Kannada. Short story

#ಸಣ್ಣ ಕಥೆ

ಕಳಕೊಂಡವನು

0
Latest posts by ಅಬ್ದುಲ್ ಹಮೀದ್ ಪಕ್ಕಲಡ್ಕ (see all)

ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ ಮೇಲೆತ್ತಿ ಆ ಊರಿನ ಮೇಲೆ ಕಣ್ಣಾಡಿಸಿದ, ಅವನಿಗೆ ಆಶ್ಚರ್ಯ ಕಾದಿತ್ತು. ಇದು ನನ್ನ ಹುಟ್ಟೂರೇ ಎಂಬ ಸಂಶಯ ಅವನನ್ನು ಕಾಡತೊಡಗಿತು. ಸುಮಾರು ಐವತ್ತು ವರ್ಷದ ನಂತರ ಅವನು […]

#ಸಣ್ಣ ಕಥೆ

ಆವಲಹಳ್ಳಿಯಲ್ಲಿ ಸಭೆ

0

ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ ಕಾರ್ಯಕ್ರಮಗಳಲ್ಲ ಚೆನ್ನಾಗಿ ನೆರವೇರಬೇಕೆಂದು ಮಾಧ್ಯಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯರ ಮತ್ತು ಸಹಾಯೋಪಾಧ್ಯಾಯರ ನೆರವನ್ನು ಪಡೆದುಕೊಂಡಿದ್ದನು. ಜೊತೆಗೆ ಕೆಲವು ದೊಡ್ಡ ಪ್ರಾಥಮಿಕ ಪಾಠಶಾಲೆಗಳ ಅನುಭವಿಗಳೂ ದಕ್ಷರೂ ಆದ ಮುಖ್ಯೋಪಾಧ್ಯಾಯರನ್ನೂ ಸಹಾಯೋಪಾಧ್ಯಾಯರನ್ನೂ […]

#ಸಣ್ಣ ಕಥೆ

ಮೇಷ್ಟ್ರು ಮುನಿಸಾಮಿ

0

ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ. ನಾನು ದಾರಿಯಲ್ಲಿ ಕೆಲವು ಸ್ಕೂಲುಗಳನ್ನು ಭೇಟಿ ಮಾಡಿ ಕೊಂಡು ಮಧ್ಯಾಹ್ನದ ಹೊತ್ತಿಗೆ ಊರನ್ನು ಬಂದು ಸೇರುತ್ತೇನೆ’ ಎಂದು ಹೇಳಿ ಬೈಸ್ಕಲ್ ಹತ್ತಿಕೊಂಡು ಹೊರಟನು. ದಾರಿಯಲ್ಲಿ ಎರಡು ಪಾಠಶಾಲೆಗಳನ್ನು […]

#ಅನುವಾದ

ಇನ್ನೊಂದು ಕಣ್ಣು

ಹೊರಗಿನ ತೂಗುತೋಟವನ್ನು ಹಾದುಬಂದ ಮುಂಜಾನೆಯ ತಂಗಾಳಿ, ಮನೆಯ ದೊಡ್ಡ ಕಿಟಕಿಯ ಮೂಲಕ ಕೊಠಡಿಯನ್ನು ಪ್ರವೇಶಿಸಿ ಹಗುರುಗೊಳಿಸಿತ್ತು. ಚಿಟ್ಟೆಗಳಿಂದ ಸುತ್ತುವರೆದ ಬಾದಾಮ್‍ಗಿಡದ ಟೊಂಗೆಯೊಂದು ಕಿಟಕಿಯೆಡೆಗೆ ನುಗ್ಗಿತ್ತು. ದೂರದ ಚರ್ಚಿನ ಗಂಟೆಗಳ ಇಂಪು ಮತ್ತು ಸ್ವಾಲ್ಲೋಹಕ್ಕಿಗಳ ಚಿಲಿಪಿಲಿ ಸದ್ದು ಜೊತೆ ಸೇರಿದ್ದೇ, ವಾತಾವರಣ ಹಬ್ಬದ ಕಳೆ ಪಡೆದಿತ್ತು. ಆನ್ನಾ ನಿಟ್ಟುಸಿರಿಡುತ್ತ, ಕಿಟಕಿಯಿಂದ ತುಸು ಆಚೆ ಸರಿದಳು. ನಿತ್ಯ ಬೆಳಿಗ್ಗೆ […]

