ಥ್ರೀ-ಪಿನ್-ಪ್ಲಗ್ಗಿನ ಶಾಕ್

ಹಾವು ಕಂಡರೆ ಶಾಕ್ ಬಡಿದಂತೆ ಬೆಚ್ಚಿ ಬೀಳುತ್ತೇವೆ. ಆದರೆ ನಿಜವಾದ ಶಾಕ್ ನೀಡುವ ವಿದ್ಯುತ್ ಆಂದರೆ ನಮಗೆ ಅಸಡ್ಡೆ. ಉದಾಹರಣೆಗೆ, ನಿಮ್ಮ ಮನೆಯಲ್ಲಿ ವಿದ್ಯುತ್ ಉಪಕರಣಗಳನ್ನು ಜೋಡಿಸುವ ಪ್ಲಗ್, ಹೋಲ್ಡರ್, ಥ್ರೀ-ಪಿನ್-ಪ್ಲಗ್ ಮುಂತಾದವುಗಳು ಸುರಕ್ಷಿತವೇ ಅಂತ ಎಂದಾದರೂ ಪರೀಕ್ಷಿಸಿದ್ದೀರಾ?

ಥ್ರೀ-ಪಿನ್-ಪ್ಲಗ್‌ಗಳಿಗೆ ಸುರಕ್ಷತೆಯ ಗುರುತಾದ ಐಎಸ್ಐ ಮುದ್ರೆ ಕಡ್ಡಾಯ ಎಂಬುದು ನಮ್ಮಲ್ಲಿ ಎಷ್ಟು ಜನರಿಗೆ ತಿಳಿದಿದೆ? ಟಿವಿ, ಫ್ರಿಜ್, ವಾಷಿಂಗ್ ಮೆಷೀನ್, ಕಂಪ್ಯೂಟರ್ ಇತ್ಯಾದಿ ದುಬಾರಿ ಉಪಕರಣಗಳಿಗೆ ವಿದ್ಯುತ್ ಹರಿದು ಬರುವುದು ಥ್ರೀ-ಪಿನ್-ಪ್ಲಗ್‌ಗಳ ಮೂಲಕ. ಕಳಪೆ ಗುಣಮಟ್ಟದ ಪ್ಲಗ್‌ಬಳಸಿದರೆ ಈ ಉಪಕರಣಗಳಿಗೆ ಹಾನಿಯಾದೀತು ಮಾತ್ರವಲ್ಲ, ಆಂಥ ಪ್ಲಗ್‌ನಿಂದಾಗುವ ವಿದ್ಯುತ್ ಶಾರ್ಟ್ ಸರ ಕ್ಯೂಟಿನಿಂದಾಗಿ ಮನೆಯೊಳಗೇ ಆಪಘಾತವಾದೀತು.

ಅಹ್ಮದಾಬಾದಿನ ಕನ್ಸೂಮರ್ ಎಜುಕೇಶನ್ ಆಂಡ್ ರೀಸರ್ಚ್ ಸೊಸೈಟಿ ಎರಡು ವರುಷಗಳ ಹಿಂದೆ ದೇಶದ ವಿವಿಧ
ಭಾಗಗಳಿಂದ ಖರೀದಿಸಿದ 21 ಬ್ರಾಂಡ್ ಗಳ 6 ಆಂಪ್ ಥ್ರೀ-ಪಿನ್-ಪ್ಲಗ್‌ಗಳ ವೈಜ್ಞಾನಿಕ ಪರೀಕ್ಷೆ ನಡೆಸಿತು.  ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ಈ ಪ್ಲಗ್‌ಗಳಿಗೆ ನಿಗದಿಪಡಿಸಿದ 16 ಮಾನದಂಡಗಳ ಆನುಸಾರವಾಗಿಯೇ ಅವುಗಳ ಪರೀಕ್ಷೆ ನಡೆಸಿತು. ಇವೆಲ್ಲ ಪ್ಲಗ್‌ಗಳೂ ಆ ಪರೀಕ್ಷೆಯಲ್ಲಿ ತಿರಸ್ಕರಿಸಲ್ಪಟ್ಟವು ಗಮನಿಸಿ, ಇವುಗಳಲ್ಲಿ 16 ಬ್ರಾಂಡ್ಗಳ ಪ್ಲಗ್‌ಗಳಲ್ಲಿ ಐಎಸ್ಐ ಗುರುತೂ ಇತ್ತು.

