ವಾಗ್ದೇವಿ – ೪೨

ವಾಗ್ದೇವಿ – ೪೨

ನೃಸಿಂಹಮಠದ ಪಾರುಪತ್ಯಗಾರನ ಅಳಿಯ ಶೋಣಭದ್ರ ಭಟ್ಟನು ಕುಮುದಪುರದಲ್ಲಿರುವ ಆ ಮಠಕ್ಕೆ ಇರುವ ಭೂಮಿಗಳಿಂದ ಅದರ ಜೀರ್ಣೋ ದ್ಧಾರಕ್ಕೋಸ್ಟರ ಕೆಲವು ಮರಗಳನ್ನು ಕಡಿಸುವುದಕ್ಕೆ ಬಂದವನು ಆಂಜನೇ ಯಾಲಯವದಲ್ಲಿ ಬಿಡಾರವಿದ್ದು ಮಾವನು ಕೊಟ್ಟ ಅಜ್ಞೆಗಳಂತೆ ಪ್ರವರ್ತಿಸುವ ವೇಳೆಯಲ್ಲಿ ತಿಪ್ಪಾಶಾಸ್ತ್ರಿಯು ಯಾರಿಗೂ ಹೇಳದೆ ಕೇಳದೆ ಶೋಣಭದ್ರನ ಕೂಡೆ ವಾಗ್ವಾದ ಮಾಡಲುಪಕ್ರಮಿಸಿ ಅವನು ಕಡಿಸಲಿಕ್ಸೆ ನೋಡುವ ಮರ ಗಳಲ್ಲಿ ಹಲವು ಚಂಚಲನೇತ್ರರ ಭೂಮಿಗೆ ಸಂಬಂಧವಾದವುಗಳೆಂದು ಒಂದು ದುರ್ವಿವಾದ ಹುಟ್ಟಿಸಿ ಈ ಉಭಯ ಮಠಾಧಿಪತಿಗಳೊಳಗೆ ದ್ವೇಷದ ಬೀಜ ವನ್ನು ಬಿತ್ತಿಬಿಟ್ಟನು. ಶೋಣಭದ್ರನು ಚಂಚಲನೇತ್ರರನ್ನು ಕಂಡು ತಾನು ಬಂದಿರುವ ಕಾರ್ಯಕ್ಕೆ ನಿರ್ನಿಮಿತ್ತವಾಗಿ ನಿಘೃತರುವುದಕ್ಕೆ ತಿಪ್ಪಾಶಾಸ್ತ್ರಿಯು ಮಾಡುವ ದುಸ್ಸಾಧನೆಯನ್ನು ಮನ್ನಿಸಬಾರದಾಗಿ ಮರ್ಯಾದಿಪೂರ್ವಕ ವಾಗಿ ಹೇಳಿಕೊಂಡನು. ಅದನ್ನು ಕುರಿತು ತನ್ನ ಕಡೆಯವರಿಂದ ಪೂರ್ಣ ವಿಚಾರಿಸಿ ತಿಳುಕೊಂಡು ಉತ್ತರ ಹೇಳಿಕಳಿಸುವೆನೆಂದು ಚಂಚಲನೇತ್ರರ ಪ್ರತಿ ಉತ್ತರವಾಯಿತು. ಪರಂತು ಮರದ ದ್ರವ್ಯವೆಲ್ಲಾ ಕಾಕತ್ರಯವಾಯಿ ತೆಂಬ ಚಿಂತೆಯಲ್ಲಿ ಮುಳುಗಿದ ಈ ಸನ್ಯಾಸಿಗೆ ತಾಕು ಕೊಟ್ಟಿರುವ ಮಾತಿನ ನೆನಪಿಲ್ಲದೆಹೋಯಿತು. ಮೌನಧಾರಣೆಯಿಂದ ತನ್ನ ಪ್ರಾರ್ಧನೆಯನ್ನು ಅವಜ್ಞೆ ಮಾಡಿದರೆಂಬ ಸಿಟ್ಟಿನಿಂದ ಶೋಣಭದ್ರನು ತನ್ನ ಧಣಿಯ ಪಕ್ಷದ ಅನೇಕ ಮಂದಿ ಒಕ್ಕಲುಗಳನ್ನು ಗುಂಪುಕೂಡಿಸಿ ಮರಗಳನ್ನು ಕಡಿಸುವಾಗ ತಿಪ್ಪಾಶಾಸ್ತ್ರಿಯು ಸ್ವೇಚ್ಛೆಯಿಂದ ಕೊತ್ವಾಲನ ಬಳಿಗೆ ಹೋಗಿ ದೂರು ಕೊಟ್ಟನು.

