಐಸ್‌ಕ್ರೀಂ ತಿನ್ನುತ್ತಾ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಕಾಲ ಕಳೆದರು.

ನೀವಿಬ್ಬರು ಹೀಗೆ ಜೀವನಪೂರ್ತಿ ಸುತ್ತಾಡುತ್ತಲೇ ಇತೀರಾ? ಅಥವಾ ನಮ್ಗೇನಾದ್ರು ಊಟ ಹಾಕಿಸೋದಕ್ಕೆ ಮನಸ್ಸು ಮಾಡಿದ್ರಾ? ರಾಹುಲ್ ಮದುವೆ ಪ್ರಸ್ತಾಪ ಮುಂದಿಟ್ಟ.

ನಾವಿಬ್ರು ಹೀಗೆ ಒಟ್ಟಿಗೆ ಓಡಾಡ್ಕೊಂಡಿರೋದನ್ನ ನೋಡಿ ನಿನ್ಗೆ ಹೊಟ್ಟೆ‌ಉರಿ ಪ್ರಾರಂಭವಾಗಿಬೇಕು. ಅದ್ಕೆ ಮದ್ವೆ ವಿಚಾರ ಎತ್ತುತ್ತಿದ್ದೀಯ. ಇನ್ನೊಂದೆರಡು ವರ್ಷ ನಮ್ಮನ್ನ ಸುಮ್ನೆ ಬಿಟ್ಬಿಡಿ. ನಂತರ ಮದ್ವೆ ವಿಚಾರ ಮಾತಾಡೋಣ ಅಭಿಮನ್ಯು ಮದುವೆ ವಿಚಾರವನ್ನು ನಯವಾಗಿ ತಿರಸ್ಕರಿಸಿದ.

ನಾವೇನೋ ಸುಮ್ನೆ ಇಲಿಕ್ಕೆ ಬಿಡ್ತಿವಿ. ಆದ್ರೆ ಅಕ್ಷರಳ ಅಪ್ಪ ಸುಮ್ನೆ ಇರೋದಕ್ಕೆ ಬಿಡ್ತಾರ? ಅವಳಿಗೆ ಒಳ್ಳೆಯ ಹುಡುಗನನ್ನು ನೋಡಿ ಗಂಟು ಹಾಕಿಸಿ ಬಿಡ್ತಾರೆ. ನಂತರ ನಿನ್ಗೆ ವಿರಹ ವೇದನೆಯೇ ಗತಿ. ಹಾಗೊಂದ್ವೇಳೆ ಏನಾದ್ರು ಆದರೆ ನಿನ್ಗೆ ಆಗ ನೋವಿನ ಅನುಭವ ಆಗುತ್ತೆ. ಎಲ್ಲಾ ದಿನಗಳು ಹೀಗೆಯೇ ಇರೋದಿಲ್ಲ. ಆದಷ್ಟು ಬೇಗ ಮದ್ವೆ ಮಾಡ್ಕೊಳ್ಳೋದಕ್ಕೆ ಯೋಚ್ನೆ ಮಾಡು ಗೆಳೆಯನನ್ನು ಎಚ್ಚರಿಸುವ ಕೆಲಸ ಮಾಡಿದ.

ಆ ವಿಷಯವೆಲ್ಲ ಬಿಟ್ಟಾಕು. ಅದೆಲ್ಲ ಒಂದು ದೊಡ್ಡ ವಿಚಾರನಾ? ಜೀವನದಲ್ಲಿ ನಾನು ಎಷ್ಟೊಂದು ಹುಡುಗಿಯರನ್ನ ನೋಡಿಲ್ಲ.

ಹೇಳು? ಪ್ರೀತಿ, ಪ್ರೇಮ ಏನು ನನ್ಗೆ ಹೊಸತಾ? ಅಕ್ಷರ ಕೈ ಕೊಟ್ರೆ ನಾಳೆನೇ ಇನ್ನೊಂದು ಲವ್ ಪ್ರಾರಂಭ. ನೀನೇನು ಅದರ ಬಗ್ಗೆ ಚಿಂತೆ ಮಾಡ್ಕೋಬೇಡ. ನನ್ಗೆ ಇಲ್ಲದ ಚಿಂತೆ ನಿನ್ಗೆ ಯಾಕೆ ಹುಟ್ಟು ಹಬ್ಬದ ದಿನದಂದೂ ಕೂಡ ಅಕ್ಷರಳನ್ನು ರೇಗಿಸದೆ ಸುಮ್ಮನಿರಲು ಅಭಿಮನ್ಯುವಿನಿಂದ ಸಾಧ್ಯವಾಗಲಿಲ್ಲ.