#ಅನುವಾದ

ಕೀಟ

ಚಿಕ್ಕಚಿಕ್ಕ ಮನೆಗಳು ಒತ್ತೊತ್ತಾಗಿದ್ದ ಆ ಹಳ್ಳಿ ಚಪ್ಪಟೆಯಾಗಿರುವ ನೆಲದ ಮೇಲಿದ್ದರೂ, ಬಲು ಎತ್ತರದಲ್ಲಿತ್ತು. ಮೊಳೆ ಹೊಡೆದ ಡೊಡ್ಡ ಸೈಜಿನ ಒರಟೊರಟು ಶೂಗಳು ಜಾರುತ್ತಿದ್ದುದರಿಂದ ಸಮಯ ಉಳಿಸಲೆಂದು ಅವರಿಬ್ಬರು ಕೈಗಳ ಸಹಾಯದಿಂದ ಏದುಸಿರುಬಿಡುತ್ತ, ಇಳಿಜಾರನ್ನು ಹತ್ತುತ್ತಿದ್ದರು. ಆಚೆ ಕಡೆ, ಚಿಕ್ಕ ಕಾರಂಜಿಯೆದುರು ಒಂದಿಷ್ಟು ಹೆಂಗಸರು ಗುಂಪು ಕಟ್ಟಿಕೊಂಡು ಜೋರಾಗಿ ಹರಟುತ್ತ ನಿಂತಿದ್ದವರು ಈಗ ಒಮ್ಮೆಲೆ ತಿರುಗಿ ಮೌನವಾಗಿಬಿಟ್ಟರು. […]

#ಅನುವಾದ

ಸ್ವರ

ಮಾರ್ಚೆಸಾ ಬೊರ್ಗಿ, ಸಾಯುವ ಕೆಲವೇ ದಿವಗಳ ಮುಂಚೆ, ತನ್ನ ಮಗ ಸಿಲ್ವಿಯೋನನ್ನು ಡಾ. ಗಿಯೂನಿಯೋ ಫಾಲ್ಸಿಗೆ ತೋರಿಸಬೇಕೆಂದು ನಿರ್ಧರಿಸಿದ್ದಳು. ಅವಳ ಮಗನ ಕಣ್ಣು ಕುರುಡಾಗಿ ಆಗಲೇ ಒಂದು ವರ್ಷವಾಗಿತ್ತು. ಇಟಲಿ ಮತ್ತು ವಿದೇಶದ ಖ್ಯಾತ ನೇತ್ರ ಚಿಕಿತ್ಸಾ ತಙ್ಞರಲ್ಲಿ ಮಗನನ್ನು ಪರೀಕ್ಷಿಸಿದ್ದಳು ಕೂಡ. ಅವರೆಲ್ಲರೂ ಆತ ಗುಣಪಡಿಸಲಾಗದ ಗ್ಲೌಕೋಮಾ (ಕಣ್ಣುಗುಡ್ಡೆಗಳಲ್ಲಿ ಬಿಗಿತ ಕಾಣಿಸಿಕೊಳ್ಳುವ ರೋಗ – […]

#ಅನುವಾದ

ಹೂಜಿ

0

ಈ ಬಾರಿಯೂ ಆಲಿವ್ ಹಣ್ಣುಗಳ ಹುಲುಸಾದ ಬೆಳೆ ಬಂದಿದೆ. ಇವು ವರ್ಷದ ಹಿಂದಷ್ಟೇ ನೆಟ್ಟವು; ಒಳ್ಳೆಯ ಉತ್ಪತ್ತಿ ಕೊಡುವ ಮರಗಳು. ಹೂಬಿಡುವ ಸಂದರ್ಭದಲ್ಲಿ ದಟ್ಟ ಮಂಜಿತ್ತಾದರೂ ಎಲ್ಲವೂ ಹಣ್ಣುಬಿಟ್ವಿವೆ. ಜಿರಾಫಾಗೆ, ಅಮಾಸೋಲ್‍ನಲ್ಲಿರುವ ತನ್ನ ತೋಟದಿಂದ ಐದು ಹೂಜಿಗಿಂತಲೂ ಜಾಸ್ತಿ ಎಣ್ಣೆ ಸಿಗಬಹುದು ಎಂದು ಮೊದಲೇ ಅಂದಾಜು ಸಿಕ್ಕಿತ್ತು. ಆದ್ದರಿಂದ ಆರನೇ ಹೂಜಿಯನ್ನು ತಯಾರಿಸಲು ಆಗಲೇ ಸ್ಯಾಲಟೊಝೀ […]

