ನಿನ್ನ ಚುಂಬನದಲ್ಲಿ ಕಣ್ಣೀರ ಹನಿ ಬೆರೆತು
ನನ್ನ ತುಟಿಗಳ ಮೇಲೆ ಮಾತು ಮರೆತು

ಮುಗಿಯಿತಂದಿನ ಸಂಜೆ ಕತ್ತಲೆಯ ಹೊದ್ದು
ಯುಗ ಯುಗದ ಗಾಢ ಮೌನದಲಿ ಬಿದ್ದು

ಮತ್ತೆ ಬೆಳಕೊಡೆದು ಹುಡುಕಿದೆನು ಕಾಣಿಸದೆ
ನಿನ್ನುಸಿರ ಪರಿಮಳವ ನೀನಳಿಸಿ ಹೋದೆ

ಅಳಿಸುವೆನು ನಾನೆಂತು ನನ್ನ ಸ್ವಂತದ ಗಾಯ
ಪ್ರತಿದಿನದ ಸಂಜೆಯೂ ಹೇಳುವ ವಿದಾಯ
*****