ಇಂತಹ ಒಂದು ಸಣ್ಣ ಮಾತು ಕೂಡ ಸಾಕು ಆಕೆ ರೇಗಾಡಲು. ಪ್ರೀತಿಯಲ್ಲಿ ಒಂದಿಷ್ಟು ಏರುಪೇರಾದರೂ ಆಕೆ ಸಹಿಸುವುದಿಲ್ಲ. ಇವೆಲ್ಲವನ್ನೂ ಚೆನ್ನಾಗಿ ಬಲ್ಲ ಅಭಿಮನ್ಯು ಆಕೆಯನ್ನು ಆಗಿಂದಾಗೆ ರೇಗಿಸಿ ಮಜಾ ತೆಗೆದುಕೊಳ್ಳುತ್ತಿದ್ದ. ಅಭಿಮನ್ಯುವಿನ ಮಾತು ಆಕೆಯಲ್ಲಿ ಕೋಪ ಉಕ್ಕಿ ಬರುವಂತೆ ಮಾಡಿತು. ಆದರೆ, ಹುಟ್ಟು ಹಬ್ಬವಾಗಿದ್ದರಿಂದ ಹೆಚ್ಚು ಕೋಪ ತೋರ್ಪಡಿಸಲು ಮುಂದಾಗಲಿಲ್ಲ.

ಯಾಯಾರ ಮನಸ್ಸಲ್ಲಿ ಏನೇನಿದೆ ಅಂಥ ಈಗ ಗೊತ್ತಾಗ್ತಾ ಇದೆ. ನೀನು ನನ್ನ ಪ್ರೀತಿ ಮಾಡ್ತಾ ಇರೋದು ಕೇವಲ ಟೈಂಪಾಸ್‌ಗೋಸ್ಕರ. ನಿನ್ನ ಪ್ರೀತಿ ಮಾಡಿದ್ದಕ್ಕೆ ಚಪ್ಲಿ ತಕ್ಕೊಂಡು ಹೊಡ್ಕೋ ಬೇಕು ಎಂದು ಕೋಪಗೊಂಡು ಮುಖವನ್ನು ಅಭಿಮನ್ಯುವಿಗೆ ವಿರುದ್ಧ ದಿಕ್ಕಿನಲ್ಲಿ ತಿರುಗಿಸಿ ಕುಳಿತಳು.

ಇನ್ನೂ ಯಾಕೆ ತಡ, ಬೇಗ ಚಪ್ಲಿ ತಕ್ಕೊಂಡು ಹೊಡ್ಕೋ. ನುಡಿದಂತೆ ನಡೆಯಬೇಕು ಮತ್ತೆ ರೇಗಿಸಿದ.

ನಾನ್ಯಾಕೆ ಹೊಡ್ಕೋ ಬೇಕು. ನನ್ಗೆ ಮೋಸ ಮಾಡ್ತಾ ಇದ್ದಾರಲ್ಲ ಅವರಿಗೆ ಹೊಡಿಬೇಕು. ಅಭಿಮನ್ಯುವಿನ ಮುಖ ನೋಡದೆ ಉತ್ತರಿಸಿದಳು.

ಮುಖಗಂಟಿಕ್ಕಿಕೊಂಡು ಕೂತಿದ್ದ ಅಕ್ಷರಳ ಎದುರು ಅಭಿಮನ್ಯು ಮಂಡಿಯೂರಿ ತಲೆಬಾಗಿ ಎಷ್ಟು ಬೇಕೋ ಅಷ್ಟು ಹೊಡ್ಕೋ. ತಡ ಮಾಡ್ಬೇಡ. ನನ್ಗೆ ಕಾಯೋದು ಅಂದ್ರೆ ಆಗೋದಿಲ್ಲ ಎಂದು ಆಕೆಯ ಎದುರು ಒಂದೆರಡು ಕ್ಷಣ ತಲೆ ಬಾಗಿಸಿ ನಿಂತ. ಅಕ್ಷರ ಏನು ಹೇಳದೆ, ಏನೂ ಮಾಡದೆ ಸುಮ್ಮನೆ ಕುಳಿತುಬಿಟ್ಟಳು.

ಅಭಿಮನ್ಯು, ಸಾಕು ಸುಮ್ನಿರೋ. ಅವಳನ್ನ ಎಷ್ಟೂಂತ ಗೋಳೊಯ್ದುಕೊಳ್ತಿಯ? ನಿನ್ನ ಮಾತೆಲ್ಲ ನಿಜ ಅಂದ್ಕೊಂಡು ಕೋಪಮಾಡ್ಕೊಂಡು ಈಗಾಗಲ್ಲೇ ಮುಖ ಕೆಂಪಾಗಿದೆ. ನೀನು
ಇನ್ನೊಂದೆರಡು ಮಾತು ಆಡಿದ್ರೆ ಕಣ್ಣೀರಿನ ಹೊಳೆಯನ್ನೇ ಹರಿಸಿ ಬಿಡ್ತಾಳೆ ಸಂಜಯ್ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ.

