ಧೀರಸಮರ ಕಲಿಶೂರರ ಕದನದಿ
ಭಾಸ್ಕರಸ್ತಂಗತ ಹತ ಹತ || ಪ ||

ಧಾರುಣಿಯೊಳು ಪಶ್ಚಿಮ ಶರಧಿಗೆ
ಹೋಗಿ ಅಡಗಿದನು ಸತಾನಿತಾ || ೧ ||

ತನ್ನ ತೇರಿಗೆ ಮುನ್ನೇಳು ಕುದುರೆಗಳು
ಸಣ್ಣ ಸಾರಥಿ ರಥ ರಥ
ಚನ ಚಲುವನೋ ಸೂರ್ಯಕಿರಣ ಮೈ
ಕಣ್ಣೀರ ಸುರಸಿದ ಪತಾನಿತಾ || ೨ ||

ಮತ್ತೆ ಶರಣರ ದುಃಖವ ಕೇಳುತ
ಅತ್ತ ವರುಣ ಜಲ ಪತಾ ಪತಾ
ಹೊತ್ತ ಮುಳುಗಿ ಕಬನೂರಗ್ಹೇಳಿದ
ಗೊತ್ತ ಶಿಶುನಾಳ ಜಿತಾ ಜಿತಾ || ೩ ||
*****