ಯೋಗ್ಯ ಪರಿಶೀಲನೆ

ಯೋಗ್ಯ ಪರಿಶೀಲನೆ

ತೀರ ಸರಳವಾದ ಒಂದು ಕಂಬಿಯನ್ನು ತಗೆದುಕೊಂಡು ಅದರ ಅರ್ಧ- ಭಾಗವನ್ನು ನೀರಲ್ಲಿ ಮುಳುಗಿಸಿ ಹಿಡಿಯಿರಿ. ಕಂಬಿಯು ಮಧ್ಯದಿಂದ ಡೊಂಕಾದಂತೆ ಕಾಣಿಸುತ್ತದೆ. ಆದರೆ ಅದರ ಆ ರೂಪು ಸಟಿಯಾದದ್ದು. ಹಾಗೂ ಕಂಬಿಯು ನಿಜವಾಗಿ ಡೊಂಕವೇ ಆಗಿದ್ದರೆ ನಮ್ಮ ವಿಚಾರವೇ ತಪ್ಪೆಂದು ತಿಳಿಯಿರಿ. ಕಂಬಿಯನ್ನು ನೀರೊಳಗಿಂದ ಹೊರಗೆ ತೆಗೆದರೆ ಅದು ಮೊದಲಿನಂತೆಯ ಸರಳವಾಗಿದೆಯೆಂಬುದನ್ನು ನೀವು ನೋಡುವಿರಿ.

ಇದಕ್ಕೆ ವಿರುದ್ಧವಾಗಿ ಒಂದು ಡೊಂಕು ಕಂಬಿಯನ್ನು ಇದೇ ರೀತಿ ಯಾಗಿ ನೀರಲ್ಲಿ ನಿಲ್ಲಿಸಿಬಿಟ್ಟರೆ ಅದು ಸರಳವಾಗಿರುವಂತೆ ತೋರಲೂಬಹುದಾಗಿದೆ.

ಕೆಲವು ಮನುಷ್ಯರು ಆ ಕಂಬಿಯಂತೆ ಇರುತ್ತಾರೆ. ಕೆಲವರು ಸತ್ಯವಂತರಾಗಿರುತ್ತಾರೆ. ಆದರೆ ಅವರು ಹಾಗೆ ತೋರುವದಿಲ್ಲ. ಕೆಲವರು ಸತ್ಯವಂತರಾಗಿ ತೋರುತ್ತಾರೆ. ಆದರೆ ಅವರು ಮೋಸಗಾರರಾಗಿರುತ್ತಾರೆ. ಹೀಗೆ ಅವರು ಮಾಯಾವಿರೂಪವನ್ನು ಧಾರಣಮಾಡಿಕೊಂಡಿರುತ್ತಾರೆ. ಆದಕಾರಣ ಬಾಹ್ಯರೂಪವನ್ನು ನಾವು ತೀರ ಕಡಿಮೆ ನಂಬಲಿಕ್ಕೆ ಬೇಕು. ಅದರೊಡನೆ ಯಾವನಾದರೂ ವ್ಯಕ್ತಿಯ ವಿಷಯದಲ್ಲಿ ಅಭಿಪ್ರಾಯವನ್ನು ನಿಶ್ಚಿತಗೊಳಿಸುವುದಾದರೆ ತುಂಬ ಎಚ್ಚರಿಕೆಯಿಂದ ವರ್ತಿಸುವುದರ ಅವಶ್ಯಕತೆಯಿರುತ್ತದೆ.

ಭಾರತ ವರ್ಷದಲ್ಲಿ ಒಬ್ಬ ಸಾಧುವು ಒಮ್ಮೆ ಭಿಕ್ಷೆಯನ್ನು ಬೇಡುತ್ತ ಬೇಡುತ್ತ, ಒಂದು ದೇಶವನ್ನು ಹೊಕ್ಕನು. ಒಂದು ದೊಡ್ಡಿಯಲ್ಲಿ ಅವನಿಗೊಂದು ಟಗರು ಕಣ್ಣಿಗೆ ಬಿತ್ತು. ಪ್ರಾಣಿಯು ಅ ಸಮಯಕ್ಕೆ ಸಿಟ್ಟನಲ್ಲಿದ್ದಿತೇನೋ. ಅದು ಸಾಧುವಿನ ಮೇಲೆ ಹಾರಿಬೀಳುವ ಸಿದ್ಧತೆಯಲ್ಲಿ ತನ್ನ ತಲೆಯನ್ನು ಕೆಳಗೆ ಮಾಡಿ ಕೆಲವೊಂದು ಹೆಜ್ಜೆ ಹಿಂದೆ ಸರಿಯಿತು.

“ಭಲೆ!” ಎಂದು ಆ ಧರ್ಮಾಭಿಮಾನಿಯಾದ ಸಾಧುವು ನುಡಿದು ದೇನಂದರೆ- “ಈ ಪ್ರಾಣಿಯು ಅದೆಷ್ಟು ಜಾಣ ಹಾಗೂ ಒಳ್ಳೆಯದಾಗಿದೆ. ನಾನೊಬ್ಬ ಸದ್ಗುಣಿಯಾದ ವ್ಯಕ್ತಿಯೆಂಬುದು ಇದಕ್ಕೆ ತಿಳಿದಿದೆ. ನನ್ನನ್ನು ವಂದಿಸುವ ಸಲುವಾಗಿಯೇ ಇದು ನನ್ನ ಎದುರಿಗೆ ತಲೆಬಾಗಿಸಿದೆ.”