ನಾನೇನು ಕೋಪ ಮಾಡ್ಕೊಂಡಿಲ್ಲ. ಆ ಕೋತಿ ನನ್ನ ಹೀಗೆ ದಿನಾ ರೇಗಿಸ್ತನೇ ಇತಾನೆ. ಯಾವುದೇ ವಿಚಾರವಾದ್ರು ಕೂಡ ಅದನ್ನು ಲಘುವಾಗಿ ತಗೊಂಡು ತಮಾಷೆ ಮಾಡೋದು, ನನ್ನ ಕೆಣಕೋದು ಅಂದ್ರೆ ಅವನಿಗೆ ಎಲ್ಲಿಲ್ಲದ ಆನಂದ. ಏನೇ ಆದ್ರೂ ನನ್ಗೆ ಕೈಕೊಡೊಲ್ಲ ಅಂಥ ಭರವಸೆ ಇದೆ ಅಕ್ಷರಳಿಗೆ ಅಭಿಮನ್ಯುವಿನ ಬಗ್ಗೆ ಮನದಲ್ಲಿ ಸಣ್ಣದೊಂದು ಅನುಮಾನ ಸುಳಿದಾಡುತ್ತಿದ್ದರು ತೋರ್ಪಡಿಸುವ ಪ್ರಯತ್ನ ಮಾಡಲಿಲ್ಲ.

ನೋಡಿದ್ರ…? ನನ್ನವಳು ಎಂತವಳು ಅಂಥ? ಏನೇ ಹೇಳಿದ್ರೂ ನನ್ಮೇಲೆ ಇರೋ ಪ್ರೀತಿ ಒಂದುಚೂರು ಕೂಡ ಕಡಿಮೆಯಾಗೋದಿಲ್ಲ ಎಂದು ಹೊಗಳಿ, ಕುಳಿತಿದ್ದ ಆಕೆಯನ್ನು ಮೇಲೆತ್ತಿ ಒಂದೆರಡು ಸುತ್ತು ನಿಂತಲ್ಲೇ ಗಿರ್ರನೆ ಸುತ್ತಿಸಿ ಕೆಳಗಿಳಿಸಿ ತಲೆ ಸುತ್ತುತ್ತಾ ಇದೆಯಾ? ಎಂದು ಕೇಳಿ ಆಕೆಯನ್ನು ಅಪ್ಪಿಕೊಂಡು ಚುಂಬಿಸಿದ.

ಛೀ…, ಎಲ್ಲರ ಮುಂದೆ. ನಾಚ್ಕೇ ಆಗೋದಿಲ್ವ? ನಾಚಿನೀರಾದ ಅಕ್ಷರ ತನ್ನೆರಡು ಕೈಗಳಿಂದ ಮುಖ ಮುಚ್ಚಿಕೊಂಡಳು. ಕಣ್ತೆರೆದು ನೋಡುವಷ್ಟರಲ್ಲಿ ಅಭಿಮನ್ಯು ಅಲ್ಲಿರಲಿಲ್ಲ. ದೂರದಲ್ಲಿ ನಿಂತು ಆಕೆಯನ್ನು ನೋಡುತ್ತಾ ನಗುತ್ತಿದ್ದ. ಅಭಿಮನ್ಯುವನ್ನು ರಾಜಾಸೀಟ್‌ನ ಮೂಲೆ ಮೂಲೆಯಲ್ಲಿ ಬೆನ್ನಟ್ಟಿಕೊಂಡು ಓಡಿದಳು. ಆಕೆಯನ್ನು ಹಿಂಬಾಲಿಸಿಕೊಂಡು ಉಳಿದ ಸ್ನೇಹಿತರು ಓಡಿದರು. ಓಡಿ, ಓಡಿ ಸುಸ್ತಾದ ಅಭಿಮನ್ಯು ಪುನಃ ಇದ್ದಲ್ಲಿಗೆ ಬಂದು ಕುಳಿತುಕೊಂಡ.

ಯಾರೂ ಕೂಡ ಸೋಮಾರಿಗಳಾಗಿ ಬದುಕಬಾದು. ಅದ್ಕೋಸ್ಕರ ಎಲ್ಲರನ್ನು ಓಡಿಸಿದೆ. ಜೊತೆಗೆ ನಾನೂ ಓಡ್ದೆ ಎದುಸಿರು ಬಿಡುತ್ತಾ ಹೇಳಿದ.

ನಿನ್ನಜ್ಜಿ ಪಿಂಡ. ಮಾಡ್ಬಾರದನ್ನೆಲ್ಲ ಮಾಡಿ ಕಳ್ಳನ ತರ ಓಡ್ತಿಯಲ್ಲ ಎಂದು ಅಕ್ಷರ ಅಭಿಮನ್ಯುವಿನ ಬೆನ್ನಿಗೆ ನಾಲ್ಕು ಗುದ್ದು ಗುದ್ದಿದಳು.

ಬೆಳಗ್ಗಿನಿಂದ ಮಧ್ಯಾಹ್ನ ತನಕ ರಾಜಾಸೀಟ್‌ನಲ್ಲಿ ಕಾಲ ಕಳೆದು ಅಭಿಮನ್ಯುವಿನ ಬರ್ತ್‌ಡೇ ಪಾರ್ಟಿಗೆ ಎಲ್ಲರು ತೆರಳಿದರು. ಗೆಳೆಯರೆಲ್ಲ ಮಧ್ಯಾಹ್ನವಾದ್ದರಿಂದ ಬಿಯರ್ ಬಾಟಲಿಗೆ ಸಂತೃಪ್ತಿ ಹೊಂದಿದರು. ರಾತ್ರಿಯಾಗಿದ್ದರೆ ಬಿಯರ್ ಮುಟ್ಟಿ ನೋಡುವವರಲ್ಲ. ರಾತ್ರಿ ಹಾಟ್ ಡ್ರಿಂಕ್ಸೇ ಬೇಕು. ಅಕ್ಷರ ಜೊತೆಗಿರೋದರಿಂದ ಅಭಿಮನ್ಯುವಿಗೆ ಕುಡಿಯೋದಕ್ಕೆ ಸಾಧ್ಯವಾಗಲಿಲ್ಲ.

ಅಕ್ಷರ, ಅಭಿಮನ್ಯು ಇಬ್ಬರು ಹ್ಯಾಪಿ ಕೂಲ್ ಡ್ರಿಂಕ್ಸ್ ಕುಡಿದರು. ಅಕ್ಷರ ಹ್ಯಾಪಿ ಕೂಲ್ ಡ್ರಿಂಕ್ಸ್ ಕುಡಿದು ಹ್ಯಾಪಿಯಾಗಿದ್ದಳು. ಆದರೆ, ಅಭಿಮನ್ಯು ಆ ಬಿಯರ್ ಬಾಟಲಿಯನ್ನೇ ನೋಡುತ್ತಾ ಕೂಲ್‌ಡ್ರಿಂಕ್ಸ್‌ಅನ್ನೇ ಬಿಯರ್ ಎಂದು ನೆನೆದು ಕುಡಿಯತೊಡ ಗಿದ. ಗೆಳೆಯರೆಲ್ಲ ಊಟ ಮುಗಿಸಿ ಮನೆಯ ಹಾದಿ ಹಿಡಿದರು. ಆದರೆ ಅಕ್ಷರಳಿಗೆ ಇಷ್ಟೊಂದು ಬೇಗ ಮನೆಗೆ ಹೋಗುವ ಹಾಗಿಲ್ಲ. ಕಚೇರಿಗೆ ಹೊಗ್ತೇನೆ ಅಂತ ಹೇಳಿ ಬೆಳಗ್ಗೆ ಮನೆಯಿಂದ ಹೊರಟ್ಟಿದ್ದಳು. ಮಧ್ಯಾಹ್ನನೇ ಮನೆಗೆ ಹೋದರೆ ಮನೆಯಲ್ಲಿ ಸಂಶಯ ಪಡೋದು ನಿಶ್ಚಿತ ಎಂದು ತಿಳಿದು ಸಂಜೆಯವರೆಗೂ ಅಭಿಮನ್ಯುವಿನೊಂದಿಗೆ ಅಲ್ಲಿ ಇಲ್ಲಿ ಸುತ್ತಾಡಿ ಕಾಲ ಕಳೆದಳು. ಸಂಜೆಯಾಗುತ್ತಿದ್ದಂತೆ ಮತ್ತೊಮ್ಮೆ ರಾಜಾಸೀಟ್‌ಗೆ ತೆರಳಿ ಸಂಜೆಯ ಸವಿಯನ್ನು ಸವಿದು ಮನೆಗೆ ಹಿಂತಿರುಗಿ ದಳು.
*  *  *

ಮೂರು ದಿನಗಳ ರಜೆಯ ಬಳಿಕ ಅಕ್ಷರ ಕಚೇರಿಗೆ ಕಾಲಿಟ್ಟಳು. ಕಚೇರಿಯಲ್ಲಿ ಎಂದಿನಂತೆ ವಾತಾವರಣ ಇರಲಿಲ್ಲ. ಎಲ್ಲರು ಆಕೆಯನ್ನು ನೋಡುವ ದೃಷ್ಟಿಕೋನ ಬದಲಾಗಿತ್ತು. ಎಲ್ಲರು ಆಕೆಯನ್ನು ಸಂತೈಸುವ ರೀತಿಯಲ್ಲಿ ನೋಡಿದರು. ಹಾಜರಿ ಪುಸ್ತಕಕ್ಕೆ ಸಹಿ ಹಾಕಿ ಟೇಬಲ್ ಮೇಲಿದ್ದ ಪತ್ರವೊಂದನ್ನು ನೋಡಿ ಸಿಡಿಲು ಬಡಿದಂತಾಯಿತು. ಅದು ವರ್ಗಾವಣೆಯ ಪತ್ರ. ಆಕೆಗೆ ಮೈಸೂರಿಗೆ ವರ್ಗಾವಣೆಯಾಗಿತ್ತು.

ಛೇ.., ಒಳ್ಳೆಯ ಸಮಯದಲ್ಲಿಯೇ ಹಾಳಾದ ಸರಕಾರ ವರ್ಗಾವಣೆ ಮಾಡ್ಬೇಕಾ? ಮನೆಯವರನ್ನು ಬಿಟ್ಟು ಮೈಸೂರಲ್ಲಿ ಹೇಗೆ ದಿನ ಕಳೆಯೋದು? ಅಭಿಮನ್ಯುವನ್ನು ಒಂದು ದಿನ ಕೂಡ ನೋಡದೆ ನನ್ನಿಂದ ಇರೋದಕ್ಕೆ ಸಾಧ್ಯವಿಲ್ಲ. ಇನ್ನು ತಿಂಗಳುಗಟ್ಟಲೇ.

