ಖುಸ್ಬು ಸುವಾಸಿನಿ – ಆಂಟೇರು ಓಕೆ ಸಾನಿಯಾ ಮಿರ್ಜಿ ಹಿಂಗ್ಯಾಕೆ!

ತಮಿಳುನಾಡಿನ ಮಂದಿ ಭಾಳ ಎಮೋಷನಲ್ರಿ. ಸಿನೆಮಾನೂ ಹಂಗೆ ಇರ್ತಾವೆ. ವಿಲನ್ನು ಒಬಾನೆ ಅಲ್ಲ ಹೀರೋನೂ ಒದರ್ತಾನೆ, ಹೀರೋಯಿನ್ನೂ ಚೀರ್ತಾಳ. ಭಾಷೆನೆ ಹಂಗೈ ಬಿಡ್ರಿ ಗಟ್ಟಿ ಭಾಷೆ ಗಟ್ಟಿಜನ. ಹಂಗಿಲ್ಲದಿದ್ರೆ ಬೆಂಗಳೂರ್‍ನ ತಮ್ಮದೇ ಮಾಡ್ಕೊಂಡು ಕನ್ನಡಿಗರನ್ನೇ ಮೂಲೆಗೆ ಒತ್ತಾರಿಸ್ಯಾರೆ. ಏನ್ ಮಾಡಿದ್ರೂ ಓವರ್‍ ರೀ-ಆಕ್ಷನ್ ಮಂದಿ. ಸಿಗರೇಟು ತುಟಿಗೆ ಎಸ್ಕೊಂಬ ಕನ್ನಡಿಗ ರಜನೀಕಾಂತನ್ನ ಸೂಪರ್‌ಸ್ಟಾರ್‍ ಮಾಡಿ ತೆಲಿಮ್ಯಾಲೆ ಕುಂಡಿಸಿಕ್ಯಂಡ್ರು. ಪೆರಿಯಾರ್‍ ಪ್ರತಿಮೆ, ತಿರುವಳ್ಳುವರ್‍, ಕಾಮರಾಜ್, ಅಣ್ಣಾದೊರೈ, ಎಂ.ಜಿ.ಆರ್‍., ಇತ್ಯಾದಿ ಲೀಡರ್‍ ಪ್ರತಿಮೆಗಳ್ನ ಊರು ತುಂಬಾ ನಿಲ್ಲಿಸಿ ಚೆನ್ನೈ ಅಂದ್ರೆ ಸ್ಮಾರಕಗಳ ಊರು ಅರ್ಥಾತ್ ಗ್ರೇವ್‌ಯಾರ್ಡ್‌ ಮಾಡಿಬಿಟ್ಟಾರ್‍ರಿ. ಇಂಥೋರು ಒರು ಕಾಲತ್ತಿಲೆ ಖುಸ್ಬು, ಕುಟ್ಟಿ, ಕುಣ್ತಾ ನೋಡಿ ಮಳ್ಳು ಆಗಿ ಟೆಂಪಲ್ ಕಟ್ಟಿ ಡೈಲಿ ಮಿಲ್ಕಾಭಿಷೇಕ ಮಾಡ್ತಿದ್ದೋರು ಅದಾರಾ. ನಟಿಯಾರು ವರ್ಜಿನಲ್ಲ ಅಂತ ವಲ್ಗರ್‍ ಆಗಿ ಮಾತಾಡಿದ ನಿರ್ದೇಶಕ ತಂಗರ್‌ಬಚ್ಚನ್‌ನ ತರಾಟೆಗೆ ತಗೊಂಡೋಳು ಇದೇ ಖುಸ್ಬು. ಆವಯ್ಯ ಕಾಲಿಗೆ ಬಿದ್ದು `ಸಾರಿ’ ಅಂಬೋವರ್‍ಗೂ ಬಿಟ್ಟಾಕೆಲ್ಲ. ಇಂಥಾಕಿ `ಇಂಡಿಯಾ ಟುಡೆ’ ತಮಿಳು ಎಡಿಷನ್ನಾಗೆ ಕೆಟ್ಟ ಘಳಿಗೆನಾಗೆ ಲಗ್ನ ಆಗೋಕಿಂತ ಮೊದ್ಲು ಸೆಕ್ಸ್ ಎಕ್ಸ್‌ಪಿರಿಯನ್ಸ್ ತಗಂಡ್ರೆ ಒಂತರಾ ಚಲೋ ಇರ್ತಾತಿ. ಆದರೆ ಪ್ರಗ್ನೆಂಟು ಆಗ್ದಂಗೆ ಏಡ್ಸ್ ಅಮರಿಕ್ಯಣ್ದಂಗೆ ಕೇರ್‌ಫುಲ್ ಆಗಿರ್‍ರಿ ಅಂತ ಫ್ಯಾಮಿಲಿ ಪ್ಲಾನಿಂಗ್ ಪಾಠ ಹೇಳಿದ್ದೇ ತಡ, ತಮಿಳು ಪ್ಯಾಂಥರ್‍ಸ್ ಡಿಎಂಕೆ, ಪಿಎಂಕೆ, ಎಲ್‌ಎಂಕೆ ಫೈಟಿಂಗ್ ಬಿದ್ದರು. ಖುಸ್ಬು ಆಂಟಿ ಹೇಳಿದ್ದು ಆಯಮ್ಮ ಪರ್ಸನಲ್ ಒಪಿನಿಯನ್ ಅಂದ್ಕೋಬೋದಿತ್ತು ಬಿಡ್ರಿ. ಆಯಮ್ಮನ ಹೈಟಿಗೆ ವೆಯಿಟ್ಗೆ ಫೇಮಸ್ಗೇ ಫಿಲಂ ಸರ್ವೀಸ್ಗೇ ಅಷ್ಟೂ ಸೆಕ್ಸ್ ಬಗ್ಗೆ ಸೆಕ್ಸಿಯಾಗಿ ಮಾತಾಡೋ ಫ್ರೀಡಂ ಇಲ್ಲ ಅಂದ್ರೇನ್ರಿ.

ನಮ್ಮ ಭಾರತ ದೇಶ ಅಂಬೋದು ಎಂತದು. ನಮ್ಮ ಪುರಾಣ ಪುಣ್ಯ ಕಥೆನಾಗೆ ಬರೋ ಹೆಣ್ಣುಗಳೇನು ಸರ್ವೆಸಾಮಾನ್ಯದ ಹೆಣ್ಣುಗಳೆ. ಲಗ್ನಕ್ಕೆ ಮುಂಚೆ ಸೆಕ್ಸ್ ಗೊತ್ತಿಲದೋಟು ಫಾರ್‌ವರ್ಡ್ ಇದ್ದರು. ಕುಂತಿ ಮಾಡಿದ್ದು ಇನ್ನೇನು? ಏಸು ಹಿಟ್ಟಿದಾರ ಹೆಂಗ್ರಿ ಮೇರಿ ಮ್ಯಾರೇಜೇ ಆಗಿರಲಿಲ್ಲ. ವರ್ಜಿನ್ ಮೇರಿ ಹೊಟ್ಟೆಯಾಗಿಂದ ಬಂದೋನು ಏಸು ಸ್ವಾಮಿ. ದಶರಥ ಯಜ್ಞ ಮಾಡಿದಾಗ ಬಂದ ಪಾಯಸವಾ ತನ್ನ ಮೂವರು ರಾಣೇರ್‍ಗೆ ಕುಡಿಸಿದಮ್ಯಾಗೆ ರಾಮಾಯಣದ ಹೀರೋ ಸೈಡ್ ಆಕ್ಟರ್‌ಗಳು ಹುಟ್ಟಿದ್ದು. ಇದನ್ನು ಬೇಕಾರೆ `ಆರ್ಟಿಫಿಶಿಯಲ್ ಪ್ರೆಗ್ನೆನ್ಸಿ’ ಅರ್ಥಾತ್ ಕೃತಕ ಗರ್ಭಧಾರಣೆ ಅಂದ್ಕಳ್ರಿ. ಗಾಂಧಾರಿಗೆ ವ್ಯಾಸಮುನಿ ಕೊಟ್ಟ ಹಸಿ ತುಪ್ಪವಾ ನೂರು ಕುಂಭದಾಗೆ ಹಾಕಿಟ್ಟು, ಕಾವು ಕೊಟ್ಟ ಮ್ಯಾಗೆ ಕೌರವರು ಹುಟ್ಕಂಡ್ರು. ಪಾರ್ವತಿ ತನ್ನ ಮೈಯಾಗಿನ ಮಣ್ಣು ತೆಗ್ದೆ ಗಣಪತಿ ಹುಟ್ಟಿಸಿದಳು. ಆ ಕಾಲದ ಪುರಾಣ ಪುಣ್ಯಾತ್‌ಗಿತ್ತೇರು ಅಷ್ಟು ಪವರ್‌ಫುಲ್ ಇದ್ದರು. ಗಂಡನ ಕನಕ್ಷನ್ನೇ ಇಲ್ದೆ ಕುಂತಿ, ಗಾಂಧಾರಿ, ಪಾರ್ವತಿ ಮಕ್ಕಳು ಪಡೆದವರು. ಇನ್ನು ಲಗ್ನ ಆದ ಮ್ಯಾಗು ಬ್ಯಾರೆ ಸಂಬಂಧ ಮಡಿಕ್ಕಂಡ ಬೋಲ್ಡ್ ಹೆಣ್ಣುಮಕ್ಳು ನಮ್ಮ ಸನಾತನ ಧರ್ಮದಾಗವರೆ – ಅವರೇ ಪಂಚಮಹಾ ಪತಿವ್ರತೆಯರು ಅಂಬೋ ಟೈಟಲ್ಲೂ ಗಿಟ್ಟಿಸವರೆ. ಇಂಥ ಪ್ರಸಂಗದಾಗೆ ತಮಿಳುನಾಡಿನ ಸೊಸೆಯದ್ದು ಹೇಳಿದ್ದರಾಗ ಏನು ತೆಪ್ಪು ಐತೆ? ಅಜು ಮಾಡಿದ ಹೆಲ್ತ್‌ ಡಿಪಾರ್ಟ್‌ಮೆಂಟಿನೋರು ತಮಿಳುನಾಡಿಗೆ ಏಡ್ಸ್ ರೋಗಿಗಳ ಪರ್ಸೆಂಟೇಜ್ ಜಾಸ್ತಿ ಅಂತ ಸರ್ಟಿಫಿಕೇಟು ಕೊಟ್ಟಾರ. ಅವರ ಮ್ಯಾಲೇಕೆ ಕೊಂಗಾಟಿಗಳು ಎಗರಿ ಬಿದ್ದು ಮೂಲೆ ಮುರಿವ್ಲಾರು. ಸಿನಿಮಾದಾಗೆ ಪಾಲ್ಟು ಮಾಡೋರು ಅಂದ್ರೆ ತಾತ್ಸಾರವಾಗೋತೇನು ಇವಕ್ಕೆ? ಖುಸ್ಬು, ಆಂಟಿ ಟಿವಿನಾಗೆ ಸಿಂಬಳ ಸುರುಸ್ತಾ ಕಣ್ಣೀರು ಹಾಕೋದನ್ನು ನೋಡಿ ಕರಗಿ ನೀರಾದ ಸುಹಾಸಿನಿ ಆಂಟಿ, ಕುಸ್ಬು ಹೇಳಿದ್ರಾಗೆ ತಪ್ಪೇನೈತಿ? ಅಂದಿದ್ದೇ ತಡ ಸುಹಾಸಿನಿ ಮನೆ ಮುಂದೆ ಕಲ್ಲು ಹೊಡೆದು `ಸಾರಿ’ ಕೇಳು ಅಂತ ಬೆನ್ನು ಹತ್ತಿ ಬಿಡೋದೆ! ಯಾವ ತಮಿಳು ಹೀರೋಗಳೂ ಈ ಇಬ್ಬರ ಹೆಂಗಸರ ಪರ ನಿಂತು ಕೊಂಗನಾಟ್ಟು ತಂಗಂಗಳ್ತಾವ ಫೈಟಿಂಗ್ ಮಾಡಿ ಮಾನ ಉಳಿಸೋಕೆ ಒಬ್ಬನಾರ ಬರಲಿಲ್ಲ ನೋಡ್ರಿ. ಹೀರೋಗಳೇನು ಸಾಚಾ ಅದಾರೇನ್ರಿ? ಮಹಿಳಾ ಸಂಘಟನೆಗಳೂ ತುಟಿ ಬಿಚವಲ್ರು. ಸುಮ್ಗೆ ಇರ್‍ದೆ ಇರುವೆ ಬಿಟಕಂಡ್ರು ಅಂಬಂಗೆ ಈ ಎಳೆ ಸೌತೆಕಾಯಿ ಸಾನಿಯಾ ಮಿರ್ಚಿ ಖುಸ್ಬು ಆಂಟಿಗೆ ಸಾಥ್ ಕೊಡೋದೆ! ಫೇಮಸ್ ಹಂಗಾಡಿಸ್ತಾತೇನು? ಏನಂತ ತಿಳ್ಕಂಡಿ ಖುರಾನ್‌ದಾಗೆ ಏನ್ ಹೇಳೇತಿ. ಭಗವದ್ಗೀತಾದಾಗ ಏನ್ ಬರ್‍ದೆತಿ? ಹೆಂಗ್ಸು ಮಾತ್ರ ಪಾತಿವ್ರತ್ಯ ಕಾಪಾಡ್ಕಂಬೇಕು ಅಂತ ಹೇಳಿಲ್ಲೇನೆ ಎಳೆ ನಿಂಬೆ? ಆರು ಇಂಚು ಚಡ್ಡಿ ಹಾಕ್ಕಂಡು ತುಂಬಿ ತುಳುಕೋ ಟೀಶರ್ಟ್‌ನಾಗೆ ಬಾಲ್ ಆಡ್ಕೊಂಡು ಪಸಂದಾಗಿರೋದು ಬುಟ್ಟುಬುಟ್ಟು ಈ ಉಸಾಬರಿ ಎಲ್ಲಾ ನಿನ್ಗೆ ಯಾಕಿದ್ದೀತೇಳು ಅಂತ ಸಾಬರು ಅಂಡ್ ದೆನ್ ಸನಾತನಿಗಳು ಬೊಬ್ಬೆ ಹೊಡೆಯಾಕೆ ಹತ್ತುತ್ಲು ಹುಡ್ಗಿ ಗಾಬ್ರಿ ಆತು. `ಹಾಯ್ ಅಲ್ಲ, ನಾಯಾಕ್ ಹಂಗ್ ಅಂದೇನ್ ಬಿಡ್ರಿ. ಎಲ್ಲಾ ಪೇಪರ್‌ನೋರ ಕಿತಾಪತಿ’ ಅಂತ ಪಾಲಿಟಿಕ್ಸ್‌ನೋರ ಟೈಪ್ ಉಲ್ಟಾ ಹೊಡೀತು. ಸಿನಿಮಾದಾಗೆ ಬಟ್ಟೆ ಬಿಚ್ಕೊಂಡು ಕುಣಿದ್ರು ಬೆಡ್‌ರೂಮ್‌ ಸೀನ್ದಾಗೆ ಉಲ್ಡಾಡಿದ್ರೂ ಅಪ್ಪಿ ಮುದ್ದಾಡಿದ್ರೂ ತಪ್ಪಿಲ್ಲ ಇವುಕ್ಕ. ಅದ್ನೆ ಕಣ್‌ಕಣ್ ಬಿಟ್ಕಂಡು ನೋಡ್ತವೆ. ಅದನ್ನೇ ಓಪನ್ನಾಗಿ ಮಾತಾಡಿದ್ರೆ ಕೊಂಗಾಟಿಗಳು ಮೈಮ್ಯಾಗೆ ಮುಕ್ಕಂಡು ಬೀಳ್ತವೆ. ಏನಾರ ಹಂಗೆಲ್ಲಾರ ಕೆಡವಲ್ಲರ್‍ಯಾಕೆ ಅದನ್ನೆಲ್ಲಾ ವಾಯ್‌ವಿಟ್ಟು ಸೊಲ್ಲಲಾಮಾ. ವಾಯ್ ಮೂಡು ಕೂಸೆ ಅಂತ ಕೊಂಗಾಟಿ ಪಾಟಿ ಒಬ್ಳು ಖುಸ್ಬು ಮೂತಿಗೆ ತಿವೀತಂತೆ. `ಆಡದೆ ಮಾಡೋರು ಲೋಕದೊಳಗುತ್ತಮರು’ ಅನ್ನೋ ಮಾಟ ವಿನ್ನಾವ ಲೇದಾ ಎಂದೊಬ್ಬಾಕಿ ತೆಲಗಿ ಸುಹಾಸಿನಿ ಸ್ವಾಟೆ ತಿರುವಿದ್ಳಂತೆ. ಚೋರಿ ಚೋರಿ ಚುಪ್ಕೆ ಚುಪ್ಕೆ ಏನಾರ ಮಾಡ್ರೆ ಅದರ ಅದನ್ನ ಸುದ್ದಿ ಮಾಡಬಾರ್ದೆ ಚೋಕ್ರಿ ಅಂತ ಬೂಬಮ್ಮ ಸಾನಿಯಾ ಮಿರ್ಚಿ ಮೂಗೇ ಹಿಂಡಿದ್ಳಂತ್ರಿ. ನಂಬಿದರೆ ನಂಬಿ ಬಿಟ್ಟರೆ ಬಿಡ್ರಿ. ಈ ಭರತಭೂಮಿ ಮ್ಯಾಗೆ ಗಂಡ ಏನಾರ ಮಾಡ್ಕೋಬೋದು. ಅದರ ಹೆಂಗಸರು