ಒಮ್ಮೆ ಮಿಂಚುಹುಳಕ್ಕು, ಆಗಸದ ಚುಕ್ಕಿಗೂ ಮಾತು ಕತೆ ಆಯಿತು. “ಏ! ಚುಕ್ಕಿ! ನೀನು ಆಗಸವನ್ನು ಬೆಳಗಲು ಹೊರಟಿರುವೆಯಾ?” ಎಂದು ಕೆಣೆಕಿತು ಮಿಂಚು ಹುಳ. ಏ! ಮಿಂಚು ಹುಳ! ನೀನು ಭೂಮಿಯನ್ನು ಬೆಳಗಲು ಹೊರಟಿರುವೆಯಾ?” ಎಂದು ಕೊಂಕು ಧ್ವನಿಯಲ್ಲಿ ಕೇಳಿತು ಚುಕ್ಕಿ, ಒಬ್ಬರ ಪ್ರಶ್ನೆ ಇನ್ನೊಬ್ಬರಿಗೆ ಚಾವಟಿ ಏಟಿನಂತೆ ಬರೆ ಬರಿಸಿತು. ಇಬ್ಬರೂ ಮಿಣಮಿಣ ಅಂತ ಮಿನುಗುತ್ತಾ ಮೌನವಾಗಿ ಹೋದರು.
*****