ಇರೋದು ಅಂದರೆ ಜೈಲು ಶಿಕ್ಷೆ ಅನುಭವಿಸಿದಂತೆಯೇ ಸರಿ. ಈ ಹಾಳಾದ ಸರಕಾರಿ ಕೆಲಸನೇ ಹೀಗೆ. ಉದ್ಯೋಗ ಅಭದ್ರತೆ ಇಲ್ಲ ಅನ್ನೋದೊಂದನ್ನು ಬಿಟ್ರೆ ಉಳಿದೆಲ್ಲ ವಿಚಾರದಲ್ಲೂ ನರಕವೇ. ಉದ್ಯೋಗ ಅಭದ್ರತೆ ಇದ್ದರೂ ಖಾಸಗಿ ಕಂಪೆನಿಯೇ ಮೇಲು ಅಂದುಕೊಂಡು ಸರಕಾರದ ವರ್ಗಾವಣೆ ನೀತಿಯ ವಿರುದ್ಧ ಮನದೊಳಗೆ ಕಿಡಿಕಾರಿದಳು.

ಮನಸ್ಸು ಆಘಾತಕ್ಕೆ ಒಳಗಾಯಿತು. ಕಚೇರಿಯಲ್ಲಿ ದಿನವಿಡೀ ಅರೆಮನಸ್ಸಿನಿಂದಲೇ ಕೆಲಸ ಮಾಡಿ ಸಂಜೆ ರಾಜಾಸೀಟ್‌ನಲ್ಲಿ ಕಾಯ್ದು ಕುಳಿತ್ತಿದ್ದ ಅಭಿಮನ್ಯುವನ್ನೂ ಸಹ ಭೇಟಿಯಾಗದೆ ನೇರ ಮನೆಯ ಕಡೆಗೆ ನಡೆದಳು. ಮನೆಗೆ ತೆರಳಿದ ಅಕ್ಷರ ವರ್ಗಾವಣೆ ವಿಷಯ ತೆರೆದಿಟ್ಟಳು. ಮಗಳನ್ನು ಮೈಸೂರಿಗೆ ಕಳುಹಿಸಿಕೊಡಲು ರಾಜಾಶೇಖರ್, ಲೀಲಾವತಿ ಸುತರಾಂ ಒಪ್ಪಲಿಲ್ಲ. ಮಗಳ ಬಗ್ಗೆ ವಿಶೇಷವಾದ ಅಕ್ಕರೆ ಅವರಿಬ್ಬರಲ್ಲಿ ಇತ್ತು. ಇರೋ ಒಬ್ಬ ಮಗ ಬೆಂಗಳೂರು ಸೇರಿಕೊಂಡಿದ್ದಾನೆ. ಮಗಳಾದರೂ ಮನೆಯಲ್ಲಿ ಇರಲಿ. ನಮ್ಮ ದುಃಖವೂ ದೂರವಾಗಲಿ ಎಂಬುದು ಅವರ ಹಂಬಲ. ಆದರೆ, ಅಕ್ಷರ ಮೈಸೂರಿಗೆ ಹೊರಡಲು ಅಣಿಯಾಗುತ್ತಿರುವುದು ಅವರಿಗೆ ಹಿಡಿಸಲಿಲ್ಲ.

ನೀನು ಯಾರಿಗೋಸ್ಕರ ದುಡಿಯ್ತಾ ಇದ್ದೀಯ? ನಿನ್ಗೆ ಏನು ಕಮ್ಮಿ ಮಾಡಿದ್ದೀವಿ ಅಂಥ ದುಡಿಯ್ತಾ ಇದ್ದೀಯ? ಮೂರು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಕೂಡಿಟ್ಟಿದ್ದೇನೆ. ಇಷ್ಟೊಂದು ಆಸ್ತಿ, ಅಂತಸ್ತು ಯಾರಿಗೋಸ್ಕರ ಮಾಡಿಟ್ಟಿದ್ದು? ಮಕ್ಕಳಿಗೋಸ್ಕರ ತಾನೆ. ನೀವಿಬ್ರು ಕೆಲ್ಸ, ಕೆಲ್ಸ ಅಂಥ ಸಾಯ್ತಾ ಇದ್ದೀರ. ನೆಮ್ಮದಿ ಇಲ್ಲದ ಕೆಲಸ ಯಾರಿಗೆ ಬೇಕು? ಕೆಲಸಕ್ಕೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಕೂತಿರು. ನಮ್ಮ ಬಗ್ಗೆ ಗೌರವ ಇದ್ರೆ ನಮ್ಮ ಮಾತು ಕೇಳು ರಾಜಶೇಖರ್ ಮಗಳ ಮನಸ್ಸು ಬದಲಾಗಲಿ ಎಂದು ಕೋಪ ತೋರ್ಪಡಿಸಿದರು.