ಮಠದ ಕಡೆಯಿಂದ ಕರೀಕಾಗೆಯು ಬಂತೆಂದು ಯಾರಾದರೂ ಹೇಳಿ ದರೆ ಅದಕ್ಕೆ ಒಂದು ನಮಸ್ಕಾರ ಹಾಕಿಬಿಡುವಾ ಎಂಬುವಷ್ಟು ಮಠದ ವಾಂಛಲ್ಯ ವಿರುವ ಭೀಮಾಜಿಯು ವಿಚಾರ ಮಾಡದೆ ಶೋಣಭದ್ರನು ಜಗಳಗಂಟನೆಂಬಂತೆ ಊಹೆ ಹುಟ್ಟುವ ಒಂದು ಮನವಿಯನ್ನು ಬರಕೊಂಡಾ ಕ್ಷಣ ಚಂಚಲನೇತ್ರರು ತನ್ನದೆಂತ ಸಾಧಿಸುವ ಮರಗಳನ್ನು ಶೋಣಭದ್ರನು ಕಡಿಸಕೂಡದೆಂದು ಅಪ್ಪಣೆಮಾಡಿದನು. ಈ ಅಪ್ಪಣೆಯು ತಾಮಸವಿಲ್ಲದೆ ಶೋಣಭದ್ರಭಟ್ಟಗೆ ತಿಳಿಸೋಣಾಯಿತು. ಭಟ್ಟಗೆ ಸಿಟ್ಟುಬಂತು. ಅವನು ಲವಕಾಲ ಅಲ್ಲಿ ತಡೆಯದೆ ಊರಿಗೆ ಹೋಗಿ, ನೃಸಿಂಹ ಮಠದ ಪಾರುಪತ್ಯ ಗಾರನ ಪರಿಮುಖ ಅಲ್ಲಿಯ ಶ್ರೀಪಾದಂಗಳಿಗೆ ತಿಳಿಸೋಣ ಅವರು ರುದ್ರ ಭೀಮನಂತೆ “ಕಡಿಯಲೋ ಕೊಚ್ಚಲೋ?” ಎಂದು ತುಟಗಳನ್ನು ಕಚ್ಚಿ ಕೊಂಡು ಬಾಯಿಯಿಂದ ನೊರೆ ಹೊರಡಿಸುತ್ತಿರುವ ಸಮಯ ಹ್ಯಾಗೋ ಈ ಸುದ್ಧಿಯನ್ನು ತಿಳಿದ ವೇದವ್ಯಾಸ ಉಪಾಧ್ಯನು ರಾಮದಾಸರಾಯನನ್ನು ಸಂಗಡ ಕರಕೊಂಡು ಜ್ಞಾನಸಾಗರತೀರ್ಥರ ಪಾದಕ್ಕೆರಗಿ ಮುಕುಳಿತಹಸ್ತ ನಾಗಿ ನಿಂತು ಕೊಂಡನು. ಅವರು ಬಂದದ್ಯಾಕೆಂದು ಸ್ವಾಮಿಗಳು ಕೇಳಿದರು. ರಾಮದಾಸರಾಯನು ಸಕಲ ಪೂರ್ವೋತ್ತರವನ್ನು ಶ್ರೀಪಾದಂಗಳಿಗೆ ಅರಿಕೆ ಮಾಡಿದನು. ಆವಾಗ ಹಿಂದೆ ವೇದವ್ಯಾಸ ಉಪಾಧ್ಯನು ದೂರು ತಂದ ವೇಳೆ ಯಲ್ಲಿ ಅವನನ್ನು ಧಿಕ್ಕರಿಸಿದ ನೆನಪು