ಪ್ರಗತಿ

ಪ್ರಗತಿ

ಪ್ರಗತಿ, ನಿಜವಾದ ಪ್ರಗತಿ ಯಾತಕ್ಕೆ ಅನ್ನುತ್ತಾರೆ?
* * *

ವಿಕಾಸವಾದದ ಸಿದ್ಧಾಂತವನ್ನು ಅನುಸರಿಸಿ, ಮನುಷ್ಯನು ಕಲ್ಲಿನಾಯುಧಗಳನ್ನು ಉಪಯೋಗಿಸುವ ಕಾಲವೊಂದಿತ್ತು. ಆ ಕಲ್ಲಿನಾಯುಧಗಳನ್ನು ಮಾಡಿಕೊಳ್ಳಲಿಕ್ಕೂ ಬಳಸಿಕೊಳ್ಳಲಿಕ್ಕೂ ಕಲಿತೇ ಕಪಿಮನುಷ್ಯನು ಮನುಷ್ಯನಾಗಿ ಪರಿಣಮಿಸಿದನು. ಬಳಿಕ ಮನುಷ್ಯನು ಕಬ್ಬಿಣದ ಆಯುಧಗಳನ್ನು ಹುಡುಕಿತೆಗೆದನು. ಆಗ ಮನುಷ್ಯ ರಾಜ್ಯದಲ್ಲಿ ಇನ್ನೊಂದು ಹೊಸ ಪರಿವರ್ತನೆಯಾಯ್ತು; ಮನುಷ್ಯನ ಪ್ರಗತಿ ಆಯ್ತು; ಮನುಷ್ಯನು ನಾಗರಿಕನಾದನು.

ಇಂದು ಮನುಷ್ಯನ ಕೈಯಲ್ಲಿ ಉಗಿಯ ಹಾಗೂ ವಿದ್ಯುತ್ತಿನ ಆಯುಧ ಬಂದಿವೆ. ಆದ್ದರಿಂದಲೇ ಇಂದಿನ ಮನುಷ್ಯನ ಪ್ರಗತಿಯು ಶಿಖರಕ್ಕೆ ಮುಟ್ಟಿದೆಯೆಂದೂ, ಆತನ ನಾಗರಿಕತೆಯ ತುಲನೆಯನ್ನು ಮಾಡಲಿಕ್ಕಾಗುವದಿಲ್ಲೆಂದೂ ಹೇಳಲಾಗುತ್ತಿದೆ.

ಈ ಮಾತು ಸರಿಯಾಗಿರುವದೆ? ಮನುಷ್ಯನ ಆಯುಧಗಳಿಂದಲೇ ಆತನ ಮನುಷ್ಯತ್ವದ ಪರಿಚಯವಾಗುವದೇ? ತಿರುಗಿ ಕೇಳಿದರೆ, ಇಂದಿನ ಒಬ್ಬಿಬ್ಬರು ಮುಂದಾಳುಗಳ ರೂಪವು ಆದಿಕಾಲದ ಗದಾಧಾರಿಗಳಾದ ‘ನೇಯಾಂಡಲರ ಬಾಲು ಮನುಷ್ಯರ ನೆನಪು ಯಾಕೆ ತಂದುಕೊಡುವದಿಲ್ಲ?
* * *

ಪ್ರಗತಿಯ ನೈಜಪರಿಚಯವು ಆಯುಧಗಳಿಂದ ಆಗದು; ಒಳಗಿನ ಚೇತನದಿಂದ ಆಗುತ್ತದೆ. ಚೇತನವು ಅದೆಷ್ಟು ಗಂಭೀರವಾಗಿದೆ, ಅದೆಷ್ಟು ವಿಶಾಲವಾಗಿದೆ. ಹಾಗೂ ಅದೆಷ್ಟು ಉನ್ನತವಾಗಿದೆ ಎಂಬ ಮಾತುಗಳಿಂದ ಪ್ರಗತಿಯ ಅಳತೆಯನ್ನು ಮಾಡಲಾಗುತ್ತದೆ; ಹಾಗೂ ಈ ಚೇತನದ ಹಿರಿಮೆಯೊಡನೆ ಆಯುಧಗಳ ಸರಳತೆಯೂ ಆಗಬಲ್ಲದು.

ಚೇತನದ ಗಂಭೀರತೆ, ಪ್ರಶಸ್ತತೆ, ಸಮುಚ್ಚತೆಗಳೆಂದರೆ ಜ್ಞಾನ-ವಿಜ್ಞಾನಗಳ ಸಮಾರೋಹವಲ್ಲ. ಜ್ಞಾನವಿಜ್ಞಾನಗಳ ಸಮಾರೋಹ ಹಾಗೂ ವಿದ್ಯಾಚಾತುರ್ಯಗಳು ಆಯುಧೋತ್ಕರ್ಷವೇ ಸರಿ. ಅದು ಮನಬುದ್ಧಿಗಳ ಆಯುಧೋತ್ಕರ್ಷವು. ಮನಬುದ್ಧಿಗಳು ಸಹಜ, ಸರಳ ಹಾಗೂ ಅಪಂಡಿತ ಆಗಿಯೂ ಚೇತನವೂ ಗಂಭೀರವೂ, ಪ್ರಶಸ್ತವೂ, ಸಮುಚ್ಚವೂ ಆಗಬಲ್ಲದು.