ಹೌದು ಕಣಮ್ಮ. ನಿಮ್ಮಪ್ಪ ಹೇಳ್ತಾ ಇರೋ ಮಾತಿನಲ್ಲಿ ಅರ್ಥವಿದೆ. ನೀನು ಹೀಗೆ ದುಡಿಯ್ತಾ ಇರೋದು ನೋಡಿದ್ರೆ ನಮ್ಗೆ ಕಣ್ಣೀರು ಬರುತ್ತೆ. ಇನ್ನೇನು ಒಂದೆರಡು ವರ್ಷಗಳಲ್ಲಿ ನಿನ್ನ ಮದ್ವೆ ನಡೆದು ಹೋಗುತ್ತೆ. ಅಲ್ಲಿಯವರೆಗಾದ್ರು ಮನೆಯಲ್ಲಿ ನಮ್ಮೊಂದಿಗೆ ಹಾಯಾಗಿ ದಿನ ಕಳೆಯಬಹುದಲ್ವ? ಲೀಲಾವತಿ ಮಗಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಅಕ್ಕರೆಯಿಂದ ಕೇಳಿದರು.

ಅಪ್ಪ, ಅಮ್ಮ ಹೇಳುವ ಮಾತಿನಲ್ಲಿ ಅರ್ಥವಿದೆ ಎಂದು ಆಕೆಗೆ ಅನ್ನಿಸದೆ ಇರಲಿಲ್ಲ. ಆದರೆ, ಮುಂದಿನ ಭವಿಷ್ಯದ ಕಡೆಗೆ ನೋಡಿದಾಗ ಮೈಸೂರಿಗೆ ತೆರಳುವ ತನ್ನ ನಿರ್ಧಾರವೇ ಸರಿ ಅನ್ನಿಸಿತು. ತನ್ನ ಜೀವನದಲ್ಲಿ ಅಭಿಮನ್ಯು ಬಾರದೆ ಇದ್ದಿದ್ದರೆ ಇಂತಹ ಪರಿಸ್ಥಿತಿಯಲ್ಲಿ ಅಪ್ಪ, ಅಮ್ಮ ಹೇಳಿದ ಹಾಗೆ ಕೆಲಸಕ್ಕೆ ರಾಜೀನಾಮೆ ನೀಡಿ ಮನೆಯಲ್ಲಿ ಇರಬಹುದಿತ್ತು. ಆದರೆ, ಇಂದು ಪರಿಸ್ಥಿತಿ ಭಿನ್ನವಾಗಿದೆ. ಒಂದ್ವೇಳೆ ಅಭಿಮನ್ಯುವಿನೊಂದಿಗೆ ವಿವಾಹವಾಗುವುದನ್ನು ಮನೆಯಲ್ಲಿ ಒಪ್ಪಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ಒಂದ್ವೇಳೆ ವಿರೋಧದ ನಡುವೆ ವಿವಾಹವಾದರೆ ಮನೆಯಿಂದ ಯಾವುದೇ ಸಹಕಾರ ಸಿಗೋದಿಲ್ಲ. ಆ ಸಂದರ್ಭ ನಮ್ಮಿಬ್ಬರ ಸಹಕಾರಕ್ಕೆ ಬರೋದು ಈ ಸರಕಾರಿ ಉದ್ಯೋಗ ಮಾತ್ರ. ದುಡುಕಿ ಕೆಲಸಕ್ಕೆ ರಾಜೀನಾಮೆ ನೀಡುವ ಮನಸ್ಸು ನೀಡಬೇಡ ದೇವರೇ ಎಂದು ಅಕ್ಷರ ದೇವರಲ್ಲಿ ಪ್ರಾರ್ಥಿಸಿದಳು.

ಇನ್ನೂ ಏನು ಯೋಚ್ನೆ ಮಾಡ್ಕೊಂಡು ಕೂತಿದ್ದೀಯ? ನಾಳೆನೇ ಹೋಗಿ ಕೆಲ್ಸಕ್ಕೆ ರಾಜೀನಾಮೆ ಕೊಟ್ಟು ಬಾ. ಜೀವನದಲ್ಲಿ ಕೆಲ್ಸಕ್ಕಿಂತ ನೆಮ್ಮದಿ ಮುಖ್ಯ. ಅರ್ಥವಾಯ್ತಾ?… ನೀನೊಬ್ಬಳೇ ಹೋಗಿ ಮೈಸೂರಿನಲ್ಲಿ ನೆಲೆಸೋದು ನನ್ಗೆ ಸರಿ ಕಾಣಿಸ್ತಾ ಇಲ್ಲ. ಅಲ್ಲಿ ಪರಿಚಯದವರೂ ಇಲ್ಲ. ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಹೇಗೆ ಬದುಕು ನಡೆಸ್ತೀಯ? ನಿನ್ಗಂತೂ ಅದೆಲ್ಲ ಸರಿ ಹೋಗೋದಿಲ್ಲ. ನಾಳೆ ಕಚೇರಿಗೆ ಹೋಗಿ ರಾಜೀನಾಮೆ ಕೊಟ್ಟು ಬಾ. ಮನೆಯಲ್ಲಿ ಹಾಯಾಗಿಬೊಹುದು. ರಾಜಶೇಖರ್ ಮಗಳ ಮೇಲೆ ಮತ್ತೆ ಒತ್ತಡ ಹೇರುವ ಧಾಟಿಯಲ್ಲಿ ಸ್ವಲ್ಪ ಕಟುವಾಗಿಯೇ ಮಾತಾಡಿದರು.