ಹುಟ್ಟಿ ಅನುತಾಪವಾಗಿ ಮುಂದೆ ನಡೆಸಬೇಕಾದ ಉಪಾಯವನ್ನು ಕುರಿತು ರಾಮದಾಸನ ಕೂಡೆ ಜ್ಞಾನಸಾಗರ ತೀರ್ಥರು ಆಲೋಚನೆ ಕೇಳಿದಾಗ ಮರಗಳ ವಿವಾದವನ್ನು ಕೊಚಸಮ ಯದಲ್ಲಿ ತೀರುವ ಹಾಗಿನ ವೈನ ತಾನು ನಡೆಸುವದಾಗಿ ವಕೀಲನು ಅವರನ್ನು ನಂಬಿಸಿದನು. ಸೂರ್ಯನಾರಾಯಣನ ಆಶ್ರಮವನ್ನು ಕುರಿತು ಶ್ರೀಪಾದಂಗಳು ಪ್ರಸ್ತಾಪಿಸಿದಾಗ ದ್ವಂದ್ವ ಮಠದವರಾದ ತಾವು ಯೋಗ್ಯನಾದ ಇನ್ನೊಬ್ಬ ನನ್ನು ಆರಿಸಿರೆಂದು ರಾಮದಾಸನು ಸೂಚನೆ ಕೊಟ್ಟನು. ಯಾವುದಕ್ಕೂ ಪಾರುಪತ್ಯಗಾರನ ಅಭಿಪ್ರಾಯ ಪಡಕೊಳ್ಳುವದು ಉಚಿತವಾದ ಕಾರಣ ಅವನನ್ನು ಕರೆಕಳುಹಿಸೋಣಾಯಿತು.

ಅಳಿಯನು ಹೇಳಿದೆ ದೂಷಣೆಯನ್ನು ಕೇಳಿ, ಮೊದಲೇ ಕಡುಕೋಪ ವನ್ನು ತಾಳಿದ ಪಾರುಪತ್ಯಗಾರನು ಧನಿಯ ಅಪ್ಪಣೆಯಾಯಿತೆಂದು ಕೇಳು ತ್ತಲೇ ಮಠಕ್ಕೆ ಬಂದು ಪ್ರಣಾಮಮಾಡಿ ನಿಂತುಕೊಂಡನು. ಸಾಂಪ್ರತ ನಡೆಯುವ ಪ್ರಸ್ತಾಪದಲ್ಲಿ ಅವನ ಅಭಿಪವ್ರಾಯವನ್ನು ಯತಿಗಳು ಕೇಳಿದಾಗ ಸೂರ್ಯನಾರಾಯಣನನ್ನು ಕುರಿತು ರಾಮದಾಸನು ಕೊಟ್ಟ ಆಲೋಚನೆ ಯನ್ನೇ ಪ್ರತಿಧ್ವನಿ ಮಾಡಿದನು. ವಕೀಲನೂ ಪಾರುಪತ್ಯಗಾರನೂ ಏಕಮತಿ ಯಾದ ಮೇಲೆ ಬೇರೆ ಯಾರನ್ನು ಕೇಳಬೇಕೆ? ಉಳಕಿ ಮಠದವರಿಗೆ ಪತ್ರಿಕೆ ಗಳನ್ನು ಬರೆದು ಕಳುಹಿಸಿ ಅವರ ಅಭಿಮತವನ್ನು ಕೇಳಿಬಿಡುವದು ಒಳ್ಳೇ ದೆಂದು ಸ್ವಾಮಿಗಳು ಮಾಡಿದ ನಿರ್ಣಯಕ್ಕೆ ಆಗ್ಲೆ ಸಮಾಪ ಇದ್ದವರೆಲ್ಲರೂ ತಥಾಸ್ತು ಎಂದರು. ಒಡನೆ ಆವಾವ ಮಠಾಧಿಪತಿಗಳಿಗೆ ಲೇಖನಗಳು ಬರೆ ಯಲ್ಪಟ್ಟವು. ಅವುಗಳ ಒಕ್ಳಣೆಯು ರಾಮದಾಸನದು. ಈ ವಕೀಲನು ನೃಸಿಂಹ ಮಠದಲ್ಲಿ ಬಹು ವಿಶ್ವಾಸಿಯಾಗಿ ಮೆರೆಯಲಿಕ್ಕಾದನು. ಮೊದಲ ತೀರ್ಥವು ಅವನಿಗೆ ಕೊಡುವ ವಾಡಿಕೆಬಿತ್ತು. ಭೋಜನಕಾಲದಲ್ಲಿ ಮರ್ಯಾದಿ ಎಲೆಯು ಅವನಿಗೆ ಸಿಕ್ಕುವದಾಯಿತು. ಮರಗಳ ವ್ಯಾಜ್ಯವನಕ ಅವನ ಯುಕ್ತಿಗೆ ಬಿಡಲ್ಪಟ್ಟಿತು.

ದೊಡ್ಡ ಯತಿಗಳೇ ರಾಮದಾಸರಾಯನ ಕಕ್ಸಿಗಾರರಾದ ಬಳಿಕ ವಕೀಲನ ವೈಭವಕ್ಕೆ ಎಣೆಯುಂಟೇ? ಮರಗಳನ್ನು ಕುರಿತು ವಿವಾದವು ಆಗುವಷ್ಟು ಘೋರವಾಗಿ ಬೇಗನೆ ತೀರ್ಮಾನಕ್ಕೆ ಬಾರದಂತೆ ವಕೀಲನು ದೊಡ್ಡ ದೊಡ್ಡ ಮನವಿಗಳನ್ನು ಬರೆದು ನಗರದಲ್ಲಿರುವ ಬೇರೆ ಬೇರೆ ಉದ್ಯೋ ಗಸ್ಥರಿಗೆ ಎಡೆಬಿಡದೆ ಕಳುಹಿಸಿದನು. ಒಂದಕ್ಕೂ ಸುಸೂತ್ರವಾದೆ ಉತ್ತರವು ದೊರಕದೆ ಸ್ವಾಮಿಗಳಿಗೆ ಬೇಸರವಾಯಿತು. ಕಡೆಗೆ ಆ ವಿಷಯದಲ್ಲಿ ಮಾಡ ಲ್ಪಟ್ಟ ದಾವೆಯು ಅದಾಲತ ಅಧಿಕಾರಿಯ ಕಚೇರಿಯಲ್ಲಿ ವಿಮರ್ಶೆಗೆ ಬಂತು. ಅವನು ಚಂಚಲನೇತ್ರರ ಕಡೆಗೆ ಮಾಲಿದೆನು. ದಾವೆಯು ಜ್ಞಾನಸಾಗರ ತೀರ್ಥರಿಗೆ ಅವಗುಣವಾಯಿತು. ಈ ವದಂತಿಯು ನೃಸಿಂಹಪುರದ ಯತಿ ಗಳ ಕಿವಿಗೆ ಬಿದ್ದಾಕ್ಷಣ ಅವರಿಗೆ ಉಂಟಾದ ಕ್ರೋಧವು’ ವರ್ಣಿಸಲಿಕ್ಕೆ ಅಸಾಧ್ಯವೇ.

ಅಷ್ಟರಲ್ಲಿ ಮಠಾಧಿಪತಿಗಳು ಒಟ್ಟು ಕೂಡಿ ಒಂದು ಸಭೆಯನ್ನು ಮಾಡಿ ಸೂರ್ಯನಾರಾಯಣನು ಆಶ್ರಮಕ್ಕೆ ಅಯೋಗ್ಯನೆಂದು ನೃಸಿಂಹ ಮಠದ ಸ್ವಾಮಿಗಳು ಪಡುವ ಅಭಿಪ್ರಾಯವು ಸರಿ ಎಂದು ನಿರ್ಣಯಿಸಿದರು. ಆದರೂ ಹೆಸರುಹೋದ ಮತಾಧಿಪತಿಗಳಾದ ಚಂಚಲನೇತ್ರರು ಅಂಥಾ ಅವಹಿತ ಕಾರ್ಯಕ್ಕೆ ಮನಸ್ಸು ಕೊಟ್ಟದ್ದು ಯಾಕೆಂಬದನ್ನು ಕುರಿತು ಮೊದಲು ಅವರನ್ನು ಬರಹಮೂಲಕವಾಗಿ ಕೇಳಿ ಅವರ ಪ್ರತ್ಯುತ್ತರ ಸಿಕ್ಕಿದ ಬಳಕ ಈ ಪ್ರಸಂಗವನ್ನು ಕೊನೆಗೊಳಿಸುವದು ಯುಕ್ತವೆಂಬ ಹಾಗೆ ಯತಿ ಗಳಲ್ಲಿ ಅಧಿಕ ಪಕ್ಷದವರ ಮತವಾದ ಕಾರಣ ನೃಸಿಂಹಪುರದ ಸ್ವಾಮಿಗಳು ಅವಸರವನ್ನು ತಡೆದಿಡುವದಕ್ಕೆ ಅಗತ್ಯಪಟ್ಟರು. ರಾಮದಾಸರಾಯನಿಗೂ ಮಿಕ್ಕು ಯತಿಗಳ ಮನೋಗತವು ಸರಿಯಾಗಿ ತೋಚದೆ ನಡೆದ ಕಾರ್ಯವು ಕೇವಲ ಆಗಮ ವಿರುದ್ಧವಾದದ್ದೆಂದು ಸರ್ವರೂ ಏಕಮತವಾದ ಮೇಲೆ ತಪ್ಪಿಬಿದ್ದ ಸನ್ಯಾಸಿಯ ಪ್ರತಿವಾದವನ್ನು ಕೇಳಬೇಕಾದ್ದೇನು ಅವಶ್ಯವೆಂದು ಕಕ್ಷಿಮಾಡಿದನು. ಇಂಥ ವಿಶೇಷವಾದ ಸಂಗತಿಯಲ್ಲಿ ಮುಂದೆ ಅನೇಕ ಎಾಗ್ವಾನಗಳು ರಾಜದ್ವಾರದಲ್ಲಿಯೂ ಹುಟ್ಟಿ ಸಕಲ ಮತಠಾಧಿಸತಿಗಳ ಅಭಿ ಜ್ಞತೆಯ ಗುರುಲಘುತ್ವದ ಪರಿಶೀಲನವಾಗುವ ಸಂಭವವಿರುವದರಿಂದ “ಎತ್ತು ಕರು ಹಾಕಿತಂದರೆ ಕೊಟ್ಟಿಗೆಯಲ್ಲಿ ಕಟ್ಟೆಂದು” ಹೇಳಿದಂತಾಯಿತೆಂಬ ಅಪವಾದ ಬಾರದ ಹಾಗೆ ನೋಡಿಕೊಳ್ಳುವ ಮುಂಜಾಗ್ರತೆ ಉತ್ತಮವೆಂದು ನಿಷ್ಪಕ್ಷಪಾತಿಗಳು ತಿಳಕೊಂಡರು. ಆದುದರಿಂದ ರಾಮದಾಸನು ಸೋತನು. ಜ್ಞಾನಸಾಗರತೀರ್ಥರ ಮನಸ್ಸೂ ಕೊಂಚ ಕುಸಿಯಿತು. ಆದರೂ ಒಮ್ಮಿಂ ದೊಮ್ಮೆ ಗಡಿಬಿಡಿಮಾಡಿದರೆ ಮುಂದಿನ ಸಾಧನೆ ನಿರರ್ಥಕವಾಗುವದೆಂಬ ಭಯದಿಂದ ಅಧಿಕ ಪಕ್ಷದ ನಿರ್ಣಯಕ್ಕೆ ತಮ್ಮ ಅಭಿಮತವನ್ನು ಕೊಟ್ಟರು.