#ಸಣ್ಣ ಕಥೆ

ತನ್ನೊಳಗಣ ಕಿಚ್ಚು

0

ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ ಕರ್ಫ್ಯೂ ತೆಗೆದವರೆ. ಆದ್ರೂವೆ ಎಲ್ಲೆಡೆ ಸದ್ದಡಗೈತೆ. ಯಾರ ಮನೆಬಾಗಿಲುಗಳಿಗೂ ತೆರೆದುಕೊಂಬೋ ತಾಕತ್ತೇ ಸತ್ತೋಗ್ಯದೆ. ಕಿಟಕಿದಾಗೆ ನೋಡ್ಲಿಕ್ಕೂ ಭಯ ಅಂದಮ್ಯಾಗೆ ಬೀದಿಗಿಳಿಯೋರು ಯಾರು? ಖಾರ ಕದಡಿದ ಮನಸ್ಸುಗಳು ಇರಿಯೋಕೆಂದೇ […]

#ಸಣ್ಣ ಕಥೆ

ಅವಳೇ ಅವಳು

0

ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ, ಸಾರ್ವಜನಿಕವಾಗಿ, ಸಾಮಾಜಿಕವಾಗಿ ಬಹಳಷ್ಟು ಬದಲಾವಣೆಗಳೂ ಆಗಿ ಹೋಗಿವೆ. ಹರಿಯುವ ನೀರನ್ನು ತಡೆಯುವವರಾರು? ಅವಳೂ ಹರಿಯುವ ನೀರಿನ ಹಾಗೆ, ನದಿಯಾದರೂ ಬತ್ತುತ್ತದೆ. ಎಂದೂ ಬತ್ತದ ನದಿ ಅವಳು. ಅವಳ […]

#ಸಣ್ಣ ಕಥೆ

ವಸುಂಧರೆಯ ಮುಖ

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ಓದುತ್ತಿದ್ದಂತೆ ಮನೋಹರನ ಉಸಿರು ಬಿಗಿಯಾಯಿತು. ನಾಡಿಯಲ್ಲೆಲ್ಲ ನೆತ್ತರು ಧುಮ್ಮಿಕ್ಕೆ ಹರಿಯುತ್ತಿರುವ ಅನುಭವ. ಎಲ್ಲವನ್ನೂ ಮತ್ತೊಮ್ಮೆ ಜೀವಿಸಿದಷ್ಟು ಆಯಾಸ. ಡೆಸ್ಕಿ ನಿಂದ ಸಿಗರೇಟು ಎತ್ತಿಕೊಂಡ. ಸೇದಬಾರದು ಎಂದಿದ್ದರು ಡಾಕ್ಟರರು. ಉದ್ವೇಗಗೊಳ್ಳಬಾರದು. ಮನಸ್ಸಿಗೆ ಏನನ್ನೂ ಹಚ್ಚಿಕೊಳ್ಳಬೇಡಿ. ಇತ್ಯಾದಿ. ಎಲ್ಲವೂ ಒಮ್ಮೆಲೆ ಅರ್ಥಹೀನವಾದಂತೆ ಎನಿಸಿತು. ಇಂಥ ಕ್ಷಣಗಳು ಮರುಕಳಿಸುವುದಾದರೆ ನನಗೆ ದೀರ್ಘಾಯುಸ್ಸು ಬೇಕಾಗಿಲ್ಲ ಅಂದುಕೊಂಡು ಸಿಗರೇಟು ಹಚ್ಚಿದ. ಜೋರಾಗಿ ಕೆಮ್ಮತೊಡಗಿದ. […]