ಮಾತ್ರ ಏಕಪತಿ ವ್ರತಸ್ಥರಾಗಿರಬೇಕು. ನಮ್ಮ ಶಾಸ್ತ್ರ, ಪುರಾಣ ಹಂಗೆ ಹೇಳ್ತಾವ ಅಂತ ವಿಶ್ವಹಿಂದೂ ಪರಿಷತ್ತಿನೋರು ತಾಳೆಗರಿ ಕಟ್ಟು ಬಿಚ್ಚಲಾಗಿ ಸಿನಿಮಾ ಬಿಚ್ಚಮ್ಮಗಳು ಒಳಗೇ ರಾಂಗ್ ಆಗಿ ಮುಂದಿನ ಯಲಕ್ಷನ್ದಾಗ ಬಿಜೆಪಿ ಪಕ್ಷದ ಪರವಾಗಿ ಕ್ಯಾನ್ವಾಸ್ ಕ್ಯಾನ್ಸಲ್ ಅಂದರಂತ್ರಿ! ಸಿನಿಮಾದಾಗೆ ನೆಟ್ಟಗೆ ಚಾನ್ಸ್ ಇಲ್ಲದೆ ಒದ್ದಾಡ್ತಿರೋ ತಮಿಳುನಾಡಿನ ಸೊಸೆ ಖುಸ್ಬು ಪಬ್ಲಿಸಿಟಿಗೆ ಇರ್‍ಲಿ ಅಂತ ಇಂಟಲಕ್ಚುಯಲ್ ಸ್ಟೈಲ್ನಾಗೆ ಒಂದು ಡೈಲಾಗ್ ಹೊಡೆದುದ್ದೇ ಕೋರ್ಟು ಕಛೇರಿ ಹತ್ತಿಸಿಬಿಟ್ಟಾತು ಅಂತ ಆಕಿಗಾರ ಏನ್ ಗೊತ್ರಿ ಪಾಪ. ನಮ್ಮ ಸಿನಿಮಾದಾಗೆ ಸೆಕ್ಸ್ ಇಲ್ವೆ. ದೇವಸ್ಥಾನಗಳ ಮ್ಯಾಗೆಲ್ಲ ವಾತ್ಸಾಯನ ಶಾಸ್ತ್ರದ ಭಂಗಿಗಳ ಫೋಜ್ ಕೆತ್ತಿಲ್ವೆ ಶಿಲ್ಪಿಗುಳು ಮಹಾಭಾರತದಾಗಂತೂ ಬರಿ ಇಲ್ಲೀಗಲ್ ಸಂಬಂಧಗಳ ಕತಿನೇ ಮಕ್ಕಂಡೇತಿ. ಖುಸ್ಬು ಆಂಟಿ ಹೇಳಿದಾಕ್ಷಣ ನಮ್ಮ ಹುಡ್ಗೀರು ಲಗ್ನಕ್ಕೆ ಮುಂಚೆ ಸೆಕ್ಸ್ ಸುರು ಹಚ್ಕೊಂಬಿಟ್ಟಾರಾ ನಮ್ಮ ಹುಡ್ಗಿರೇನು ದಡ್ಡರಾ ಅವರ್‍ಗೇನು ಸೇಫ್ಟಿ ಮೆಥೆಡ್ಸ್ ಗೊತ್ತಿಲ್ಲರಾ. ನಮ್ಮ ದೇಸದ ಪುರಾಣ ಇತಿಹಾಸವಾದ್ರೂ ಆಟೆಯಾ ಹೇಳಾದೊಂದು ಮಾಡಾದೊಂದು. ಏನಾರ ಮಾಡ್ರಿ ಗುಟ್ಟಾಗಿ ಮಾಡ್ರಿ. ಗುಟ್ಟೇನಾರ ರಟ್ಟಾತೋ ರೊಟ್ಟಿ ಬಡದಂಗೆ ಬಡಿತಾರ ಹುಷಾರ್‍ರಿ….. ತಿಳೀತಿರಿಲ್ಲೋ.
*****
( ದಿ. ೦೫-೧೨-೨೦೦೫)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬ್ರಿಕ್ಸ್ & ಟೈಲ್ಸ್ ಕಂಪೆನಿ
Next post ಧರ್ಮೋ ರಕ್ಷತಿ

ಸಣ್ಣ ಕತೆ