ಅಕ್ಷರ ತನ್ನ ನಿರ್ಧಾರವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಳು. ಯಾವುದೇ ಕಾರಣಕ್ಕೂ ಕೆಲಸಕ್ಕೆ ರಾಜೀನಾಮೆ ಕೊಡೋದಿಲ್ಲ. ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ನಿರ್ಧರಿಸಿದಳು.

ಈ ಕಾಲದಲ್ಲಿ ಸರಕಾರಿ ಕೆಲ್ಸ ಸಿಗೋದೇ ಕಷ್ಟ. ಎಷ್ಟು ಕಷ್ಟಪಟ್ಟು ಕೆಲ್ಸ ಪಡ್ಕೊಂಡೆ ಅಂಥ ನಿಮ್ಗೇನಾದ್ರು ಗೊತ್ತಾ? ಈಗ ಕೆಲ್ಸಕ್ಕೆ

ರಾಜೀನಾಮೆ ಕೊಡ್ಬೇಕೂಂತ ಅಂದ್ರೆ ಎಷ್ಟು ನೋವಾಗುತ್ತೆ ಗೊತ್ತಾ? ಮನೆಯಲ್ಲಿ ಒಂದೆರಡು ದಿನ ಕೂತ್ಕೋಬಹುದು. ವರ್ಷವಿಡೀ ಕಾಲ ಕಳೆಯೋದಕ್ಕೆ ಸಾಧ್ಯನಾ? ಮನೆ ಕೂಡ ಕಾರಾಗೃಹ ಅನ್ಸೋಕ್ಕೆ ಶುರು ಆಗಿಬಿಡುತ್ತೆ. ಮನೆಯಲ್ಲಿ ಕೆಲ್ಸ ಇಲ್ದೆ ಕಾಲ ಕಳೆಯೋದಕ್ಕೆ ನನ್ಗೆ ಇಷ್ಟ ಇಲ್ಲ. ಈ ವಿಚಾರದಲ್ಲಿ ನೀವು ಬಲವಂತ ಮಾಡ್ಬೇಡಿ. ನನ್ನ ಪಾಡಿಗೆ ನನ್ನ ಬಿಟ್ಬಿಡಿ. ಮೈಸೂರಲ್ಲಿ ಯಾವುದಾದರು ಲೇಡಿಸ್ ಹಾಸ್ಟೆಲ್‌ನಲ್ಲಿ ಉಳ್ಕೊಳ್ತೇನೆ. ಮೈಸೂರಲ್ಲಿ ಯಾವ ಹುಡುಗಿಯರು ಬದುಕುತ್ತಾ ಇಲ್ವ? ಯಾವ ಸಮಸ್ಯೆ ಕೂಡ ಎದುರಾಗೋದಿಲ್ಲ. ನೀವು ಯಾವುದಕ್ಕೂ ಭಯ ಪಡೋ ಅವಶ್ಯಕತೆ ಇಲ್ಲ ಎಂದು ಅಕ್ಷರ ಮೈಸೂರಿಗೆ ತೆರಳುವ ನಿರ್ಧಾರಕ್ಕೆ ಅಂಟಿಕುಳಿತುಕೊಂಡಳು.

ಮಗಳ ನಿರ್ಧಾರ ರಾಜಶೇಖರ್‌ಗೆ ಎಲ್ಲಿಲ್ಲದ ಕೋಪ ತರಿಸಿತು. ಕೇಳಿದ್ಯಾ ಇವಳ ಮಾತನ್ನ. ನಮ್ಮ ಮಾತನ್ನೇ ಧಿಕ್ಕರಿಸುವಷ್ಟರ ಮಟ್ಟಿಗೆ ಬೆಳೆದು ಬಿಟ್ಟಿದ್ದಾಳೆ. ಅದ್ಕ್ಕೆ ಹಿರಿಯರು ಹೇಳಿದ್ದು: ‘ಮಕ್ಕಳನ್ನು ಮುದ್ದಿಸಿ ಬೆಳೆಸಬಾರದು. ಹೊಡ್ದು ಬಡ್ಡು ಬೆಳೆಸಬೇಕು ಅಂಥ. ಹೊಡ್ದು ಬೆಳೆಸಿದ್ರೆ ಹೀಗೆಲ್ಲ ಹೇಳ್ತಾ ಇಲಿಲ್ಲ. ಇವಳಿಗೆ ಹೇಳಿ ಏನು ಸುಖ ಹೇಳು. ತಪ್ಪೆಲ್ಲ ನಮ್ದೇ ಸಿಡುಕುತ್ತಾ ಸೋಫಾದಲ್ಲಿ ಕುಳಿತು ದವಡೆಗೆ ಕೈಕೊಟ್ಟು ಚಿಂತೆಯಲ್ಲಿ ಮುಳುಗಿದರು.