ಕುಮುದಪುರದ ಮಠಾಧೀಶರಿಗೆ ಬಕೆಯಬೇಕಾದ ಲೇಖನದ ಮಸೂದೆಯನ್ನು ಗಮನಿಸಲಿಕ್ಕೆ ರಾಮದಾಸನನ್ನು ಯತಿಗಳೆಲ್ಲರೂ ಅಪೇಕ್ಷಿಸಲಾಗಿ ಅವನು ಆ ರೀತಿ ವರ್ತಿಸಿದನು. ಪರಂತು ಅವನ ಬರವಣಿಗೆಯ ಅಂದವು ದುರ್ವಾಕ್‌ ಭರಿತವಾಗಿ ಸಿಟ್ಟಿಬ್ಬಿಸುವ ಹೋಲ್ವೆ ಉಳ್ಳದ್ದಾಗಿ ತೋರಿಬಂದ ಪ್ರಯುಕ್ತ ಮತಾಧಿಪತಿಗಳೂ ಸರ್ವರೂ ಅದನ್ನು ಓದಿಸಿ ಕೇಳುತ್ತಲೇ ಮಖ ಗಳನ್ನು ತಿರುಗಿಸಿಬಿಟ್ಟರು. ರಾಮದಾಸನು ಈ ದೆಸೆಯಿಂದ ಕೊಂಚವಾದರೂ ಲಜ್ಜತನಾಗಲಿಲ್ಲ. ತಲೆ ಬೋಳಿಸಿಕೊಂಡು ಸನ್ಯಾಸಿಗಳೆನ್ನಿಸಿಕೊಳ್ಳುವವರೆ ಲ್ಲರೂ ದುರಾಭಿಮಾನಿಗಳು; ಹಣಸುಲಿಯುವದೊಂದೇ ವಿಷಯದಲ್ಲಿ ಪ್ರವೀಣ ರಲ್ಲದೆ ಬೇರೆ ಎಲ್ಲಾ ವಿಚಾರದಲ್ಲಿ ಅವರಲ್ಲಿರುವಷ್ಟು ವಿವೇಕ ಇನ್ನೊ ಬ್ಬನಲ್ಲಿ ಇರಲಾರದೆಂದು ತನ್ನ ಮನಸ್ಸಿನಲ್ಲಿಯೇ ಅಂದುಕೊಂಡು ತುಚ್ಛ ನಗೆಯಿಂದ ತನ್ನ ದೂಷ್ಯನಡತೆಯನ್ನು ಆಭಾದಿಸಿದನು. ನೃಸಿಂಹಮಠದ ಶ್ಯಾನುಭಾಗನು ಒಕ್ಳಣೆಗಾರನೆಂಬ ಹೆಸರು ಪಡದಿರುವನು. ಅವನ ಬರ ವಣಿಗೆಯೇ ಸಾಂಪ್ರತ ಸಾಕಾಗುವದೆಂದು ಯೋಚಿಸಿ ಮತಾಧಿಪತಿಗಳು ಅವನನ್ನು ಕುರಿತು ಅಪೇಕ್ಷಿಸೋಣ ಅವನು ವಿಳಂಬಮಾಡದೆ ಬಂದು ಪ್ರಶ್ನಾಪತ್ರವನ್ನು ಬರೆದು ಓದಿ ಹೇಳಿದನು.

ಪ್ರಕೃತದ ಪ್ರಸಂಗಕ್ಕೆ ಉಪಯುಕ್ತವಾದ ಪ್ರಶ್ರೆಗಳು ಪತ್ರದಲ್ಲಿ ಹಾಕಿ ರುವುದರಿಂದ ಹೆಚ್ಚಿನ ಆಲೋಚನೆ ಮಾಡುವ ಅಗತ್ಯವಿಲ್ಲ. ಆ ಪತ್ರಿಕೆಯನ್ನು ಸರಿಯಾಗಿ ಬರೆಸಿದ ತರುವಾಯ ನಾಲ್ಕು ಮಂದಿ ಯತಿಗಳು ಅದಕ್ಕೆ ತಮ್ಮ ಒಪ್ಪಿಗೆ ಹಾಕಿದರು. ಹರಿಕಾರನೊಬ್ಬನು ಶೀಘ್ರ ಕುಮುದಪರಕ್ಕೆ ಹೋಗಿ ಅದನ್ನು ಚಂಚಲನೇತ್ರರ ಕೈಯಲ್ಲಿ ಕೊಟ್ಟನು. ಅವರು ಅದನ್ನು ತಾನೇ ಓದಿನೋಡಿ, ಇದೇನಪ್ಪಾ ಆಶ್ಚರ್ಯ! ವೇದವ್ಯಾಸ ಉಪಾಧ್ಯಗೆ ಏಕಾದಶಕ್ಕೆ ಶನಿಬಂದನೇ! ನಾಯಿಯಂತೆ ತುಚ್ಛಮಾಡಲ್ಸಟ್ಟು ಪ್ರತಿ ಮಠದಿಂದ ಹೊರಗೆ ದಬ್ಬಲ್ಸಟ್ಟ ಆ ಕುನ್ನಿಯ ಪಕ್ಷವನ್ನು ಈಗ ನಮ್ಮಸರಿ ಮಠದವರೆಲ್ಲರೂ ಅವಲಂಭಿಸಲಿಕ್ಕೆ ಉಂಟಾದ ಹೇತು ತಿಳಿಯುವದಿಲ್ಲವಾಗಿ ಹೇಳಿಕೊಳ್ಳುತ್ತಾ ಕುಳಿತಿರುವ ಯತಿಗಳ ಬಳಿಗೆ ಚಾಕರನೊಬ್ಬನು ಓಡಿಬಂದು ಪರಾಕೆ ಆಬಾ ಚಾರ್ಯರಿಗೆ ಕಂಪನತೊಡಗಿ ಬಳಲುವರೆಂದು ವರದಿಕೊಟ್ಟನು.

ಮಠಾಧಿಪತಿಗಳು ಪ್ರಶ್ನಪತ್ರವನ್ನು ಅಲ್ಲಿಯೇ ಬಿಟ್ಟು ಅವಸರದಿಂದ ವಾಗ್ದೇವಿಯ ವಾಸಸ್ಥಾನಕ್ಕೆ ಬಂದು ನೋಡಿದಾಗ ವಾಗ್ದೇವಿಯು ಭೂಮಿಯ ಮೇಲೆ ನಡುಗುತ್ತಾ ಬಿದ್ದಿರುವ ಪತಿಯ ಮಗ್ಗಿಲಲ್ಲಿ ಕೂತು ಪ್ರಲಾಸಿಸುವದು ತೋಚಿತು. ಆಬಾಚಾರ್ಯಗೆ ಮಾತನಾಡುವದಕ್ಕೆ ಕೂಡುತ್ತಿದ್ದಿಲ್ಲ. ಪ್ರಾಣ ವಾಯು ತೊಲಗುವದಕ್ಕೆ ಹೆಚ್ಚು ಸಮಯ ತಗಲದೆಂದು ನೋಡುವವರೆ ಲ್ಲರೂ ಕುಸುಗುಟ್ಟಲಿಕ್ಕೆ ತೊಡಗಿದರು. ಪಟ್ಟಣದಲ್ಲಿರುವ ಪ್ರಖ್ಯಾತ ಘನ ವೈದ್ಯ ತುಕಾರಾಮ ಪಂಡಿತನನ್ನು ಯಾನದಲ್ಲಿ ಕುಳ್ಳಿರಿಸಿ ಬೀಗ ತರುವದಕ್ಕೆ ಸ್ವಾಮಿಗಳ ಆಜ್ಞೆಯಾಯಿತು. ಪಂಡಿತನು