ದುರ್ಯೋಧನನು ನಾರಾಯಣೀ ಸೇನೆಯನ್ನು ಬೇಡಿದಾಗ ಅವನ್ನು ಆಯುಧಗಳೇ ಶ್ರೇಷ್ಠವೆಂದು ಬಗೆದಿದ್ದನು; ಅರ್ಜುನನು ಶ್ರೀಕೃಷ್ಣನನ್ನು ಸ್ವೀಕರಿಸಿ ಚೇತನದ ಹಿರಿಮೆಯನ್ನು ಗ್ರಹಿಸಿದನು.

ಶ್ರೇಷ್ಠತರ ಆಯುಧವು ಮನುಷ್ಯನನ್ನು ಹೆಚ್ಚು ಸಮರ್ಥವಾದ ಪಶುವನ್ನಾಗಿ ಮಾಡಬಲ್ಲದು. ಆದರೆ ಅದು ಆತನ ಪ್ರವೃತ್ತಿಯನ್ನಾಗಲಿ, ಪ್ರಕೃತಿಯನ್ನಾಗಲಿ ಯಾವ ಪ್ರಕಾರದಿಂದಲೂ ಉನ್ನತಗೊಳಿಸಲಾರದು.

ತನ್ನ ಪ್ರವೃತ್ತಿ ಹಾಗೂ ಪ್ರಕೃತಿಗಳನ್ನು ಶುದ್ಧಗೊಳಿಸುವದರಿಂದ ಮನುಷ್ಯನ ಮನುಷ್ಯತ್ವವೂ ದೇವತ್ವವೂ ವಿಕಸಿತವಾಗುತ್ತವೆ. ಆತನ ಚೇತನೆಯ ಪ್ರಶಸ್ತತೆಯನ್ನೂ, ಗಂಭೀರತೆಯನ್ನೂ ಸಮುಚ್ಚತೆಯನ್ನೂ ಗಳಿಸಿಕೊಳ್ಳುತ್ತದೆ. ಮತ್ತೇನೆಂದರೆ, ನಿಜವಾದ ಪ್ರಗತಿ-ಪ್ರಗತಿಯೆಂದರೆ ಕೇವಲ ಅಗ್ರಗಾಮಿಯಲ್ಲ; ಆದರೆ ಅದರೊಡನೆ ಶ್ರೇಷ್ಠಗತಿಯೂ ಅಹುದು. ಊರ್ಧ್ವತರ ದೃಷ್ಟಿ, ಗಂಭೀರತರ ಅನುಭವ ಹಾಗೂ ವಿಶಾಲತರ ಪ್ರೇರಣೆಗಳಿಂದ ಮನುಷ್ಯನ ಸತ್ತೆಯನ್ನೂ, ಜೀವನವನ್ನೂ, ನಿರಂತರವೂ ರಚಿಸುತ್ತಿರುವುದೇ ಪ್ರಗತಿಯ ಮೂಲರಹಸ್ಯ.

ಈ ಪ್ರಕಾರ ಪೂರ್ಣತ್ವವನ್ನು ಗಳಿಸಿಕೊಂಡ ಮನುಷ್ಯನಿಂದಲ್ಲದೆ, ಇನ್ನೇತರಿಂದಲೂ ಮನುಷ್ಯಕುಲದ ರಕ್ಷಣೆಯಾಗಲಿ, ಉನ್ನತಿಯಾಗಲಿ ಆಗಲಾರದು. ಈಗಿದ್ದ ಮನುಷ್ಯನು ಇನ್ನೂ ಹರಕುಮುರುಕು, ಅಂಕಡೊಂಕ, ಅಡ್ಡತಿಡ್ಡ ಆಗಿದ್ದಾನೆ.
* * *