ಅದೇ ಸಮಯಕ್ಕೆ ಟಗರು ಆತನ ಮೇಲೆ ಸರಿಯಾಗಿ ದುಮುಕಿ ಬಿದ್ದಿತು. ಅಲ್ಲದೆ ತನ್ನ ತಲೆಯ ಒಂದು ಡಿಕ್ಕಿಯಿಂದ ಆ ಸದ್ಗುಣಿಯಾದ ವ್ಯಕ್ತಿಯನ್ನು ನೆಲಕ್ಕೆ ಕೆಡವಿ ಬಿಟ್ಟಿತು.

ಅನಧಿಕಾರಿಗಳಾದವರ ವಿಷಯದಲ್ಲಿ ವಿಶ್ವಾಸ ಹಾಗೂ ಸಹಾನುಭೂತಿ ತೋರಿಸುವುದರಿಂದ ಇದೇ ಗತಿಯುಂಟಾಗುತ್ತದೆ. ಕೆಲವು ಜನರು ಭಯಂಕರವಾಗಿದ್ದರೂ ನಿರ್ದೋಷಿಗಳಾಗಿ ಕಾಣಿಸುತ್ತಾರೆ. ಹೇಗೆಂದರೆ ಕಥೆಯೊಳಗಿನ ಆ ತೋಳನು ದನಗಾಹಿಯ ಸಡಿಲಂಗಿಯನ್ನು ತೊಟ್ಟು ಕೊಂಡಿತ್ತು. ಹಾಗೂ ಕುರಿಯು ಅದನ್ನು ತನ್ನ ಸ್ವಾಮಿಯೆಂದು ತಿಳಕೊಂಡು ಕುಳಿತಿತ್ತು. ಇದಕ್ಕೆ ವಿಪರೀತವಾಗಿ ಕೆಲವರು ಭಯಂಕರ ಕಾಣಿಸಿದರೂ ಇರುತ್ತಿರುವುದು ಹಾಗಲ್ಲ. ಹೇಗೆಂದರೆ- ಬೇರೊಂದು ಕಥೆಯೊಳಗಿನ ಕತ್ತೆಯು ಸಿಂಹದ ತೊಗಲು ಹೊದ್ದುಕೊಂಡಿದ್ದರಿಂದ ಅದು ಭಯಾನಕ ವಾಗಿ ಕಾಣಿಸಿಕೊಳ್ಳಹತ್ತಿತು.
* * * *

ಎಲ್ಲಿ ಮನುಷ್ಯನು ಅನ್ನಿಗರ ಬಾಹ್ಯರೂಪವನ್ನು ನಂಬುವ ತಪ್ಪು ಮಾಡಬಲ್ಲನೋ ಅಲ್ಲಿ ಅದಕ್ಕೆ ವಿಪರೀತವಾಗಿ ಅವನು ಅನ್ನಿಗನ ವಿಷಯದಲ್ಲಿ ಅನುದಾರ ಹಾಗೂ ಚಂಚಲವಾದ ಅಭಿಪ್ರಾಯವನ್ನು ತಳೆಯುವ ಭ್ರಮೆಯಲ್ಲಿಯೂ ಬೀಳಬಲ್ಲನು.

ಫಾರಿಸದ ಶಹ ಇಸ್ಮಾಯಿಲ ಸಫವಿಯು ಖುರಾಸಾನದ ರಾಜ್ಯವನ್ನು ಗೆದ್ದುಕೊಂಡು ತನ್ನ ರಾಜಧಾನಿಗೆ ತಿರುಗಿ ಬರುತ್ತಿದ್ದನು. ಅವಾಗ ಹಾಶಿಫೀ ಕವಿಯ ವಾಸಸ್ಥಳದ ಹತ್ತರದಿಂದ ಸಾಗುತ್ತಿರುವಾಗ ಅವನ ಮನದಲ್ಲಿ ಕವಿಯನ್ನು ಕಾಣಬೇಕೆಂಬ ಇಚ್ಛೆಯುಂಟಾಯಿತು. ಆ ಪ್ರಸಿದ್ಧ ವ್ಯಕ್ತಿಯನ್ನು ನೋಡಬೇಕೆನ್ನುವ ಅತನ ಇಚ್ಛೆಯು ಅದೆಷ್ಟು ಪ್ರಬಲವಾಗಿ ನಿಂತಿತೆಂದರೆ- ಆ ಮನೆಯ ಸಿಂಹದ್ವಾರದ ವರೆಗಾದರೂ ಹೋಗಬಲ್ಲೆನೆಂಬ ಧೈರ್ಯವೂ ಅವನಲ್ಲಿ ಉಳಿಯಲಿಲ್ಲ. ಹೊರಗೋಡೆಯ ಬಳಿಯಲ್ಲಿ ನೇತಾಡುವ ಒಂದು ಗಿಡದ ತೊಂಗಲಿನ ಮೇಲೆ ಅವನ ದೃಷ್ಟಿ ಬಿತ್ತು. ಅವನು ಅದರ ಆಧಾರದಿಂದ ಜೋಲು ಬಿದ್ದನಲ್ಲದೆ ತೂಗಾಡಿ ಆ ಗೋಡೆಯನ್ನು ಜಗಿದು ಕವಿಯ ಹೂದೋಟದಲ್ಲಿ ಹೋಗಿ ಹಾರಿಕೊಂಡನು.

ಈ ಪ್ರಕಾರ ಅಕಸ್ಮಾತ್ತಾಗಿ ಯಾರಾದರೂ ನಮ್ಮ ಮನೆಯಲ್ಲಿ ನುಗ್ಗಿ ಬಂದರೆ ನೀವು ಏನು ತಿಳಕೊಳ್ಳುವಿರಿ? ನಿಶ್ಚಯವಾಗಿಯೂ ನೀವು ಅವನನ್ನು ಕಳ್ಳನೆಂದು ತಿಳಿಯುವಿರಿ. ಅಲ್ಲದೆ ಕೂಡಲೇ ಹೊರಗಡೆ ಬಂದು ಬಿಡುವಿರಿ.