ತಲಪಿ ರೋಗಿಯ ಮುಖಾವಲೋ ಕನ ಮಾಡುವದಕ್ಕೆ ಮುಂಚೆಯೇ ಆಬಾಚಾರ್ಯನು ಪರಲೋಕ ಯಾತ್ರೆ ಗೈದನು. ವಾಗ್ದೇವಿಯು ದೀರ್ಫರೋಧನ ಮಾಡುತ್ತಾ ಹೆಣದ ಮೇಲೆ ಬಿದ್ದು ಹೊರಳಾಡುವವಳಾದಳು. ಬಹುಮಂದಿ ಅವಳನ್ನು ಸಂತವಿಸಿದರು. ಆಬಾ ಚಾರ್ಯನ ಸ್ವರ್ಗಾರೋಹಣದ ವಾರ್ತೆಯು ಪುರದಲ್ಲಿ ಆಗಲೇ ಹಬ್ಬಿತು. ಭೀಮಾಜಿಯ ಕಿವಿಗೆ ಈ ವಾರ್ತೆಯು ಬೀಳುತ್ತಲೇ ಅವನು ಬಂದು ಶೋಕಾ ಗ್ನಿಯಿಂದ ಸಂತಪ್ತಳಾದ ವಾಗ್ದೇವಿಗೆ ಮಾನುಷ ಜನ್ಮದ ಅಸ್ಥಿರತೆಯನ್ನು ಕುರಿತು ಜ್ಞಾನಬೋಧೆಯನ್ನು ಕೊಟ್ಟನು. ನೇಮರಾಜಸೆಟ್ಟಿಯೂ ಬಂದು ವಾಗ್ದೇವಿಯ ದುಃಖೋಪಶಮನಕ್ಕಾಗಿ ಆಗುವಷ್ಟರ ಮಟ್ಟಗೆ ತತ್ವಜ್ಞಾನ ವನ್ನು ಹೇಳಿದನು. ಶೃಂಗಾರಿಯೂ ತಿಪ್ಪಾಶಾಸ್ತ್ರಿಯೂ ಸುಮ್ಮಗಿರಲಿಲ್ಲ. ನವ ವಿಧವೆಯಾದ ಅಕ್ಕನ ಸಂತಾಪವನ್ನು ಶಾಂತಪಡಿಸುವ ಯತ್ನ ನಡೆಸುವದ ರಲ್ಲಿ ತಂಗಿಯು ಉಪೇಕ್ಷೆಮಾಡಲಿಬ್ಲ. ತಿಪ್ಪಾಶಾಸ್ತ್ರಿಯು ನಾನಾ ಗ್ರಂಥಗಳಿಂದ ಗದ್ಯ ಪದ್ಯ ವಚನಗಳನ್ನು ಒದರಿ ವಾಗ್ದೇವಿಯ ಶೋಕವನ್ನು ದೂರ ಮಾಡು ವುದರಲ್ಲಿ ಬಿದ್ದನು. ಕೊನೆಗೆ ಚಂಚಲನೇತ್ರರು ಆ ಕಾಲಕ್ಕೆ ಉಪಯುಕ್ತ ವಾದ ಮಾತುಗಳಿಂದ ಅವಳನ್ನು ಕೂಡುವಷ್ಟು ಶಾಂತಪಡಿಸಿದರು. ಶವ ದಹನದ ಕೆಲಸವನ್ನು ತೀರಿಸಿದ ಬಳಿಕ ಮೃತನ ಉತ್ತರಕ್ರಿಯಾದಿಗಳನ್ನು ಧಾರಾಳವಾದ ವೆಚ್ಚದಿಂದ ಮಠದ ಕಡೆಯಿಂದ ನಡೆಸೋಣಾಯಿತು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸರ್ವಸಾಕ್ಷಿ
Next post ಪರಮಾತ್ಮನ ತೀರ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…