ಗಟ್ಟಿತನ
ಮೊದಲಾಗಿ ಥ್ರೀ-ಪಿನ್-ಪ್ಲಗ್‌ಗಳ ಗಟ್ಟತನ ಪರೀಕ್ಷಿಸಲಾಯಿತು. ಮೇಲ್ನೋಟಕ್ಕೆ ಎಲ್ಲ ಪ್ಲಗ್‌ಗಳೂ ಗಟ್ಟಿಯಾಗಿ ಕಾಣಿಸುತ್ತವೆ. ಆದರೆ ಆದು ಕ್ಕೆತಪ್ಪಿ ಕೆಳಗೆ ಬಿದ್ದಾಗ? ಪ್ಲಗ್‌ಗಿನ ಗಟ್ಟಿತನ ಪರೀಕ್ಷಿಸಲು ಮಾನಕ ಸಂಸ್ಥೆ ಈ ಪರೀಕ್ಷೆ ನಿಗದಿಪಡಿಸಿದೆ. ಪ್ಲಗ್ಗನ್ನು ರಭಸದಿಂದ ಆಲ್ಲಾಡುವ ಬ್ಯಾರೆಲಿನ ಒಳಗೆ ಹಾಕಬೇಕು. ಆದರಿಂದ ಹೊರತೆಗೆಯುವಾಗ ಪ್ಲಗ್‌ಒಡೆದಿರದಿದ್ದರೆ, ಆದು ಗಟ್ಟಯಾಗಿದೆ ಎಂದು ಸಾಬೀತಾಗುತ್ತದೆ.

ಈ ಪರೀಕ್ಷೆಗೆ ಪ್ರತಿಯೊಂದು ಬ್ರಾಂಡಿನ ಐದು ಸ್ಯಾಂಪಲ್ ಪ್ಲಗ್‌ಗಳನ್ನು ಒಳಪಡಿಸಲಾಯಿತು. ಆವೆಲ್ಲವೂ ಒಡೆದು ಹೋದವು! ಅನೇಕ ಪ್ಲಗ್‌ಗಳ ಸ್ಕ್ರೂಗಳು ಕಿತ್ತು ಹೊರಬಂದರೆ, ಇನ್ನುಳಿದ ಪ್ಲಗ್‌ಗಳ ಕವಚ ಅಥವಾ ಪಿನ್ ಗಳು ಕಿತ್ತುಬಂದವು.

ತೇವಾಂಶ ಸಹಿಷ್ಣುತೆ
ಪ್ಲಗ್‌ಗಳನ್ನು ತೆರೆದ ಬಾಲ್ಕನಿಗಳಲ್ಲಿ ಮತ್ತು ಸ್ನಾನದ ಕೋಣೆ ಗಳಲ್ಲಿಯೂ ಬಳಸುತ್ತೇವೆ. ಅಲ್ಲಿ ತೇವಾಂಶ ಅಧಿಕವಾಗಿರುತ್ತದೆ. ಇಂಥ ಸ್ಥಳಗಳಲ್ಲಿ ಉಪಯೋಗಿಸುವ ಪ್ಲಗ್‌ಗಳಿಗೆ ಹಾನಿಯಾಗಬಾರದು- ಇಂಥಲ್ಲಿ ಪ್ಲಗ್ಗಿನ ಆವಾಹಕ ಕವಚ ಒಡೆದು ಹೋದರೆ, ಪ್ಲಗ್‌ಗನ್ನು ಸಾಕೆಟಿಗೆ ಹಾಕುವಾಗ ಅಥವಾ ತೆಗೆಯುವಾಗ ವಿದ್ಯುತ್ ಶಾಕ್
ತಗಲೀತು. ತೇವಾಂಶ ಸಹಿಷ್ಣುತೆ ಪರೀಕ್ಷಿಸಲು ತೇವಾಂಶ ತುಂಬಿದ ಸಂಪುಟದಲ್ಲಿ ಪ್ಲಗ್‌ಗಳನ್ನು ಇರಿಸಾಯಿತು. ಅನಂತರ ಪ್ಲಗ್‌ಗಳನ್ನು ಹೊರತೆಗೆದು ಪರೀಕ್ಷಿಸಿದಾಗ, ಎರಡು ಬ್ರಾಂಡ್‌ಗಳ ಪ್ಲಗ್‌ಗಳು ತಿರಸ್ಕರಿಸಲ್ಪಟ್ಟವು

ಒಣ ಪರಿಸ್ಥಿತಿಯಲ್ಲಿಯೂ 21 ಬ್ರಾಂಡ್ ಗಳ ಪ್ಲಗ್‌ಗಳನ್ನು ಪರೀಕ್ಷಿಸಲಾಯಿತು. ತೇವಾಂಶ ಸಹಿಷ್ಣುತೆ ಪರೀಕ್ಷೆಯಲ್ಲಿ ತಿರಸ್ಕೃತವಾದ ಆದೇ ಎರಡು ಬ್ರಾಂಡ್‌ಗಳ ಪ್ಲಗ್‌ಗಳು ಒಣ ಪರಿಸ್ಥಿತಿಯ ಪರೀಕ್ಷೆಯಲ್ಲಿಯೂ ತೇರ್ಗಡೆ ಆಗಲಿಲ್ಲ.

