“ನೀನು ಪ್ರೀತಿಸದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದ ಹುಡುಗ. ಹುಡುಗಿ ನಂಬಿ ತನುಮನ ಅರ್ಪಿಸಿದಳು. ಹುಡುಗನಿಗೆ ತೃಪ್ತಿಯಾಯಿತು. “ಮದುವೆಯಾಗು” ಎಂದು ಕೇಳಿದಳು ಹುಡುಗಿ. “ನೋಡು, ಈ ಹುಡಿಗಿಯನ್ನು ನಾನು ಪ್ರೀತಿಸಿ ಮದುವೆ ಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳಂತೆ. ನಾನೇನು ಮಾಡಲಿ? ನನ್ನ ಅರ್ಥ ಮಾಡಿಕೊಂಡು ದೂರ ಹೋಗಿಬಿಡು” ಎಂದು ಹೇಳಿ ಅವನೇ ದೂರ ಸರಿದು ಬಿಡುತ್ತಾನೆ.
*****