ರೋಡಿನಲ್ಲಿ ಆನಂದದಿಂದ ಆಹಾರ ಹೆಕ್ಕುತ್ತಿದ್ದ ಕೋಳಿಗೆ ನೆಲ ಕೆದುಕುವಾಗ ಕೋಳಿ ಪುಕ್ಕಗಳು ಸಿಕ್ಕವು. ತಿನ್ನುವುದನ್ನು ಬಿಟ್ಟು ಗರಿ, ಪುಕ್ಕಗಳನ್ನು ಕೊಕ್ಕಿನಲ್ಲಿಟ್ಟು ಕೊಂಡು ಕಣ್ಣೀರಿಡುತ್ತ “ದೇವರಂತ ಪ್ರೀತಿಯ ಮಾಲಿಕನಿರುವಾಗ ಗೆಳೆಯ ಕೋಳಿ ಹೇಗೆ ಸತ್ತಿತು? ಕೋಳಿ ಕುಯ್ದು ತಿನ್ನುವ ರಾಕ್ಷಸರಿಂದ ಗೆಳೆಯನನ್ನು ಕಾಪಾಡಲಿಲ್ಲವೇ ನನ್ನ ಮಾಲಿಕ?” ಎಂದು ಚಿಂತಿಸಿತು.
*****