ಯಾವ ಮನುಷ್ಯನು ತನ್ನನ್ನು ತಾನು ಸುಧಾರಿಸಲು ಪ್ರಯತ್ನ ಮಾಡುತ್ತಾನೋ, ತನ್ನನ್ನು ತಾನು ಸಮರ್ಥವಾಗಿಯೂ ಪೂರ್ಣಾಂಗನನ್ನಾಗಿಯೂ ಮಾಡಿಕೊಳ್ಳುತ್ತಾನೋ ಅವನೇ ಮಾನವ ಸಮಾಜಕ್ಕೆ ಎಲ್ಲಕ್ಕೂ ದೊಡ್ಡ ಕಲ್ಯಾಣ ಮಾಡುವವನು. ಈ ಆತ್ಮಶುದ್ಧಿಯ ಕಾರ್ಯವನ್ನು ಸ್ವತಃ ತಾನೇ ಮಾಡಿಕೊಳ್ಳಬೇಕಾಗುವದು. ಇನ್ನಾರೂ ಮಾಡಲಾರರು. ತನ್ನಿಂದಲೇ ತನ್ನ ಉದ್ಧಾರಮಾಡಿಕೊಳ್ಳುವ ಹೊರತು, ಸ್ವತಃ ತನ್ನಿಂದ ತಾನು ಪ್ರಕಾಶಗೊಳ್ಳುವ ಹೊಂತು ಇನ್ನಾವ ಹಾದಿಯೂ ಇಲ್ಲ.

ಈ ಮಹಾವ್ರತವನ್ನು ಗ್ರಹಣಮಾಡುವ ಸರ್ವ ಜನರು ಏಕತ್ರವಾಗುವರು. ಅವರಿಂದಲೇ ಭವಿಷ್ಯದ ಪೂರ್ಣತರ ಮಾನವ ಸಮಾಜವು ನಿರ್ಮಿತವಾಗುವದು.

ಶರೀರಕ್ಕೆ ಯಾವುದು ಶರೀರವಿದೆಯೋ ಅದು ದೊರೆಯದಿದ್ದರೆ, ಈ ಶರೀರದಿಂದ ಏನಾದೀತು?

ಪ್ರಾಣಕ್ಕೆ ಯಾವುದು ಪ್ರಾಣವಿದೆಯೋ ಅದೇ ಲಭಿಸದಿದ್ದರೆ ಈ ಪ್ರಾಣವನ್ನು ತೆಗೆದುಕೊಂಡು ಮಾಡುವುದೇನು?

ಮತ್ತು ಮನಕ್ಕೆ ಯಾವುದು ಮನವಿದೆಯೋ ಅದು ಜೀವನದಲ್ಲಿ ಪ್ರಸ್ಫುಟಿತವಾಗಲಾರದಾದರೆ ಈ ಮನಸ್ಸು ಯಾವ ಕೆಲಸದ್ದು?

ಆದರೆ ಅಂಥ ವಸ್ತು ಯಾವುದು? ಈ ಮನಕ್ಕೆ ಮನ ಪ್ರಾಣಕ್ಕೆ ಪ್ರಾಣ, ಶರೀರಕ್ಕೆ ಶರೀರ ಯಾರಿದ್ದಾರೆ? ಅದು ಬೃಹತ್ತರ ಜ್ಞಾನ, ಮಹತ್ತರ ಸಾಮರ್ಥ್ಯ, ಗಹನತರ ಸತ್ತೆ; ಅವನು ಚಿನ್ಮಯ. ತಪೋಮಯ, ಸನ್ಮಯ ಪುರುಷನು. ಅವನೇ ನಮ್ಮ ‘ನಾನು’ ನಮ್ಮ ದಿವ್ಯ ಸ್ವರೂಪ ನಮ್ಮೊಳಗಿನ ಈಶ್ವರನ ಪ್ರಕಾಶ.

ಮನಕ್ಕೆ ಸ್ವಯಂ ತನ್ನೊಳಗೆ ಮುಳುಗಿ ಹೋಗಲಿಕ್ಕೆ ಹೇಳಿರಿ; ಪ್ರಾಣಕ್ಕೂ ಸ್ವಯಂ ತನ್ನೊಳಗೆ ಮುಳುಗಿರಲು ಹೇಳಿರಿ; ಶರೀರಕ್ಕೂ ಸ್ವಯಂ ತನ್ನ ಸ್ವರೂಪದೊಳಗೆ ಮುಳುಗಿಬಿಡಲಿಕ್ಕೆ ಹೇಳಿರಿ.

ದಿವ್ಯ ಜೀವನವನ್ನು ಗಳಿಸುವದಕ್ಕಾಗಿ ಮುಳುಗಿಬಿಡಿರಿ. ವಿಶ್ವಸೃಷ್ಟಿ ರೂಪೀ ಸಾಗರದ ತಳದಲ್ಲಿ ಸಿದ್ಧವಾಗಿ ಬಿದ್ದಿರುವ ಮುತ್ತುಗಳನ್ನು ಎತ್ತಿ ಪೃಥ್ವಿಯ ಮೇಲೆ, ಸೂರ್ಯನೆದುರಿಗೆ ತನ್ನಿರಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನ ಮರೆಸದಿರು
Next post ಹಸೆಮಣೆ

ಸಣ್ಣ ಕತೆ

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

 • ಸಾವಿಗೊಂದು ಸ್ಮಾರಕ

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

 • ಕಲ್ಪನಾ

  ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

 • ಜೀವಂತವಾಗಿ…ಸ್ಮಶಾನದಲ್ಲಿ…

  ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys