ಅಷ್ಟೆಲ್ಲಾ ತಾರೆಗಳ
ಬಿಗಿ ಪಹರೆಯ ನಡುವೆಯೂ
ತಿಂಗಳಿಗೊಮ್ಮೆ ಕಣ್ಮರೆಯಾಗುವ
ತುಂಟ ಚಂದಿರನಂತೆ,
ಮೈ ಎಲ್ಲಾ ಕಣ್ಣಾಗಿ
ಕಾದಿರುವ ಹಸಿವಿನ
ಪರಿಧಿ ದಾಟಿ ಮರೆಯಾಗಿ
ನಿಡುಸುಯ್ಯುತ್ತದೆ ರೊಟ್ಟಿ.
*****