ಸೈಜ್ ಸರಿಯೇ?
ಪ್ಲಗ್‌ ಸಾಕೆಟಿನಲ್ಲಿ ಬಿಗಿ ಅಥವಾ ಸಡಿಲವಾಗಿ ಕೂರಬಾರದು. ಪ್ಲಗ್ ಸಡಿಲವಾಗಿದ್ದರೆ ಸ್ಪಾರ್ಕಿಂಗಿಗೆ ಕಾರಣವಾದೀತು. ಇದರಿಂದ ಪ್ಲಗ್‌ ಮತು ಸಾಕೆಟಿನ ಬಾಳ್ವಿಕೆ ಕಡಿಮೆಯಾಗುತ್ತದೆ. ಪ್ಲಗ್‌ ಬಿಗಿಯಾಗಿದ್ದರೆ ಸಾಕೆಟಿಗೆ ಹಾಕಲೂ ತೆಗೆಯಲೂ ಕಷ್ಟ ಮಾತ್ರವಲ್ಲ, ಪ್ಲಗ್‌ಹಾಗೂ ಸಾಕೆಟ್ ತುಂಡಾಗಬಹುದು- ಆದ್ದರಿಂದ ಮಾನಕ ಸಂಸ್ಥೆ ಪ್ಲಗ್ಗಿನ ಮೂರು ಪಿನ್ ಗಳಿಗೆ ಪ್ರತ್ಯೇಕ ಉದ್ದ ಮತ್ತು ವ್ಯಾಸ ನಿಗದಿಪಡಿಸಿದೆ. ಪಿನ್ ಗಳ ಉದ್ದ ಜಾಸ್ತಿಯಾಗಿದ್ದರೆ ಪ್ಲಗ್‌ಬಳಸುವವರಿಗೆ ಶಾಕ್ ತಗಲಬಹುದು.

ಪಿನ್ ಗಳು ಗಿಡ್ಡವಾಗಿದ್ದರೆ ಸ್ಪಾರ್ಕಿಂಗ್ ಉಂಟಾಗಿ ಪ್ಲಗ್, ಸಾಕೆಟ್ ಮತ್ತು ವಿದ್ಯುತ್
ಉಪಕರಣ ಸುಟ್ಟುಹೋದೀತು. ಸಿಇಆರ್ ಸೊಸೈಟಿಯ ಪರೀಕ್ಷೆಯಲ್ಲಿ ಒಂಬತ್ತು ಬ್ರಾಂಡ್ ಗಳ
ಪ್ಪಗ್ ಗಳ ಪಿನ್ ಗಳು ಸರಿಯಾಗಿಲ್ಲ ಎಂದು ಪತ್ತೆಯಾಯಿತು.

ಪ್ಲಗ್‌ಗಳಿಗೆ ‘ಇಂಟರ್ ಚೇಂಜಬಿಲಿಟಿ’ ಎಂಬ ಪರೀಕ್ಷೆಯನ್ನೂ ಮಾನಕ ಸಂಸ್ಥೆ ನಿಗದಿಪಡಿಸಿದೆ. ಆಂದರೆ ಯಾವುದೇ ಸಾಕೆಟಿಗೂ ಪ್ಲಗ್‌ಸರಿಯಾಗಿ ಜೋಡಣೆ ಆಗಬೇಕು. ಪಿನ್‌ಗಳ ಆಳತೆ ಸರಿಯಾಗಿಲ್ಲದ ಪ್ಲಗ್ಗಳು ಈ ಪರೀಕ್ಷೆಯಲ್ಲಿಯೂ ತಿರಸ್ಕರಿಸಲ್ಪಟ್ಟವು.

ಶಾಖಕ್ಕೆ ಪ್ರತಿರೋಧ
ಗಟ್ಟಿತನದ ಪರೀಕ್ಷೆಯಲ್ಲಿ 21 ಬ್ರಾಂಡ್ಗಳ ಎಲ್ಲ ಸ್ಯಾಂಪಲ್ ಪ್ಲಗ್‌ಗಳೂ ಒಡೆದು ಹೋದವು. ಅದಾದ ನಂತರ ಇನ್ನು ಐದು ಪರೀಕ್ಷೆಗಳನ್ನು ನಡೆಸಬೇಕಿತ್ತು. ‘ಇಂಥ ಸಂದರ್ಭದಲ್ಲಿ ಏನು ಮಾಡಬೇಕು?’ ಎಂದು ಮಾನಕ ಸಂಸ್ಥೆಯನ್ನು ಸಿಇಆರ್ ಸೊಸೈಟಿ ಕೇಳಿತು. “ಗಟ್ಟತನದ ಪರೀಕ್ಷೆಯಲ್ಲಿ ತಿರಸ್ಕರಿಸಲ್ಪಟ್ಟ ಪ್ಲಗ್ಗಳನ್ನು ಇತರ ಯುವುದೇ ಪರೀಕ್ಷೆಗೆ ಒಳಪಡಿಸಬೇಕಾಗಿಲ್ಲ ” ಎಂದು ಮಾನಕ ಸಂಸ್ಥೆ ಸ್ಪಷ್ಟಪಡಿಸಿತು. ಏಕೆಂದರೆ ಆವು ಬಳಕೆಗೆ ಯೊಗ್ಯವಲ್ಲ.

ಆದರೂ ಸಿಇಆರ್ ಸೊಸೈಟಿ ಆ ಬ್ರಾಂಡ್‌ಗಳ ಇನ್ನಷ್ಟು ಸ್ಯಾಂಪಲ್ ಪ್ಲಗ್‌ಗಳನ್ನು ಪುನಃ ಖರೀದಿಸಿ, ಆವನ್ನು ಇತರ ಐದು ಪರೀಕ್ಷೆಗಳಿಗೆ ಒಳಪಡಿಸಿತು. ಶಾಖ ಪ್ರತಿರೋಧ ಪರೀಕ್ಷೆಯಲ್ಲಿ ಪ್ಲಗ್ಗಿನ ಅವಾಹಕ (ಇನ್ಸುಲೇಟಿಂಗ್)ವಸ್ತುವನ್ನು ಪರೀಕ್ಷಿಸಲಾಯಿತು. ಅಂದರೆ, ಶಾಖದ ಹೆಚ್ಚಳವನ್ನು ಈ ವಸ್ತು ತಡೆದುಕೊಳ್ಳುವುದೇ ಆಥವಾ ಆಧಿಕ ಶಾಖದಿಂದ ಕರಗಿ ಹೋಗುವುದೇ ಎಂಬ ಪರೀಕ್ಷೆ. ಶಾಖದಿಂದಾಗಿ ಪ್ಲಗ್‌ಗಿನ ಕವಚ ಕರಗಿ, ಒಳಭಾಗಗಳು ತೆರೆದುಕೂಂಡರೆ ಆಪಘಾತಗಳು ಆದಾವು. 125 ಡಿಗ್ರಿ ಸೆಂಟಿಗ್ರೇಡ್ +- 5 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿ ‘ಬಾಲ್ ಒತ್ತಡ ಪರೀಕ್ಷೆ’
ನಡೆಸಲಾಯಿತು. ಇದರಲ್ಲಿ ಒಂದು ಬ್ರಾಂಡಿನ ಹೊರತಾಗಿ, ಉಳಿದೆಲ್ಲ ಬ್ರಾಂಡ್ಗಳ ಪ್ಲಗ್‌ಗಳೂ ತೇರ್ಗಡೆಯಾದವು.

ಕೋರ್ಡ್ ಗ್ರಿಪ್
ಪ್ಲಗ್ಗನ್ನು ಉಪಕರಣಕ್ಕೆ ಕೋರ್ಡ್ ಆಥವಾ ಕೇಬಲ್ ಮೂಲಕ ಸಂಪರ್ಕಿಸಲಾಗುತ್ತದೆ. ಕೋರ್ಡನ್ನು ಪ್ಲಗ್ಗಿಗೆ ಕೋರ್ಡ್ ಗ್ರಿಪ್ ಮೂಲಕ ಜೋಡಿಸಲಾಗುತ್ತದೆ. ಪ್ಲಗ್ಗಿನೊಳಗೆ ಕೋರ್ಡ್ ಗ್ರಿಪ್ಪಿನ ವಿನ್ಯಾಸವು ಪ್ಲಗ್ಗಿನೊಳಗೆ ವಯರಿಂಗ್ ಬಿಗಿತ  ಉಂಟಾಗದಂತೆ ಇರಬೇಕು. ಪ್ಲಗ್ಗಿನಲ್ಲಿ ಕೋರ್ಡ್ ಗ್ರಿಪ್‌ ಇಲ್ಲದಿದ್ದರೆ, ಕೋರ್ಡ್ ಜೋಡಿಸಿದ ಲ್ಲಿಂದ ಬೇರ್ಪಡಬಹುದು. ಇದರಿಂದ ಸ್ಪಾರ್ಕ್ ಮತ್ತು ಶಾರ್ಟ್ ಸರ್‌ಕ್ಯೂಟ್ ಉಂಟಾಗಬಹುದು. ಒಂದು ಬ್ರಾಂಡಿನ ಪ್ಲಗ್ಗಿನಲ್ಲಿ ಕೋರ್ಡ್ ಗ್ರಿಪ್ ಇರಲೇ ಇಲ್ಲ. ಇದು ಅಪಘಾತಕ್ಕೆ ಆಹ್ವಾನ!

ಐ.ಎಸ್.ಐ. ಗುರುತು
ಪ್ಲಗ್ಗಳಿಗೆ ಬಿಐಎಸ್ (ಭಾರತೀಯ ಮಾನಕ ಸಂಸ್ಥೆ) ಪ್ರಮಾಣೀಕರಣ ಕಡ್ಡಾಯ- ಉತ್ಪಾದಕರು ತಾವು ಪಡೆದ ಪ್ರಮಾಣೀಕರಣ ಸೂಚಿಸಲು ಪ್ಲಗ್ಗಿನಲ್ಲಿ ಐಎಸ್ಐ ಗುರುತು ಆಚ್ಚು ಮಾಡಲೇಬೇಕು. ಆದರೆ ಐದು ಬ್ರಾಂಡ್ಗಳ ಪ್ಲಗ್ಗಳ ಉತ್ಸಾದಕರು ಈ ಪ್ರಮಾಣೀಕರಣ ಪಡೆದಿರಲೇ ಇಲ್ಲ! ಇನ್ನೊಂದು ಬ್ರಾಂಡಿನ ಪ್ಲಗ್ಗಿನಲ್ಲಿ ಐಎಸ್ಐ ಗುರುತನ್ನು ಶಾಶ್ವತವಾಗಿ ಆಚ್ಚು (ಎಂಬೋಸಿಂಗ್) ಮಾಡಿರಲಿಲ್ಲ.

ಗ್ಯಾರಂಟಿ / ವಾರಂಟಿ
ಪರೀಕ್ಷಿಸುಲಾದ 21 ಬ್ರಾಂಡ್‌ಗಳ ಪ್ಲಗ್‌ಗಳಲ್ಲಿ ನಾಲ್ಕರ ಹೊರತಾಗಿ ಬೇರೆ ಯಾವುದೇ ಉತ್ಪಾದಕರು ತಮ್ಮ ಪ್ಲಗ್ಗಿಗೆ ಗ್ಯಾರಂಟಿ ನೀಡುವುದಿಲ್ಲ. ಅ ನಾಲ್ಯು ಬ್ರಾಂಡ್‌ಗಳ ಪ್ಲಗ್‌ಗಳ ಪೊಟ್ಟಣದಲ್ಲಿ ಗ್ಯಾರಂಟಿ ಮುದ್ರಸಲಾಗಿತ್ತು. ವಿನಾ ಪ್ಲಗ್ಗಿನ ಜೊತೆ ಗ್ಯಾರಂಟಿ ಪತ್ರ ಆಥವಾ ಕಾರ್ಡ್ ಇರಲಿಲ್ಲ.

ಅದೇನಿದ್ದರೂ ಪ್ಲಗ್‌ಗಳಿಗೆ ವಸ್ತುಗಳ ಮಾರಾಟ ಕಾಯಿದೆ, 1930 ಆನ್ನಯಿಸುತ್ತದೆ. ಆದ್ದರಿಂದ ಪ್ಲಗ್‌ಗಳಿಗೆ ಉತ್ಪಾದಕರು ವಾರಂಟಿ ಕೊಡತಕ್ಕದ್ದು. ಆಂದರೆ ಪ್ಲಗ್‌ಗಳು ಸುರಕ್ಷಿತವಾಗಿರಬೇಕು ಮತ್ತು ಅವುಗಳಿಂದ ವಿದ್ಯುತ್ ಆಥವಾ ಬೆಂಕಿಯ ಉಪಾಯ ಉಂಟಾಗಬಾರದು.

ಉತ್ಸಾದಕರ ಪ್ರತಿಕ್ರಿಯೆ
ಸಿಇಆರ್ ಸೊಸ್ಕಟಿ ಎಲ್ಲ ಉತ್ಪಾದಕರಿಗೂ ಅವರವರ ಪ್ಲಗ್ಗಿನ ಗುಣಮಟ್ಟ ಪರೀಕ್ಷೆಯ ಫಲಿತಾಂಶ ತಿಳಿಸಿ ಪತ್ರ ಬರೆಯಿತು. ಅವರ ಪ್ರತಿಕ್ರಿಯೆಗಾಗಿ ಎರಡು ವಾರಗಳ ಸಮಯ ನೀಡಿತು. ಹದಿಮೂರು ಬ್ರಾಂಡ್ ಗಳ ಉತ್ಪಾದಕರು
ಉತ್ತರಿಸುವ ಮೂಲಕ ಗುಣಮಟ್ಟ ಪರೀಕ್ಷೆಗೆ ಸ್ಪಂದಿಸಿದರು. ಆವರಲ್ಲಿ ನಾಲ್ಪರು ತಮ್ಮ, ಪ್ಲಗ್‌ಗಳ ಗುಣಮಟ್ಟ ಸುಧಾರಿಸುವ ಭರವಸೆ ನೀಡಿದರು. ಒಂದು ಕಂಪೆನಿ 6 ಆಂಪ್ ಪ್ಲಗ್ಗಿನ ಗುಣಮಟ್ಟ ಕಾಯ್ದುಕೊಳ್ಳಲು ಸಮಸ್ಯೆ ಇರುವುದರಿಂದ ಆದರೆ ಉತ್ಪಾದನೆ ನಿಲ್ಲಿಸಿರುವುದಾಗಿ ತಿಳಿಸಿತು.

ಆದರೆ 7 ಬ್ರಾಂಡ್‌ಗಳ ಪ್ಲಗ್ಗಿನ ಉತ್ತಾದಕರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಪತ್ರಿಕೆಗಳಲ್ಲಿ ತಮ್ಮ ಕಂಪನಿಯ ಪ್ಲಗ್‌ಬಗ್ಗೆ ಜಾಹೀರಾತು ಕೊಟ್ಟರೆ ತಮ್ಮ ಕೆಲಸ ಮುಗಿಯಿತು ಎಂಬುದು ಅವರ ಭಾವನೆ- ಬಳಕೆದಾರರಿಗೆ ಅಪಾಯವಾದರೆ ಆವರಿಗೇನಂತೆ?

ಎರಡನೇ ಪರೀಕ್ಷೆ
ಮೊದಲನೆಯ ಪರೀಕ್ಷೆ ನಡೆಸಿ ಒಂದು ವರುಷ ಆಗುವಷ್ಟರಲ್ಲಿ ಸಿಇಆರ್ ಸೊಸೈಟಿ ಪ್ಲಗ್‌ಗಳ ಎರಡನೇ ಪರೀಕ್ಷೆ ನಡೆಸಿ, ಮಾರ್ಚ್ 2001ರಲ್ಲಿ ಫಲಿತಾಂಶಗಳನ್ನು ಪ್ರಕಟಿಸಿತು.

ಇದರಲ್ಲಿ ಮೊದಲನೆಯ ಪರೀಕ್ಷೆಯಲ್ಲಿ ಪರೀಕ್ಷಿಸಿದ ಪ್ಪಗ್‌ಗಳಿಗಿಂತ ಬೇರೆಯಾದ ಹನ್ನೊಂದು ಬ್ರಾಂಡ್‌ಗಳ ಪ್ಲಗ್‌ಗಳನ್ನು ಪರೀಕ್ಷಿಸಿದರು. ಪ್ಲಗ್‌ಗಳು ಬೇರೆ ಕಂಪೆನಿಗಳು ಉತ್ಸನ್ನಗಳಾದರೂ ಫಲಿತಾಂಶದಲ್ಲಿ ವ್ಕತ್ಯಾಸವಿಲ್ಲ! ಈ ಪ್ಲಗ್‌ಗಳೂ ಬಳಕೆಗೆ ಯೋಗ್ಕವಲ್ಲ ಎಂದು ಪರೀಕ್ಷೆಯಲ್ಲಿ ತಿರಸ್ಕರಿಸಲ್ಪಟ್ಟವು

ಎರಡನೇ ಪರೀಕ್ಷೆಯ ಬಳಿಕ, ಥ್ರೀ-ಪಿನ್-ಪ್ಲಗ್ಗಳ ಮಾನದಂಡದಲ್ಲಿ ‘ಸಹನಾ ಪರೀಕ್ಷೆ’ಯನ್ನೂ ಸೇರಿಸಬೇಕಂದು ಭಾರತೀಯ ಮಾನಕ ಸಂಸ್ಥೆಯನ್ನು ಸಿಇಆರ್ ಸೊಸೈಟಿ ಆಗ್ರಹಿಸಿದೆ. ಏಕೆಂದರೆ ವಾಟರ್ ಹೀಟರ್, ಹವಾನಿಯಂತ್ರಕಗಳಂತಹ ಉಪಕರಣಗಳಿಗೆ 6 ಆಂಪ್ ಥ್ರೀ-ಪಿನ್- ಪ್ಲಗ್ಗಳು ನಿರಂತರವಾಗಿ ವಿದ್ಯುತ್  ಪೂರೈಸಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ಸತತವಾಗಿ 96 ಗಂಟೆಗಳು ವಿದ್ಯುತ್ ಪೂರೈಸುತ್ತಿದ್ದರೆ ಪ್ಲಗ್‌ಹೇಗೆ ಕೆಲಸ ಮಾಡುತ್ತದೆಂದು ಪರೀಕ್ಷಿಸಲಾಗುವುದು.

ಪ್ಪಗ್‌ಗಳ ಬೆಲೆ
ಸಿಇಆರ್ ಸೊಸ್ಕಟಿ ಮೊದಲನೆಯ ಪರೀಕ್ಷೆಗಾಗಿ ಖರೀದೀಸಿದ 21 ಬ್ರಾಂಡ್ಗಳ ಪ್ಲಗ್ಗಳ ಕನಿಷ್ಠ ಬೆಲೆ ರೂ- 11 ಆಗಿದ್ದರೆ ಗರಿಷ್ಠ ಬೆಲೆ ರೂ. 47 ಆಗಿತ್ತು. ಆದರೆ ಇವು ಪೊಟ್ಟಣದಲ್ಲಿ ಮುದ್ರಸಿದ ಬೆಲೆಗಳು. ಆ ಪ್ಲಗ್ಗಳ ಬಿಲ್ನಲ್ಲಿ ಬರೆದ ಕನಿಷ್ಠ ಬೆಲೆ ರೂ. 7 ಮತ್ತು ಗರಿಷ್ಠ ಬೆಲೆ ರೂ.38.80. ಎರಡನೇ ಪರೀಕ್ಷೆಗಾಗಿ ಖರೀದಿ ಮಾಡಿದ 11 ಬ್ರಾಂಡ್ಗಳ ಪ್ಲಗ್‌ಗಳ ಕನಿಷ್ಠ ಬೆಲೆ ರೂ. 7 ಮತ್ತು ಗರಿಷ್ಠ ಬೆಲೆ ರೂ. 27. ಆದರೆ ಪೊಟ್ಟಣದಲ್ಲಿ ಮುದ್ರಸಿದ ಬೆಲೆಗೂ ಬಿಲ್‌ನಲ್ಲಿ ನಮೂದಿಸಿದ ಬೆಲೆಗೂ ಆಜಗಜಾಂತರ. ಒಂದು ಬ್ರಾಂಡಿನ ಪ್ಲಗ್ಗಿನ ಮುದ್ರತ ಬೆಲೆ ರೂ. 22 ಎಂದಿದ್ದರೂ ಮಾರಾಟ ಬೆಲೆ ಕೇವಲ ರೂ. 8.64. ಹೇಗಿದೆ ಮಾರಾಟ ಬೆಲೆಯ ನಾಟಕ!

ನೀವೇನು ಮಾಡಬಹುದು?
ನೀವು ರಶೀದಿ ಪಡೆದು ಖರೀದೀಸಿದ ಥ್ರೀ-ಪಿನ್-ಪ್ಲಗ್ಗಿನಲ್ಲಿ ಐಎಸ್ಐ ಗುರುತು ಇಲ್ಲದಿದ್ದರೆ, ಆಯಾ ರಾಜ್ಕದ ವಿದ್ಯುತ್
ಕಮಿಷನರಿಗೆ ದೂರು ನೀಡಿ, ಉತ್ಪಾದಕರ ವಿರುದ್ದ ಕ್ರಮ ಕ್ಕೆಗೊಳ್ಳಲು ಒತ್ತಾಯಿಸಬಹುದು. ಏಕೆಂದರೆ ವಿದ್ಯುತ್ ಪ್ಲಗ್ಗಳಿಗೆ ಐಎಸ್ಐ ಗುರುತನ್ನು ಕಡ್ಡಾಯವಾಗಿ ಜಾರಿಗೊಳಿಸುವುದು ಆವರ ಜವಾಬ್ದಾರಿ. ಆವರು ಕ್ರಮ ಕೈಗೊಳ್ಳದಿದ್ದರೆ, ಐಎಸ್ಐ ಗುರುತು ಕಡ್ಡಾಯವಾಗಲು ಬಳಕೆದಾರರ ವೇದಿಕೆಗಳ ಬೆಂಬಲ ಪಡೆಯಬಹುದು.

