ಚಿತ್ರ: ಪ್ಲುಮ್ ಪ್ಲೌಮೆ
ಚಿತ್ರ: ಪ್ಲುಮ್ ಪ್ಲೌಮೆ

ಮೂರು ದಿನಗಳಿಂದ ಅಮೀನೂರು ಜೀವಶವದಂತೆ ಉಸಿರಾಡತೊಡಗಿತ್ತು. ಗಾಳಿಗೆ ಬೀಸಲೋ ಬೇಡವೋ ಎನ್ನುವ ಸಂಧಿಗ್ಧತೆ. ಧಗಧಗ ಎನ್ನುವ ಸೂರ್ಯ ಭೂಮಿಯನ್ನು ಕಾದಹಂಚಿನಂತೆ ಮಾಡಿದ್ದ. ರಸ್ತೆಗಳಲ್ಲಿ ಮನುಷ್ಯರನ್ನು ಕಾಣದೆ ಬಿಡಾಡಿ ನಾಯಿ, ದನ ಮತ್ತು ಹಂದಿಗಳು ದಿಗಿಲುಗೊಂಡಿದ್ದವು. ಹಗಲೆಂಬೋ ಹಗಲು ಪೋಲೀಸರ ಲಾಟಿ ಮತ್ತು ಬೂಟುಗಳ ಸದ್ದಿಗೆ ಹೆದರಿಕೊಂಡಿತ್ತು. ಗೂಡು ಬಿಟ್ಟು ಹೊರಗೆ ಬರದ ಹಕ್ಕಿಗಳ ಎದೆ ತುಂಬ ತಲ್ಲಣ. ಕಿಟಕಿ, ಬಾಗಿಲು ಮುಚ್ಚಿದ ಮನೆಯೊಳಗೆ ಹೆಪ್ಪುಗಟ್ಟಿದ ಆತಂಕ.

ರಹೀಮ್ ಗಲ್ಲಿಯ ತನ್ನ ಪುಟ್ಟ ಗುಡಿಸಲಿನಲ್ಲಿ ಕ್ಕೆಕಾಲು ಕಟ್ಟಿ ಹಾಕಿದಂತೆ ಕುಳಿತಿದ್ದ. ಚಾಂದಬಿ ನಿರಂತರ ಹೊಯ್ದಾಡತೊಡಗಿದ್ದಳು. ಊರು ಆನುಭವಿಸುತ್ತಿರುವ ಆನಾಥ ಪ್ರಜ್ಞೆಯ ತಹತಹಿಕೆ ಆವಳೊಡಲಲ್ಲಿ ಸಂಕಟವನ್ನು ಸೃಜಿಸಿತ್ತು. “ಆ ಸ್ಯೆತಾನ್ ಬೇಟಾಗಳಿಗೆ ಹೇಳೋರು, ಕೇಳೋರು ಯಾರೂ ಇಲ್ಲೇನಂತೀನಿ. ಇಡೀ ಊರss ಕಬರಸ್ತಾನ ಮಾಡಿ ಕುಂತಾವು ಬಾಡ್ಯಾಗೋಳು, ಧರ್ಮ, ದೇವರಂತ ಬದುಕೋರ ಜೀವಾ ಹಿಂಡಾಕ ಹತ್ತ್ಯಾವು. ಬಾಯಾಗ ಮಣ್ಣುಹಾಕ್ಲಿ ಹಿಂದಿನ ಕಾಲ್ದಾಗ ಇಂಥ ಹುಳಾ ನಾಶಾ ಮಾಡಾಕ ದೇವರು ಅವತಾರ ಎತ್ತಿ ಬರ್ತಿದ್ದನಂತ, ಈಗೆಲ್ಲಿ ಕಣ್ಮುಚ್ಚಿ ಕುಂತಾನೋ ಆಂವಾ ….. ..” ಆಕೆ ಮಾತಾಡುತ್ತಲೇ ಇದ್ದಳು.

ಒಂದು ಸಂಜೆ, ಹುಡಗನೊಬ್ಬ, ಗಿರಣಿಯಲ್ಲಿ ಜೋಳ ಬೀಸಿಕೊಂಡು ಮನೆಗೆ ಹೊರಟ ಹುಡುಗಿಯೊಬ್ಬಳ ಜಡೆ ಎಳೆದು ಓಡಿ ಹೋದ ಪ್ರಸಂಗ, ಮಾತುಮಾತಲ್ಲಿ ಹಲವಾರು ತಿರುವುಗಳನ್ನು ಪಡೆದುಕೊಂಡು, ಊರನ್ನು ಪ್ರಕ್ಷುಬ್ಧಗೊಳಿಸಿ, ಕೋಮು ಗಲಭೆಯಾಗಿ ಮಾರ್ಪಟ್ಟು ಬೆಳಗು ಹರಿಯುವುದರೊಳಗೆ, ಹಾಲು ಮಾರುವ ಹಿಂದೂ ಹುಡುಗ, ಪೇಪರ್ ಹಂಚುವ ಮುಸ್ಲಿಮ ಹುಡುಗರನ್ನು ಬಲಿತೆಗೆದುಕೊಂಡಿತ್ತು. ನಿಪೇಧಾಜ್ಞೆ ಜಾರಿಯಾಗಿ, ವಾಹನಗಳಲ್ಲಿ ಬಂದ ಹಿಂಡುಹಿಂಡು ಪೋಲೀಸರು ಗಾಳಿಯಲ್ಲಿ ಗುಂಡು ಹಾರಿಸುತ್ತ ಬೀದಿಬೀದಿಗಳಲ್ಲಿ ತಿರುಗಾಡಿಕೊಂಡ ಮೇಲೆ ದೊಂಬಿಯ ಸದ್ದು ಅಡಗಿತ್ತು.

ಆದರೆ ಬೂದಿ ಮುಚ್ಚಿದ ಕೆಂಡಕ್ಕೆ ಗಾಳಿ ಸೋಕಿದ್ದೆ ನಿಗಿನಿಗಿಸುತ್ತಿತ್ತು. ಕರ್ಫೂವನ್ನು ಧಿಕ್ಕರಿಸಿಯೂ ಅಲ್ಲಲಿ ಬೆಂಕಿ ಹಚ್ಚಿದ, ಆಂಗಡಿಗಳನ್ನು ಲೂಟಿ ಮಾಡಿದ ಪ್ರಕರಣಗಳು ಸಂಭವಿಸಿ ಜನರ ತಲ್ಲಣ ಹೆಚ್ಚಿಸದೇ ಇರಲಿಲ್ಲ. ಕಂಡಲ್ಲಿ ಗುಂಡು ಹಾರಿಸುವ ಆಜ್ಞೆಯಿಂದ ಪೋಲೀಸರ ಕ್ಕೆಯಲ್ಲಿನ ಬಂದೂಕುಗಳು ಮನುಷ್ಯರ ಬೇಟೆಗೆ ಕಾತರಿಸುತ್ತಲೆ ಇದ್ದವು.

ಊರಿನ ಬಸ್ ನಿಲ್ಲಾಣದ ಹಿಂದುಗಡೆಗೆ ವ್ಯಾಪಿಸಿಕೊಂಡಿದ್ದ ರಹೀಮಗಲ್ಲಿ ಗುಬ್ಬಿ ಮರಿಯಂತೆ ಥರಗುಟ್ಟತೊಡಗಿತ್ತು. ಚಾಂದಬಿಯ ಮಾತುಗಳನ್ನು ಗಂಡ ಮುಷ್ತಾಕ್ ಕೇಳಿಯೂ ಕೇಳದಂತೆ ಕುಳಿತುಕೊಂಡಿದ್ದ. ಊರು ಭೀತಿಯೊಳಗಾದ ಹಿನ್ನಲೆಯಲ್ಲಿ ಎರಡು ವರ್ಷದ ಹಿಂದಿನ ಘಟನೆ ಆವನನ್ನು ವರಿಸಿಕೊಂಡಿತ್ತು. ಕಂಪನಿಯೊಂದರ ಟ್ರಕ್ಕು ನಡೆಸುತ್ತಿದ್ದ ಅವನು ಆಹಮದಾಬಾದಿಗೆ ಮಾಲು ತುಂಬಿಕೊಂಡು ಹೋದಾಗ ಕೋಮು ಗಲಭೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ. ದುರುಳರು ಆವನ ತಲೆಯ ಮೇಲಿನ ಟೋಪಿ ನೋಡಿ, ಸ್ಟೇರಿಂಗ್ ಮೇಲಿರಿಸಿದ್ದ ಆವನ ಎರಡೂ ಕೈಗಳನ್ನು ತಲವಾರಿನಿಂದ ತುಂಡರಿಸಿ ಟ್ರಕ್ಕಿಗೆ ಬೆಂಕಿ ಹಚ್ಚಿ ಹೋಗಿದ್ದರು. ಮುಷ್ತಾಕ್ ಆಲ್ಲಿಂದ ಜೀವ ಉಳಿಸಿಕೊಂಡು ಬಂದದ್ದು ಪವಾಡವನಿಸಿತ್ತು. ಒಂದು ಹೆಣ್ಣು ಎರಡು ಗಂಡು ಮಕ್ಕಳು. ಗಂಡ-ಹೆಂಡತಿ. ಎಂಥ ಸೊಗಸಾಗಿತ್ತು. ಬದುಕು! ಆಲ್ಲಾಹನಿಗದು ಮನಸ್ಸಿಗೆ ಬರಲಿಲ್ಲ. ದುಡಿಯುವ ಹುಮ್ಮಸ್ಸಿನ ಮುಷ್ತಾಕ್ ಕ್ಕೆಕಳೆದುಕೊಂಡು ಮನೆ ಹಿಡಿದು ಕುಳಿತಿದ್ದ. ಚಾಂದಬಿ ದಿಟ್ಟ ಹೆಂಗಸು, ಹತ್ತಾರು ಮನೆಗಳ ಕಸ-ಮುಸುರೆಗೆ ಹೋಗಿ ಬರುತ್ತ ಸಂಸಾರವನ್ನು ನಿಭಾಯಿಸಿತೊಡಗಿದ್ದಳು. ಅವಳ ಹಿರಿಯ ಮಗ ನೌಷಾದ್ ಬುದ್ಧಿವಂತ ಹುಡುಗ. ಏಳನೆಯ ತರಗತಿಯವರೆಗೆ ಉರ್ದು ಕಲಿತು, ಎಸ್‌ಎಸ್‌ಎಲ್ಸಿ ಪರೀಕೆಯನ್ನು ಕನ್ನಡದಲ್ಲಿ ಬರೆದು ಹೈಸ್ಕೂಲಿಗೆ ಪ್ರಥಮ ಸ್ಥಾನಗಳಿಸಿದ್ದ. ಹಿಂದೂ ಹುಡುಗರ ಜೊತೆಗೆ ಅವನದು ಹೆಚ್ಚಿನ ದೋಸ್ತಿ. ಗಲ್ಲಿಯಲ್ಲಿ ಎಲ್ಲರಿಗೂ ಬೇಕಾದ ಹುಡಗ. ಮಗನನ್ನು ಹೊಗಳುವುದುದೆಂದರೆ ಚಾಂದಬಿಗೆ ಸಂಭ್ರಮ. ಮುಷ್ತಾಕನಿಗೆ ಮಗನ ಬಗ್ಗೆ ಕನಸುಗಳಿದ್ದವು. ಅವನು ತಮ್ಮ ಭವಿಷ್ಯದ ಬೆಳಕು ಎಂದು ಭಾವಿಸಿದ್ದ. ಆದರೆ ಆ ದಿನದ ಕತ್ತಲು ಈ ಬೆಳಕನ್ನು ನುಂಗಿತ್ತು.

ದೇಶದ ಎಲ್ಲೋಒಂದು ಕಡೆಗೆ ಪ್ರತಿಮೆಗಾದ ಆಪಮಾನವನ್ನು ಫ್ರತಿಭಟಿಸಲು ಒಂದು ಕೋಮಿನವರು ಬಂದ್ ಆಚರಿಸಿದ್ದರು. ದುಷ್ಕರ್ಮಿಗಳು ಆ ಸಂದರ್ಭವನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಂಡು ಊರಲ್ಲಿ ದಂಗೆ ಸೃಷ್ಟಿಸಿದ್ದರು. ಮಸೀದೆಯಿಂದ ಇಷಾ ನಮಾಜು ಮುಗಿಸಿಕೂಂಡು ಮನೆಯತ್ತ ಧಾವಿಸಿದ್ದ ನಷಾದ್ ಮಂತಾಂಧನೊಬ್ಬನ ಚೂರಿ ಇರಿತಕ್ಕೆ ಸಿಕ್ಕು ನೆಲಕ್ಕುರುಳಿದ್ದ. ಆವನ ಹೊಟ್ಟಿಯೊಳಗಿಂದ ಹೊರಬಿದ್ದಕರುಳು ಕಂಡ ಚಾಂದಬಿ ಮುಗಿಲು ಹರಿದು ಬೀಳುವಂತೆ ಆಕ್ರಂದಿಸಿದ್ದಳು.

ಚಾಂದಬಿಗೆ ಈಗ ಮಗನ ನೆನಪು ಕಾಡದೆ ಇರಲಿಲ್ಲ. ಆ ನೆನಪಿನ ತುಂಬ ತಳಮಳ. ಆದರ ತೆಕ್ಕೆಯಲ್ಲಿ ಸಿಲುಕಿಕೊಂಡರೆ ಆಕೆ ಎರಡು-ಮೂರು ದಿನ ಹಾಸಿಗೆ ಬಿಟ್ಟು ಏಳುವುದಿಲ್ಲವೆಂದು ಮುಷ್ತಾಕ್‍ನಿಗೆ ಗೊತ್ತು. ಅದಕ್ಕಾಗಿ ಅವನು ಅವಳ ಮಾತುಗಳಿಗೆ ಫ್ರತಿಕ್ರಿಯಿಸದೆ ಕುಳಿತಿದ್ದ.
*****

