ಕೋಣೆಯಲ್ಲಿ ಹರಡಿದ ಬೊಂಬೆಗಳನ್ನು ಮಗು ಮಲಗಿಸಿ ಅಜ್ಜಿಯ ತೊಡೆಯಲ್ಲಿ ಕುಳಿತಿತು ಮಗು. “ಪುಟ್ಟಿ! ಬೊಂಬೆ ಜೊತೆ ಆಡಿಕೋ” ಎಂದಳು ಅಜ್ಜಿ. “ಬೊಂಬೆ ಆಗಲೆ ತಾಚಿ ಮಾಡಿದೆ, ಜೋಜೋ ಹಾಡಿದೆ. ಅಜ್ಜಿ ಈಗ ನೀನು ತಾಚಿಮಾಡು” ಎಂದಿತು ಮಗು. “ಏಕೆ? ನಾ ಮಲಗ ಬೇಕು” ಕೇಳಿದಳು, ಅಜ್ಜಿ. “ಅಜ್ಜಿ, ಬೇಗ ಮಲಗು. ನಾನು ಆಟಕ್ಕೆ ಹೋಗಬೇಕು ಅಂತು” ಮಗು.
*****