ಅರುಣೋದಯ. ಚುಮು ಚುಮು ಬಿಸಿಲು ಬರುವ ಹೊತ್ತು. ಮನೆಯ ಅಂಗಳವನ್ನು ಗುಡಿಸಿ, ನೀರು ಚೆಲ್ಲಿ, ಚುಕ್ಕೆ ಎಣಿಸಿ ಇಟ್ಟು ರಂಗೋಲಿ ಎಳೆಯ ಧಾರೆಯನ್ನು ಬೆರಳುಗಳಿಂದ ಬಿಡುತ್ತಾ, ವೃದ್ದೆ ಬಾಯಲ್ಲಿ ದೇವರನಾಮ ಹೇಳುತ್ತಾಬಾಳನ್ನು ಪೂಜಿಸಿ ಸಾಧನೆಯಲ್ಲಿ ತೊಡಗಿದ್ದಳು. ಜಗಲಿಯಲ್ಲಿ ಕುಳಿತಿದ್ದ ಅವಳ ವೃದ್ಧ ಪತಿ ಎಲೆ ಅಡಿಕೆ ತಂಬಾಕು ಚಟಕ್ಕೆ ಬಿದ್ದು ಬೊಚ್ಚು ಬಾಯಲ್ಲಿ ಜಿಗಿದು, ಪಿಚ್ ಪಿಚ್ ಎಂದು ಉಗುಳುತ್ತ ವೃತ್ತ ಪತ್ರಿಕೆಯ ಓದಿ ಬಾಳನ್ನು ಹೀಯಾಳಿಸಿ ಬೈಯುತ್ತಿದ್ದ. ಪೂಜೆ, ಬೈಗುಳು ನಡುವೆ ಬಾಳು ಜೋಕಾಲಿಯಾಡುತಿತ್ತು.
*****