ಹರಿಚರಣ್ ಶಣೈ

ಹೆಂಡತಿಯರಿಗೆಲ್ಲ ಸ್ನೇಹಿತೆ ಈಕೆ

ಸಿಗ್ನೋರಿನಾ ಪಿಯಾ ಟೊಲೋಸಾನಿ ಕಾದಂಬರಿಗಳಲ್ಲಿ ಅಚ್ಚಾದ ಪಾತ್ರಗಳನ್ನು ತನ್ನ ಸ್ವಂತದ ಬದುಕಿನ ಖಾಲಿಪುಟಗಳೊಂದಿಗೆ ಹೋಲಿಸಿಕೊಳ್ಳುತ್ತಿದ್ದಾಳೆ ಅಥವಾ ವಿಪರೀತ ಓದುವ ಹವ್ಯಾಸ ಇರುವವರಲ್ಲಿ ಹುಟ್ಟಿ ಕೊಳ್ಳುವ ಖಿನ್ನತೆಯಿಂದ ಬಳಲುತ್ತಿದ್ದಾಳೆ […]

ಅಲೆ

ಜ್ಯೂಲಿಯೋ ಅಕುರ್‍ಜಿ ಊರಿನಲ್ಲಿ ಒಳ್ಳೆಯ ಯುವಕನೇ ಆಗಿದ್ದ ಬಿಡಿ. ಮೂವತ್ತರ ಹರೆಯದ ಅನುಕೂಲಸ್ಥ; ಅಲ್ಲದೆ ನೀಟಾಗಿ ಬಟ್ಟೆಧರಿಸುವ ಬುದ್ಧಿವಂತ ಕೂಡ. ಅವನ ಗೆಳೆಯರ ಪ್ರಕಾರ ಅವನಲ್ಲಿ ಇನ್ನೂ […]

ಗಂಭೀರವಾಗಿ ಸ್ವೀಕರಿಸುವಂಥದ್ದಲ್ಲ

ಪೆರಾಜ್ಹೆಟ್ಟಿ ಅವನ ಪಾಡಿಗೆ ಮಜವಾಗಿದ್ದ – ಬಹಳ ಜತನದಿಂದ ಬೆಳೆಸಿಕೊಂಡಿರುವ ತನ್ನ ವಕ್ರವಾದ, ಉದ್ದ ಉಗುರುಗಳನ್ನೇ ಗಮನಿಸುತ್ತ, ಆತ ಅತ್ಯಂತ ಗಂಭೀರವಾಗಿ ಮಾತಾಡುವಾಗ ನಿಮಗೆ ಆಶ್ಚರ್ಯವಾಗುವುದಂತೂ ಗ್ಯಾರಂಟಿ. […]

ಇನ್ನೊಂದು ಕಣ್ಣು

ಹೊರಗಿನ ತೂಗುತೋಟವನ್ನು ಹಾದುಬಂದ ಮುಂಜಾನೆಯ ತಂಗಾಳಿ, ಮನೆಯ ದೊಡ್ಡ ಕಿಟಕಿಯ ಮೂಲಕ ಕೊಠಡಿಯನ್ನು ಪ್ರವೇಶಿಸಿ ಹಗುರುಗೊಳಿಸಿತ್ತು. ಚಿಟ್ಟೆಗಳಿಂದ ಸುತ್ತುವರೆದ ಬಾದಾಮ್‍ಗಿಡದ ಟೊಂಗೆಯೊಂದು ಕಿಟಕಿಯೆಡೆಗೆ ನುಗ್ಗಿತ್ತು. ದೂರದ ಚರ್ಚಿನ […]

ಕೀಟ

ಚಿಕ್ಕಚಿಕ್ಕ ಮನೆಗಳು ಒತ್ತೊತ್ತಾಗಿದ್ದ ಆ ಹಳ್ಳಿ ಚಪ್ಪಟೆಯಾಗಿರುವ ನೆಲದ ಮೇಲಿದ್ದರೂ, ಬಲು ಎತ್ತರದಲ್ಲಿತ್ತು. ಮೊಳೆ ಹೊಡೆದ ಡೊಡ್ಡ ಸೈಜಿನ ಒರಟೊರಟು ಶೂಗಳು ಜಾರುತ್ತಿದ್ದುದರಿಂದ ಸಮಯ ಉಳಿಸಲೆಂದು ಅವರಿಬ್ಬರು […]

ಸ್ವರ

ಮಾರ್ಚೆಸಾ ಬೊರ್ಗಿ, ಸಾಯುವ ಕೆಲವೇ ದಿವಗಳ ಮುಂಚೆ, ತನ್ನ ಮಗ ಸಿಲ್ವಿಯೋನನ್ನು ಡಾ. ಗಿಯೂನಿಯೋ ಫಾಲ್ಸಿಗೆ ತೋರಿಸಬೇಕೆಂದು ನಿರ್ಧರಿಸಿದ್ದಳು. ಅವಳ ಮಗನ ಕಣ್ಣು ಕುರುಡಾಗಿ ಆಗಲೇ ಒಂದು […]

ಹೂಜಿ

ಈ ಬಾರಿಯೂ ಆಲಿವ್ ಹಣ್ಣುಗಳ ಹುಲುಸಾದ ಬೆಳೆ ಬಂದಿದೆ. ಇವು ವರ್ಷದ ಹಿಂದಷ್ಟೇ ನೆಟ್ಟವು; ಒಳ್ಳೆಯ ಉತ್ಪತ್ತಿ ಕೊಡುವ ಮರಗಳು. ಹೂಬಿಡುವ ಸಂದರ್ಭದಲ್ಲಿ ದಟ್ಟ ಮಂಜಿತ್ತಾದರೂ ಎಲ್ಲವೂ […]

ಸಿಸಿಲಿಯ ಮಾದಾಳ ಹಣ್ಣುಗಳು

1 Comment

“ಟೆರೇಸಿನಾ ಇದ್ದಾಳೆಯೇ?” ಯುವಕ ಕೇಳಿದ. ಒಳಗಿನಿಂದ ಬಂದ ಆಳು, ಮೆಟ್ಟಿಲ ಮೇಲೆ ನಿಂತಿದ್ದ ಯುವಕನನ್ನು ಅಡಿಯಿಂದ ಮುಡಿಯವರೆಗೂ ಪರೀಕ್ಷಿಸುವವನಂತೆ ನೋಡಿದ. ಇನ್ನೂ ಅಂಗಿಯ ಒಂದು ಭಾಗವನ್ನಷ್ಟೇ ಧರಿಸಿಕೊಂಡಿದ್ದ […]

ಪುಟ್ಟ ಗುಡಿಸಲು – ಒಂದು ಸಿಸಿಲಿಯನ್ ಚಿತ್ರಣ

ಶುಭ್ರ ಮುಂಜಾವು. ಪುಟ್ಟ ಹುಡುಗಿಯೊಬ್ಬಳು ಆ ಗುಡಿಸಲಿನಿಂದ ಹೊರಬಂದಳು. ಅವಳ ತಲೆಯ ಮೇಲೆ ಮಾಸಿದ ಕೆಂಪು ರುಮಾಲಿತ್ತು. ಹಣೆಯ ಮೇಲೆ ಒರಟೊರಟು ಕೂದಲುಗಳ ರಾಶಿ. ನಿದ್ದೆ ಗಣ್ಣಿನಲ್ಲೇ […]