ಒಮ್ಮೆ ಬೆಳ್ಳಿಮೋಡ, ಕಾರ್‍ಮೋಡ ಒಂದಕ್ಕೊಂದು ಎದುರಾದವು. ಕಾರ್‍ಮೋಡವನ್ನು ನೋಡಿ- “ನೀನದೆಷ್ಟು ಕಪ್ಪು” ಎಂದು ಹೀಯಾಳಿಸಿತು ಬೆಳ್ಳಿಮೋಡ.

ಅಲ್ಲದೆ ತನ್ನ ಸಮರ್ಥಿಸಿಕೊಂಡು “ನೋಡು ನನ್ನಲ್ಲಿ ಬೆಳಕು ತುಂಬಿಕೊಂಡಿರುವೆ” ಎಂದು ಜಂಭದಿಂದ ಹೇಳಿತು. ಕಾರ್‍ಮೋಡದ ಮನಕ್ಕೆ ಧಕ್ಕೆಯಾಯಿತು. ತನಗಾದ ದುಃಖದ ಅಘಾತದಲ್ಲಿ ಮಳೆಯಾಗಿ ಕಣ್ಣೀರು ಸುರಿಸಲಾರಂಭಿಸಿತು.

“ಅಯ್ಯೋ! ನನ್ನಲ್ಲಿದ್ದ ಬೆಳಕು ಮಳೆಯ ನೀರಿನಲ್ಲಿ ಹರಿದು ಹೋಯಿತು. ನಾನು ಜಂಭ ಪಡಬಾರದಿತ್ತು.” ಎಂದು ಕೊಂಡಿತು ಬೆಳ್ಳಿ ಮೋಡ.
*****