ಯಾಕೆ ನೀವಿಬ್ರು ಆಕಾಶನೇ ತಲೆಮೇಲೆ ಕಳಚಿ ಬಿದ್ದಂಗೆ ಮಾತಾಡ್ತಾ ಇದ್ದೀರ? ನಾನು ಮೈಸೂರಿಗೆ ಹೋದ್ರೆ ಏನಾಗುತ್ತೆ? ಒಂದೆರಡು ವರ್ಷ ಅಲ್ಲಿದ್ದು ಬತಿನಿ. ಹೊಸ ಜಾಗ, ಹೊಸ ಜನ ಪರಿಚಯ ಆದಂತೆ ಆಗುತ್ತೆ. ನಂತರ ನಿಮ್ಮಿಷ್ಟದಂತೆ ಮದ್ವೆಯಾಗಿ ಹೊರಟೋಗ್ತಿನಿ. ನಿಮ್ಗೇನು ತೊಂದರೆ ಕೊಡೊಲ್ಲ. ಏಕಾ‌ಏಕಿ ಕೆಲ್ಸ ಬಿಟ್ಟು ಮನೆಯಲ್ಲಿ ಕುತ್ಕೊಳ್ಲಿಕ್ಕೆ ನನ್ಗೆ ಇಷ್ಟ ಇಲ್ಲ. ಒಳ್ಳೆಯ ಮನಸ್ಸಿನಿಂದ ಕಳುಹಿಸಿಕೊಡಿ ಕೈ ಮುಗಿದು ಕೇಳಿಕೊಂಡಳು.

ಮಗಳ ಮಾತು ಕೇಳೋದಕ್ಕೆ ರಾಜಶೇಖರ್ ತಯಾರಿರಲಿಲ್ಲ. ಅವರಿಗೆ ಮಗಳು ದೂರದ ಊರಿಗೆ ಹೋದರೆ ಎಲ್ಲಿ ಕೈ ತಪ್ಪಿ ಹೋಗುತ್ತಾಳೋ ಎಂಬ ಭಯ. ಇಲ್ಲಾದರೆ ಎಲ್ಲವನ್ನು ಗಮನಿಸಿಕೊಂಡು ಇರಬಹುದು. ಆದರೆ ಮೈಸೂರಿನಲ್ಲಿ ಆಕೆಯನ್ನು ಗಮನಿಸೋದಕ್ಕೆ ಯಾರಿದ್ದಾರೆ? ಹೊರಗೆ ಹೋದ ಹೆಣ್ಣು ಮಕ್ಕಳಿಗೆ ಅವರದೇ ಲೋಕ. ಮನೆಗೆ ಬರುವಷ್ಟರೊಳಗೆ ವೇಷ ಭೂಷಣ ಬದಲಾಗಿ ಹೋಗಿರುತ್ತದೆ. ಇನ್ನು ಏನೇನೋ ಬದಲಾಯಿಸಿಕೊಂಡು ಬರುತ್ತಾರೋ ಯಾರಿಗೆ ಗೊತ್ತು? ಒಟ್ನಲ್ಲಿ ಹಳ್ಳಿ ಜನರಲ್ಲಿ ಪೇಟೆಯ ಬಗ್ಗೆ ಒಳ್ಳೆಯ ಅಭಿಪ್ರಾಯವಂತು ಇಲ್ಲ. ಪೇಟೆಗೆ ಹೋದ ಹೆಣ್ಣು ಮಕ್ಕಳಲ್ಲಿ ಹೆಚ್ಚಿನವರು ಅಂತರ್ಜಾತಿ ವಿವಾಹವಾದವರೇ ಹೆಚ್ಚು. ಮೊನ್ನೆ ಮೊನ್ನೆತಾನೇ ಮಗಳು ಅಂತರ್ಜಾತಿ ವಿವಾಹದ ವಿಚಾರ ಕೆದಕಿದ್ದಾಳೆ. ಇನ್ನು ಮೈಸೂರಿಗೆ ಹೋಗಿ.  ಸೇಕೊಂಡ್ರೆ ಮಗಳು ನಮ್ಮಿಂದ ಕೈ ಜಾರಿ ಹೋಗುತ್ತಾಳೆ ಎಂಬ ಭೀತಿ ರಾಜಶೇಖರ್ ಅವರಲ್ಲಿ ಆವರಿಸಿಕೊಂಡು ಮಗಳ ವಿರುದ್ಧ ರೇಗಾಡೋದಕ್ಕೆ ಪ್ರಾರಂಭ ಮಾಡಿದರು.

….. ಮುಂದುವರೆಯುವುದು

ಕಾದಂಬರಿ ಪುಟ ೭೧-೯೦

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊತ್ತು ಮುಳುಗಿತು ಜಗದಿ ಕತ್ತಲಾದಿತು
Next post ಧೀರಸಮರ ಕಲಿಶೂರರ ಕದನದಿ

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys