ಮಾಡುವುದು ಮತ್ತು ಮುರಿಯುವುದು

ಮಾಡುವುದು ಮತ್ತು ಮುರಿಯುವುದು

ಬಾಲಕರೇ, ಮಾಡುವುದು ಮತ್ತು ಮುರಿಯುವುದು ಎಂದರೇನೆಂಬುದನ್ನು ನೀವು ಬಲ್ಲಿರಷ್ಟೇ?

ಒಬ್ಬ ಸೈನಿಕನು ಕೈಯಲ್ಲಿ ಶಸ್ತ್ರವನ್ನು ತಕ್ಕೊಂಡು ಮುರಿಯಲಿಕ್ಕೆ ಅಂದರೆ ಯಾರನ್ನಾದರೂ ನಾಶಗೊಳಿಸುವುದಕ್ಕೆ ಹೋಗುತ್ತಾನೆ.

ಒಬ್ಬ ಕಟ್ಟುಗನು ನಕಾಶೆ ಮಾಡಿಕೊಂಡು ತಳಹದಿಯನ್ನು ಅಗಿಯುತ್ತಾನೆ. ಅಲ್ಲದೆ ಮನುಷ್ಯನ ಪರಿಶ್ರಮಿಯಾದ ಕೈಯು ಒಕ್ಕಲಿಗನ ಸಲುವಾಗಿ ಗುಡಿಸಲವನ್ನೂ ರಾಜನ ಸಲುವಾಗಿ ಅರಮನೆಯ ಕಟ್ಟಿ ಕೊಡುತ್ತದೆ.

ಮುರಿಯುವುದಕ್ಕಿಂತ ಮಾಡುವುದು ಒಳ್ಳೆಯದಾದರೂ ಒಮ್ಮೊಮ್ಮೆ ಮುರಿಯುವುದೂ ಆವಶ್ಯಕವಾಗಿ ಬಿಡುತ್ತದೆ.

ಬಾಲಕರೇ, ನಿಮ್ಮ ಬಾಹುಗಳೂ, ಕೈಗಳೂ ತುಂಬ ಬಲಿಷ್ಠವಾಗಿವೆ. ನೀವು ಕೇವಲ ನಿರ್‍ಮಾಣವನ್ನೇ ಮಾಡುವಿರಾ ಎಂದೂ ಮುರಿಯುವದಿಲ್ಲವೇ? ಮತ್ತು ಎಂದಾದರೂ ಹಾಗೆ ಮಾಡಿದ್ದಿರಾದರೆ ಯಾವುದನ್ನು ಮುರಿಯುವಿರಿ? ಯಾವುದನ್ನು ನಾಶಗೊಳಿಸುವಿರಿ?

ದಕ್ಷಿಣ ಭಾರತದ ಹಿಂದುಗಳಲ್ಲಿ ಒಂದು ಪ್ರಾಚೀನ ಕಥೆಯಿದೆ.

ಒಂದು ನವಜಾತ ಶಿಶುವು ಒಮ್ಮೆ ಮರಗಳ ಒಂದು ಗುಬರಿನ ಬಿದ್ದು ಕೊಂಡಿತ್ತು. ಅದು ಅಲ್ಲಿ ಬಿದ್ದು ಬಿದ್ದುಕೊಂಡೇ ಸತ್ತುಹೋಗಿರಬಹುದೆಂದು ನೀವು ಎಣಿಸಬಲ್ಲಿರಿ. ಯಾಕಂದರೆ ಅದರ ತಾಯಿಯು ಅದನ್ನು ಅಲ್ಲಿ ಬಿಟ್ಟು ಹೋಗಿದ್ದಳು. ಹಾಗೂ ಅದನ್ನು ತಿರುಗಿ ತೆಗೆದುಕೊಂಡು ಹೋಗುವ ವಿಚಾರವೇನೂ ಅವಳಿಗಿರಲಿಲ್ಲ. ಏನಾಯಿತು ಬಲ್ಲಿರಾ? ಯಾವ ವೃಕ್ಷದ ಕೆಳಗೆ ಅದು ಬಿದ್ದಿದ್ದಿತೋ ಅದು ಹ್ಯೂಪೈಲ ಎಂಬ ಹೆಸರಿನ ಒಂದು ವಿಶೇಷ ಪ್ರಕಾರದ ವೃಕ್ಷವಿತ್ತು. ಅದರ ಸುಂದರವಾದ ಹೂಗಳಿಂದ ಜೇನಿನಂತಹ ಸಿಹಿಯಾದ ಹನಿಗಳು ತಟತಟನೆ ಅದರ ಬಾಯಲ್ಲಿ ಬೀಳುತ್ತಿದ್ದವು. ಹಾಗೂ ಆ ಪ್ರಕಾರ ಅದರ ಜೋಪಾನವಾಗತೊಡಗಿತು. ಕಡೆಗೆ ಒಬ್ಬ ಸ್ತ್ರೀಯು ಅದನ್ನು ನೋಡಿದಳು. ಅವಳು ಶಿವಾಲಯದಲ್ಲಿ ಪೂಜೆ ಮಾಡುವ ಸಲುವಾಗಿ ಬಂದಿದ್ದಳು. ಅವಳ ಹೃದಯವು ಶಿಶುವನ್ನು ನೋಡಿ ಕರಗಿ ಹೋಯಿತು. ಅದನ್ನು ಮಡಿಲಲ್ಲಿ ತಕೊಂಡು ಅವಳು ಮನೆಗೆ ಬಂದಳು. ಯಾಕೆಂದರೆ ಆಕೆಗೆ ಮಕ್ಕಳುಮರಿಗಳೇನೂ ಇರಲಿಲ್ಲ. ಅವಳ ಪತಿಯು ಪ್ರಸನ್ನ ಹೃದಯದಿಂದ ಶಿಶುವನ್ನು ಬರಮಾಡಿಕೊಂಡನು.

ಆ ಗುಬರಿನಲ್ಲಿ ಬಿದ್ದು ಕೊಂಡ ಹಾಗೂ ಕುಲಶೀಲಗಳು ಗೊತ್ತಿಲ್ಲದ ಬಾಲಕನ ಪಾಲನೆ ಪೋಷಣವನ್ನು ಇಬ್ಬರೂ ಮಾಡತೊಡಗಿದರು. ಪ್ರಾರಂಭದಿಂದಲೇ ಅವರ ನೆರೆಯವನು ಕೊಂಕು ಮಾತಾಡತೊಡಗಿದನು. ಯಾವ ಜಾತಿಯ ಹುಡುಗನನ್ನು ಇವರು ಎತ್ತಿಕೊಂಡು ತಂದಿದ್ದಾರೆ ಯಾರುಬಲ್ಲರು. ಆ ಬಾಲಕನ ಸಲುವಾಗಿ ನೆರೆಯವನಿಗೆ ಅಸಂತುಷ್ಟಿ ಯಾಗುವದೆಂಬ ಅಂಜಿಕೆಯಿಂದ ಅವನು ಅದನ್ನು ಒಂದು ತೊಟ್ಟಿಲಲ್ಲಿ ಹಾಕಿ ಬಿಟ್ಟಿದ್ದಲ್ಲದೆ, ಅದನ್ನು ಒಂದು ಲಾಯದ ಜಂತಿಗೆ ತೂಗಹಾಕಿದನು. ಅಲ್ಲಿ ಪರಿಯಾ ಜಾತಿಯ ಒಂದು ಕುಟುಂಬವಿರುತ್ತಿತ್ತು. ಬಾಲಕನ ಸಂರಕ್ಷಣೆಯ ಭಾರವನ್ನು ಅವರಿಗೊಪ್ಪಿಸಿ ಕೊಡಲಾಯಿತು.

ಕೆಲವು ವರುಷಗಳಾದ ಬಳಿಕ ಹುಡಗನು ದೊಡ್ಡವನಾದನು. ಆಯುಷ್ಯದೊಂದಿಗೆ ಆತನ ಮಾನಸಿಕ ಶಕ್ತಿಗಳೂ ಬೆಳೆದವು. ಆಗ ಆತನು ತನ್ನ ಪಾಲನಕರ್ತರಿಂದ ಅಪ್ಪಣೆ ಪಡಕೊಂಡನಲ್ಲದೆ ಒಬ್ಬನೇ ಯಾತ್ರೆಯ ಸಲುವಾಗಿ ಹೊರಬಿದ್ದನು, ಕೆಲವೊಂದು ದಿವಸ ನಡೆದುಕೊಂಡು ಹೋದ ಮೇಲೆ ಅವನು ಒಂದು ತಾಳವೃಕ್ಷದ ಕೆಳಗೆ ದಣಿವಾರಿಸಿಕೊಳ್ಳುವುದಕ್ಕಾಗಿ ಮಲಗಿಕೊಂಡನು. ಮರವು ಆತನಿಗೆ ತನ್ನ ನೆರಳು ಹೊದಿಸಿ ಕಾಪಾಡಿತು. ಆ ಮರವು ಸಹ ಅವನಿಗೆ ಮರಗಳ ಗುಬರಿನಿಂದ ತನ್ನನ್ನು ಎತ್ತಿಕೊಂಡು ತಂದ ಆ ಸ್ತ್ರೀಯ ಹಾಗೆಯೇ ಪ್ರೀತಿಸುತ್ತದೆಂದು ಅನಿಸಿತು. ತಾಳವೃಕ್ಷದ ತೊಂಗಲು ಅದೆಷ್ಟು ಉದ್ದವಾಗಿರುತ್ತದೆಂದರೆ ಯಾರಿಗಾದರೂ ಅದು ತನ್ನ ಎಲೆಗಳಿಂದ ಇಡಿಯ ದಿವಸ ನೆರಳು ಕೊಡಬಲ್ಲದೆಂಬ ಮಾತು ಅಸಂಭವವೆನಿಸುತ್ತದೆ. ಆದರೆ ಕಥೆಯು ಏನನ್ನು ಹೇಳುವುದೆಂದರೆ, ಸರ್ವಸಮಯವೂ ಅದರ ನೆರಳು ನಿಶ್ಚಲವಾಗಿ ನಿಂತಿತ್ತಲ್ಲದೆ ಆ ಬಾಲಕನು ಮಲಗಿಕೊಂಡಿರುವವರೆಗೆ ಅವನಿಗೆ ತಣುವು ಒದಗಿಸುತ್ತಿತ್ತು.

ಇದೆಲ್ಲ ಹೇಗೆ ಮತ್ತು ಏಕೆ ಆಯಿತು?

ಜನ್ಮದಿಂದಲೇ ಆ ಬಾಲಕನ ಸಂರಕ್ಷಣೆಯ ಆವಶ್ಯಕತೆ ಏನಿತ್ತು? ಹಾಗೂ ತಾಳದ ಮರವೇ ತನ್ನ ನೆರಳಿನಿಂದ ಆತನ ಸಂರಕ್ಷಣೆಯನ್ನು ಏಕೆ ಮಾಡಿತು? ಯಾಕಂದರೆ ಅವನ ಜೀವನವು ಬೆಲೆಯುಳ್ಳದ್ದಾಗಿತ್ತು. ಆ ಬಾಲಕನು ಒಂದು ದಿನ ತಿರುವಲ್ಲುವರ ಎಂಬ ಹೆಸರಿನ ಪ್ರಸಿದ್ದ ತಮಿಳು ಕವಿ ಯಾದ ‘ಕುರಲ’ನ ಹನ್ನೆರಡು ಕವಿತೆಗಳ ಕಟ್ಟುಗಾರನಾಗಬೇಕಿತ್ತು.

ಜಗತ್ತಿನ ಸಲುವಾಗಿ ಕೆಲವೊಂದು ಸಂದೇಶಗಳನ್ನು ತಂದಿರುವ ಕಾರಣದಿಂದ ಆ ವಸ್ತುಗಳ ಹಾಗೂ ವ್ಯಕ್ತಿಗಳ ಸಂರಕ್ಷಣವಾಗಲೇಬೇಕು.

ಬಲಿಷ್ಠ ಬಾಹುಗಳನ್ನು ಕಂಡು ನನಗೆ ಸಂತೋಷವಾಗಲಿಕ್ಕೆ ಬೇಕು. ಯಾಕೆಂದರೆ ಅವುಗಳ ಶಕ್ತಿಯಿಂದ ನಾವು ರೋಗದಿಂದಲೂ, ಮೃತ್ಯುವಿನಿಂದಲೂ ಸತ್ಯ, ಶಿವ ಹಾಗೂ ಸುಂದರವಾದ ಎಲ್ಲವುಗಳನ್ನೂ ಸಂರಕ್ಷಿಸ ಬಲ್ಲೆವು.

ಅವುಗಳನ್ನು ಸಂರಕ್ಷಿಸುವ ಸಲುವಾಗಿಯೇ ನಾವು ಒಮ್ಮೊಮ್ಮೆ ಕಾದಾಡಬೇಕು. ಹಾಗೂ ನಾಶಮಾಡಬೇಕು.
* * * *

ತಿರುವಲ್ಲುವರರು ಜನರಿಗೆ ತಮ್ಮ ಅಮೃತ ವಚನಗಳ ಆಸ್ವಾದನವನ್ನಷ್ಟೇ ಮಾಡಿಸುತ್ತಿದ್ದಿಲ್ಲ. ಆದರೆ ಅವರು ಕಾದಾಟವನ್ನೂ ಮರಣವನ್ನೂ ಬೋಧಿಸುತ್ತಿದ್ದರು. ಅವರು ಕಾವೇರಿಪಕಮದ ಗ್ರಾಮದ ದೈತ್ಯನನ್ನು ಕೊಂದರು.

ಕಾವೇರಿಪಕಮದಲ್ಲಿ ಒಬ್ಬ ಒಕ್ಕಲಿಗನಿರುತ್ತಿದ್ದನು. ಅವನಿಗೆ ಒಂದು ಸಾವಿರ ದನಗಳೂ ಗೋದಿ ಬೆಳೆಯುವ ಕೆಲವು ವಿಸ್ತಾರವಾದ ಹೊಲಗಳೂ ಇದ್ದವು. ಆದರೆ ಅವನ ಸುತ್ತುಮುತ್ತು ಒಬ್ಬ ದೈತ್ಯನ ದೊಡ್ಡ ಅಂಜಿಕೆಯಿತ್ತು. ಕಾಳು ಒಕ್ಕುವ ಹೊತ್ತಿಗೆ ಸರಿಯಾಗಿ ಅವನು ಬೇರು ಸಹಿತ ಕಿತ್ತು ಹಾಕುತ್ತಿದ್ದನು. ದನಗಳನ್ನೂ ಮನುಷ್ಯರನ್ನೂ ಕೊಂದು ಬಿಡುತ್ತಿದ್ದನು. ಕಾವೇರಿಪಕಮ ಗ್ರಾಮವಾಸಿಗಳ ಹೃದಯವು ಅದರಿಂದ ಬಹಳ ಅಶಾಂತವಾಗಿ ಬಿಟ್ಟಿತು.

ಒಡೆಯನಾದ ಆ ಒಕ್ಕಲಿಗನು ಘೋಷಿಸಿದ್ದೇನಂದರೆ- “ಯಾವ ವೀರನು ನಮ್ಮನ್ನು ಈ ದೈತ್ಯನ ಅತ್ಯಾಚಾರದಿಂದ ಮುಕ್ತಗೊಳಿಸುವನೋ ಅವನಿಗೆ ನಾನೊಂದು ಮನೆ, ಹೊಲ ಹಾಗೂ ಬಹಳಷ್ಟು ದ್ರವ್ಯ ಕೊಡುವೆನು.”

ಬಹಳ ಸಮಯದ ವರೆಗೆ ಯಾವ ವೀರನೂ ಮುಂದೆ ಬರಲಿಲ್ಲ. ಒಕ್ಕಲಿಗನು ಆಗ ಪರ್‍ವತದ ಮೇಲಿರುವ ಮುನಿಗಳ ಬಳಿಗೆ ಹೋದನು. ಹಾಗೂ ರಾಕ್ಷಸನನ್ನು ಕೊಲ್ಲಬಲ್ಲವನ ಸ್ಥಳವನ್ನು ಕೇಳಿದನು.

ಪರ್ವತವಾಸಿಯಾದ ಮುನಿ ಹೇಳಿದನು- “ತಿರುವಲ್ಲುವರನ ಬಳಿಗೆ ಹೋಗು.”

ಈ ಪ್ರಕಾರ ಆ ಒಕ್ಕಲಿಗನು ತಿರುವಲ್ಲವರನ ಬಳಿಗೆ ಬಂದು ಸಹಾಯಕ್ಕಾಗಿ ಅವನನ್ನು ಪ್ರಾರ್ಥಿಸಿದನು. ಅವನು ತುಸು ಬೂದಿಯನ್ನು ಅಂಗೈಯಲ್ಲಿ ತಕ್ಕೊಂಡು ಅದರ ಮೇಲೆ ಐದು ಪವಿತ್ರ ಅಕ್ಷರಗಳನ್ನು ಬರೆದನು, ಮತ್ತೆ ಮಂತ್ರ ಪಠಿಸಿ ಆ ಬೂದಿಯನ್ನು ಮೇಲೆ ಹವೆಯಲ್ಲಿ ತೂರಿ ಬಿಟ್ಟನು. ಆ ಅಕ್ಷರಗಳ ಹಾಗೂ ಮಂತ್ರದ ಪ್ರಭಾವವು ಆ ದೈತ್ಯನ ಮೇಲೆ ಅದೆಷ್ಟು ಬಿದ್ದಿತೆಂದರೆ-ಅವನು ಸತ್ತೇ ಹೋದನು. ಕಾವೇರಿಪಕಮದ ಜನರು ಅದರಿಂದ ಬಹಳ ಸಂತುಷ್ಟರಾದರು.

ಕೆಲವು ವರುಷಗಳ ಮೊದಲಿನ ಮಾತು. ಒಂದು ಸಾರೆ ತಿರುವಲ್ಲುವರನು ಮಧುರಾ ನಗರಕ್ಕೆ ಹೋದನು. ಅದೆಷ್ಟೋ ಜನರು ಅವನ ಸುಂದರವಾದ ಕವಿತೆಗಳನ್ನು ಕೇಳುವ ಸಲುವಾಗಿ ಒಟ್ಟು ಗೂಡಿದರು. ಗಿಡಗಳ ಗುಬರಿನಲ್ಲಿ ಕಾಣಿಸಿಕೊಂಡಿದ್ದ ಬಾಲಕನಿಂದ ರಚಿತವಾದ ಪದಗಳನ್ನು ಕೇಳಿ ಅವರು ಮುಗ್ಧರಾಗಿಹೋದರು.-

“ಒಳ್ಳೆಯವನಾಗುವುದಕ್ಕಿಂತ ಹೆಚ್ಚಿನ ಇನ್ನಾವ ವಸ್ತುವೂ ಈ ಜಗತ್ತಿನಲ್ಲಿ ಸಿಗುವುದು ಅತ್ಯಂತ ಕಠಿಣವಾಗಿದೆ.”

ಅಲ್ಲಿ ಸಮೀಪದಲ್ಲಿಯೇ ಅರಳಿದ ಕಮಲಗಳುಳ್ಳ ಒಂದು ಕೆರೆಯ ದಂಡೆಯ ಬೆಂಚಿನ ಮೇಲೆ ಪಂಡಿತ ಕವಿಗಳ ಒಂದು ಗುಂಪು ಕುಳಿತಿತ್ತು, ಅವರು ಒಂದು ನೀಚ ಜಾತಿಯ ಕವಿಯನ್ನು ಬೆಂಚಿನ ಮೇಲೆ ತಮ್ಮೊಡನೆ ಸ್ಥಾನ ಕೊಡಬಾರದೆನ್ನುತ್ತಿದ್ದರು, ಅವರು ಪ್ರಶ್ನೆಯ ಮೇಲೆ ಪ್ರಶ್ನೆ ಮಾಡಿ ಅವನನ್ನು ಭ್ರಮೆಯಲ್ಲಿ ಕೆಡಹಿ ಅವನ ತಪ್ಪು ಹಿಡಿಯುವ ಪ್ರಯತ್ನ ಮಾಡುತ್ತಿದ್ದರು. ಕೊನೆಗೆ ಅವರು ತಿರುವಲ್ಲುವರನಿಗೆ ನುಡಿದದ್ದೇನೆಂದರೆ-

“ಓ ಪರಿಯಾ, ನಿನ್ನ ಕವಿತೆಯ ಪುಸ್ತಕವನ್ನು ನೀನು ಈ ಬೆಂಚಿನ ಮೇಲಿಡು. ಇದು ನಿಜವಾಗಿಯೂ ಸುಂದರ ಸಾಹಿತ್ಯದ ಕೃತಿಯಾಗಿದ್ದರೆ ಈ ಬೆಂಚು ‘ಕುರಲ’ರ ಹೊರತಾಗಿ ಇನ್ನಾರಿಗೂ ತನ್ನ ಮೇಲೆ ಸ್ಥಳ ಕೊಡುವದಿಲ್ಲ.”

ತಿರುವಲ್ಲುವರನು ತನ್ನ ಪುಸ್ತಕವನ್ನು ನೀರಿನ ಸಮೀಪದಲ್ಲಿರುವ ಆ ಬೆಂಚಿನ ಮೇಲೆ ಇಟ್ಟು ಬಿಟ್ಟನು. ಕಥೆಯು ಮುಂದೆ ಹೇಳುವದೇನಂದರೆ ಪುಸ್ತಕವನ್ನು ಬೆಂಚಿನ ಮೇಲೆ ಇಟ್ಟ ಕೂಡಲೇ ಆ ಬೆಂಚವು ಅದೆಷ್ಟು ಚಿಕ್ಕ ದಾಯಿತೆಂದರೆ ಅದರ ಮೇಲೆ ಕೇವಲ ಪುಸ್ತಕಕ್ಕೆ ಮಾತ್ರ ಸ್ಥಳ ಸಿಗಲು ಸಾಧ್ಯವಾಯಿತಲ್ಲದೆ ಮಧುರೆಯ ಆ ಅಭಿಮಾನಿಗಳೂ ಈರ್ಷಾಲುಗಳೂ ಆದ ಕವಿಗಳು ಇನ್ನೊಂದು ಕಡೆಯ ಕೆರೆಯ ನೀರಲ್ಲಿ ಉರುಳಿಬಿದ್ದರು. ಆಹುದು. ಹೊಟ್ಟೆಕಿಚ್ಚಿನವರು ಕೆರೆಯಲ್ಲಿ ಕಮಲಗಳ ನಡುವೆ ಹೋಗಿ ಬಿದ್ದರು. ಲಜ್ಜಿತ ಮುಖ, ತೊಯ್ದ ಶರೀರಗಳೊಡನೆ ಅವರು ಹೊರಬಿದ್ದರು. ಅಂದಿನಿಂದ ತಮಿಲ ಭಾಷಾಭ್ಯಾಸಿಗಳು ‘ಕುರಲ’ರನ್ನು ಬಹಳವಾಗಿ ಪ್ರೇಮಿಸ ತೊಡಗಿದ್ದಾರೆ.
* * * *

ಮಕ್ಕಳೇ, ಕಾವೇರಿಪಕಮದ ರಾಕ್ಷಸನನ್ನು ಹೊಡೆದು ಹಾಕಿದ್ದು ನಿಮಗೆ ಒಳ್ಳೆಯದೆನಿಸುವದಿಲ್ಲವೇ? ಮಧುರೆಯ ಆ ಹೊಟ್ಟೆಯುರಿಯ ಕವಿಗಳು ನೀರಲ್ಲಿ ಉರುಳಿಬಿದ್ದುದರಿಂದ ನಿಮಗೆ ದುಃಖವಾಯಿತೇ?

ಈ ಜಗತ್ತಿನಲ್ಲಿ ಒಳ್ಳೆಯ ವಸ್ತುಗಳೂ ಇವೆ. ಕೆಟ್ಟವೂ ಅವೆ. ನಾವು ಒಳ್ಳೆಯವುಗಳನ್ನು ಪ್ರೇಮಿಸತಕ್ಕದ್ದು. ಹಾಗೂ ಅವುಗಳನ್ನು ಸಂರಕ್ಷಿಸ ತಕ್ಕದ್ದು ಮತ್ತು ಕೆಟ್ಟವುಗಳೊಡನೆ ಹೋರಾಡತಕ್ಕದ್ದಲ್ಲದೆ ಅವುಗಳನ್ನು ನಾಶಗೊಳಿಸತಕ್ಕದ್ದು.

ಆ ಒಳ್ಳೆಯ ಕವಿಯಂತೆ ಸರ್ವ ಬುದ್ಧಿವಂತ ಜನರು ಹೀಗೆ ಮಾಡಲು ಬಲ್ಲವರಾಗಿದ್ದಾರೆ ಮತ್ತು ಮಾಡಲೂ ಬಲ್ಲರು. ಅದೆಷ್ಟು ಹೆಚ್ಚು ಅವರು ಬುದ್ಧಿಶಾಲಿಗಳಾಗುವರೋ ಅಷ್ಟೇ ಈ ಕಾವ್ಯವನ್ನು ಅವರು ಚೆನ್ನಾಗಿ ಮಾಡ ಬಲ್ಲರು. ಚಿಕ್ಕ ಮಕ್ಕಳೇ, ಯಾರ ಬುದ್ದಿಯು ಇನ್ನೂ ಅಷ್ಟೊಂದು ವಿಕಸಿತವಾಗಿಲ್ಲವೋ ಮತ್ತು ಯಾರು ಅಷ್ಟೊಂದು ಬಲವನ್ನೂ ಪಡೆದಿಲ್ಲವೋ ಅವರು ಅನುಕರಣಮಾಡಿ ತಮ್ಮ ಸಾಹಸವನ್ನು ಪ್ರಯೋಗಿಸಬಹುದು.

ತಿರುವಲ್ಲುವರನ ಭಗಿನಿಯಾದ ಆವೇ ತನ್ನ ಬಂಧುವಿನ ಅನುಕರುಣವನ್ನು ಇದೇ ಪ್ರಕಾರ ಮಾಡಿದಳು.

ಒಂದು ದಿನ ಅವಳು ಉರಾಯಿಯೂರ ಗ್ರಾಮದ ಒಂದು ಚಿಕ್ಕ ಓಣಿಯಲ್ಲಿ ನೆಲದ ಮೇಲೆ ಕುಳಿತಿದ್ದಳು, ಮೂವರು ವ್ಯಕ್ತಿಗಳು ಅಡ್ಡಾಡುತ್ತ ಅಲ್ಲಿಂದ ಹೊರಟರು. ಒಬ್ಬನು ರಾಜನಿದ್ದನು, ಇಬ್ಬರು ಕವಿಗಳು. ರಾಜನು ಬಂದಾಗ ಅವಳು ಒಂದು ಮೊಳಕಾಲೂರಿ ಅವನಿಗೆ ತನ್ನ ಸಂತೋಷವನ್ನು ತೋರ್ಪಡಿಸಿದಳು. ಬಳಿಕ ಕವಿಯು ಬಂದನು. ಅವನ ಸನ್ಮಾನಾರ್ಥವಾಗಿ ಅವಳು ತನ್ನ ಇನ್ನೊಂದು ಮೊಳಕಾಲನ್ನು ಊರಿದಳು. ಆದರೆ ಇನ್ನೊಬ್ಬ ಕವಿಯು ಆಕೆಯ ಸಮೀಪ ಬಂದಾಗ ಅವಳು ತನ್ನ ಎರಡೂ ಕಾಲು ಚಾಚಿ ದಾರಿಯನ್ನೇ ತಡೆಗಟ್ಟಿದಳು.

ಆಕೆಯ ನಡವಳಿಕೆಯ ಈ ರೀತಿಯು ಅನುಚಿತವಾಗಿಯೇ ಕಂಡಿತು. ಆದರೆ ಆವೇ ತನ್ನ ಹೊಣೆಗಾರಿಕೆಯನ್ನು ಚೆನ್ನಾಗಿ ತಿಳಿಯುತ್ತಿದ್ದಳು. ವಾಸ್ತವದಲ್ಲಿ ಎರಡನೇ ಕವಿಯು ಒಬ್ಬ ತೋರಿಕೆಯ ಮನುಷ್ಯನಾಗಿದ್ದನು. ಅವನಲ್ಲಿ ಪ್ರತಿಭೆಯನ್ನುವುದು ಎಷ್ಟೂ ಇರಲಿಲ್ಲ. ಅವನು ಸ್ಪಷ್ಟವಾಗಿ ನಟನೆಯನ್ನೇ ಮಾಡುತ್ತಿದ್ದನು.

ಕವಿಗೆ ಇದರಿಂದ ಸಿಟ್ಟು ಬಂತು. ಅವನು ಆವೇಗೆ ಆಕೆಯ ಆ ನಡವಳಿಕೆಯ ಕಾರಣವನ್ನು ಕೇಳಿದನು.

“ಮನ ಶಬ್ದವು ಮೂರು ಸಾರೆ ಬರುವಂತೆ ಒಂದು ಪದ ರಚಿಸು” ಎಂದು ಆಕೆ ನುಡಿದಳು.

ಅದನ್ನು ನೋಡಿ ಅಲ್ಲಿ ಅದೆಷ್ಟೋ ಜನರು ಒಟ್ಟು ಗೂಡಿದರು. ಕವಿಯು ತನ್ನ ವಿದ್ವತ್ತೆಯನ್ನು ತೋರಿಸುವುದಕ್ಕೆ ಒಳ್ಳೆಯ ಪ್ರಸಂಗವನ್ನು ಕಂಡನು. ಅವನು ಬಹಳವಾಗಿ ಪ್ರಯತ್ನಿಸಿದನು. ಆದರೆ ಎರಡುಸಾರೆಗಿಂತ ಹೆಚ್ಚು ಅವುಗಳನ್ನು ಯಾವ ಬಗೆಯಿಂದಲೂ ತನ್ನ ಕವಿತೆಯಲ್ಲಿ ತರಲಿಕ್ಕೆ ಸಮರ್ಥನಾಗಲಿಲ್ಲ.

ಆವೇ ವ್ಯಂಗ್ಯವಾಗಿ ನುಡಿದಳು.- ಆ ಮೂರನೇ ಶಬ್ದವು ಏನಾಯಿತು? ಯಾವುದು ನಿನ್ನನ್ನು ಇಲ್ಲಿ ತಡೆಗಟ್ಟಿತು? ಯಾವುದಕ್ಕೆ ನಿನ್ನ ಕವಿತೆಯಲ್ಲಿಯೂ ಸ್ಥಳ ಸಿಕ್ಕಲಿಲ್ಲ?” ಈ ಪ್ರಕಾರ ಅವಳು ಆ ಸೋಗಿಗೆ ಲಜ್ಜಿತಗೊಳಿಸಿದಳು.

ಆವೇ ತನ್ನ ಈ ಅಶಿಷ್ಟ ವ್ಯವಹಾರದಲ್ಲಿ ಸಂತೋಷಪಟ್ಟಳೆಂದು ನೀವು ಯೋಚಿಸುವಿರಾ? ಇಲ್ಲ. ಆದರೆ ಸೋಗು ಅವಳಿಗೆ ಆದರಣೀಯವೆಂದು ಅನಿಸಲಿಲ್ಲ. ಯಾರ ಸತ್ಕಾರವು ಆಗಬೇಕು, ಯಾರದು ಆಗಬಾರದು ಎಂಬ ಮಾತಿನ ವಿವೇಚನೆಯನ್ನು ಅವಳು ಮಾಡಬಲ್ಲವಳಾಗಿದ್ದಳು. ಅವಳು ನುಡಿಯುತ್ತಿದ್ದಳು. ಆ ಹಂಸದಂತೆ ಯಾವಾಗಲೂ ಅರಳಿದ ಕಮಲ ಯುಕ್ತ ಉಯ್ಯಲೆಯ ಕಡೆಗೆ ಹೋಗುವ ಶ್ರೇಷ್ಠ ಪುರುಷರು ಯಾವಾಗಲೂ ಒಳ್ಳೆಯ ವಸ್ತುವಿನ ಕಡೆಗೆ ಒಲಿಯುತ್ತಾರೆ. ಆದರೆ ದುಷ್ಟ ಪ್ರಕೃತಿಯ ಜನರು ಯಾವಾಗಲೂ ಕೆಟ್ಟದನ್ನೇ ಹುಡುಕುತ್ತಾರೆ. ಹದ್ದು ದುರ್ಗಂಧದಿಂದ ಆಕರ್ಷಿತವಾಗಿ ಕೊಳೆತು ನಾರುವ ದನಗಳನ್ನು ಹೋಗಿ ಹಿಡಿಯುವ ಹಾಗೆ ಎಲ್ಲರ ಜೀವನವನ್ನು ದುಃಖಮಯ ಮಾಡುವ ದುಷ್ಟತೆ, ಈರ್ಷೆ ಹಾಗೂ ಅನ್ಯಾಯಗಳನ್ನು ನಾಶಗೊಳಿಸತಕ್ಕದ್ದು.
* * * *

ಇದಕ್ಕೆ ವಿಪರೀತವಾಗಿ ಯಾವ ವಸ್ತುಗಳಿವೆಯೋ ಅವುಗಳನ್ನು ಮನುಷ್ಯನು ಪ್ರೇಮಿಸತಕ್ಕದ್ದು. ಅವುಗಳನ್ನು ರಕ್ಷಿಸತಕ್ಕದ್ದು.

ಈ ಜಗತ್ತಿನಲ್ಲಿ ಬರುವ ಪ್ರತ್ಯೇಕ ಬಾಲಕನ ಅಮೂಲ್ಯ ಜೀವನದ ರಕ್ಷಣೆ ಆಗತಕ್ಕದ್ದು.

ಲಾಭಕಾರೀ ಗಿಡಗಳನ್ನು ಸಂರಕ್ಷಿಸತಕ್ಕದ್ದು. ಆಹಾರವನ್ನೂ ಆನಂದವನ್ನೂ ಕೊಡುವ ಹೂವು ಹಾಗೂ ಪೊದೆಗಳನ್ನು ಬೆಳೆಸತಕ್ಕದ್ದು.

ಗಟ್ಟಿಮುಟ್ಟವೂ ಆರೋಗ್ಯ ಪ್ರದವೂ ಹವೆಯಾಡುವಂಥವೂ ಆದ ಮನೆಗಳನ್ನು ಕಟ್ಟತಕ್ಕದ್ದು.

ಪವಿತ್ರವಾದ ದೇವಾಲಯಗಳು, ಮೂರ್ತಿಗಳು, ಚಿತ್ರ, ರಂಗವಲ್ಲಿ, ಕಸೂತಿ ಕೆಲಸಗಳು, ಸುಮಧುರವಾದ ಹಾಡುಗಳು, ಲಲಿತ ಕವಿತೆಗಳು ಇವೆಲ್ಲವುಗಳನ್ನು ಮಹಾಸಾವಧಾನದಿಂದ ಸಂರಕ್ಷಿಸಿಕೊಳ್ಳತಕ್ಕದ್ದು. ಸಂಕ್ಷೇಪದಲ್ಲಿ ಯಾವುದು ಸುಂದರವಾಗುವುದರಿಂದ ಮನುಷ್ಯನ ಆನಂದವನ್ನು ಹೆಚ್ಚಿಸುವವೋ ಆ ಎಲ್ಲ ವಸ್ತುಗಳ ಸಂರಕ್ಷಣೆಯಾಗತಕ್ಕದ್ದು.

“ಭಾರತವರ್ಷದ ಹಾಗೂ ಬೇರೆ ದೇಶಗಳ ಬಾಲಕರೇ, ಎಲ್ಲಕ್ಕಿಂತ ದೊಡ್ಡ ಮಾತು ಯಾವುದೆಂದರೆ-ಮನುಷ್ಯನನ್ನು ಪ್ರೇಮಿಸುವ ಹೃದಯವನ್ನು ರಕ್ಷಿಸಿಕೊಳ್ಳತಕ್ಕದ್ದು. ಸತ್ಯ ವಿಚಾರವನ್ನು ಮಾಡಬಲ್ಲ ಬುದ್ಧಿಯನ್ನು ರಕ್ಷಿಸಿಕೊಳ್ಳತಕ್ಕದ್ದು. ಸತ್ಯವೂ ನ್ಯಾಯಯುಕ್ತವೂ ಆದ ಕಾರ್ಯಮಾಡುವ ಕೈಗಳನ್ನು ರಕ್ಷಿಸಿಕೊಳ್ಳತಕ್ಕದ್ದು.

ಓಂ! ಭಗವತೀ!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರಿಣಾಮ
Next post ಸುಂದರ ಸ್ವಪ್ನ ಸುಧೆಯಲ್ಲಿ

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

cheap jordans|wholesale air max|wholesale jordans|wholesale jewelry|wholesale jerseys