ನಿಮ್ಮ ಮನೆಯವರು ಕಳಪೆ ಪ್ಲಗ್ಗಳಿಂದ ಆಗಬಹುದಾದ ಶಾರ್ಟ್ ಸರ್‌ಕ್ಯೂಟಿನ ಅಪಾಯದಿಂದ ಪಾರಾಗಬೇಕಾದರೆ ಇನ್ನಾದರೂ ಅಧಿಕೃತ ಡೀಲರರಿಂದಲೇ ಐಎಸ್ಐ ಗುರುತು ಹಾಗೂ ಗ್ಯಾರಂಟಿ ಇರುವ ಪ್ಲಗ್ಗಳನ್ನು ಖರೀದಿಸಿರಿ.
*************************************************************************
6 ಆಂಪ್ ಮತ್ತು 16 ಆಂಪ್  ಪ್ಲಗ್‌: ಉಪಯೋಗಗಳೇನು?
ವಿದ್ಯುತ್ತನ್ನು ಅಳೆಯುವ ಘಟಕ ಆಂಪ್ (Amp ಅಥವಾ Ampere).  ೬ ಆಂಪ್ ಪ್ಲಗ್ಗಿನ ವಿದ್ಯುತ್ ಒಯ್ಯುವ ಸಾಮಥ್ಯಕ್ಕಿಂತ 16 ಆಂಪ್ ಪ್ಲಗ್ಗಿನದು ಆಧಿಕ. 16 ಆಂಪ್ ಪ್ಲಗ್ಗಿಗೆ ಬಳಸುವ ಕೇಬಲ್ಗಳ ರೇಟಿಂಗ್ ಕೂಡ ಆಧಿಕ.

ಬಲ್ಪ್, ಟಿವಿ, ಟೇಪ್‌ರಿಕಾರ್ಡರ್, ಇಸ್ತ್ರಿಪೆಟ್ಟಿಗೆ, ವಾಷಿಂಗ್ ಮೆಷಿನ್, ಪ್ರಿಜ್, ಟೋಸ್ಪರ್, ಮಿಕ್ಸರ್ ಇಂತಹ ಕಡಿಮೆ ಮತ್ತು ಮಧ್ಯಮ ವಿದ್ಯುತ್ ಲೋಡ್ ಉಪಕರಣಗಳಿಗೆ 6 ಆಂಪ್ ಪ್ಲಗ್‌ಬಳಸಬೇಕು. ಹವಾನಿಯಂತ್ರಣ, ವಿದ್ಯುತ್ ಒಲೆ, ಗೀಸರ್ ಇಂತಹ ಆಧಿಕ ವಿದ್ಯುತ್ ಲೋಡ್ ಉಪಕರಣಗಳಿಗೆ 16 ಆಂಪ್  ಪ್ಲಗ್‌ಉಪಯೋಗಿಸಬೇಕು.

ಈ ಎರದೂ ವಿಧಗಳ ಪ್ಲಗ್‌ಗಳಿಗೆ ಐ.ಎಸ್.ಐ. ಗುರುತು ಇರುವುದು ಕಾನೂನಿನ ಪ್ರಕಾರ ಕಡ್ಡಾಯ. ಇವುಗಳ ಗಟ್ಟಿತನ, ತೇವಾಂಶ ಸಹಿಷ್ಣುತೆ, ಶಾಖ ಪ್ರತಿರೋಧ ಗುಣ ಹಾಗೂ ಕೋರ್ಡ್ ಗ್ರಿಪ್ ಸರಿಯಾಗಿಲ್ಲದಿದ್ದಲ್ಲಿ ಸಾವಿರಾರು ರೂಪಾಯಿ ಬೆಲೆಯ ನಿಮ್ಮ ವಿದ್ಯುತ್ ಉಪಕರಣಗಳು ಸುಟ್ಟು ಹಾಳಾಗುವ ಸಾದ್ಯತೆ ಇದೆ. ಒಂದು ವೇಳೆ ಪ್ಲಗ್‌ಗಳಿಂದ ಹೀಗಾದಲ್ಲಿ ಸುಟ್ಟುಹೋದ ಉಪಕರಣದ ಗ್ಯಾರಂಟಿ ಆವಧಿ ಮುಗಿದಿರದಿದ್ದರೂ ನಿಮಗೆ ಉಪಕರಣದ
ಉತ್ಪಾದಕರಿಂದ ಪರಿಹಾರ ದೊರಕಲಾರದು. ಆದ್ದರಿಂದ ನೀವು ಉಪಯೋಗಿಸಬೇಕಾದ ಪ್ಲಗ್‌ಗಳು ಉತ್ತಮ ಗುಣಮಟ್ಟದ್ದಾಗಿರಬೇಕಾದದ್ದು ಆತೀ ಅಗತ್ಯ.
************************************************************************
ಉದಯವಾಣಿ 13-6-2002

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಡ ಕಟ್ಟ ಬನ್ನಿ
Next post ನಗೆಡಂಗುರ-೧೩೨

ಸಣ್ಣ ಕತೆ

 • ಮಲ್ಲೇಶಿಯ ನಲ್ಲೆಯರು

  ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

 • ಸಾವಿಗೊಂದು ಸ್ಮಾರಕ

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

 • ಬಿರುಕು

  ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

 • ತನ್ನೊಳಗಣ ಕಿಚ್ಚು

  ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

cheap jordans|wholesale air max|wholesale jordans|wholesale jewelry|wholesale jerseys