ಆದರೆ ಹಾತಿಫೀಯು ಘಟನೆಯ ಬಾಹ್ಯಸ್ವರೂಪವನ್ನು ನೋಡಿ ತನ್ನ ತೀರ ಮೊದಲಿನ ಎಣಿಕೆಯಂತೆಯೇ ತನ್ನ ಅಭಿಪ್ರಯವನ್ನು ಸ್ಥಿರಗೊಳಿಸಲಿಲ್ಲ. ಒಳ್ಳೆಯದು ಮಾಡಿದನು. ಅವನು ತನ್ನ ಹೊಸ ಅತಿಥಿಯನ್ನು ತುಂಬ ಸತ್ಕರಿಸಿದನು. ಬಳಿಕ ಕೆಲವು ದಿನಗಳು ಕಳೆದ ಮೇಲೆ ಅದಾವ ಪ್ರಕಾರ ತನ್ನನ್ನು ಕಾಣುವ ಉತ್ಸುಕತೆಯು ಶಹನ ಮನದಲ್ಲಿ ಉಂಟಾಗಿತ್ತೆಂಬ ಘಟನೆಯನ್ನು ಕುರಿತ ಒಂದು ಕವಿತೆಯನ್ನು ಅವನು ಬರೆದನು.

ಸಾಧಾರಣವಾಗಿ ಅನ್ನಿಗರ ಅವಗುಣವನ್ನು ನೋಡುವುದು ಹೆಚ್ಚು ಸುಲಭವಾಗುತ್ತದೆ. ಪ್ರತಿಯೊಬ್ಬ ಮನುಷ್ಯನಲ್ಲಿ ಒಂದಿಲ್ಲೊಂದು ದೋಷವಿದ್ದೇ ಇರುತ್ತದೆ. ಹಾಗೂ ತನಗಿಂತ ಹೆರವರು ಅದನ್ನು ತೀವ್ರವಾಗಿ ತಿಳಕೊಳ್ಳುತ್ತಾರೆ. ಆದರೆ ನಾವು ಹೆರರ ವಿಷಯದಲ್ಲಿ ತೀರಕಡಿಮೆ ಅನ್ಯಾಯ ಮಾಡಬೇಕೆಂದು ಇಚ್ಛಿಸಿದರೆ, ನಾವು ಅವರ ಸರ್ವೋತ್ತಮ ಗುಣಗಳನ್ನು ನೋಡುವ ಪ್ರಯತ್ನ ಮಾಡತಕ್ಕದ್ದು. ಒಂದು ಲೋಕೋಕ್ತಿಯಿದೆ-

“ನನ್ನ ಗೆಳೆಯನು ಒಕ್ಕಣ್ಣನಿದ್ದರೆ ಅವನ ಮುಖವನ್ನು ಒಮ್ಮಗ್ಗುಲಿನಿಂದ ನೋಡು.”

ನಿಮಗೆ ಅಗಡಾಗಿಯೂ ಮಂದನಾಗಿಯೂ ಕಂಡುಬರುವ ನಿಮ್ಮ ಸಹಪಾಠಿಯು ಸಹ ವಾಸ್ತವದಲ್ಲಿ ಎಲ್ಲರಿಗಿಂತ ಹೆಚ್ಚು ಪರಿಶ್ರಮಿಯಾಗ ಬಲ್ಲನು.

ಅನುಶಾಸನ ಪ್ರಿಯನೂ ಕಠೋರನೂ ಎಂದು ತೋರುವ ನಿಮ್ಮ ಅಧ್ಯಾಪಕರು ನಿಶ್ಚಯವಾಗಿಯೂ ನಿಮ್ಮನ್ನು ಪ್ರೇಮಿಸುತ್ತಾರಲ್ಲದೆ ಕೇವಲ ನಮ್ಮ ಉನ್ನತಿಯನ್ನೇ ಅವರು ಇಚ್ಛಿಸುತ್ತಾರೆ.

ಅರುಚಿಕರನಾಗಿಯೂ ಮೂರ್ಖನಾಗಿಯೂ ಕಾಣಿಸಿಕೊಳ್ಳುವ ನಮ್ಮ ಆ ಮಿತ್ರನು ನಮಗೆ ಎಲ್ಲರಿಗಿಂತ ಹೆಚ್ಚು ಹಿತೈಷಿಯಾಗಬಲ್ಲನು.

ಯಾರನ್ನು ದುಷ್ಟರೆಂದು ತಿಳಿದು ನಾವು ಪ್ರೇಮಿಸುವದಿಲ್ಲವೋ ಅಂಥ ಕೆಲವು ವ್ಯಕ್ತಿಗಳಿರುತ್ತಾರೆ. ಅವರ ಒಳಗೆ ಸಹ ನಾವು ನೋಡಲಿಕ್ಕಾಗದ ಏನಾದರೊಂದು ಗುಣವಿರುತ್ತದೆ.

ಆಗೋಬಿಯೋ ಎಂಬ ಹೆಸರಿನ ನಗರದ ಹತ್ತಿರದ ಹೊಲಗಳಲ್ಲಿಯೂ ಕಾಡಿನಲ್ಲಿಯೂ ಒಂದು ವಿಶಾಲವಾದ ತೋಳನ ಆತಂಕವು ಅದೆಷ್ಟು ಪಸರಿಸಿತ್ತೆಂದರೆ ಅಲ್ಲಿ ಯಾವ ದಾರಿಗನೂ ಹಾದು ಹೋಗುವ ಸಾಹಸ ಮಾಡುತ್ತಿದ್ದಿಲ್ಲ. ಅದು ಅನೇಕ ಮನುಷ್ಯರನ್ನೂ ಪಶುಗಳನ್ನೂ ನಾಶಗೊಳಿಸಿಬಿಟ್ಟಿತ್ತು.

ಕೊನೆಯಲ್ಲಿ ಭದ್ರಪ್ರಕೃತಿಯಾದ ಫ್ರಾಂಸ್ವಾ ಸಾಧುವು ಅ ಭಯಾನಕ ಪಶುವನ್ನು ಎದುರಿಸುವುದಕ್ಕೆ ನಿಶ್ಚಯಿಸಿದನು. ಅವನು ನಗರದಿಂದ ಹೊರವಂಟನು. ಅವನ ಹಿಂದೆ ಪುರುಷರ ಹಾಗೂ ಸ್ತ್ರೀಯರ ಒಂದು ದೊಡ್ಡ ಗುಂಪೇ ಇತ್ತು. ಅವರು ಕಾಡನ್ನು, ಸಮೀಪುಸುತ್ತಲೇ ತೋಳನು ಬಾಯಿಕಿಸಿದು ಸಾಧುವಿನ ಕಡೆಗೆ ಪುಟನಗೆಯಿತು. ಆದರೆ ಫ್ರಾಂಸ್ವನು ಶಾಂತಿ ಪೂರ್ವಕವಾಗಿ ಕೆಲವೊಂದು ಗುಪ್ತ ಪ್ರೇರಣೆ ನಡೆಸಿದ್ದರಿಂದ ತೋಳನು ತಣ್ಣಗಾಗಿ ಅವನ ಚರಣಗಳ ಬಳಿಯಲ್ಲಿ ಅಡ್ಡ ಬಿದ್ದುದನ್ನು ನೋಡಿದರೆ ಯಾವುದೊ ಕುರಿಮರಿ ಇರಬೇಕು.

“ತಮ್ಮಾ, ತೋಳಣ್ಣಾ,” ಎನ್ನುತ್ತ ಫ್ರಾಂಸ್ವಾ ಸಾಧುವು ನುಡಿದನು.- “ನೀನು ಈ ದೇಶಕ್ಕೆ ಬಹಳ ಹಾನಿಯನ್ನುಂಟು ಮಾಡಿರುವಿ. ಕೊಲೆಗಾರನಿಗೆ ಯಾವ ಶಿಕ್ಷೆಯನ್ನು ವಿಧಿಸಬೇಕಾಗುವದೋ ಅದೇ ಶಿಕ್ಷೆಗೆ ನೀನು ಯೋಗ್ಯನಿರುವಿ. ಹಾಗೂ ಜನರೆಲ್ಲ ನಿನ್ನನ್ನು ತಿರಸ್ಕರಿಸುತ್ತಾರೆ. ಆದರೆ ನನ್ನ ಹಾಗೂ ಅಗೋಬಿಯೋದ ನನ್ನ ಮಿತ್ರರ ನಡುವೆ ಗೆಳೆತನವುಂಟಾಗಿ ಬಿಟ್ಟರೆ ನನಗೆ ಮಹಾ ಸಂತೋಷವಾಗುವದು.”

ತೋಳನು ತನ್ನ ತಲೆ ತೂಗಿ ತನ್ನ ಬಾಲವನ್ನು ಅಲ್ಲಾಡಿಸತೊಡಗಿತು.

ಫ್ರಾಂಸ್ವಾ ಸಾಧುವು ಮತ್ತೂ ನುಡಿದನು- “ತಮ್ಮಾ, ತೋಳಣ್ಣಾ ನಾನು ನಿನಗಾಗಿ ಪ್ರತಿಜ್ಞೆ ಮಾಡುವುದೇನಂದರೆ- ನೀನು ಈ ಜನರೊಡನೆ ಶಾಂತಿಪೂರ್ವಕವಾಗಿ ಇರಲೊಪ್ಪಿದರೆ ಇವರು ನಿನ್ನೊಡನೆ ಸರಿಯಾಗಿ ನಡ ಕೊಳ್ಳುವರು. ಮತ್ತು ಪ್ರತಿ ದಿವಸ ತಿನ್ನುಣ್ಣುವದಕ್ಕೂ ಕೊಡುವರು. ಇಂದಿನಿಂದ ಇವರನ್ನು ಯಾವ ಹಾನಿಗೂ ಈಡು ಮಾಡುವದಿಲ್ಲವೆಂದು ನೀನು ಸಹ ಪ್ರತಿಜ್ಞೆ ಮಾಡು.”

ಆವಾಗ ತೋಳನು ತನ್ನ ತಲೆಯನ್ನು ಸ೦ಪೂರ್ಣವಾಗಿ ಕೊಡಹಿತು. ಹಾಗೂ ತನ್ನ ಎಡಪಂಜರವನ್ನು ಸಾಧುವಿವ ಕೈಯಲ್ಲಿ ಇಟ್ಟುಬಿಟ್ಟಿತು. ಈ ಪ್ರಕಾರ ಸತ್ಯ ಮನಸ್ಸಿನಿಂದ ಇಬ್ಬರಲ್ಲಿ ಒಪ್ಪಂದವಾಗಿ ಹೋಯಿತು.

ಬಳಿಕ ಫ್ರಾಂಸ್ವಾ ತೋಳವನ್ನು ಆಗೋಬಿಯೋದ ವಿಶಾಲವಾದ ರಾಜ ಮಂದಿರದ ಕಡೆಗೆ ತಕ್ಕೊಂಡು ನಡೆದನು. ಅಲ್ಲಿ ನಾಗರಿಕರ ಒಂದು ದೊಡ್ಡ ಗುಂಪಿನ ಎದುರಿಗೆ ತಾನು ನುಡಿದ ವಚನವನ್ನು ಪುನರುಚ್ಚರಿಸಿದನು. ಹಾಗೂ ಅದು ಸಹ ಮತ್ತೊಮ್ಮೆ ತನ್ನ ಪಂಜರವನ್ನು ಸಾಧುವಿನ ಕೈಯಲ್ಲಿ ಹಿಡಿಯ ಕೊಟ್ಟಿತು. ಅದರರ್ಥವೇನಂದರೆ- ಅದು ಭವಿಷ್ಯದಲ್ಲಿ ಸದಾಚಾರಿಯಾಗಿರುವ ಬಗ್ಗೆ ಪ್ರತಿಜ್ಞೆ ಮಾಡುತ್ತದೆ.

ಆ ತೋಳನು ಅ ನಗರದಲ್ಲಿ ಎರಡು ವರುಷಗಳ ವರೆಗೆ ಉಳಿಯಿತು. ಹಾಗೂ ಅದು ಆ ಅವಧಿಯಲ್ಲಿ ಯಾರಿಗೂ ಯಾವ ತೊಂದರೆಯನ್ನೂ ಕೊಡಲಿಲ್ಲ. ನಗರವಾಸಿಗಳು ಅದಕ್ಕಾಗಿ ಪ್ರತಿ ದಿವಸ ತಿನ್ನುಣ್ಣುವುದಕ್ಕೆ ತರುತ್ತಿದ್ದರು. ಅದು ಮುಂದೆ ಮೃತಿ ಹೊಂದಿದಾಗ ಎಲ್ಲರಿಗೂ ದುಃಖವಾಯಿತು.

ಆ ತೋಳನು ಅದೆಷ್ಟೇ ಕೆಟ್ಟದೆಂದು ತೋರಲೊಲ್ಲದೇಕೆ, ಅದರ ಒಳಗೆ ಒಂದು ಗುಣವಿತ್ತು. ಫ್ರಾಂಸ್ವಾ ಸಾಧುವು ಅದಕ್ಕೆ ‘ತಮ್ಮಾ’ ಎಂದು ಕೂಗಿ ಸಂಬೋಧಿಸುವವರಗೆ ಯಾವ ವ್ಯಕ್ತಿಯೂ ಆ ಗುಣವನ್ನು ವಾಸ್ತವದಲ್ಲಿ ತಿಳಿದಿರಲಿಲ್ಲ. ಈ ಕಥೆಯಲ್ಲಿ ತೋಳನು ನಿಸ್ಸಂದೇಹವಾಗಿ ಒಂದು ದೊಡ್ಡ ಅಪರಾಧಿಯ ಉದಾಹರಣವನ್ನು ಮುಂದಿರಿಸುತ್ತದೆ. ಅದಕ್ಕಾಗಿ ಅದನ್ನು ಎಲ್ಲ ಜನರು ತಿರಸ್ಕರಿಸುತ್ತಾರೆ. ಆದರೆ ಅದು ನಮಗೆ ತೋರಿಸಿಕೊಡುವದೇನೆಂದರೆ- ಯಾವ ಆಶೆಯೂ ಇಲ್ಲದಿರುವ ಜನರಲ್ಲಿ ಸಹ ದೊಡ್ಡಿತೆಯ ಕೆಲವೊಂದು ಬೀಜಗಳಿರುತ್ತವೆ. ಅವು ಸ್ವಲ್ಪವೇ ಪ್ರೇಮ ಸಿಕ್ಕರೂ ಬಿರಿದು ಮೊಳೆಯುತ್ತವೆ.

ಯಾವ ಕಟ್ಟಿಗೆಯ ಹಲಗೆಯೇ ಇರರೊಲ್ಲದೇಕೆ, ಅದು ಅದೆಷ್ಟೇ ಹುಳುಕು ಇರಲೊಲ್ಲದೇಕೆ ಅದರಲ್ಲಿ ಒಬ್ಬ ಕುಶಲ ಕಲೆಗಾರನು ಕೆಲವೊಂದು ತಂತುಗಳನ್ನು ಸರಿಯಾದ ಅವಸ್ಥೆಯಲ್ಲಿ ನೋಡಲಾರನು. ಒಬ್ಬ ಅಶಿಕ್ಷಿತ ಕೆಲಸಗಾರನು ಅಜ್ಞಾನ ಅವಹೇಳನದಿಂದಲೂ ಅದನ್ನು ಬಿಸುಟಿಬಿಡುವನು. ಆದರೆ ಒಬ್ಬ ಪ್ರವೀಣನಾದ ಬಡಿಗನು ಅದನ್ನೆತ್ತಿ, ತಕ್ಕೊಳ್ಳುವನು. ಮತ್ತು ಯಾವ ಭಾಗವು ಹುಳಿತುಹೋಗಿದೆಯೊ ಅದನ್ನು ತೆಗೆದುಹಾಕಿ ಉಳಿದುದನ್ನು ಎಚ್ಚರಿಕೆಯಿಂದೆ ಉಚ್ಚುಗೊರಡು ಹೊಡೆದು ನುಣುಪುಗೊಳಿಸಿಕೊಳ್ಳುವನು. ಗಿಡಗಳ ಬಿರುಸು ಗಂಟುಗಳು ಮೂರ್ತಿ ಕೆತ್ತುವ ಕಲೆಗಾರನಿಗೆ ಬಹಳ ಕೆಲಸಕ್ಕೆ ಬರುತ್ತವೆ. ಯಾಕಂದರೆ ಅವುಗಳಲ್ಲಿ ಅವರು ಅತ್ಯಂತ ಆಕರ್ಷಕವಾದ ಚಿಕ್ಕ ಚಿಕ್ಕ ಚಿತ್ರಗಳನ್ನು ಕೆತ್ತಬಲ್ಲರು.

* * * *

ಗಿಯಾನಾ ಪ್ರದೇಶದ ಜಲವಾಯುಗಳು ಇರೋಪದವರಿಗೆ ತುಂಬ ವಿನಾಶಕಾರಿಯಾಗಿವೆ. ಅಲ್ಲಿ ಶಿಕ್ಷೆ ಹೊಂದಿದವರ ಹಾಗೂ ನಿರ್ವಾಸಿತರ ಸಲುವಾಗಿ ಸೆರಮನೆಗಳನ್ನು ರಚಿಸಿದ್ದಾರೆ. ಕೆಲವು ವರುಷಗಳ ಹಿಂದಿನ ಮಾತು – ಅಲ್ಲಿ ಒಂದು ವಾರ ಒಬ್ಬ ಕಾವಲಗಾರನು ತನ್ನ ಕಣ್ಣರಿಕೆಯಲ್ಲಿ ಸೆರೆಯಾಳುಗಳ ಒ೦ದು ಗುಂಪನ್ನು ಕೇನ ಎಂಬ ಹೆಸರಿನ ಸ್ಥಳಕ್ಕೆ ತೆಗೆದು ಕೊಂಡು ಹೋಗುತ್ತಿದ್ದನು. ಕರಾವಳಿಯ ಸಮೀಪದಲ್ಲಿ ಒಮ್ಮಿಂದೊಮ್ಮೆ ತೆರೆಗಳು ದಂಡೆಯ ಕಡೆಗೆ ಮುನ್ನುಗ್ಗುತ್ತ ಬರುತ್ತಿರುವಾಗ ಆ ನೀರಿನಲ್ಲಿ ಉರುಳಿಬಿದ್ದನು.

ಆ ಬಂದರದಲ್ಲಿ ತೆರೆಗಳ ಇಳುಮೆಯ ಸಮಯದಲ್ಲಿ ಅದೆಷ್ಟು ಉಸುಕು ತುಂಬಿಬಿಡುತ್ತಿದ್ದಿತೆಂದರೆ ನಾವೆಯನ್ನು ಅಲ್ಲಿ ನಿಲ್ಲಿಸುವುದು ಸರ್ವಥಾ ಅಸಂಭವವಾಗುತ್ತಿತ್ತು. ಇದಕ್ಕೆ ವಿಪರೀತವಾಗಿ ಭರತಿಯ ಸಮಯದಲ್ಲಿ ನೀರಿನ ವೇಗವುಳ್ಳ ಪ್ರವಾಹದೊಂದಿಗೆ ಮೀನುಗಳು ಒಂದು ದೊಡ್ಡ ಸಂಖ್ಯೆಯಲ್ಲಿ ಬಂದು ಸರ್ವ ಕರಾವಳಿಯನ್ನು ಸುತ್ತುವರಿಯುವವು.

ನೀರಿನಲ್ಲಿ ಬಿದ್ದ ಅ ಕಾವಲುಗಾರನ ಅವಸ್ಥೆಯು ಅತ್ಯಂತ ಚಿಂತಾಜನಕವಾಗಿ ಬಿಟ್ಟಿತ್ತು. ಯಾಕಂದರೆ ಈಸುವುದು ಸಹ ಅವನಿಗೆ ಹೆಸರಿನ ಮಟ್ಟಿಗೆ ಬರುತ್ತಿತ್ತು. ಹಾಗೂ ಕ್ಷಣಕ್ಷಣಕ್ಕೂ ಹಿಂಸಕ ಜಂತುಗಳು ತನ್ನನ್ನು ನುಂಗಿಬಿಡುವವೆಂಬ ಭಯವು ಹೆಚ್ಚಾಗತೊಡಗಿತು. ಆಗಲೂ ಯಾವುದೋ ಕೋಮಲ ಭಾವನೆಯಿಂದ ಪ್ರೇರಿತನಾಗಿ ಒಬ್ಬ ಸೆರಯಾಳು ನೀರಿನಲ್ಲಿ ಜಿಗಿದು ಕೊಂಡನು. ಅವನು ಆ ಕಾವಲುಗಾರನನ್ನು ಹಿಡಿಯುವುದರಲ್ಲಿ ಸಫಲವಾಗಿ ಬಿಟ್ಟನಲ್ಲದೆ ಯಥೇಷ್ಟವಾಗಿ ಪ್ರಯತ್ನಿಸಿದ್ದರಿಂದ ಅವನು ಕಾವಲುಗಾರನನ್ನು ಬದುಕಿಸಲೂ ಸಮರ್ಥನಾದನು.

ಆ ಮನುಷ್ಯನು ಒಬ್ಬ ಅಪರಾಧಿ. ಎಂಥ ಅಪರಾಧಿಯೆಂದರೆ-ಯಾವುದಾದರೊಂದು ದಾರಿಯಲ್ಲಿ ನಡೆದಾಗ ಅವನನ್ನು ಸೆರೆಯಾಳಿನ ಉಡುಪಿನಲ್ಲಿ ನಂಬರು, ಹಾಗೂ ಚಿಹ್ನೆ ಸಹಿತ ನೋಡಿದವರು ತಿರಸ್ಕಾರದಿಂದ ಮುಖ ತಿರುಗಿಸುವರು. ಅವನ ಮಟ್ಟಿಗೆ ಅವನ ಯಾವ ಹೆಸರೂ ಉಳಿದಿರುವುದಿಲ್ಲ. ಆ ನಂಬರೇ ಅವನ ಹೆಸರು. ಹಾಗೂ ಅವನು ಒಂದು ಕೃಪಾಪೂರ್ಣ ದೃಷ್ಟಿಗಾಗಲಿ ದಯಾ- ಪೂರ್ಣವಾದ ಶಬ್ದಕ್ಕಾಗಲಿ ಪಾತ್ರನಾಗಿರಲಿಲ್ಲ. ಆದರೆ ಈ ವಿಚಾರವನ್ನು ನಾವು ನ್ಯಾಯಮುಕ್ತನೆಂದು ಹೇಳೆಲಾರೆವು. ಯಾಕೆಂದರೆ ಅವನಲ್ಲಿ ಸಹ ದಯೆಯೆಂಬ ಹೆಸರಿನ ವಸ್ತುವು ವಾಸಿಸಿಕೊಂಡಿತ್ತು. ಅಸಂಖ್ಯ ದೋಷಗಳಾಗುತ್ತಿದ್ದರೂ ಅವನ ಹೃದಯವು ಕೋಮಲವಾಗಿತ್ತು. ಅವನು ತನ್ನ ಜೀವವನ್ನು ಸಹ ಗಂಡಾಂತರದಲ್ಲಿ ಹಾಕಿದ್ದು ಯಾರ ಸಲುವಾಗಿ? ಗೊತ್ತಿದೆಯೇ ? ತನ್ನ ಕರ್ತತ್ಯಪಾಲನದ ಉದ್ದೇಶದಿಂದ ತನ್ನೊಡನೆ ಯಾರು ನಿರಂತಕವಾಗಿ ಕಠೋರತೆಯಿಂದ ವರ್ತಿಸುತ್ತಿದ್ದರೋ ಆ ಮನುಷ್ಯನ ಸಲುವಾಗಿ!

* * *

ಅಪರಾಧಿಗಳ ಇನ್ನೊಂದು ಕಥೆಯೂ ಅದೆ. ಅದರಿಂದ ನಮಗೆ ಕಂಡು ಬರುವುದೇನಂದರೆ- ಮನುಷ್ಯನ ಬಾಹ್ಯಸ್ವರೂಪವನ್ನು ನೋಡಿ ನಾವು ನಮ್ಮ ಅಭಿಪ್ರಾಯವನ್ನು ನಿಶ್ವಯಿಸಿದರೆ ಅದೆಷ್ಟೋ ವಂಚನೆಗೀಡಾಗ ಬೇಕಾಗುತ್ತದೆ.

ಸೆರೆಮನೆಯಿಂದ ಬಿಡುಗಡೆಹೊಂದಿದ ಬಳಿಕ ಇಬ್ಬರು ಸೆರೆಯಾಳುಗಳು ಓಮಾರೋನಿ ಎಂಬ ಸ್ಥಳಕ್ಕೆ ಕಚ್ಚಾ ಬಂಗಾರದ ಒಬ್ಬ ವ್ಯಾಪಾರಿಯ ಬಳಿಯಲ್ಲಿ ನೌಕರರಾಗಿ ಬಿಟ್ಟರು. ವ್ಯಾಪಾರಿಯು ಇವರನ್ನು ವಿಶ್ವಾಸಿಕರೆಂದು ಎಣಿಸಿ ವರ್ಷಾನುವರ್ಷ ಬಂಗಾರ ತೊಳೆಯುವಿಕೆಯನ್ನೂ ಬಂಗಾರ ಬುಟ್ಟಿಯನ್ನೂ ಅವರಿಗೆ ಒಪ್ಪಿಸುತ್ತಿದ್ದನು. ಅವರೂ ಅವನ ಬಳಿಯಿಂದ ಬಂಗಾರವನ್ನು ಪೇಟೆಯಲ್ಲಿ ಮಾರುವ ಸಲುವಾಗಿ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಅವರ ಹತ್ತಿರದ ಪೇಟೆಯು ಸಹ ಅದೆಷ್ಟು ದೂರವಿತ್ತೆಂದರೆ ಅಲ್ಲಿಗೆ ತಲುವುವುದಕ್ಕೆ ಮೂವತ್ತು ದಿನಗಳು ಬೇಕಾಗುತ್ತಿದ್ದವು. ನದಿಯ ಪ್ರವಾಹದಲ್ಲಿ ನಾವೆಯೊಡನೆ ಹೋಗಬೇಕಾಗುತ್ತಿತ್ತು. ಒಂದು ದಿನ ಆ ಇಬ್ಬರೂ ಬಿಡುಗಡೆಹೊಂದಿದ ಸರೆಯಾಳುಗಳು ಓಡಿ ಹೋಗಬೇಕೆಂದು ನಿರ್ಧರಿಸಿದರು. ಯಾಕಂದರೆ ಅಲ್ಲಿ ಸೆರೆಯಾಳುಗಳಿಗೆ ತಮ್ಮ ಶಿಕ್ಷೆಯನ್ನು ಭೋಗಿಸಿದರೂ ಮರಳಿ ತಮ್ಮ ಮನಗೆ ಹೋಗುವ ಸ್ವತಂತ್ರತೆ ಇರಲಿಲ್ಲ. ಅವರು ಅದೇ ಪ್ರಾಯಶ್ಚಿತ್ತ ಗೃಹಗಳಲ್ಲಿ ಒಮ್ಮೊಮ್ಮೆ ಇಡಿಯ ಜೀವನವೂ ಇರಬೇಕಾಗುತ್ತಿತ್ತು. ಆ ಪ್ರದೇಶವೂ ಗಿಯಾನಾದಂತೆಯೇ ಬರಡುಬಂಜರವಾಗಿತ್ತು. ಹಾಗೂ ಅಲ್ಲಲ್ಲಿ ಅದೆಷ್ಟು ನಿಬಿಡವಾದ ಅರಣ್ಯವೂ ಕೆಸರು ಭೂಮಿಯೂ ಇದ್ದಿತೆಂದರೆ ಜನರಿಗೆ ಅಲ್ಲಿ ಯಾವಾಗಲೂ ಹಸಿವೆಯಿಂದಲೂ ಜ್ವರದಿಂದಲೂ ಸಾಯುವ ಅಂಜಿಕ ಹತ್ತಿರುತ್ತಿತ್ತು. ಅವರೊಳಿಗಿಂದ ಹೆಚ್ಚು ಜನರು ಸಮಯ ಸಿಕ್ಕುತ್ತಲೆ ಓಡಿಹೋಗುತ್ತಿದ್ದರು.

ವ್ಯಾಪಾರಿಯ ಆ ನೌಕರರು ಸಹ ತಮ್ಮ ಬಳಿಯಲ್ಲಿ ನಾವೆಯಿದುದನ್ನು ಕಂಡು ಅದರಿಂದ ಲಾಭ ಪಡೆಯಬೇಕೆಂದು ಇಚ್ಛಿಸಿದರು. ಅಂತೂ ಮುಂದಿನ ಕರಾವಳಿಯಲ್ಲಿರುವ ಹಾಲುಂಡದ ಯಾವುದಾದರೂ ಒಕ್ಕಲು ನಾಡಿಗೆ ಓಡಿಹೋಗಬೇಕೆಂದು ಅವರು ನಿಶ್ಚಯಿಸಿದರು.

ಆದರೆ ಇದರಿಂದ ಮೊದಲು ಅವರ ಒಡೆಯನ ಅದೆಷ್ಟು ಬಂಗಾರವು ಅವರ ಬಳಿಯಲ್ಲಿದ್ದಿತೋ ಅದನ್ನು ಅವರೊಂದು ಸ್ಥಳದಲ್ಲಿ ಇಟ್ಟುಬಿಟ್ಟರು. ಹಾಗೂ ವ್ಯಾಪಾರಿಗೆ ಪತ್ರ ಬರೆದು ಅ ಸ್ಥಳದ ಗುತ್ತನ್ನು ಕಾಣಿಸಿದರು.

ಅವರು ಬರೆದರು- “ತಾವು ನಮ್ಮ ಮೇಲೆ ಯಾವಾಗಲೂ ಕೃಪೆ ಯಿಟ್ಟಿರುತ್ತೀರಿ. ಹೀಗೆ ಓಡಿಹೋಗುವಾಗ, ನಾವು ನಮ್ಮ ಮೇಲೆ ನಂಬಿಗೆಯಿಟ್ಟು ನಮಗೆ ಒಪ್ಪಿಸಿದ ಧನದಿಂದ ತಮ್ಮನ್ನು ವಂಚಿತರನ್ನಾಗಿ ಮಾಡು ವಷ್ಟು ಕೃತಘ್ನರು ನಾವಾಗಲಾರೆವು.”

ನೆನಪಿರಲಿ- ಆ ಇಬ್ಬರೂ ಸೆರೆಯಾಳುಗಳು ಕಳವು ಸುಲಿಗೆ ಮಾಡಿದ ಕಾರಣದಿಂದ ಶಿಕ್ಷಿಸಲ್ಪಟ್ಟಿದ್ದರು. ಅವರ ಕೈಯಲ್ಲಿದ್ದ ಬಂಗಾರವು ಅದೆಷ್ಟು ಸ್ವಲ್ಪವೇ ಇದ್ದರೂ ಅದು ಅವರ ಕೆಲಸಕ್ಕೆ ಬರಬಲ್ಲದಾಗಿತ್ತು. ಆದರೆ ಅವರ ಒಳಗೆ ಯಾವುದೋ ವಸ್ತುವು ಸತ್ಯತೆ ಹಾಗೂ ಪ್ರಾಮಾಣಿಕತೆ ಆಗಿತ್ತು. ಆ ಜನರ ಸಲುವಾಗಿ ಆ ಯಾವ ಅವರ ಪೂರ್ವ ಇತಿಹಾಸವನ್ನು ತಿಳಿದು ಅದರ ಆಧಾರದ ಮೇಲೆ ತಮ್ಮ ಅಭಿಪ್ರಾಯವನ್ನು ಕಟ್ಟುತ್ತಿದ್ದರೋ ಅವರು ಕುಕರ್ಮಿಗಳೂ ಕಳ್ಳರೂ ಸುಲಿಗೆಗಾರರೂ ಆಗಿದ್ದರು. ಅದರೆ ತಮ್ಮನ್ನು ನಂಬಬಲ್ಲ ವ್ಯಕ್ತಿಗಳ ಸಲುವಾಗಿ ಸರ್ವದೋಷಿಗಳಾಗಿದ್ದರೂ ಅವರು ವಿಶ್ವಾಸ ಪಾತ್ರರಾಗಬಲ್ಲರು.

ಚಿಕ್ಕ ಮಕ್ಕಳೇ, ನಾವು ನಮ್ಮ ವಿಚಾರಗಳಲ್ಲಿ, ಉದಾರಿಗಳೂ ದೂರ ದರ್ಶಿಗಳೂ ಆಗಬೇಕು. ನಮ್ಮ ಸಂಗಡಿಗರ ವಿಷಯದಲ್ಲಿ ಯಾವತರದ ಗಡಿಬಡಿಯ ಅಭಿಪ್ರಾಯವನ್ನು ನಿಶ್ಚಿತಗೊಳಿಸಿಕೊಳ್ಳುವ ತಪ್ಪಿನಿಂದ ನಾವು ಉಳಿದುಕೊಳ್ಳತಕ್ಕದ್ದು. ಇದನ್ನು ಬಿಟ್ಟರೆ, ಯಾವ ಅಭಿಪ್ರಾಯವನ್ನೂ ನಿಶ್ಚಯಿಸುವುದು ತಕ್ಕದಲ್ಲವೆನ್ನುವುದು ಎಲ್ಲಕ್ಕಿಂತ ಒಳ್ಳೆಯದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾತ್ರೆಯ ನಡುವೆ
Next post ನಗಣ್ಯ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…