ಮೊನ್ನೆಯೇ ತಿಂಗಳ ಕೊನೆ. ಆವಳಿಗೆ ನಾಲ್ಕು ಮನೆಯವರು ಪಗಾರಕೊಡಬೇಕು. ಗಾಂಧಿನಗರ ಬಡಾವಣೆಯಲ್ಲಿರುವ ಆ ಮನೆಯವರಿಗೆ ಚಾಂದಬಿಯ ಮೇಲೆ ವಿಶೇಷ ಆನ್ನುವಂಥ ಪ್ರೀತಿ. ಆವರು ಆಕೆಯನ್ನು ಕೆಲಸದಾಳು ಎಂದು ಗಮನಿಸಿದ್ದಿಲ್ಲ. ಎದೆಯಲಿ ಬ್ರಹ್ಮಾಂಡದಷ್ಟು ದುಮ್ಮಾನವನ್ನು ಹತ್ತಿಕ್ಕಿಕೊಂಡು ಆಕೆ ಚೊಕ್ಕಟವಾಗಿ ಕೆಲಸ
ನಿರ್ವಹಿಸುವ, ಮನುಷ್ಯ ಸಂಬಂಧದ ಗಂಧ ತೀಡುವ ಪರಿಯಿಂದ ಸಂಪ್ರೀತರಾದವರು. ಆವಳ ಮನಸ್ಸು ಸ್ವಚ್ಚ-ಮಾತು ನೇರ. ಮೈಗಳೃತನದಿಂದ ಹಣ ಪಡೆದುಕೊಳ್ಳುವ ತಕರಾರಿನವಳಲ್ಲ. “ಬೆವರು ಸುರಿಸಲಾರ‍್ದತಿಂದ ಆನ್ನ ಮೈಯಾಗ ರಕ್ತಾ ಆಗುದಿಲ್ರಿ” ಎನ್ನುವ ಸ್ವಭಾವ. ಲಂಚ ತಿನ್ನುವ ಸಾಹೇಬರುಗಳ ಅಂತರಂಗವನ್ನು ಕಲಕದೇ ಬಿಡುತ್ತಿರಲಿಲ್ಲ ಆವಳ ಮಾತು. ತನ್ನ ತಾಪತ್ರಯಗಳ ಬಗ್ಗೆ ಚೂರೂ ಹೇಳಿಕೊಳ್ಳುವವಳಲ್ಲ ಆದರೆ ನೌಷಾದನ ವಯಸ್ಸಿನ ಹುಡುಗರನ್ನು ನೋಡಿದರೆ ಆವಳ ಕಣ್ಣಂಚಿನಲ್ಲಿ ನೀರು ತುಳುಕುತ್ತಿತ್ತು. ಕೈಗೆ ಬಂದ ಮಗ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಸತ್ತುಬಿದ್ದ ದೃಶ್ಯ ಆವಳ ಕಣ್ಣೆದುರು ಕಟ್ಟಿ ಹೃದಯವನ್ನು ಫಾಸಿಗೊಳಿಸುತ್ತಿತ್ತು. ಚೂರಿ ರೂಪದಲ್ಲಿ ಬಂದು ಮಗನನ್ನು ನುಂಗಿ ಹಾಕಿದ ವಿಧಿಯನ್ನು ಆಕೆ ಒಳಗೇ ಶಪಿಸುತ್ತಿದ್ದಳು. ಎಳೆಯ ಮಗುವಿನ ರಕ್ತಕುಡಿದ ಧರ್ಮಾಂಧ ಹುಳುವನ್ನು ಜನ ಬೈದಾಡಿಕೊಂಡಿದ್ದರು.
ಆದರೆ ಆ ಹುಳುಗಳ ಪತ್ತೆ ಮಾತ್ರ ಆಗಿರಲಿಲ್ಲ.

ಈಗ ಆಂಥವೇ ಹುಳಗಳು ಊರಲ್ಲಿ ಗುಲ್ಲೆಟ್ಟಸಿ ಇಬ್ಬರು ಹಿಂದೂ-ಮುಸ್ಲಿಮ ಹುಡುಗರ ಮೇಲೆ ರಣಹದ್ದುಗಳಂತೆ ಎಗರಿ ಕುಕ್ಕಿದ್ದು ಕೇಳಿ ಚಾಂದಬಿಯ ಲಾವಾ ಕುದ್ದಿತ್ತು “ಯಾವ ರಾಕ್ಷಸಗೊಳು ಆ ಹುಡುಗರ ಜೀವಾ ನುಂಗಿದವೋ. ಆವರ ಕಟಬಾಯಿ ಹರೀಲಿ. ಆವರ ವಂಶ ನಿರ್ವಂಶ ಆಗ್ಲಿ ಆವರ ಉರುವಣಿಗ್ಯಾಗ ಉಪ್ಪು ತುಂಬಲಿ” ಎಂಬಿತ್ಯಾದಿಯಾಗಿ ಶಾಪದ ಕಿಡಿಗಳನ್ನು ಸಿಡಿಸಿದ್ದಳಾಕೆ. ಕೋಮು ಎನ್ನುವ ಕಾಳಿಂಗ ಸರ್ಪವನ್ನು ಕೆರಳಿಸುವ ನೀಚರ ಸೂಕ್ಷ್ಮಗಳು ಚಾಂದಬಿಯ ಗ್ರಹಿಕೆಗೆ ನಿಲುಕುವಂತಿರಲಿಲ್ಲ.

ಚಾಂದಬಿ ಒಟ್ಟಳೇ ಎಷ್ಟು ಮಾತಾಡಿಯಾಳು. ಮುಷ್ತಾಕ್ ಕಿಮಿಕ್ ಎನ್ನದೇ ಕುಳಿತಿದ್ದ. ಮಕ್ಕಳಿಬ್ಬರು ಪುಸ್ತಕದಲ್ಲಿ ಮಗ್ಲರಾಗಿದ್ದರು. ಚಾಂದಬಿ ಬೇಸರದಿಂದ ಮೈಮುರಿದಳು. ತಟ್ಟನೆ ಆವಳಿಗೆ ಪದ್ಮಾ ಹೇಳಿದ ಮಾತು ನೆನಪಾದವು. ಪದ್ಮಾ ಆಫೀಸರೊಬ್ಬನ ಹೆಂಡತಿ. ಗಲಭೆಯ ಹಿಂದಿನ ದಿನ ಆಕೆ ಸ್ಪಷ್ಟವಾಗಿ “ನಮ್ಮ ರೂಪಾಗ ದಿನ ತುಂಬ್ಯಾವು. ಇವತ್ತ, ನಾಳೆ ಆವಳ ಹೆರಿಗೆ ಆಗತ್ತ. ಆಕಿ ಬಾಣಂತನಕ ನೀನು ಆಸರ ಆಗಬೇಕು. ಬೇಕಾದ್ರ ನೀನು ಕೆಲಸ ಮಾಡೋ ಮನಿ ಕಮ್ಮಿ ಮಾಡ್ಕೋ. ನಮ್ಮ ಮಾನಿಯಾಗ ಖಾಯಂ ಇರು. ನಿನ್ಗ ಬೇಡಿದಷ್ಟು ಪಗಾರ ಕೊಡ್ತೀನಿ” ಎಂದಿದ್ದಳು. ಆವಳ ಗಂಡ ಚಂದ್ರಪ್ಪ ಊರಲ್ಲಿ ಇರುವುದೇ ಅಪರೂಪ. ಯಾವಾಗಲೂ ಟೂರ್ ಮೇಲೆ ಹೋಗುವವರು. ಹಿರಿಯ ಮಗ ಮೈಸೂರಲ್ಲಿ ಓದುತ್ತಿದ್ದ. ಇನ್ನೂಬ್ಬ ಮಗ ಚಿಕ್ಕವನು. ರೂಪಾಳ ಬಾಣಂತನಕ್ಕೆ ಕಷ್ಟವಾಗಬಾರದು ಎಂಬ ಕಾರಣದಿಂದ ಚಂದ್ರಪ್ಪ “ನೀನು ಹಣದ ಬಗ್ಗೆ ಚಿಂತೆ ಮಾಡಬೇಡ” ಎಂದು ಚಾಂದಬಿಯನ್ನು ಕೇಳಿಕೊಂಡಿದ್ದರು.
“ರೊಕ್ಕದ ಮಾತು ಹೇಳಬ್ಯಾಡ್ರಿ ಸಾಹೇಬರ. ನಾಯೇನು ಆಸೇದಾಕಿ ಆಲ್ಲ. ರೂಪಾ ನನ್ನ ಬೇಟಿ ಸಮಾನ. ಅವಳ ಬಾಣಂತನ ನಾನಽಽ ಮಾಡ್ತೀನಿ” ಎಂದಿದ್ದಳಾಕೆ.

“ಪಾಪ, ಆ ಹುಡುಗಿ ಹೆರಿಗಿ ಆತೊ ಏನೋ?” ಚಾಂದಬಿ ಈಗ ತೀವ್ರ ಚಡಪಡಿಸತೊಡಗಿದಳು. ಪದ್ಮಾನ ಮಾತು ಎದೆಯಲ್ಲಿ ಪ್ರತಿಧ್ವನಿಸಿದಂತಾಗಿ ಆಕೆ ಎದ್ದೂನಿಂತು “ನಾನು ಪದ್ಮಕ್ಕರ ಮಾನೆಗೆ ಹೋಗಿ ಬರ್ತೀನ್ರಿ” ಎಂದಳು.

“ನಿನ್ನ ತಲಿ ಖರಾಬ್ ಆಗೇತೇನು ? ಊರಾಗ ಒ೦ದು ನರಪಿಳ್ಳಿನೂ ತಿರಗಾಡಕ ಹತಿಲ್ಲ. ಹೋಗಿ ಬಂದೂಕಿನ ಬಾಯಿಗೆ ಬೀಳಬೇಕಂತಿಯೇನು ? ಸುಮ್ನ ಮಾನೆಯಾಗ ಕೂಡ್ರು” ಮುಷ್ಟಾಕ್ ಹಗುರಾಗಿ ಗದರಿಸಿದ.

“ಪದ್ಮಕ್ಕ ಬಹಳ ಹೇಳ್ಯಾರ. ಊರಾಗ ಇಂಥ ಪರಿಸ್ಥಿತಿ. ಪಾಪ, ಆವರು ಏನು ಮಾಡ್ತಾರೋ ಏನೋ?” ಚಾಂದಬಿಯ ಮನಸ್ಸು ಆತ್ತಕಡೆ ಧ್ಯಾನಿಸಿತ್ತು.

“ಗದ್ದಲ ಎಬ್ಬಿಸುವ ಹರಾಮ್‌ಖೋರರಿಗೆ ಮನಷ್ಯಾರ ಸಂಕಟ ಆರ್ಥಾಗುದಿಲ್ಲ’ ಮುಷ್ಟಾಕ್‍ನ ಧ್ವನಿಯಲ್ಲಿ ವ್ಯಥೆ, ಸಿಟ್ಟು ಎರಡೂ ಕಾಣಿಸಿದ್ದವು.

“ಆ ಸೂವರ್‌ಗಳ ತಗೊಂಡು ಏನು ಮಾಡೋದೈತಿ. ರೂಪಾ ಬೇಟಿಗೆ ಇದು ಪೈಲಾ ಹೆರಿಗೆ. ನಾನು ಹೋಗಿ ಬರ‍್ತೀನಿ” ಎಂದು ಚಪ್ಪಲಿ ಮೆಟ್ಟಿಕೊಂಡಳು ಚಾಂದಬಿ.

“ನಿಂದೂ ಹಠಾ ಬಹಳಾತು, ಪೋಲೀಸರ ಬಂದೂಕಿಗೆ ಮರುಕ ಇರುದಿಲ್ಲ!” ಹೆಂಡತಿಯನ್ನು ತಡೆಯಲು ನೋಡಿದ ಮುಷ್ಟಾಕ್.

“ಬಸವಣ್ಣ ದೇವರ ಗುಡಿ ಸಂದಿ ಹಿಡಿದು ಹೋಗಿ ಬರ‍್ತೀನಿ. ನೀವೇನು ಚಿಂತಿ ಮಾಡಬೇಡ್ರಿ” ಎನ್ನುತ್ತ ಆಕೆ ಹೊಸಲು ದಾಟಿದಳು. ಅಂತಃಕರಣ ಹೃದಯ ಅವಳದು. ಆದರೆ ಪೋಲೀಸರ ಗುಂಡಿಗೋ, ಧರ್ಮಾಂಧರ ಕೈಗೋ; ಸಿಕ್ಕು ಬಿಟ್ಟರೆ ಆಕೆಯ ಗತಿಯೇನು ?ಮುಷ್ಟಾಕವ ಚಿಂತಿಸಿದ.

ಚಾಂದಬಿ ತನಗೆ ಪರಿಚಿತವಾಗಿದ್ದ ಸಂದಿಗಳನ್ನು ಆತಂಕದ ಹೆಜ್ಜೆಗಳಿಂದಲೇ ಕ್ರಮಿಸಿದ್ದಳು. ಅವಳನ್ನು ನೋಡುತ್ತಲೇ ಪದ್ಮಾ, ಸಮಾಧಾನ ಅನುಭವಿಸುತ್ತ ಹೇಳಿದಳು. “ಬಾ, ಒಳಗ. ದೇವರು ಬಂದಂಗ ಬಂದಿ ನಮ್ಮವ್ವ, ರೂಪಾಗ ಹೆರಿಗೆ ಬ್ಯಾನಿ ಶುರು ಆದಂಗ ಕಾಣಸ್ತಾವು. ಇವರು ಬ್ಯಾರೆ ಮುಂಬೈಗೆ ಹೋಗ್ಯಾರ, ಸುಧಾ ಡಾಕ್ಟರು, ದವಾಖಾನಿಯಲ್ಲಿರ‍್ತೀನಿ ಕರ‍್ಕೊಂಡು ಬರ್ರಿ ಅಂದ್ರು. ನನ್ಗ ದಿಕ್ಕು ತಿಳಿದಂಗಾಗಿತ್ತು’.

“ರಸ್ತಾದಾಗ ರಿಕ್ಷಾ ಟಾಂಗಾ ಒಂದೂ ತಿರುಗಾಡವಲ್ಲುವು, ರೂಪಾನ್ನ ದವಾಖಾನಿಗೆ ಕರ್ಕೊಂಡು ಹೋಗುದು ಹ್ಯಾಂಗರಿ ಅಕ್ಕಾ? ಹೆರಿಗೆ ಇಲ್ಲೆ ಆಗ್ಲಿ ಬಿಡ್ರಿ, ನಾನು ರೂಪಾನ ಮುಂದss ಇದ್ದೇನಿ. ನೀವೇನು ಗಾಬರಿ ಆಗಬ್ಯಾಡ್ರಿ” ಹೆರಿಗೆ ಮಾಡಿಸಿದ ಆನುಭವದ ಧೈರ್ಯದಿಂದಲೇ ಹೇಳಿದ್ದಳು ಚಾಂದಬಿ.

“ರೂಪಾಗ ಇದ ಬೊಚ್ಚಲ ಹೆರಿಗೆ, ಇವರು ದವಾಖಾನಿಯಾಗ ಆಗ್ಲಿ ಆಂದಾರ, ಆವಳತ್ತಿ ರೂಪಾ, ಗಂಡನ ಆಭಿಪ್ರಾಯನೂ ಅದಽಽ ಐತಿ” ಎನ್ನುತ್ತ ಪದ್ಮಾ ಒಳಗೆ ಹೋದಳು. ಜಾಂದಬಿ ಆವಳನ್ನು ಹಿಂಬಾಲಿಸಿದಳು.

ಕುಳಿತಿದ್ದ ರೂಪಾ ತುಟಿ ಕಚ್ಚುತ್ತ ಎರಡೂ ಕೈಗಳನ್ನು ಚಲ್ಲಾಡತೊಡಗಿದ್ದಳು. ಪದ್ಮಾಳ ಮುಖದಲ್ಲಿ ಗಾಬರಿ ಒಡೆದು ಕಾಣಿಸಿತು. ಚಾಂದಬಿ, ರೂಪಾನ ಹತ್ತಿರ ಕುಳಿತು “ಬೇಟಿ, ನೀನು ಚಂದದ ಮಗನ ತಾಯಿ ಆಗ್ತಿ ತ್ರಾಸು ತಡಕೋರವ್ವ” ಎಂದು ತಲೆ ನೇವರಿಸಿದಳು, ಒಡಲಾಳದ ಆಸಾಧ್ಯ ನೋವಿಗೆ ತಾನು ಆಳಲ್ಲ ಎನ್ನುವಂತೆ ರೂಪಾ ತೀವ್ರವಾಗಿ ಒದ್ದಾಡತೊಡಗಿದಳು.

ಆರು ವರ್ಷಗಳ ಹಿಂದೆಯೇ ಅವಳ ಮದುವೆಯಾದದ್ದು. ಗಂಡ ಶ್ರೀಕಾಂತ ಕೆ‌ಇಬಿಯಲ್ಲಿ ಜೆ.ಇ. ಆಗಿದ್ದ ದಾಂಪತ್ಯದಲ್ಲಿ ಆನೂನ ಪ್ರೀತಿಯಿತ್ತು ತಂದೆಯನ್ನಿಸಿ ಕೊಳ್ಳುವ ಉಮೇದು ಇತ್ತಾದರೂ ಆದನ್ನು ಗಂಭೀರವಾಗಿ ಪರಿಗಣಿಸುವ ಪ್ರವೃತ್ತಿ ಅವನದಾಗಿರಲಿಲ್ಲ. ಈ ಬಗೆಗೆ ಧಾವಂತ ಇದ್ದುದು ರೂಪಾಳ ಆತ್ತೆ-ಮಾವಂದರಿಗೆ. ಮೊಮ್ಮಗ ಆಥವಾ ಮೊಮ್ಮಗಳ ಕಾಣುವ ಆಸೆ ಆವರಿಗೆ. ಶ್ರೀಕಾಂತ-ರೂಪಾ ವೈದ್ಯರಲ್ಲಿ ಪರೀಕ್ಷಿಸಿಕೊಂಡದ್ದು ಆವರ ಒತ್ತಾಸೆಗೆನೇ. ಇಬ್ಬರಲ್ಲೂ ದೋಷವಿರಲಿಲ್ಲ. ರೂಪಾಳಿಗೆ ಮಕ್ಕಳಾಗುತ್ತವೆಯೆಂದು ಡಾಕ್ಟರ್ ಭರವಸೆ ನೀಡಿದ್ದರು. ಆವಳತ್ತ್ರ್ಗೆ ಸಮಾಧಾನವಾಗಿತ್ತು. ಆದೇ ಉತ್ಯಾಹದಲ್ಲಿ ದೇವರು ದಿಂಡರು, ಹರಕೆಯೆಂದು ಆಕೆ ಸೂಸೆಯೊಂದಿಗೆ ಓಡಾಡಿದ್ದಳು. ಫಲವಂತಿಕೆ ಶೂನ್ಯವೆನಿಸಿತ್ತು. ಸಹನೆ ಕಳೆದುಕೊಂಡ ಆವಳು “ಸೊಸೆ ಗೊಡ್ಡು” ಎಂದು ತೀರ್ಮಾನಿಸಿದ್ದಳು. ರೂಪಾಳಿಗೆ ಕಿರಿಕಿರಿ ಶುರೂವಿಟ್ಟುಕೊಂಡದ್ದು ಆಗಲೇ. ಆದು ವಿಪರೀತ ಆನಿಸಿದಾಗ ಶ್ರೀಕಾಂತ “ನಮಗ ಮಕ್ಕಳಾಗದಿದ್ರೂ ಚಿಂತೆ ಇಲ್ಲ, ಅನಾಧಾಶ್ರಮದ ಒಂದು ಮಗೂನ್ನ ತಂದು ನಾವೇ ಅದಕ್ಕೆ ತಾಯಿ-ತಂದೆ ಆಗ್ತೀವಿ. ನೀನು ರಾಮಾಯಣ-ಮಹಾಭಾರತ ಮಾಡಬ್ಯಾಡ” ಎಂದು ತಾಯಿಗೆ ಸ್ಪಷ್ಟವಾಗಿಯೇ ಹೇಳಿದ್ದ.

“ಅನಾಥ ಆತ್ತಮದ ಕೂಸು ನಮ್ಮ ರಕ್ತದ್ದು ಹ್ಯಾಂಗಾಗತ್ತೋ? ಬೇಕಾದ್ರ ಇನ್ನೊಂದು ಕನ್ಯಾ ಹುಡುಕಿ ಮದುವಿ ಮಾಡ್ತೀನಿ”
ತಾಯಿ ತನ್ನ ನಿರ್ಧಾರ ತಿಳಿಸಿದ್ದಳು.

“ಮದುವಿ ಅನ್ನೋದು ಸಣ್ಣ ಹುಡುಗರ ಆಟಲ್ಲ ರೂಪಾ ನನ್ನ ಹೆಂಡತಿ. ಕೊನೆತನಕ ಆಕೀನ ನನ್ನ ಹೆಂಡತಿ ಆಗಿದ್ದಾಳೆ” ಶ್ರೀಕಾಂತ ತನ್ನ ಆಖ್ಯೆರು ಆಭಿಪ್ರಾಯ ತಿಳಿಸಿದ್ದ.

ಮಗನ ಮಾತಿನಿಂದ ಸಿಟ್ಟುಗೊಂಡ ಆಕೆ “ಈ ಗೊಡ್ಡಿ ನಿನ್ನ ಮಾಟಾ ಮಾಡಿಸ್ಯಾಳ” ಎಂದು ಹಾರಾಡಿದ್ದಳು. ಅತ್ತೆಯ ಕೂರಲಗಿನ ಮಾತಿನಿಂದ ರೂಪಾ ಚಿತ್ತಹಿಂಸಯನ್ನು ನಿತ್ಯವೂ ಆನುಭವಂತಾಗಿತ್ತು. ಮನಸ್ಸು ದೇಹಗಳನ್ನು ನಿಸ್ತೇಜಿಸಿಕೊಂಡ ಮಗಳ ಬಗ್ಗೆ ತಾಯಿ ತಂದೆಗೂ ಚಿಂತೆ ಕಾಡತೊಡಗಿತ್ತು.

ವೈದ್ಯರ ನಂಬುಗೆ ನಿಜವೆನ್ನುವಂತೆ ರೂಪಾ ಗರ್ಭ ಧರಿಸಿದ್ದಳು. ಅವಳತ್ತೆ ಆವರಿಹೂವಾಗಿದ್ದಳು. ಸೊಸೆಯನ್ನು ನಾಜೂಕಾಗಿ ನೋಡಿಕೊಂಡಿದ್ದಳು. ಸೀಮಂತನ ಕೂಡಾ ಸಂಛ್ರಮದಿಂದಲೇ ಜರುಗಿತ್ತು. ಎಲ್ಲರೂ ಆವಳ ಹೆರಿಗೆ ಸುದ್ದಿಗಾಗಿ ಕಾತರಿಸುತ್ತಿದ್ದರು.

* * *

ಚಾಂದಬಿಗೆ ಈ ಹಕಿಕತ್ತು ಎಲ್ಲಾ ಗೊತ್ತು.
“ಯಾ ಪಾಕ್ ಪರವರ್ದಿಗಾರ್, ರೂಪಾ ಬೇಟಿಗೆ ಕರುಣಾ ತೋರ‍್ಸು. ಆವಳ ಹೆರಿಗೆ ಸುಸೂತ್ರ ಆಗ್ಲಿ” ಎಂದು ಮನಸ್ಸಿನಲ್ಲಿಯೇ ಬೇಡಿದಳು ಆಕೆ. ಮಗಳು ತಳಮಳಿಸುವುದನ್ನು ನೋಡಲಾಗದೆ ಪದ್ಮಾ “ಚಾಂದಬಿ, ಹ್ಯಾಂಗರ ಮಾಡಿ ರೂಪಾನ್ನ ದವಾಖಾನಿಗೆ ಕರ‍್ಕೊಂಡು ಹೋಗಬೇಕು” ಎಂದು ಗಡಬಡಿಸಿದಳು. ಆವಳ ತುಮುಲವನ್ನು ಅರ್ಥಮಾಡಿಕೋಡ ಚಾಂದಬಿ “ರಸ್ತಾದಾಗ ಯಾವುದರ ಗಾಡಿ ಬರ್ತಾವೇನೋ ನೋಡಿ ಬರ‍್ತೀನಿ” ಎಂದು ಹೊರ ಬಂದಳು. ವಾಹನ ಸಿಗದಿದ್ದರೆ ಹೇಗೆ? ಪದ್ಮ ತಹತಹಿಸತೊಡಗಿದಳು.

ಚಾಂದಬಿ ರಸ್ತಗಿಳಿದಾಗ ಆಕಾಶದಲ್ಲಿ ದಟ್ಟದಟ್ಟ ಮೋಡ, ರಣಗುಡುವ ಸೂರ್ಯ ಅದರೊಳಗಿಂದ ಇಣಿಕತೊಡಗಿದ್ದ. ಆವನಿಗೂ ಕರ್ಫೂವಿನ ಆಂಜಿಕೆಯೇನೊ ಎಂದುಕೊಂಡಳಾಕೆ. ತುಸು ದೂರ ರಸ್ತೆ ಕ್ರಮಿಸಿ ವಾಹನಗಳನ್ನು ನಿರೀಕ್ಷಿಸಿದಳು. ದೂರದಲ್ಲಿ ಎಲ್ಲೋ ಪೋಲೀಸ್ ಜೀಪಿನ ಸದ್ದು ಕೇಳಿತ್ತು. ಮರುಕ್ಷಣ ಅದೂ ಸ್ತಬ್ದ. ನಿರಾಶೆಯಿಂದ ಮನೆಯ ಕಡೆಗೆ ಹೆಜ್ಜೆ ಕಿತ್ತಿಡುತ್ತಿರುವಂತೆ ಗಟಾರ್ ಪಕ್ಕದ ಬೇವಿನ ಮರಕ್ಕೆ ತಾಗಿಕೊಡು ತಳ್ಳೆಗಾಡಿ ಆಡಿ ಮೇಲಾಗಿ ನಿಂತಿತ್ತು. ಒಂದು ಗಾಲಿಯ ಟೈಯರು, ಟ್ಯೂಬು ಮನುಷ್ಯನ ದೇಹದಿಂದ ಹೊರಬಿದ್ದ ಕರುಳಿನಂತೆ ಜೋತಾಡ ತೊಡಗಿದ್ದವು. ಗಾಡಿಯ ಅಕ್ಕಪಕ್ಕ ಬದನೆ, ಮೆಣಸಿನಕಾಯಿ, ಟೊಮೆಟು, ಕೋತಂಬರಿ ಚೆಲ್ಲಾಪಿಲ್ಲಿಯಾಗಿ ಹರಡಿದ್ದವು. ಗಲಭೆ ಖೋರರ ದಾಳಿಗೆ ತಕ್ಕ ತರಕಾರಿ ಗಾಡಿಯದು. ಆದರ ಮಾಲೀಕನ ಸ್ಥಿತಿ ಏನಾಯಿತೋ ? ಚಾಂದಬಿ ಮನನ್ನು ಮರುಗಿತು. ಮತ್ತೊಮ್ಮೆ ಗಾಡಿ ನೋಡುತ್ತಿದ್ದಂತೆ ಆವಳ ಮಿದುಳಿನಲ್ಲಿ ಉಪಾಯವೊಂದು ಹೊಳೆಯಿತು. ಧಾವಿಸಿ ಮನೆಯತ್ತಬಂದು “ಪದ್ಮಕ್ಕ, ರಸ್ತಾದಾಗ ಒಂದೂ ಗಾಡಿ ಇಲ್ರಿ, ಆಲ್ಲೆ ಒಂದು ತಳ್ಳುಗಾಡಿ ಐತಿ, ನೀವು ತಪ್ಪು ತಿಳಿಬ್ಯಾಡ್ರಿ, ನೀವು ಹೂಂ ಆಂದ್ರ ಹೋಗಿ ಗಾಡಿ ತರ್ತೀನಿ. ರೂಪಾ ಬೇಟಿನ್ನ ಆದರ ಮ್ಯಾಲೆ ಮಲಗಿಸಿಕೊಂಡು ದವಾಖಾನಿಗೆ ಹೋಗೂಣು” ಎಂದಳು.

ತಳ್ಳುಗಾಡಿಯಲ್ಲಿ ಮಗಳನ್ನು ಕರೆದುಕೂಂಡು ಹೋಗುವುದೆ? ಎಲ್ಲ ಅನುಕೂಲವಿದ್ದೂ ಇಂಥ ಪರಿಸ್ಥಿತಿ ಬಂದುದಕ್ಕೆ ಪದ್ಮ ಕಸಿವಿಸಿದಳು. ಮಗಳ ನರಳಾಟ ಈ ಕಸಿವಿಸಿಯನ್ನು ನಿಮಿಷಾರ್ಧದಲ್ಲಿ ದೂರ ಮಾಡಿತು. “ಚಾಂದಬಿ, ನಮ್ಮಪುಣ್ಯಕ್ಕ ತಳ್ಳುಗಾಡಿಯರ ಸಿಕ್ತಲ್ಲ. ಲಗೂನ ತಗೊಂಡು ಬಾ” ಎಂದಳು ಪದ್ಮಾ.

ಚಾಂದಬಿ ಆವಸರದಿಂದ ಹೋದಳು. ಗಾಡಿಯನ್ನು ಚಿತ್ತಮಾಡಿ, ರಸ್ತೆಗೆ ತಂದು, ಉರುಳಲು ಮೊಂಡುತನ ಮಾಡಿದ ಗಾಡಿಯನ್ನು ಜೋರಾಗಿ ತಳ್ಳುತ್ತ ಮನೆಯ ಮುಂದೆ ನಿಲ್ಲಿಸಿದಳು. ಗಾಡಿ ಆವಸ್ಥೆಯ ನೋಡಿ ಪದ್ಮ ಚಿಂತೆಗೊಳಗಾದಳು. “ನಾನು ಗಾಲಿ ರಿಪೇರಿ ಮಾಡ್ತೀನಿ, ನೀವು ದಪ್ಪನ ಜಮಖಾನಾ ತಗೊಂಡು ಬರ್ರಿ” ಎಂದ ಚಾಂದಬಿ ಹರಿದ ಟ್ಯೂಬು-ಟೈರನ್ನು ಗಾಲಿಗೆ ಹೊಂದಿಸಿ ಅದರ ಮೇಲೆ ಬಟ್ಟೆ ಸುತ್ತಿ ವಾಯರ್ ಬಿಗಿದಳು. ಗಾಡಿ ಉರುಳಲು ಸಜ್ಜುಗೊಂಡುದು ಪದ್ಮಾಳಿಗೆ ಸಂತೋಷ ತಂದಿತು.

ರೂಪಾಳನ್ನು ಗಾಡಿಯ ಮೇಲೆ ಮಲಗಿಸಿ ಇನ್ನೇನು ಗಾಡಿ ತಳ್ಳಬೇಕೆನ್ನುವಷ್ಟರಲ್ಲಿ “ಚಾ೦ದಬಿ, ನನಗ ಅಂಜಿಕಿ ಸುರುವಾತು ನೋಡು, ಗಲಭೆ ಮಾಡೋರು ನಮ್ಮ ಮೇಲೆ ಬಿದ್ರೆ ಏನ್ ಗತಿ ಆಂತ ?” ಎಂದು ಅನುಮಾನಿಸಿದಳು ಪದ್ಮಾ.

“ಆಕ್ಕಾ, ನಾನೀದ್ದೀನಲ್ಲ ಬರ್ರಿ, ಬೇಟಿ ತ್ರಾಸು ಮಾಡ್ಕೋಳ್ಯಾಕ ಹತ್ಯಾಳ, ವಿಚಾರ ಮಾಡ್ಕೊಂತ ನಿಂದ್ರು ಟೈಂ ಆಲ್ಲ ಇದು. ಯಾವ ಪುಂಡ್ರು ಬರ‍್ತಾರ, ನಮ್ಮನ್ನ ತಡೀತಾರ ನಾನೂ ನೋಡ್ತೀನಿ” ಜಬರ್ದಸ್ತಾಗಿ ಹೇಳಿ ಗಾಡಿಯನ್ನು ತಳ್ಳಿಯೇ ಬಿಟ್ಟಳು ಚಾಂದಬಿ.

* * *

ತಳ್ಳುಗಾಡಿಯ ಸದ್ದು ರಸ್ತಯ ನೀರವತೆಯನ್ನು ಹೆದರಿಸುವಂತೆ ಇತ್ತು.

ಚಾಂದಬಿ ಸೀರೆಯ ಸೆರಗನ್ನು ಸೊಂಟಕ್ಕೆ ಭದ್ರವಾಗಿ ಸಿಕ್ಕಿಸಿಕೊಂಡು ಗಂಡಸಿಗಿಂತಲೂ ದಿಟ್ಟೆಯಾಗಿ ಗಾಡಿ ನೂಕುವುದನ್ನು ಪದ್ಮಾ ಬೆರಗುಗಣ್ಣುಗಳಿಂದ ನೋಡತೊಡಗಿದ್ದಳು.

ಗಾಂಧಿನಗರದ ದವಾಖಾನೆಗೆ ಹೋಗಲು ಒಂದು ತಾಸಾದರೂ ಬೇಕು. ಸಂದಿಗಳನ್ನು ಬಳಸುತ್ತ ಹೋದರೆ ಸಮಯ ತುಸು ಕಡಿಮೆ ಹಿಡಿಯುವುದು. ಆದರೆ ಇಕ್ಕಟ್ಟಾದ ಮಾರ್ಗದಲ್ಲಿ ಗಾಡಿ ತಳ್ಳುವುದು ಪ್ರಯಾಸದ ಕೆಲಸ. ಹೀಗಾಗಿ ಚಾಂದಬಿ
ನೇರ ರಸ್ತಯನ್ನೇ ಹಿಡಿದಿದ್ದಳು.

ಮಧ್ಯೆ ಜುಮ್ಮಾ ಮಸೀದೆ. ತುಸು ದೂರಕ್ಕೆ ಹೋದರೆ ಗಣೇಶ ಮತ್ತು ಹನುಮದೇವರ ಮಂದಿರಗಳು. ಊರಲ್ಲಿ ಕೋಮು ಗಲಭೆ ಶುರುವಾದರೆ ಎಲ್ಲರ ಗಮನ ಈ ಪ್ರದೇಶದ ಮೇಲೆಯೇ ಕೇಂದ್ರಿಕೃತ. ಮತಾಂಧರಿಂದ ದೇವರ ನೆಲೆಗಳಿಗೂ
ಆತಂಕ ಎಂದುಕೊಡಳು ಚಾಂದಬಿ.

ಅವಳ ಮಾತು ಪೊಲಲೀಸರ ಆಂತರಾಳ ತಟ್ಟಿತೇನೋ, ಅವರು ಬಂದೂಕುಗಳನ್ನು ಕೆಳಗಿಳಿಸಿ ರೂಪಾಳತ್ತ ನೋಡಿದರು.

“ಸುಧಾ ಡಾಕ್ಟರು ದವಾಖಾನ್ಯಾಗ ಆದಾರಿ, ಮಗಳನ್ನ ಅವರ ಕರ‍್ಕೊಂಡು ಬಾ ಆಂದ್ರು, ನಮಗ ಒಂದೂ ಗಾಡಿ ಸಿಗಲಿಲ್ಲ ನಮ್ಮ ಯಜಮಾನರೂ ಊರಾಗ ಇಲ್ಲ, ನಮ್ಮ ಚಾಂದಬಿ ಈ ಗಾಡಿ ಹುಡುಕಿ ತಂದ್ಲು” ಇಷ್ಟು ಹೇಳುವುದರೊಳಗೆ ಪದ್ಮಾಳ ಕಣ್ಣಲ್ಲಿ ನೀರೊಡೆದಿತ್ತು.

ಹಿಂದೂ-ಮುಸ್ಲಿಮರಲ್ಲಿ ಮನಸ್ತಾಪ ಹುಟ್ಟಿಸುವ ಹಲಾಲಕೋರ ಮನಸ್ಸುಗಳಿಗೆ ಪದ್ಮಾ-ಚಾಂದಬಿಯರ ಮನುಷ್ಯ ಸಂಬಂಧ, ಒಡಲಾಳಟ ತುಡಿತ ಆರ್ಥವಾಗಲು ಸಾಧ್ಯವೆ ? ಧರ್ಮಾಂಧರಿಗೆ ನಾಗರ ಹಾವಿನಂತೆ ಹೆಡೆ ಬಿಚ್ಚುವುದು, ನಿಷ್ಪಾಪಿಗಳನ್ನು ಕೊಲ್ಲುವುದಷ್ಟೆ ಗೊತ್ತು. ಮತ್ತದಕ್ಕೆ ಧರ್ಮದ ಆಹಮ್ಮಿಕೆ ಬೇರೆ. ಕರುಣೆಯ ಗರ್ಭದಿಂದ ಧಮ೯ ಹುಟ್ಟಿದೆ. ಎಲ್ಲರನ್ನೂ ಬದುಕಿಸಿ ಬಾಳಿಸುವ ಮಾನವೀಯ ಗುಣ ಅದರದು. ಈ ಸತ್ಯವನ್ನು ಆವರಣದೊಳಗೆ ಹುದುಗಿಸಿಟ್ಟು, ತಮ್ಮ ಸ್ವಾರ್ಥಕ್ಕೆ ಆದನ್ನು ವ್ಯಾಖ್ಯಾನಿಸುವ ರಾಕ್ಷಸರಿಗೆ ಮನುಷ್ಯ ಪ್ರೀತಿ ಬೇಕಾಗಿಲ್ಲ ಎಂದೆಲ್ಲಾ ಆಲೋಚನೆಗೆ ತೊಡಗಿದ್ದ ಪಿ.ಎಸ್. ಆಯ್ ವಾಸ್ತವಕ್ಕೆ ಬಂದು,

“ಎರಡೂ ಕಡೆಯ ಸ್ಯೆತಾನರು ಮಾರಕಾಸ್ತ್ರಗಳನ್ನು ಹಿದ್ಕೊಂಡು, ತಲೆಕೆಟ್ಟವರಂಗ ತಿರುಗಾಡಲಿಕ್ಕೆ ಹತ್ಯಾರ. ರಕ್ತದ ರುಚಿ ಹತ್ತಿದ ಮತಾಂಧರಿಗೆ ಮನುಷ್ಯರು ಕಾಣ್ಸುದಿಲ್ಲ. ಊರಾಗ ಹೆಜ್ಜೆಹೆಚ್ಚಿಗೂ ಆಪಾಯ ಐತಿ. ನೀವು ಜಲ್ದಿ ಹೋಗಿ ದವಾಖಾನಿ ಸೇರ‍್ಕೋರಿ. ಆಲ್ಲಿತನಕ ನಮ್ಮ ಪೋಲೀಸರು ನಿಮ್ಮ್ಮ ಕೂಡ ಬತ್ತಾರ, ನಿಜಗುಣ, ಸಮದ್ ನೀವಿಬ್ಬರೂ ಈ ಹೆಣ್ಮಕ್ಕಳನ್ನು ದವಾಖಾನಿವರೆಗೂ ಹೋಗಿ ಬಿಟ್ಟು ಬಿರಿ” ಎಂದು ಆಜ್ಞಾಪಿಸಿದರು.

ಚಾಂದಬಿ, ಪದ್ಮಾಳ ಕಣ್ಣು ಅರಳಸಿಕೂಂಡವು. ಪಿ.ಎಸ್.ಆಯ್. ಆವರ ಕಣ್ಣಲ್ಲಿ ದೇವರಾಗಿ ಏಜ್ಯಂಭಿಸಿದ. ಅವರು ಅವನಿಗೆ ಕೈಮುಗಿದು ಕೃತಜ್ಞತೆ ಸೂಚಿಸಿದರು.

ಚಾಂದಬಿ ಗಾಡಿ ತಳ್ಳಲು ಕ್ಕೆಹಚ್ಚಿದಳು.

ಸಮದ್ ಮತ್ತು ನಿಜಗುಣ ಬಂದೂಕಗಳನ್ನು ಹೆಗಲಿಗೆ ಹಾಕಿಕೊಂಡು “ನೀವು ಸರಿರಿ” ಎಂದು ಗಾಡಿಯನ್ನು ತಳ್ಳತೊಡಗಿದರು.

ಆವರು ದವಾಖಾನೆ ಸೇರುವುದರೊಳಗೆ ಸೂಯ೯ ಅಸ್ತಮಿಸಿದ್ದ.

ವೈದ್ಯರು ತುರ್ತಾಗಿ ರೂಪಾಳನ್ನು ಹೆರಿಗೆ ಕೋಣೆಗೆ ಸಾಗಿಸಿದರು.

ಸಿಜರಿನ್ಗಾಗಿ ಆವರು ಸಿದ್ದತೆ ಮಾಡಿಕೊಂಡಾಗಿತ್ತು. ಆದರೆ ರೂಪಾಳ ಹೆರಿಗೆ ತಡವಾಗಲಿಲ್ಲ ನಾರ್ಮಲ್ಲಾಗಿ ಆಕೆ ಗಂಡುಕೂಸಿಗೆ ಜನ್ಮ ನೀಡಿದಳು. ಆಸ್ಪತ್ತ್ರೆಯ ಆವರಣದಲ್ಲಿದ್ದ ಮರಗಳಲ್ಲಿ ಹಕ್ಕಿಗಳ ಕಲರವ ಕೇಳಿಸಿತು. ಕೂಸಿನ ಅಳುವಿನ ಧ್ಯನಿ ಅದರೊಂದಿಗೆ ಮೇಳೈಯಿಸಿತು.

ಪದ್ಮಾ-ಚಾಂದಬಿ ನಿರಾತಂಕವಾಗಿ ಉಸಿರಾಡಿಸಿದರು. ರೂಪಾಳ ಮುಖದಲ್ಲಿ ಹೂ ನಗು, ಸಂಜೆಯ ಆಕಾಶ ಶುಭ್ರವಾಗಿತ್ತು. ಆಲ್ಲಿನಕ್ಷತ್ತಗಳು ಫಳಫಳಿಸತೊಡಗಿದ್ದವು. ಮಧ್ಯ ಚಂದ್ರ ಚಂದವೆನಿಸಿದ್ದ ಆವನ ತಂಪು ಬೆಳಕು ಸೂಎಯನುರಿದ ಭೂಮಿಯನ್ನು ಮೆಲ್ಲಗೆ ಆವರಿಸಿತೊಡಗಿತು.

*****